• ಹೋಂ
  • »
  • ನ್ಯೂಸ್
  • »
  • Corona
  • »
  • Coronavirus: ಕೊರೋನಾ ಹರಡುವಿಕೆ ತಡೆಯಲು ಬೆಕ್ಕು, ಪಾರಿವಾಳಗಳನ್ನು ಕೊಲ್ಲಲು ಆದೇಶಿಸಿದ ಉತ್ತರ ಕೊರಿಯಾ ಸರ್ವಾಧಿಕಾರಿ..! 

Coronavirus: ಕೊರೋನಾ ಹರಡುವಿಕೆ ತಡೆಯಲು ಬೆಕ್ಕು, ಪಾರಿವಾಳಗಳನ್ನು ಕೊಲ್ಲಲು ಆದೇಶಿಸಿದ ಉತ್ತರ ಕೊರಿಯಾ ಸರ್ವಾಧಿಕಾರಿ..! 

ಕಿಮ್‌ ಜಾಂಗ್‌ ಉನ್‌

ಕಿಮ್‌ ಜಾಂಗ್‌ ಉನ್‌

ಕೊರಿಯಾದ ನಾಗರಿಕರು ಕಿಮ್‌ ಜಾಂಗ್‌ ಉನ್‌ ಹಾಗು ಅಧಿಕಾರಿಗಳ ಆದೇಶವನ್ನು ಟೀಕಿಸಿದ್ದು, ಇದು ತರ್ಕಕ್ಕೆ ವಿರುದ್ಧವಾದುದು ಎಂದು ಹೇಳಿದ್ದಾರೆ

  • Share this:

    ಉತ್ತರ ಕೊರಿಯಾದ ಸರ್ವೋಚ್ಚ ನಾಯಕ ಕಿಮ್ ಜಾಂಗ್‌ ಉನ್ ಎಲ್ಲಾ ಬೆಕ್ಕುಗಳು ಮತ್ತು ಪಾರಿವಾಳಗಳನ್ನು ಕೊಲ್ಲುವಂತೆ ಆದೇಶಿಸಿರುವ ವಿಲಕ್ಷಣ ಕ್ರಮ ವರದಿಯಾಗಿದೆ. ಬೆಕ್ಕುಗಳು ಮತ್ತು ಪಾರಿವಾಳಗಳು ಚೀನಾದಿಂದ ಉತ್ತರ ಕೊರಿಯಾ ಗಡಿಯುದ್ದಕ್ಕೂ ಕೋವಿಡ್ - 19 ಅನ್ನು ತರುತ್ತಿವೆ. ಈ ಹಿನ್ನೆಲೆ ಚೀನಾದಿಂದ ಉತ್ತರ ಕೊರಿಯಾ ಗಡಿಯುದ್ದಕ್ಕೂ ಕೋವಿಡ್ - 19 ಅನ್ನು ತರುತ್ತಿವೆ ಎಂದು ಹೇಳಿರುವುದಾಗಿ ಡೈಲಿ ಎನ್‌ಕೆ ವೆಬ್‌ಸೈಟ್ ವರದಿ ಮಾಡಿದೆ. ಉತ್ತರ ಕೊರಿಯಾದಲ್ಲಿ ಕೊರೊನಾ ಸಾಂಕ್ರಾಮಿಕ ತಡೆಯಲು ಹಲವಾರು ಕ್ರಮಗಳನ್ನು ಘೋಷಿಸಲಾಗಿದ್ದು, ಇದರಲ್ಲಿ ಬೀದಿ ಬೆಕ್ಕುಗಳನ್ನು ನಿರ್ಮೂಲನೆ ಮಾಡುವ ಆದೇಶ ಮತ್ತು ಚೀನಾ ಗಡಿಯಿಂದ ದೇಶವನ್ನು ಪ್ರವೇಶಿಸಲು ಪ್ರಯತ್ನಿಸುವ ಯಾವುದೇ ಬೆಕ್ಕುಗಳು ಅಥವಾ ಪಕ್ಷಿಗಳಿಗೆ ಗುಂಡು ಹಾರಿಸುವುದು ಮುಂತಾದ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ ಎಂದು ಸಹ ಡೈಲಿ ಎನ್‌ಕೆ ವೆಬ್‌ಸೈಟ್ ತನ್ನ ವರದಿಯಲ್ಲಿ ತಿಳಿಸಿದೆ.


    ಇನ್ನೂ ವಿಚಿತ್ರವೆಂದರೆ, ತಮ್ಮ ಮನೆಯಲ್ಲಿ ಬೆಕ್ಕನ್ನು ಸಾಕಿದ್ದಕ್ಕಾಗಿ ಕುಟುಂಬವೊಂದಕ್ಕೆ ಶಿಕ್ಷೆ ನೀಡಲಾಗಿದ್ದು, ಹಾಗೂ ಆ ಕುಟುಂಬವನ್ನು 20 ದಿನಗಳ ಕಾಲ ಐಸೊಲೇಷನ್‌ನಲ್ಲಿ ಇಡಲಾಗಿದೆ ಎಂದು ತಿಳಿದುಬಂದಿದೆ. ಚೀನಾದಿಂದ ಗಡಿಯುದ್ದಕ್ಕೂ ಮಾರಣಾಂತಿಕ ವೈರಸ್ ಅನ್ನು ಪ್ರಾಣಿಗಳು ತರುತ್ತಿವೆ ಎಂದು ಕಿಮ್ ಆತಂಕ ವ್ಯಕ್ತಪಡಿಸುತ್ತಿದ್ದಂತೆ ಕೊರಿಯಾದ ಪ್ರಾಧಿಕಾರವು ಪ್ರಾಣಿಗಳನ್ನು ಕೊಲ್ಲುವಂತೆ ಸ್ಥಳೀಯರನ್ನು ಒತ್ತಾಯಿಸುತ್ತಿದೆ ಎನ್ನಲಾಗಿದೆ.


    ಇದನ್ನೂ ಓದಿ:Virat Kohli-Anushka Sharma: ಅನುಷ್ಕಾ-ವಿರಾಟ್ ಮಗಳ ಮೊದಲ ಫೋಟೋ; ಟೀಂ ಇಂಡಿಯಾ ಜೊತೆ ಹೋಗುವಾಗ ಏರ್​ಪೋರ್ಟ್​​ನಲ್ಲಿ ಕ್ಲಿಕ್


    ಕೊರಿಯಾದ ನಾಗರಿಕರು ಕಿಮ್‌ ಜಾಂಗ್‌ ಉನ್‌ ಹಾಗು ಅಧಿಕಾರಿಗಳ ಆದೇಶವನ್ನು ಟೀಕಿಸಿದ್ದು, ಇದು ತರ್ಕಕ್ಕೆ ವಿರುದ್ಧವಾದುದು ಎಂದು ಹೇಳಿದ್ದಾರೆ. ಇನ್ನೊಂದೆಡೆ, ಕೆಲವು ದೇಶಗಳಲ್ಲಿ ಕೋವಿಡ್-19 ಲಸಿಕೆಗಳನ್ನು ವಿಪರೀತವಾಗಿ ಸಂಗ್ರಹಿಸಿದೆ ಎಂದು ಉತ್ತರ ಕೊರಿಯಾ ತೀವ್ರವಾಗಿ ಟೀಕೆ ಮಾಡಿದೆ ಎಂದೂ ತಿಳಿದುಬಂದಿದೆ.


    ''ಕೋವಿಡ್-19 ಲಸಿಕೆಗಳು ಮತ್ತು ಔಷಧಿಗಳ ಅಭಿವೃದ್ಧಿಯು ಸಾಮಾನ್ಯ ಮಾನವ ಕುಲದ ಸಾಧನೆಯಾಗಿರಬಹುದು. ಆದರೆ ಕೆಲವು ದೇಶಗಳು ಲಸಿಕೆಗಳನ್ನು ತನ್ನ ಅಗತ್ಯಕ್ಕಿಂತ ಹೆಚ್ಚಾಗಿ ಸಂಗ್ರಹ ಮಾಡುತ್ತಿವೆ ಎಂಬ ಅನ್ಯಾಯದ ವಾಸ್ತವವನ್ನು ನೋಡಬೇಕು. ಲಸಿಕೆ ರಾಷ್ಟ್ರೀಯತೆಯನ್ನು ಸ್ಪಷ್ಟವಾಗಿ ಪ್ರೇರೇಪಿಸುವ ಮೂಲಕ ಇತರ ದೇಶಗಳು ಅದನ್ನು ತಮ್ಮ ಕೈಗೆಟುಕುವ ದರದಲ್ಲಿ ಸಂಗ್ರಹಿಸಲು ಸಹ ಸಾಧ್ಯವಾಗುತ್ತಿಲ್ಲ'' ಎಂದು ಉತ್ತರ ಕೊರಿಯಾ ಆಡಳಿತ ಹೇಳಿರುವ ಬಗ್ಗೆ ಯೋನ್ಹಾಪ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.


    ಇದನ್ನೂ ಓದಿ:Karnataka Lockdown Extension: ಕರ್ನಾಟಕದಲ್ಲಿ ಜೂನ್​ 14ರವರೆಗೆ ಲಾಕ್​ಡೌನ್ ವಿಸ್ತರಣೆ; ಸಂಜೆ ಘೋಷಿಸಲಿರುವ ಸಿಎಂ


    ಅಲ್ಲದೆ, ವಿಶ್ವಾದ್ಯಂತ ಕೋವಿಡ್ ಲಸಿಕೆಗಳ ನ್ಯಾಯಯುತ ವಿತರಣೆಯನ್ನು ಸಾಧಿಸಲು ಸಹಾಯ ಮಾಡುವಂತೆ ಕೊರಿಯಾದ ಆಡಳಿತವು ವಿಶ್ವ ಆರೋಗ್ಯ ಸಂಸ್ಥೆ (WHO)ಯನ್ನು ಕೇಳಿದೆ.


    ಕೋವಿಡ್ - 19 ವಿಶ್ವದ ಹಲವು ರಾಷ್ಟ್ರಗಳಲ್ಲಿ ಕಾಲಿಟ್ಟ ಬಳಿಕ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್‌ ಉನ್‌ ಹಲವು ತಿಂಗಳುಗಳ ಕಾಲ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲೇ ಇಲ್ಲ. ಅಲ್ಲದೆ, ಅವರ ಆರೋಗ್ಯ ತೀರ ಹದಗೆಟ್ಟಿದೆ, ಅವರು ಮೃತಪಟ್ಟಿರಬಹುದು ಎಂಬ ವರದಿಗಳು ಈ ಹಿಂದೆ ಹರಿದಾಡಿದ್ದವು. ಕೆಲ ತಿಂಗಳುಗಳ ಹಿಂದೆ ಅವರು ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಫೋಟೋವೊಂದು ವೈರಲ್‌ ಆಗಿದ್ದು, ಕಿಮ್ ಜಾಂಗ್ ಉನ್‌ ಇರುವಿಕೆಯ ಬಗ್ಗೆ ದೃಢಪಡಿಸಿತ್ತು.

    Published by:Latha CG
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು