HOME » NEWS » Coronavirus-latest-news » NO TRANSFER OF GOVERNMENT EMPLOYEES THIS YEAR DUE TO CORONA VIRUS OUTBREAK HK

ಕೊರೋನಾ ಎಫೆಕ್ಟ್ : ಸಾಮಾನ್ಯ ವರ್ಗಾವಣೆಗೆ ಬ್ರೇಕ್ ಹಾಕಿದ ರಾಜ್ಯ ಸರ್ಕಾರ

ವಿರಳ ಪ್ರಕರಣದಲ್ಲಿ ವರ್ಗಾವಣೆಯಾದರೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನವರ ಅನುಮೋದನೆ ಪಡೆದು ವರ್ಗಾವಣೆ ಮಾಡಲು ಆದೇಶಿಸಲಾಗಿದೆ

news18-kannada
Updated:June 19, 2020, 7:19 AM IST
ಕೊರೋನಾ ಎಫೆಕ್ಟ್ : ಸಾಮಾನ್ಯ ವರ್ಗಾವಣೆಗೆ ಬ್ರೇಕ್ ಹಾಕಿದ ರಾಜ್ಯ ಸರ್ಕಾರ
ವಿಧಾನಸೌಧ
  • Share this:
ಬೆಂಗಳೂರು(ಜೂ. 19): ಪ್ರತಿ ವರ್ಷ ಮೇ ಜೂನ್ ತಿಂಗಳಿನಲ್ಲಿ ನಡೆಯುತ್ತಿದ್ದ ಸಾಮಾನ್ಯ ವರ್ಗಾವಣೆಯನ್ನು ಸರ್ಕಾರ ರದ್ದು ಮಾಡಿದೆ. ರಾಜ್ಯದಲ್ಲಿ ಕೊರೋನಾ ಎಫೆಕ್ಟ್ ನಿಂದ ಸರ್ಕಾರ ಈ ತೀರ್ಮಾನ ಕೈಗೊಂಡಿದೆ. ಕೊರೋನಾ ಕೆಲಸಗಳಿಗೆ ಧಕ್ಕೆಯಾಗ ಬಾರದೆಂದು ಸರ್ಕಾರ ಸಾಮಾನ್ಯ ವರ್ಗಾವಣೆಗೆ ಬ್ರೇಕ್ ಹಾಕಿದೆ. ಆದರೆ, ವಿರಳ ಪ್ರಕರಣಗಳಲ್ಲಿ ಮಾತ್ರ ವರ್ಗಾವಣೆ ಮಾಡಬಹುದು ಎಂದು ಆದೇಶಿಸಲಾಗಿದೆ.

ವಿರಳ ಪ್ರಕರಣದಲ್ಲಿ ವರ್ಗಾವಣೆಯಾದರೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನವರ ಅನುಮೋದನೆ ಪಡೆದು ವರ್ಗಾವಣೆ ಮಾಡಲು ಆದೇಶಿಸಲಾಗಿದೆ. ಇನ್ನೂ ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ದಿನೇ ದಿನೇ ಮುಂದು ವರೆದಿದೆ. ಕೊರೋನಾ ತಡೆಗೆ ಸರ್ಕಾರ ಈಗಾಗಲೇ ಹಲವು ಕ್ರಮ ಕೈಗೊಂಡು ನಿಯಂತ್ರಣ ಮಾಡುವ ಕೆಲಸ ಮಾಡುತ್ತಿದೆ. ಇಂತಹ ಕೆಲಸವನ್ನು ಮಾಡುತ್ತಿರುವುದು ಸರ್ಕಾರದ ಅಧಿಕಾರಿಗಳು.

ಇದೀಗ ಆ ಜಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಬೇರೆ ಕಡೆ ವರ್ಗಾವಣೆ ಮಾಡಿದ್ರೇ ಕೊರೋನಾ ಕೆಲಸಗಳಿಗೆ ಅಡೆಚಣೆ ಉಂಟಾಗುವ ಸಾಧ್ಯತೆ ಇದೆ. ಅಲ್ಲದೇ ಕೊರೋನಾ ಕೆಲಸಗಳು ಕೂಡ ಸರಿಯಾಗಿ ನಡೆಯುವುದಿಲ್ಲ.‌ ಹೀಗಾಗಿ ಕೊರೋನಾ ಕೆಲಸಗಳು ಯಾವುದೇ ಕಾರಣಕ್ಕೂ ನಿಲ್ಲಬಾರದು ಹಾಗಾಗಿ ಸರ್ಕಾರ ಈಗ ಈ ವರ್ಷದ ಸಾಮಾನ್ಯ ವರ್ಗಾವಣೆಗೆ ಬ್ರೇಕ್ ಹಾಕಿದೆ.

ಇದನ್ನೂ ಓದಿ : ಕೊರೋನಾದಿಂದ ಬಾಡಿಗೆದಾರರ ಸಂಕಷ್ಟ ; 10 ಲಕ್ಷ ರೂಪಾಯಿ ಬಾಡಿಗೆ ಮನ್ನಾ ಮಾಡಿ ಕಾಂಪ್ಲೆಕ್ಸ್ ಮಾಲೀಕನ ಮಾನವೀಯತೆ

ಆದರೆ ವಿರಳ ಪ್ರಕರಣಗಳಲ್ಲಿ ಮಾತ್ರ ವರ್ಗಾವಣೆಗೆ ಅವಕಾಶ ನೀಡಲಾಗಿದೆ. ಅದು ಮುಖ್ಯಮಂತ್ರಿ ಗಳ ಅನುಮೋದನೆ ಪಡೆದೇ, ವರ್ಗಾವಣೆ ಮಾಡಬೇಕು. ಇಂತಹದೊಂದು ಆದೇಶವನ್ನು ಇದೀಗ ರಾಜ್ಯ ಸರ್ಕಾರ ಆದೇಶ ಮಾಡಿದ್ದು, ಈ ಬಗ್ಗೆ ಕ್ರಮ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ.

ಒಟ್ಟಾರೆ ಕೊರೋನಾ ನಡುವೆ ವರ್ಗಾವಣೆ ಬಯಸಿದ್ದ ಅಧಿಕಾರಿಗಳಿಗೆ ಇದೀಗ ನಿರಾಸೆ ಮೂಡಿದ್ದು, ಕೊರೋನಾ ಮುಗಿಯುವ ವರೆಗೂ ತಾವಿದ್ದ ಜಾಗದಲ್ಲೇ ಕರ್ತವ್ಯ ನಿರ್ವಹಿಸುವುದು ಅನಿವಾರ್ಯ ವಾಗಿದೆ.
First published: June 19, 2020, 7:19 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories