ಕೊರೋನಾ ಸೋಂಕಿಗೆ ಅಸ್ಸಾಂನಲ್ಲಿ ಮೊದಲ ಬಲಿ; ಈಶಾನ್ಯ ರಾಜ್ಯಗಳಲ್ಲೂ ಭೀತಿಯ ವಾತಾವರಣ

ಕೊರೋನಾ ವೈರಸ್ ಭಾರತದಲ್ಲಿ ದಿನದಿಂದ ದಿನಕ್ಕೆ ಅಧಿಕ ಸಂಖ್ಯೆಯಲ್ಲಿ ಬಲಿ ಪಡೆಯುತ್ತಿದೆ. ಈಗಾಗಲೇ 6000 ಕ್ಕೂ ಅಧಿಕ ಜನರಿಗೆ ಸೋಂಕು ತಗುಲಿದ್ದು, 165ಕ್ಕೂ ಅಧಿಕ ಜನ ಮೃತಪಟ್ಟಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಅಸ್ಸಾಂ (ಏಪ್ರಿಲ್ 10); ಕಳೆದ ಎರಡು ವಾರಗಳಿಂದ ಸೋಂಕಿನಿಂದ ಬಳಲಿದ್ದ ಅಸ್ಸಾಂ ರಾಜ್ಯದ ಹೈಲಕಂಡಿ ಜಿಲ್ಲೆಯ ಫೈಜುಲ್ ಹಕ್ ಬಾರ್ಬ್ಯಾನ್ (65) ಇಂದು ಮೃತ ಪಟ್ಟಿದ್ದಾರೆ. ಅಲ್ಲಿಗೆ ಕೊರೋನಾ ಪ್ರಭಾವಕ್ಕೆ ಈಶಾನ್ಯ ರಾಜ್ಯದಲ್ಲೂ ಮೊದಲ ಬಲಿ ಬಿದ್ದಂತಾಗಿದೆ.

ಈ ಕುರಿತು ಶುಕ್ರವಾರ ಬೆಳಗ್ಗೆಯೇ ಟ್ವೀಟ್ ಮಾಡಿರುವ ಅಸ್ಸಾಂ ರಾಜ್ಯದ ಆರೋಗ್ಯ ಸಚಿವ ಹಿಮಂತ್ ಬಿಸ್ವಾ ಶರ್ಮಾ, “ಕೊರೋನಾ ವೈರಸ್‌ಗೆ ಅಸ್ಸಾಂ ರಾಜ್ಯದಲ್ಲಿ ಮೊದಲ ಬಲಿ ಆಗಿದೆ ಎಂದು ತಿಳಿಸಲು ನಾನು ವಿಷಾಧಿಸುತ್ತೇನೆ. ದುಖಿಃತ ಕುಟುಂಬಕ್ಕೆ ದೇವರು ಆ ನೋವನ್ನು ಬರಿಸುವ ಶಕ್ತಿ ನೀಡಲಿ” ಎಂದು ಸಂತಾಪ ಸೂಚಿಸಿದ್ದಾರೆ.

ಕೊರೋನಾ ವೈರಸ್ ಭಾರತದಲ್ಲಿ ದಿನದಿಂದ ದಿನಕ್ಕೆ ಅಧಿಕ ಸಂಖ್ಯೆಯಲ್ಲಿ ಬಲಿ ಪಡೆಯುತ್ತಿದೆ. ಈಗಾಗಲೇ 6000 ಕ್ಕೂ ಅಧಿಕ ಜನರಿಗೆ ಸೋಂಕು ತಗುಲಿದ್ದು, 199 ಕ್ಕೂ ಅಧಿಕ ಜನ ಮೃತಪಟ್ಟಿದ್ದಾರೆ. ಇನ್ನೂ ಅಮೆರಿಕದಲ್ಲಿ ಕಳೆದ 24 ಗಂಟೆಯ ಅವಧಿಯಲ್ಲಿ 1,783 ಜನ ಕೊರೋನಾ ಸೋಂಕಿಗೆ ಬಲಿಯಾಗಿದ್ದು ಒಟ್ಟಾರೆ ಸಾವಿನ ಸಂಖ್ಯೆ 17000ಕ್ಕೆ ಏರಿಕೆಯಾಗಿದೆ. ವಿಶ್ವದಾದ್ಯಂತ ಸಾವಿನ ಸಂಖ್ಯೆ 1 ಲಕ್ಷ ದಾಟುವ ಎಲ್ಲಾ ಸೂಚನೆ ಲಭ್ಯವಾಗುತ್ತಿದೆ.

ಇದನ್ನೂ ಓದಿ : ಕೋವಿಡ್-19 ಬಿಕ್ಕಟ್ಟು: ತುರ್ತು ಸ್ಪಂದನೆ ವ್ಯವಸ್ಥೆಗೆ ಕೇಂದ್ರದಿಂದ 15,000 ಕೋಟಿ ರೂ ಪ್ಯಾಕೇಜ್
First published: