HOME » NEWS » Coronavirus-latest-news » NOTICE TO THE DOCTOR WHO REFUSED TO TREAT COVID 19 PATIENT SAYS DC NITISH PATEL GNR

ಸೋಂಕಿತರಿಗೆ ಚಿಕಿತ್ಸೆ ನೀಡದ ಆಸ್ಪತ್ರೆಗೆ ನೋಟಿಸ್​​ - ಧಾರವಾಡ ಜಿಲ್ಲಾಧಿಕಾರಿ ನಿತೀಶ್​​ ಪಾಟೀಲ್​​​

ಹುಬ್ಬಳ್ಳಿಯ ವಿವೇಕಾನಂದ ಆಸ್ಪತ್ರೆಯಲ್ಲಿ ವ್ಯಕ್ತಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು. ಆದರೆ, ವಿವೇಕಾನಂದ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡುವಂತೆ ಈ ಹಿಂದೆಯೇ ಸೂಚನೆ ನೀಡಲಾಗಿದೆ. ಆದರೂ ಕೂಡ ವಿವೇಕಾನಂದ ಆಸ್ಪತ್ರೆಯ ವೈದ್ಯರ ನಿಷ್ಕಾಳಜಿ ತೋರಿದ ಕಾರಣ ಈ ಘಟನೆ‌ ನಡೆದಿದೆ.

news18-kannada
Updated:July 7, 2020, 3:42 PM IST
ಸೋಂಕಿತರಿಗೆ ಚಿಕಿತ್ಸೆ ನೀಡದ ಆಸ್ಪತ್ರೆಗೆ ನೋಟಿಸ್​​ - ಧಾರವಾಡ ಜಿಲ್ಲಾಧಿಕಾರಿ ನಿತೀಶ್​​ ಪಾಟೀಲ್​​​
ಸಾಂದರ್ಭಿಕ ಚಿತ್ರ.
  • Share this:
ಧಾರವಾಡ(ಜು.07): ರಾಜ್ಯದಲ್ಲಿ ಮಾರಕ ಕೊರೋನಾ ವೈರಸ್​ ಆರ್ಭಟ ಜೋರಾಗಿದೆ. ಇದರ ಪರಿಣಾಮ ದಿನದಿಂದ ದಿನಕ್ಕೆ ಕೊರೋನಾ ಪಾಸಿಟಿವ್​ ಕೇಸುಗಳು ಹೆಚ್ಚಾಗುತ್ತಿವೆ. ಕೊರೋನಾ ಭೀತಿಯಿಂದಾಗಿ ಕೆಲವು ವೈದ್ಯರು ಕೋವಿಡ್​​-19 ಟ್ರೀಟ್​​​ಮೆಂಟ್​ ನೀಡಲು ಹಿಂದೇಟು ಹಾಕಿದರೇ, ಇನ್ನಲವರು ಸೋಂಕಿತರೊಂದಿಗೆ ಅಮಾನವೀಯವಾಗಿ ನಡೆಸುಕೊಳ್ಳುವ ಪ್ರಕರಣಗಳು ಬೆಳಕಿಗೆ ಬಂದಿದೆ.

ಹೌದು, ಧಾರವಾಡದಲ್ಲಿ ಕೊರೋನಾ ಸೋಂಕಿತ ವ್ಯಕ್ತಿಗೆ ಚಿಕಿತ್ಸೆ ನೀಡದೇ ವಿವೇಕಾನಂದ ಆಸ್ಪತ್ರೆಯ ವೈದ್ಯರು ನಿಷ್ಕಾಳಜಿ ತೋರಿದ್ದಾರೆ. ಇದರಿಂದ ಸೋಂಕಿತ ವ್ಯಕ್ತಿ ಚಿಕಿತ್ಸೆ ಇಲ್ಲದೇ ಪರದಾಡಿದಂತಾಗಿದೆ. ಹೀಗೆ ಮಾಡಿದ ವೈದ್ಯರ ವಿರುದ್ಧ ನೋಟಿಸ್ ಜಾರಿಗೊಳಿಸಿದ ಕಠಿಣಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್​​ ಪಾಟೀಲ್​​ಹೇಳಿದರು.

ಹುಬ್ಬಳ್ಳಿಯ ವಿವೇಕಾನಂದ ಆಸ್ಪತ್ರೆಯಲ್ಲಿ ವ್ಯಕ್ತಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು. ಆದರೆ, ವಿವೇಕಾನಂದ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡುವಂತೆ ಈ ಹಿಂದೆಯೇ ಸೂಚನೆ ನೀಡಲಾಗಿದೆ. ಆದರೂ ಕೂಡ ವಿವೇಕಾನಂದ ಆಸ್ಪತ್ರೆಯ ವೈದ್ಯರ ನಿಷ್ಕಾಳಜಿ ತೋರಿದ ಕಾರಣ ಈ ಘಟನೆ‌ ನಡೆದಿದೆ.
Youtube Video

ಇದನ್ನೂ ಓದಿ: Ban on Chinese Apps: ಭಾರತ ಬೆನ್ನಲ್ಲೀಗ ಚೀನಾ ಆ್ಯಪ್ಸ್​ ಬ್ಯಾನ್​ ಮಾಡಲು ಅಮೆರಿಕಾ, ಆಸ್ಟ್ರೇಲಿಯಾ ಚಿಂತನೆ

ಬಳಿಕ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಹೊದ ಸೋಂಕಿತರನ್ನು ಸರ್ಕಾರದ ನಿಯಮದ ಪ್ರಕಾರ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ ಎಂದು  ಜಿಲ್ಲಾಧಿಕಾರಿ ಹೇಳಿದ್ದಾರೆ.
Published by: Ganesh Nachikethu
First published: July 7, 2020, 3:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories