ಆಮ್ಲಜನಕ ಕೊರತೆಯಿಂದ ಸಾವು: ಕೇಂದ್ರದಿಂದ ನಮಗೆ ಯಾವುದೇ ಪತ್ರ ಬಂದಿಲ್ಲ; ದೆಹಲಿ ಉಪಮುಖ್ಯಮಂತ್ರಿ ಸಿಸೋಡಿಯಾ ಆರೋಪ

"ಆಮ್ಲಜನಕ ಸಂಬಂಧಿ ಸಾವುಗಳ ಸಂಖ್ಯೆಯನ್ನು ಹಂಚಿಕೊಳ್ಳಲು ರಾಜ್ಯ ಸರ್ಕಾರಗಳನ್ನು ಕೇಳಿದೆ ಎಂದು ಕೇಂದ್ರ ಹೇಳುತ್ತಿದೆ ಎಂದು ನಾನು ಪತ್ರಿಕೆ ವರದಿಗಳಲ್ಲಿ ಓದಿದ್ದೇನೆ" ಎಂದು ಅವರು ವ್ಯಂಗ್ಯವಾಡಿದರು.   ಈ ವಿಷಯದ ಬಗ್ಗೆ ಇಲ್ಲಿಯವರೆಗೆ ಯಾವುದೇ ಸಂವಹನವನ್ನು ಕೆಂದ್ರ ಸರ್ಕಾರ ನಮ್ಮೊಂದಿಗೆ ನಡೆಸಿಲ್ಲ ಎಂದು ಸಿಸೋಡಿಯಾ ಅವರು ಹೇಳಿದರು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಕೋವಿಡ್ ಎರಡನೇ ಅಲೆಯ ಹೊತ್ತಿನಲ್ಲಿ ಇಡೀ ದೇಶವೇ ಆಮ್ಲಜನಕದ ಸಿಲಿಂಡರ್​ ಕೊರತೆಯಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ತಲೆತಗ್ಗಿಸುವಂತೆ ಆಗಿತ್ತು. ಅಲ್ಲದೇ ಇದೆ ವೇಳೆ ಸಾಕಷ್ಟು ವಿವಾದಗಳಿಗೆ ಎಡೆಮಾಡಿಕೊಟ್ಟ ಆಮ್ಲಜನಕ ಕೊರತೆಯಿಂದ ಹೆಚ್ಚು ಸಾವು ಸಂಭವಿಸಿವೆ ಹೊರತು ಕೊರೋನಾದಿಂದಲ್ಲ ಎನ್ನುವ ಆರೋಪವನ್ನು ಸಹ ಕೇಂದ್ರ ಬಿಜೆಪಿ ಸರ್ಕಾರ ಹೊರಬೇಕಾಯಿತು. 

  ಇದಾದ ನಂತರ ಕೇಂದ್ರ ಸರ್ಕಾರವು ಆಮ್ಲಜನಕ ಕೊರತೆಯಿಂದ ಉಂಟಾದ ಸಾವುಗಳ ಲೆಕ್ಕವನ್ನು ಕೊಡಬೇಕು ಎಂದು ಎಲ್ಲಾ ರಾಜ್ಯಗಳಿಗೆ ನಿರ್ದೇಶನ ನೀಡಿತ್ತು. ಆದರೆ ಈಗ ಈ ನಿರ್ದೇಶನವು ವಿವಾದದ ಸ್ವರೂಪ ಪಡೆದುಕೊಂಡಿದ್ದು.  ’’ಆಮ್ಲಜನಕದ ಕೊರತೆಯಿಂದ ರಾಷ್ಟ್ರ ರಾಜಧಾನಿಯಲ್ಲಿ ಯಾವುದೇ ಸಾವು ಸಂಭವಿಸಿದೆಯೇ ಎಂದು ವಿಚಾರಿಸುವಂತೆ ಕೇಂದ್ರ ಸರ್ಕಾರದಿಂದ ಯಾವುದೇ ಪತ್ರವನ್ನು ದೆಹಲಿ ರಾಜ್ಯ ಸರ್ಕಾರ ಸ್ವೀಕರಿಸಿಲ್ಲ’’, ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮಂಗಳವಾರ ಆರೋಪಿಸಿದ್ದಾರೆ.

  ಕೇಂದ್ರ ಸರ್ಕಾರ ನಮಗೆ ಪತ್ರ ಬರೆದು ಮಾಹಿತಿ ಕೇಳದೆ ಇರಬಹುದು, ಆದರೆ ನಾವೇ ನಮ್ಮ ಜವಾಬ್ದಾರಿಯನ್ನು ಅರಿತು, ಕೇಂದ್ರ ಸರ್ಕಾರದೊಂದಿಗೆ ಎಲ್ಲಾ ವಿವರಗಳನ್ನು ಹಂಚಿಕೊಳ್ಳಲು ನಿರ್ಧರಿಸಿದ್ದೇವೆ ಎಂದು ಸಚಿವರು ಹೇಳಿದ್ದಾರೆ. ಆಮ್ಲಜನಕ ಪೂರೈಸುವಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಎಸಗುತ್ತಿದೆ ಎಂದು ಆಮ್​ ಆದ್ಮಿ ಪಕ್ಷ ರಾಷ್ಟ್ರ ಮಟ್ಟದಲ್ಲಿ ಸರ್ಕಾರದ ಮಾನ ಹರಾಜಿಗೆ ತಂದಿತ್ತು. ಇದು ಸಾಕಷ್ಟು ದಿನಗಳ ಕಾಲ ಜಟಾಪಟಿಗೂ ಕಾರಣವಾಗಿತ್ತು.

  "ನೀವು ಆ ಉತ್ತರವನ್ನು ಸುಪ್ರೀಂ ಕೋರ್ಟ್ ಮತ್ತು ಸಾರ್ವಜನಿಕರ ಮುಂದೆ ನೀಡಬಹುದು" ಎಂದು ಅವರು ಆನ್‌ಲೈನ್ ಮೂಲಕ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಹೇಳಿದರು. ಎರಡನೇ ಅಲೆಯ ಸಮಯದಲ್ಲಿ ಸಂಭವಿಸಿದ ಆಮ್ಲಜನಕದ ಬಿಕ್ಕಟ್ಟಿನ ಬಗ್ಗೆ ಕೇಂದ್ರವು ಗಂಭೀರವಾಗಿ ವರ್ತಿಸಿದಂತೆ ತೋರುತ್ತಿಲ್ಲ, ಈಗಲೂ ಜನರ ಆರೋಗ್ಯದ ಬಗ್ಗೆ ಗಂಬೀರವಾಗಿ ಓಚಿಸುತ್ತಿಲ್ಲ ಎಂದು ಸಿಸೋಡಿಯಾ ಆರೋಪಿಸಿದರು.

  "ಆಮ್ಲಜನಕ ಸಂಬಂಧಿ ಸಾವುಗಳ ಸಂಖ್ಯೆಯನ್ನು ಹಂಚಿಕೊಳ್ಳಲು ರಾಜ್ಯ ಸರ್ಕಾರಗಳನ್ನು ಕೇಳಿದೆ ಎಂದು ಕೇಂದ್ರ ಹೇಳುತ್ತಿದೆ ಎಂದು ನಾನು ಪತ್ರಿಕೆ ವರದಿಗಳಲ್ಲಿ ಓದಿದ್ದೇನೆ" ಎಂದು ಅವರು ವ್ಯಂಗ್ಯವಾಡಿದರು.   ಈ ವಿಷಯದ ಬಗ್ಗೆ ಇಲ್ಲಿಯವರೆಗೆ ಯಾವುದೇ ಸಂವಹನವನ್ನು ಕೆಂದ್ರ ಸರ್ಕಾರ ನಮ್ಮೊಂದಿಗೆ ನಡೆಸಿಲ್ಲ ಎಂದು ಸಿಸೋಡಿಯಾ ಅವರು ಹೇಳಿದರು.


  "ದೆಹಲಿ ಸರ್ಕಾರಕ್ಕೆ ಆಮ್ಲಜನಕ ಸಂಬಂಧಿತ ಸಾವುಗಳ ಕುರಿತು ಯಾವುದೇ ಪತ್ರ ಬಂದಿಲ್ಲ. ನೀವು (ಕೇಂದ್ರ) ಯಾವುದೇ ಪತ್ರವನ್ನು ಬರೆಯದಿದ್ದಾಗ, ರಾಜ್ಯಗಳು ನಿಮಗೆ ಮಾಹಿತಿ ನೀಡುತ್ತಿಲ್ಲ ಎಂದು ನೀವು ಯಾವ ಬಾಯಿಯಲ್ಲಿ ಹೇಳುತ್ತೀರಿ. ನಾವು ವಿಚಾರಣಾ ಸಮಿತಿಯನ್ನು ರಚಿಸಿದ್ದೆವು ಆದರೆ ನೀವು ಅದನ್ನು ಅಂದರೆ ತನಿಖೆಯನ್ನು ದೆಹಲಿ ಎಲ್‌ಜಿ ಮೂಲಕ ನಡೆಯಲು ಬಿಡಲಿಲ್ಲ "ಎಂದು ಅವರು ಕುಟುಕಿದರು.

  ಇದನ್ನೂ ಓದಿ: ಇಂದು ಸಂಜೆಯೊಳಗೆ ಅಫ್ಘಾನಿಸ್ತಾನ ತೊರೆಯುವಂತೆ ಭಾರತೀಯರಿಗೆ ಸೂಚನೆ: ಸ್ವದೇಶಿಯರಿಗೆ ವಿಶೇಷ ವಿಮಾನ ಸೌಲಭ್ಯ

  ದೆಹಲಿ ಸರ್ಕಾರವು ಆಮ್ಲಜನಕದ ಬಿಕ್ಕಟ್ಟನ್ನು ಎದುರಿಸಿತ್ತು ಎಂದು ನಂಬಿದೆ ಮತ್ತು ವಿಚಾರಣೆ ಇಲ್ಲದೆ ಆಮ್ಲಜನಕದ ಕೊರತೆಯಿಂದ ಯಾವುದೇ ಸಾವು ಸಂಭವಿಸಿದೆಯೋ ಇಲ್ಲವೋ ಎಂದು ಹೇಳುವುದು ಕಷ್ಟ ಎಂದು ಅವರು ಹೇಳಿದರು. ಆದ ಕಾರಣ ನಿಖರವಾದ ತನಿಖೆ ನಡೆಸಿ ಮಾಹಿತಿ ನೀಡಲಾಗುವುದು ಎಂದೂ ಹೇಳಿದರು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: