Corona Effect: ಬದಲಾಗಲಿದೆ ಕೊರೊನಾ ನಂತರದ ಅಂತಾರಾಷ್ಟ್ರೀಯ ಪ್ರಯಾಣ, ಇನ್ಮೇಲೆ ವ್ಯಾಕ್ಸಿನ್ ಪಾಸ್​ಪೋರ್ಟ್ ಕಡ್ಡಾಯ?

ಇನ್ನು ಮುಂದೆ ಅನೇಕ ದೇಶಗಳಿಗೆ ಪ್ರಯಾಣಿಸುವಾಗ ನಿಮ್ಮ ಬಳಿ ವ್ಯಾಕ್ಸಿನ್ ಪಾಸ್​ಪೋರ್ಟ್ ಇದೆಯೇ ಎಂದು ಕೇಳಿದರೆ ಆಶ್ಚರ್ಯ ಪಡಬೇಡಿ. ಕೇವಲ ಪಾಸ್​ಪೋರ್ಟ್ ಮತ್ತು ವೀಸಾ ಮಾತ್ರ ಇದ್ದರೆ ವೈಮಾನಿಕ ಪ್ರಯಾಣ ಕಷ್ಟವಾಗಬದುದು. ನೀವು ಕೋವಿಡ್ ಲಸಿಕೆ ಪಡೆದಿದ್ದೀರಾ, ಯಾವಾಗ ಪಡೆದಿದ್ದೀರಾ ಎನ್ನುವುದನ್ನು ಸ್ಪಷ್ಟವಾಗಿ ತಿಳಿಸಬೇಕಾಗುತ್ತದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
Covid Impact: ಕೊರೊನಾ ಎರಡನೇ ಮೂರನೇ ಅಲೆಯ ನಡುವೆ ಜಗತ್ತು ನಲುಗುತ್ತಿದೆ. ಅಂತಾರಾಷ್ಟ್ರೀಯ ಪ್ರಯಾಣ ಮತ್ತು ವಿಮಾನಯಾನದ ವಿಚಾರದಲ್ಲಿ ಸಾಕಷ್ಟು ಹೊಸಾ ನಿಯಮಗಳು ಬರಲಿವೆ. ಕೋವಿಡ್​ನಿಂದ ತೀವ್ರ ಆಘಾತಕ್ಕೆ ಒಳಗಾಗಿರುವ ಜನರಿಗೆ ಈ ಹೊಸಾ ನಿಯಮಗಳು ಹೆಚ್ಚುವರಿ ತಲೆನೋವಿನಂತೆ ಕಾಣಬಹುದು. ಆದರೆ ಪರಿಸ್ಥಿತಿ ದೀರ್ಘಕಾಲದವರಗೆ ಹೀಗೇ ಇರುವ ನಿರೀಕ್ಷೆ ಇರುವುದರಿಂದ ಬೇರೆ ದಾರಿಯೂ ಇಲ್ಲ ಎನ್ನುವುದನ್ನು ಮನಗಾಣಬೇಕಿದೆ.

ಇನ್ನು ಮುಂದೆ ಅನೇಕ ದೇಶಗಳಿಗೆ ಪ್ರಯಾಣಿಸುವಾಗ ನಿಮ್ಮ ಬಳಿ ವ್ಯಾಕ್ಸಿನ್ ಪಾಸ್​ಪೋರ್ಟ್ ಇದೆಯೇ ಎಂದು ಕೇಳಿದರೆ ಆಶ್ಚರ್ಯ ಪಡಬೇಡಿ. ಕೇವಲ ಪಾಸ್​ಪೋರ್ಟ್ ಮತ್ತು ವೀಸಾ ಮಾತ್ರ ಇದ್ದರೆ ವೈಮಾನಿಕ ಪ್ರಯಾಣ ಕಷ್ಟವಾಗಬದುದು. ನೀವು ಕೋವಿಡ್ ಲಸಿಕೆ ಪಡೆದಿದ್ದೀರಾ, ಯಾವಾಗ ಪಡೆದಿದ್ದೀರಾ ಎನ್ನುವುದನ್ನು ಸ್ಪಷ್ಟವಾಗಿ ತಿಳಿಸಬೇಕಾಗುತ್ತದೆ.

ಇದನ್ನೂ ಓದಿhttps://kannada.news18.com/news/state/from-airlifting-plasma-to-kashmir-to-save-lives-to-begging-people-to-come-and-donate-plasma-donation-has-come-a-long-way-in-covid-hit-bengaluru-sktv-556055.html

ವ್ಯಾಕ್ಸಿನ್ ಪಾಸ್​ಪೋರ್ಟ್​ ಇಲ್ಲದಿದ್ದರೆ ಕೋವಿಡ್ ಮಿತಿಮೀರಿರುವ ಭಾರತ ದೇಶದ ಜನರು ಬೇರೆ ದೇಶಗಳಿಗೆ ಸರಾಗವಾಗಿ ಪ್ರಯಾಣಿಸುವುದು ಕಷ್ಟವಾಗಬಹುದು. ಈಗಾಗಲೇ ಯುಕೆ, ಯುಎಇ, ಕೆನೆಡಾ, ಆಸ್ಟ್ರೇಲಿಯಾ, ಕುವೈಟ್ ಸೇರಿದಂತೆ ನಾನಾ ದೇಶಗಳು ಭಾರತೀಯ ಪ್ರಯಾಣಿಕರನ್ನು ನಿಷೇಧಿಸಿವೆ.

ಇನ್ನು ಇದರೊಂದಿಗೇ ಬಬಲ್ಸ್ ಅಂದರೆ ಭಾರತ ಮತ್ತು ನಾವು ಪ್ರಯಾಣಿಸಬೇಕೆಂದಿರುವ ದೇಶದ ನಡುವಿನ ಹೊಂದಾಣಿಕೆ ಹೇಗಿದೆ ಎನ್ನುವುದೂ ನಮ್ಮ ಪ್ರಯಾಣವನ್ನು ನಿರ್ಧರಿಸುವಂಥಾ ಪರಿಸ್ಥಿತಿ ಬರಬಹುದು. ಇದೇನೂ ಸದ್ಯ ಕೊರೊನಾದಿಂದ ಇರುವ ತಾತ್ಕಾಲಿಕ ವ್ಯವಸ್ಥೆ ಎಂದುಕೊಳ್ಳುವಂತಿಲ್ಲ. ದೀರ್ಘಕಾಲದವರಗೆ ವೈಮಾನಿಕ ಪ್ರಯಾಣಿಕರು ಈ ಎಲ್ಲಾ ನಿಯಮಗಳ ಜೊತೆಗೇ ಪ್ರಯಾಣಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕಾಗುತ್ತದೆ.
Published by:Soumya KN
First published: