HOME » NEWS » Coronavirus-latest-news » NO WALK IN VACCINATION FOR 18 TO 44 YEARS ONLINE ONLY CLEARS CENTER ON CORONA VACCINE SKTV

Corona Vaccine: ಮೇ 1 ರಿಂದ ಲಸಿಕೆ ಪಡೆಯಲು Online Registration ಕಡ್ಡಾಯ, ನೇರವಾಗಿ ಹೋದರೆ ವ್ಯಾಕ್ಸಿನ್ ಕೊಡಲ್ಲ: ಕೇಂದ್ರ ಸರ್ಕಾರ

18ರಿಂದ 44 ವರ್ಷ ವಯಸ್ಸಿನ ಜನರು ಲಸಿಕೆ ಪಡೆಯಲು ಆನ್​ಲೈನ್ ಮೂಲಕವೇ ನೋಂದಣಿ ಮಾಡಿಕೊಳ್ಳಬೇಕು. ನೇರವಾಗಿ ಲಸಿಕಾ ಕೇಂದ್ರಕ್ಕೆ ಹೋದರೆ ಲಸಿಕೆ ನೀಡುವುದಿಲ್ಲ. ಕೋವಿನ್​ ಅಥವಾ ಆರೋಗ್ಯ ಸೇತು ಆಪ್​ ಮೂಲಕ ನೋಂದಣಿ ಆದವರಿಗೆ ಮಾತ್ರ ಲಸಿಕೆ ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ.

news18-kannada
Updated:April 28, 2021, 11:34 AM IST
Corona Vaccine: ಮೇ 1 ರಿಂದ ಲಸಿಕೆ ಪಡೆಯಲು Online Registration ಕಡ್ಡಾಯ, ನೇರವಾಗಿ ಹೋದರೆ ವ್ಯಾಕ್ಸಿನ್ ಕೊಡಲ್ಲ: ಕೇಂದ್ರ ಸರ್ಕಾರ
ಸಾಂದರ್ಭಿಕ ಚಿತ್ರ
  • Share this:
Covid Vaccine: ಮೇ 1ರಿಂದ ಇಡೀ ದೇಶದ ಬಹುಪಾಲು ಜನರಿಗೆ ಲಸಿಕೆ ಕೊಡೋಕೆ ಕೇಂದ್ರ ಸರ್ಕಾರ ಸಜ್ಜಾಗಿದೆ. 18 ವರ್ಷಕ್ಕಿಂದ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ವ್ಯಾಕ್ಸಿನ್ ಸಿಗಲಿದೆ. ಇದಕ್ಕೆ ಇಂದಿನಿಂದ ನೋಂದಣಿ ಆರಂಭವಾಗಿದೆ. ಆದರೆ 18ರಿಂದ 44 ವರ್ಷ ವಯಸ್ಸಿನ ಜನರು ಲಸಿಕೆ ಪಡೆಯಲು ಆನ್​ಲೈನ್ ಮೂಲಕವೇ ನೋಂದಣಿ ಮಾಡಿಕೊಳ್ಳಬೇಕು. ನೇರವಾಗಿ ಲಸಿಕಾ ಕೇಂದ್ರಕ್ಕೆ ಹೋದರೆ ಲಸಿಕೆ ನೀಡುವುದಿಲ್ಲ. ಕೋವಿನ್​ ಅಥವಾ ಆರೋಗ್ಯ ಸೇತು ಆಪ್​ ಮೂಲಕ ನೋಂದಣಿ ಆದವರಿಗೆ ಮಾತ್ರ ಲಸಿಕೆ ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ. ಲಸಿಕಾ ಕೇಂದ್ರಗಳಲ್ಲಿ ನೂಕುನುಗ್ಗಲು ತಡೆಯಲು ಈ ಕ್ರಮ ಕೈಗೊಂಡಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

45 ವರ್ಷ ಮೇಲ್ಪಟ್ಟ ನಾಗರಿಕರು ಆನ್​ಲೈನ್ ಜೊತೆಗೆ ನೇರವಾಗಿ ಲಸಿಕಾ ಕೇಂದ್ರಗಳಿಗೇ ಹೋಗಿ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ. ಕೋವಿನ್ ಆಪ್​​ ನಲ್ಲಿ ಒಂದೇ ಸಲ 70 ರಿಂದ 80 ಲಕ್ಷ ಜನ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಈ ಸಂಬಂಧಿತ ಎಲ್ಲಾ ನಿಯಮಗಳನ್ನೂ ಆಯಾ ರಾಜ್ಯ ಸರ್ಕಾರಗಳಿಗೆ ಈಗಾಗಲೇ ತಿಳಿಸಲಾಗಿದ್ದು ಅವುಗಳನ್ನು ಕಟ್ಟನಿಟ್ಟಾಗಿ ಪಾಲಿಸಲು ನಿರ್ದೇಶಿಸಲಾಗಿದೆ.

ಇದನ್ನೂ ಓದಿ: https://kannada.news18.com/news/explained/explained-who-when-and-how-to-get-corona-vaccine-formalities-and-preparation-sktv-557257.html

ಖಾಸಗಿ ಆಸ್ಪತ್ರೆಗಳು ಕೋವಿನ್​ ವೆಬ್​ಸೈಟಿನಲ್ಲೇ ತಮ್ಮ ಬಳಿ ಎಷ್ಟು ಯಾವ ಲಸಿಕೆಗಳು ಎಷ್ಟು ಪ್ರಮಾಣದಲ್ಲಿ ಇದೆ, ಅವುಗಳ ವಿವರಗಳನ್ನೆಲ್ಲಾ ದಾಖಲಿಸಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯಲು ನೋಂದಣಿ ಮಾಡಿಕೊಳ್ಳುವ ಸಾರ್ವಜನಿಕರಿಗೆ ಇದರ ಬಗ್ಗೆ ಮಾಹಿತಿ ನೀಡಿದಾಗ ಅವರು ಆಯ್ಕೆ ಮಾಡಿಕೊಳ್ಳಲು ಸುಲಭವಾಗುತ್ತದೆ ಎಂದು ಆದೇಶಿಸಲಾಗಿದೆ.
Youtube Video

ಇನ್ನು ಫ್ರಂಟ್​​ಲೈನ್ ವರ್ಕರ್ಸ್, ಆರೋಗ್ಯ ಕಾರ್ಯಕರ್ತರು, 45 ವರ್ಷ ಮೇಲ್ಪಟ್ಟವರಿಗೆ ಈಗಲೂ ಲಸಿಕೆ ಪಡೆಯುವ ಅವಕಾಶ ಮುಂದುವರೆಯಲಿದೆ. ಯಾವುದೇ ಖಾಸಗಿ ಆಸ್ಪತ್ರೆ ಅಥವಾ ಕೈಗಾರಿಕಾ ಸಂಸ್ಥೆ ಹೊಸದಾಗಿ ಲಸಿಕಾ ಕೇಂದ್ರವಾಗಬೇಕಿದ್ದರೆ ಅದಕ್ಕೆ ಅವಶ್ಯಕವಿರುವ ಕೋಲ್ಡ್ ಚೈನ್, ಶೇಖರಣಾ ವ್ಯವಸ್ಥೆ, ಅಗತ್ಯ ಸ್ಥಳಾವಕಾಶ ಇರುವುದು ಕಡ್ಡಾಯ. ಮುಂದಿನ ದಿನಗಳಲ್ಲಿ ಅಗತ್ಯ ಬಿದ್ದರೆ ಮಾತ್ರ 18ರಿಂದ 44 ವರ್ಷದವರಿಗೆ ನೇರ ನೋಂದಣಿ ಅವಕಾಶ ಕಲ್ಪಿಸಲಾಗುವುದು ಎಂದು ರಾಜೇಶ್ ಭೂಷಣ್ ತಿಳಿಸಿದ್ದಾರೆ.
Published by: Soumya KN
First published: April 28, 2021, 11:34 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories