ಈ ಸ್ಥಳಗಳಿಗೆ ತೆರಳಲು 2 ಡೋಸ್ ಕಡ್ಡಾಯ: BBMPಯಿಂದ ಅಧಿಕೃತ ಸುತ್ತೋಲೆ

ಪ್ರತಿಯೊಬ್ಬರೂ ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ವ್ಯಾಕ್ಸಿನೇಷನ್ ಪ್ರಮಾಣಪತ್ರಗಳನ್ನು ಹೊಂದಿದ್ದಾರೆ. ನಿಯಮಿತ ಕಡ್ಡಾಯ ಕೋವಿಡ್ ಸ್ಕ್ರೀನಿಂಗ್ ಜೊತೆಗೆ ಅವರು ಪ್ರವೇಶದ ಮೊದಲು ವ್ಯಾಕ್ಸಿನ್ ಪ್ರಮಾಣ ಪತ್ರ  ತೋರಿಸಬೇಕು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ವಿಶ್ವದ 15ಕ್ಕೂ ಹೆಚ್ಚು ದೇಶಗಳಲ್ಲಿ ಕಂಡು ಬಂದಿರುವ ಓಮೈಕ್ರಾನ್ ಹರಡುವಿಕೆ ವೇಗ ಹೆಚ್ಚು ಎಂದು ವರದಿಯಾಗುತ್ತಿದೆ.ಹಾಗಾಗಿ ಭಾರತ ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ. ಮತ್ತೊಂದು ಕಡೆ ಜನರಿಗೆ ವ್ಯಾಕ್ಸಿನ್ ನೀಡುವ ಪ್ರಕ್ರಿಯೆಗೆ ಚುರುಕು ಮುಟ್ಟಿಸಿದೆ. ಓಮೈಕ್ರಾನ್ ರೂಪಾಂತರಿ (Omicron Vriant) ಹಿನ್ನೆಲೆ ಸಾರ್ವಜನಿಕ  ಸ್ಥಳಗಳಲ್ಲಿ ತೆರಳುವ ಜನರು ಕಡ್ಡಾಯವಾಗಿ ಎರಡು ಡೋಸ್ ಲಸಿಕೆ (Corona Vaccine) ಪಡೆದಿರಬೇಕು. ಪ್ರವೇಶ ದ್ವಾರದಲ್ಲಿಯೇ ಲಸಿಕೆ ಪಡೆದಿರುವ ಸರ್ಟಿಫಿಕೇಟ್  (Vaccine Certificate) ತೋರಿಸಬೇಕೆಂದು ಬಿಬಿಎಂಪಿ (BBMP) ಅಧಿಕೃತ ಸುತ್ತೋಲೆ ಹೊರಡಿಸಿದೆ.ಮಾಲ್, ಥಿಯೇಟರ್, ಮಲ್ಟಿಪ್ಲೆಕ್ಸ್ ಗಳಲ್ಲಿ ಎರಡು ಡೋಸ್ ಕಡ್ಡಾಯ ಮಾಡಲಾಗಿದೆ.

ಸಿನಿಮಾ (Cinema) ನೋಡಲು, ಶಾಪಿಂಗ್ (Shopping) ಮಾಡಲು ಹೋಗುವ ಮುನ್ನ ಎರಡು ಡೋಸ್ (Double Dose Vaccine) ಕಡ್ಡಾಯ ಪಡೆದಿರಬೇಕು.  ಬಿಗ್ ಬಜಾರ್, ಕ್ಲಾತ್ ಸೆಂಟರ್ಸ್, ದೊಡ್ಡ ದೊಡ್ಡ ಬ್ರಾಂಡ್ ಶೂ ರೂಮ್ ಗಳು, ಶಾಪಿಂಗ್ ಕಾಂಪ್ಲೆಕ್ಸ್ ಗಳ ಎಂಟ್ರಿಗೂ ಎರಡು ಡೋಸ್ ವ್ಯಾಕ್ಸಿನ್ ಆಗಿರಬೇಕೆಂದು ಬಿಬಿಎಂಪಿ ಹೇಳಿದೆ.

ವ್ಯಾಕ್ಸಿನ್ ಪ್ರಮಾಣಪತ್ರ ತೋರಿಸಿದ್ರೆ ಎಂಟ್ರಿ

“ಪ್ರತಿಯೊಬ್ಬರೂ ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ವ್ಯಾಕ್ಸಿನೇಷನ್ ಪ್ರಮಾಣಪತ್ರಗಳನ್ನು ಹೊಂದಿದ್ದಾರೆ. ನಿಯಮಿತ ಕಡ್ಡಾಯ ಕೋವಿಡ್ ಸ್ಕ್ರೀನಿಂಗ್ ಜೊತೆಗೆ ಅವರು ಪ್ರವೇಶದ ಮೊದಲು ವ್ಯಾಕ್ಸಿನ್ ಪ್ರಮಾಣ ಪತ್ರ  ತೋರಿಸಬೇಕು. ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಏರುಪೇರಾಗುತ್ತಿದ್ದು, ಹೊಸ ರೂಪುರೇಷೆಗಳು ಕಾಣಿಸಿಕೊಳ್ಳುತ್ತಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಬಿಬಿಎಂಪಿ ಹೇಳಿದೆ.

ಇದನ್ನೂ ಓದಿ:  Omicron: ಮಹಾರಾಷ್ಟ್ರ, ರಾಜಸ್ಥಾನದಲ್ಲಿ ಹೊಸ ರೂಪಾಂತರಿ ಸೋಂಕು ಪತ್ತೆ- ದೇಶದಲ್ಲಿ 21ಕ್ಕೆ ಏರಿಕೆಯಾದ ಪ್ರಕರಣಗಳ ಸಂಖ್ಯೆ

ಇಂದು ಬರಲಿದೆ ಐವರ ವರದಿ

ಇಂದು ಐವರು ಕೊರೋನಾ‌ ಸೋಂಕಿತರ ಓಮೈಕ್ರಾನ್ ವರದಿ ಬರುವ ಸಾಧ್ಯತೆಗಳಿವೆ. 46 ವರ್ಷದ ಓಮೈಕ್ರಾನ್ ಸೋಂಕಿತನ ಸಂಪರ್ಕದಿಂದ ಐವರ ಕೊರೊನಾ ವರದಿ ಪಾಸಿಟಿವ್ ಬಂದಿತ್ತು. ಪಾಸಿಟಿವ್ ಬಂದ ಕೂಡಲೇ ಐವರ ಜಿನೋಮಿಕ್ ಸೀಕ್ವೆನ್ಸಿಂಗ್ ಕಳುಹಿಸಲಾಗಿತ್ತು. ಐವರಲ್ಲಿ ಇಬ್ಬರ ವರದಿ ಪಾಸಿಟಿವ್ ಎಂದು ತಿಳಿದು ಬಂದಿದೆ. ಈ ಬಗ್ಗೆ ಬಿಬಿಎಂಪಿ ಇದುವರೆಗೂ ಅಧಿಕೃತ ಹೇಳಿಕೆ ನೀಡಿಲ್ಲ. ಈಗಾಗಲೇ ಈ ಐವರ ಪ್ರಾಥಮಿಕ ಸಂಪರ್ಕಿತರನ್ನು ಬಿಬಿಎಂಪಿ ಪತ್ತೆ ಮಾಡಿ, ಕ್ವಾರಂಟೈನ್ ನಲ್ಲಿರಿಸಿದೆ.

ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಪರಿಷ್ಕೃತ ಮಾರ್ಗಸೂಚಿಗಳು

ಓಮೈಕ್ರಾನ್ ಅಪಾಯದಲ್ಲಿರುವ ದೇಶಗಳ ಪ್ರಯಾಣಿಕರನ್ನು ಮಾತ್ರ ಪರೀಕ್ಷಿಸಲಾಗುತ್ತದೆ.  ಯುರೋಪ್, ದಕ್ಷಿಣ ಆಫ್ರಿಕಾ, ಬ್ರೆಜಿಲ್, ಬೋಟ್ಸ್ವಾನಾ, ಚೀನಾ, ಮಾರಿಷಸ್, ನ್ಯೂಜಿಲೆಂಡ್, ಜಿಂಬಾಬ್ವೆ, ಸಿಂಗಾಪುರ್, ಹಾಂಗ್ ಕಾಂಗ್ ಮತ್ತು ಇಸ್ರೇಲ್ ಕೋವಿಡ್ ವರದಿ ನೆಗೆಟಿವ್ ಆಗಿದ್ರೆ ಏಳು ದಿನಗಳವರೆಗೆ ಹೋಮ್ ಕ್ವಾರಂಟೈನ್ ಕಡ್ಡಾಯ. ಎಂಟನೇ ದಿನದಲ್ಲಿ ಮರು-ಪರೀಕ್ಷೆಗೆ ಒಳಗಾಗಬೇಕು.

ಇದನ್ನೂ ಓದಿ:  Omicron: ಕೊರೊನಾ 3ನೇ ಅಲೆ ಬರುತ್ತೆ ಹುಷಾರು ಎಂದು ವಿಜ್ಞಾನಿಗಳು

ಕೋವಿಡ್ ವರದಿ ಪಾಸಿಟಿವ್ ಬಂದ್ರೆ ಜೀನೋಮಿಕ್ ಸೀಕ್ವೆನ್ಸಿಂಗ್ಗಾಗಿ ಮಾದರಿಗಳನ್ನು ಕಳುಹಿಸಲಾಗುತ್ತದೆ ಮತ್ತು ಪ್ರಯಾಣಿಕರನ್ನು ಪ್ರತ್ಯೇಕವಾಗಿ ಇರಿಸಲಾಗುತ್ತದೆ.

ಓಮೈಕ್ರಾನ್ ಪ್ರಕರಣಗಳ ಸಂಖ್ಯೆ 21ಕ್ಕೆ ಏರಿಕೆ

ಹೊಸ ರೂಪಾಂತರ ಓಮೈಕ್ರಾನ್(Omicron) ಪ್ರಕರಣಗಳ ಸಂಖ್ಯೆ ದಿನದಿಂದ ದಿನ್ಕಕೆ ಏರುತ್ತಿದ್ದು, ರಾಜಸ್ಥಾನದ(Rajasthan) ಜೈಪುರದಲ್ಲಿ(Jaipur) ಒಂಬತ್ತು ಜನರು ಹೊಸ ರೂಪಾಂತರದಿಂದ ಸೋಂಕಿಗೆ ಒಳಗಾಗಿದ್ದರೆ , ಮಹಾರಾಷ್ಟ್ರದಲ್ಲಿ ಏಳು ಪ್ರಕರಣಗಳು ಪತ್ತೆಯಾಗಿದೆ. ಈ ಪ್ರಕರಣಗಳು ವರದಿಯಾದ ಬೆನ್ನಲ್ಲೆ ಭಾರತದಲ್ಲಿ ಓಮೈಕ್ರಾನ್ ಪ್ರಕರಣಗಳ ಸಂಖ್ಯೆ ಭಾನುವಾರ 21 ಕ್ಕೆ ಏರಿಕೆ ಕಂಡಿದೆ.

ಕರ್ನಾಟಕದಲ್ಲಿ ಎರಡು ಪ್ರಕರಣ ಖಚಿತ

ಕರ್ನಾಟಕದಲ್ಲಿ ಗುರುವಾರ  ಕೊರೊನಾ ಒಮಿಕ್ರಾನ್ ರೂಪಾಂತರದ ಮೊದಲ ಎರಡು ಪ್ರಕರಣಗಳು ದೃಢವಾದ ಬೆನ್ನಲ್ಲೆ ದೇಶದಲ್ಲಿ ಮೊದಲ 2 ಪ್ರಕರಣಗಳು ವರದಿಯಾಗಿದೆ. 66 ವರ್ಷದ ದಕ್ಷಿಣ ಆಫ್ರಿಕಾದ ಫ್ಲೈಯರ್ ಮತ್ತು ಯಾವುದೇ ಪ್ರಯಾಣದ ಇತಿಹಾಸವಿಲ್ಲದ 46 ವರ್ಷದ ಬೆಂಗಳೂರು ವೈದ್ಯರಲ್ಲಿ ಸೋಂಕು ದೃಢವಾಗಿದೆ. ಇಬ್ಬರೂ ಸಂಪೂರ್ಣವಾಗಿ ಲಸಿಕೆಯನ್ನುಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Published by:Mahmadrafik K
First published: