Kim Jong Un: ಕಿಮ್ ಜಾಂಗ್ ಆರೋಗ್ಯವಾಗಿದ್ದಾರೆ; ಸರ್ವಾಧಿಕಾರಿ ಸಾವಿನ ವದಂತಿಗೆ ತೆರೆ ಎಳೆದ ದಕ್ಷಿಣ ಕೊರಿಯಾ

Kim Jong Un Health: ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕಿಮ್ ಜಾಂಗ್ ಚೀನಾದ ವೈದ್ಯರೊಬ್ಬರಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ ಎಂದು ಕೂಡ ಚೀನಾದ ಕೆಲವು ವಾಹಿನಿಗಳು ಸುದ್ದಿ ಬಿತ್ತರಿಸಿದ್ದವು.

ಕಿಮ್​ ಜಾಂಗ್​ ಉನ್​

ಕಿಮ್​ ಜಾಂಗ್​ ಉನ್​

 • Share this:
  ನವದೆಹಲಿ (ಏ. 27): ಆರೋಗ್ಯ ಸ್ಥಿತಿ ಕ್ಷೀಣಿಸಿದ್ದರಿಂದ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಮೃತಪಟ್ಟಿದ್ದಾರೆ ಎಂದು ಕೆಲವು ವಿದೇಶಿ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ, ಅದು ಸುಳ್ಳು ಸುದ್ದಿ, ಕಿಮ್ ಜಾಂಗ್ ಆರೋಗ್ಯವಾಗಿದ್ದಾರೆ ಎಂದು ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್​ ಜೇ-ಇನ್ ಅವರ ಭದ್ರತಾ ಅಧಿಕಾರಿ ಖಚಿತಪಡಿಸಿದ್ದಾರೆ.

  ಕಳೆದ ಕೆಲ ದಿನಗಳಿಂದ ಕಿಮ್ ಜಾಂಗ್ ಬಹಿರಂಗವಾಗಿ ಕಾಣಿಸಿಕೊಳ್ಳದೇ ಇರುವುದಕ್ಕೆ ಅವರಿಗೆ ಕೊರೋನಾ ಹಬ್ಬಿರುವುದೇ ಕಾರಣ ಎಂಬ ವರದಿಗಳು ಬಿತ್ತರಗೊಂಡಿದ್ದವು. ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕಿಮ್ ಜಾಂಗ್ ಚೀನಾದ ವೈದ್ಯರೊಬ್ಬರಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ ಎಂದು ಕೂಡ ಚೀನಾದ ಕೆಲವು ವಾಹಿನಿಗಳು ಸುದ್ದಿ ಬಿತ್ತರಿಸಿದ್ದವು.

  ಇದನ್ನೂ ಓದಿ: Kim Jong-Un: ಉತ್ತರ ಕೊರಿಯಾ ಅಧ್ಯಕ್ಷ ಕಿಮ್​ ಜಾಂಗ್​ ಉನ್​ ಬದುಕಿಲ್ಲ; ವರದಿ ಬಿತ್ತರಿಸಿದ ಚೀನಾ ಮಾಧ್ಯಮಗಳು

  ಉತ್ತರ ಕೊರಿಯಾದ ಪಿತಾಮಹ ಎನಿಸಿಕೊಂಡಿರುವ ಕಿಮ್ II ಸಂಗ್ ಅವರ 108ನೇ ಜನ್ಮ ದಿನಾಚರಣೆ ಏ. 15ರಂದು ನಡೆದಿತ್ತು. ಆ ದಿನ ಪ್ರತಿವರ್ಷ ಇಡೀ ಉತ್ತರ ಕೊರಿಯಾಗೆ ಸರ್ಕಾರಿ ರಜೆ ನೀಡಲಾಗುತ್ತದೆ. ತಮ್ಮ ತಾತನಾದ ಕಿಮ್ ಸಂಗ್ ಅವರ ಜನ್ಮ ದಿನಾಚರಣೆಯಲ್ಲಿ ಕೂಡ ಕಿಮ್ ಜಾಂಗ್ ಕಾಣಿಸಿಕೊಳ್ಳದಿರುವುದರಿಂದ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿತ್ತು.

  ಇದನ್ನೂ ಓದಿ: ಕೊರೋನಾದಿಂದ ಗುಜರಾತ್​ನ ಕೈ ನಾಯಕ ಬದ್ರುದ್ದೀನ್ ನಿಧನ; ಮಾರಕ ಸೋಂಕಿಗೆ ದೇಶದಲ್ಲಿ ಮೊದಲ ರಾಜಕಾರಣಿ ಬಲಿ

  ಈ ಬಗ್ಗೆ ಸ್ಪಷ್ಟನೆ ನೀಡಿರುವ ದಕ್ಷಿಣ ಕೊರಿಯಾದ ಅಧಿಕಾರಿಗಳು ಕಿಮ್ ಜಾಂಗ್​ ಅವರು ಬದುಕಿದ್ದಾರೆ ಮತ್ತು ಆರೋಗ್ಯವಾಗಿದ್ದಾರೆ. ವಿನಾಕಾರಣ ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ ಎಂದಿದ್ದಾರೆ. ಆದರೆ, ಈ ಬಗ್ಗೆ ಇನ್ನೂ ಉತ್ತರ ಕೊರಿಯಾ ಯಾವುದೇ ಸ್ಪಷ್ಟನೆಯನ್ನೂ ನೀಡಿಲ್ಲ.
  First published: