HOME » NEWS » Coronavirus-latest-news » NO TOILET BREAKS NO FAMILY TIME GRIM PHOTO OF EXHAUSTED NURSE IN PPE GOES VIRAL AS COVID 19 SPIKES STG LG

ಮನೆಗೆ ಹೋಗುವಂತಿಲ್ಲ, ಟಾಯ್ಲೆಟ್​​​ಗೂ ಹೋಗಲು ಅವಕಾಶವಿಲ್ಲ: ಪಿಪಿಇ ಕಿಟ್ ಧರಿಸಿದ ದಾದಿಯ ಕರುಣಾಜನಕ ಫೋಟೋ ವೈರಲ್!

ಆರೋಗ್ಯ ಸಲಹೆಗಾರ್ತಿ ವಂದನಾ ಮಹಾಜನ್, ಕೋವಿಡ್-19 ಸೋಂಕಿತರಿರುವ ಆಸ್ಪತ್ರೆಯಲ್ಲಿ ಸುಮಾರು ಒಂದು ವಾರಗಳ ಕಾಲ ಕಳೆದಳು. ಅವಳು ಅಲ್ಲಿದ್ದ ಸಮಯದಲ್ಲಿ, ವೈದ್ಯರು, ದಾದಿಯರು ಮತ್ತು ಇತರ ವೈದ್ಯಕೀಯ ವೃತ್ತಿಪರರೊಂದಿಗೆ ಸಂವಹನ ನಡೆಸಿದಳು. ಕುರ್ಚಿಯ ಮೇಲೆ ಕುಳಿತಾಗ ವಿಶ್ರಾಂತಿ ಪಡೆಯುತ್ತಿದ್ದ ಪಿಪಿಇ ಕಿಟ್ ಧರಿಸಿದ ದಣಿದ ದಾದಿಯ ಚಿತ್ರವನ್ನು ಅವಳು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಳು.

news18-kannada
Updated:April 16, 2021, 12:47 PM IST
ಮನೆಗೆ ಹೋಗುವಂತಿಲ್ಲ, ಟಾಯ್ಲೆಟ್​​​ಗೂ ಹೋಗಲು ಅವಕಾಶವಿಲ್ಲ: ಪಿಪಿಇ ಕಿಟ್ ಧರಿಸಿದ ದಾದಿಯ ಕರುಣಾಜನಕ ಫೋಟೋ ವೈರಲ್!
ಪಿಪಿಇ ಕಿಟ್ ಧರಿಸಿರುವ ನರ್ಸ್​
  • Share this:
ಕೊರೋನಾವೈರಸ್ ಸಾಂಕ್ರಾಮಿಕ ರೋಗವು ಎರಡನೇ ಹಂತದಲ್ಲಿ ಉಲ್ಭಣಗೊಂಡಿದೆ. ಪ್ರಪಂಚದಾದ್ಯಂತದ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ದಾದಿ(ನರ್ಸ್)ಯರು ಕೊರೋನಾ ಸೋಂಕಿತ ರೋಗಿಗಳನ್ನು ಸುರಕ್ಷಿತವಾಗಿಡಲು ತಮ್ಮ ಜೀವನವನ್ನು ಪಣಕಿಟ್ಟು ಆರೋಗ್ಯ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಕುಟುಂಬ ಸದ್ಯಸರಿಂದ ದೂರವಿದ್ದು ಕೊರೋನಾ ಸೋಂಕಿತ ರೋಗಿಗಳನ್ನು ಆರೈಕೆ ಮಾಡುವ ಜವಬ್ದಾರಿಯನ್ನು ತೆಗೆದುಕೊಂಡಿರುತ್ತಾರೆ. ಇಂತಹ ಸಮಯದಲ್ಲಿ ವೈದ್ಯರು ಮತ್ತು ದಾದಿಯರು ಹಲವು ದಿನಗಳ ಕಾಲ ತಮ್ಮ ಮನೆಗಳಿಗೆ ಹೋಗುವಂತಿಲ್ಲ. ಪಿಪಿಇ ಕಿಟ್ ಧರಿಸಿದ ಆರೋಗ್ಯ ಕಾರ್ಯಕರ್ತರು ತಮ್ಮ ಕೆಲಸದ ಅವಧಿ ಮುಗಿಯುವವರೆಗೂ ಬಟ್ಟೆ ತೆಗೆಯುವಂತಿಲ್ಲ. ಹೀಗಾಗಿ ಶೌಚಾಲಯಕ್ಕೂ ಹೋಗದೇ ಸಂಕಟವನ್ನು ಅನುಭವಿಸುವ ದಾದಿಯರ ಕಷ್ಟ ಹೇಳತೀರದು. ಆರೋಗ್ಯ ಕಾರ್ಯಕರ್ತರ ಕಷ್ಟ ಮತ್ತು ಮಾನಸಿಕ ಹಿಂಸೆಯ ಬಗ್ಗೆ ಟ್ವಿಟ್ಟರ್‌ನಲ್ಲಿ ಫೋಟೋ ಸಹಿತ ವೈರಲ್ ಆಗಿದೆ.

ಆರೋಗ್ಯ ಸಲಹೆಗಾರ್ತಿ ವಂದನಾ ಮಹಾಜನ್, ಕೋವಿಡ್-19 ಸೋಂಕಿತರಿರುವ ಆಸ್ಪತ್ರೆಯಲ್ಲಿ ಸುಮಾರು ಒಂದು ವಾರಗಳ ಕಾಲ ಕಳೆದಳು. ಅವಳು ಅಲ್ಲಿದ್ದ ಸಮಯದಲ್ಲಿ, ವೈದ್ಯರು, ದಾದಿಯರು ಮತ್ತು ಇತರ ವೈದ್ಯಕೀಯ ವೃತ್ತಿಪರರೊಂದಿಗೆ ಸಂವಹನ ನಡೆಸಿದಳು. ಕುರ್ಚಿಯ ಮೇಲೆ ಕುಳಿತಾಗ ವಿಶ್ರಾಂತಿ ಪಡೆಯುತ್ತಿದ್ದ ಪಿಪಿಇ ಕಿಟ್ ಧರಿಸಿದ ದಣಿದ ದಾದಿಯ ಚಿತ್ರವನ್ನು ಅವಳು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಳು.

ವೈರಲ್ ಆದ ಪೋಸ್ಟ್ ನಲ್ಲಿ, ಭಾರತದಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ಎದುರಿಸುವ ವೈದ್ಯರು ಮತ್ತು ದಾದಿಯರು ಎದುರಿಸುತ್ತಿರುವ ಕಷ್ಟಗಳನ್ನು ಎತ್ತಿ ತೋರಿಸಿದ್ದಳು. ಎರಡನೇ ಅಲೆಯ ಮಧ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಸಹ, ಆರೋಗ್ಯ ಸಲಹೆಗಾರರಾದ ವಂದನಾ ಮಹಾಜನ್, ಕೋವಿಡ್‌ಗೆ ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯಲ್ಲಿ ದಾದಿಯರು, ವೈದ್ಯರು ಮತ್ತು ಇತರ ವೈದ್ಯಕೀಯ ಆರೋಗ್ಯ ವೃತ್ತಿಪರರೊಂದಿಗೆ ಸಂವಹನ ನಡೆಸಲು ಸುಮಾರು ಒಂದು ವಾರ ಕಳೆದಳು. ಅವಳು ಟ್ವಿಟ್ಟರ್ ನಲ್ಲಿ ದಣಿದ ವೈದ್ಯಕೀಯ ಆರೋಗ್ಯ ವೃತ್ತಿಪರರು ಪಿಪಿಇ ಕಿಟ್ ಧರಿಸಿ ವಿಶ್ರಾಂತಿ ಪಡೆಯುತ್ತಿದ್ದ ಫೋಟೋವನ್ನು ಹಂಚಿಕೊಂಡಿದ್ದಾಳೆ.



ರಾಣಿಯಾಗಲು ತಮ್ಮ ಮಿದುಳನ್ನು ಕುಗ್ಗಿಸುವ ಭಾರತೀಯ ಜಂಪಿಂಗ್ ಇರುವೆಗಳು..!

ಕೋವಿಡ್ ಉಲ್ಬಣಗೊಂಡ ನಂತರ ಆರಂಭದಲ್ಲಿ, ದಾದಿಯೊಬ್ಬಳು ಅವಳು ಹಾಸ್ಟೆಲ್ನಲ್ಲಿಯೇ ಇದ್ದಳು ಮತ್ತು ತನ್ನ ಮಕ್ಕಳು ಸಂಬಂಧಿಕರ ಮನೆಯಲ್ಲಿ ಬಿಟ್ಟಿರುವುದಾಗಿ ಹೇಳಿದಳು. ಮಗನ ಶಾಲೆಯಲ್ಲಿ ಪರೀಕ್ಷೆ ಸಮೀಪಿಸಿರುವುದರಿಂದ ತನ್ನ ಕೆಲಸದ ಪಾಳಿ ಮುಗಿಸಿದ ನಂತರ ಮನೆಗೆ ಹೋಗಿ ಮಗನಿಗೆ ಪರೀಕ್ಷೆಗೆ ತಯಾರಿಗೊಳಿಸಬೇಕಿದೆ. ತನ್ನ ಪತಿ ಗಲ್ಫ್ ರಾಷ್ಟ್ರದಲ್ಲಿ ಕೆಲಸ ಮಾಡುತ್ತಿದ್ದು, ನಾಲ್ಕು ವರ್ಷಗಳ ನಂತರ ಮನೆಗೆ ಬರುವ ಪತಿಯನ್ನು ಅವಳಿಗೆ ಭೇಟಿಯಾಗಲು ಸಾಧ್ಯವಾಗುತ್ತಿಲ್ಲ. ತನ್ನ ಮನೆಯ ಸದ್ಯಸರನ್ನು ಸೋಂಕಿನಿಂದ ಸುರಕ್ಷಿತವಾಗಿರಬೇಕು ಎಂದು ಅವಳು ಆಶಿಸುತ್ತಿದ್ದಾಳೆ.

ಇನ್ನೊಬ್ಬರು ನರ್ಸ್, ಹಿಂದಿನ ರಾತ್ರಿಯ ವೇಳೆಯಲ್ಲಿ ಸಿಪಿಆರ್ ಮಾಡುತ್ತಿದ್ದ ರೋಗಿಯೊಬ್ಬರು ಕೊರೋನಾದಿಂದ ಮೃತರಾದರು ಎಂದು ತಮ್ಮ ದುಃಖವನ್ನು ವ್ಯಕ್ತಪಡಿಸಿದರು.

ವೈದ್ಯರು, ದಾದಿಯರು, ಸಹೋದರಿಯರು ಮತ್ತು ಸಹೋದರರು, ಸ್ವಚ್ಛತಾ ಸಿಬ್ಬಂದಿ ಮತ್ತು ಇತರ ಸಿಬ್ಬಂದಿ ಸೇರಿದಂತೆ ವೈರಸ್ ವಿರುದ್ಧ ಹೋರಾಡುತ್ತಿದ್ದಾರೆ ಎಂದು ಮಹಾಜನ್ ಹೇಳಿದರು. "ಅವರ ಆರೋಗ್ಯದಲ್ಲಿ ಹಲವಾರು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ ಎಂದು ನರ್ಸ್‌ ಹೇಳಿದ್ದರು. ಅವರಿಗೆ ಹೊಟ್ಟೆಯ ತೊಂದರೆಗಳು, ಬಾಯಿಯಲ್ಲಿ ಹುಣ್ಣುಗಳು ಮತ್ತು ಅವರಲ್ಲಿ ಯಾರಾದರೂ ಮುಟ್ಟಾಗಿದ್ದರೆ, ಸ್ಯಾನಿಟರಿ ಪ್ಯಾಡ್ ಬದಲಾಯಿಸುವುದು ಅಸಾಧ್ಯವಾದ ಕೆಲಸ” ಎಂದು ಮಹಾಜನ್ ಅವರು ಪೊಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

ಟ್ವಿಟ್ಟರ್‌ನಲ್ಲಿ ಮಹಾಜನ್ ಅವರ ಪೋಸ್ಟ್ ವೈರಲ್ ಆಗಿದ್ದು ನೆಟ್ಟಿಗರ ಗಮನ ಸೆಳೆದಿದೆ. ವೈದ್ಯಕೀಯ ವೃತ್ತಿಪರರಿಗೆ ಉತ್ತಮ ಸೌಲಭ್ಯಗಳು ಮತ್ತು ಮಾನಸಿಕ ಆರೋಗ್ಯ ಸಮಾಲೋಚನೆಯ ಅಗತ್ಯವಿದೆ ಎಂದು ಹಲವು ಜನರು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಮಧ್ಯೆ, ಕೋವಿಡ್ -19 ರ ಎರಡನೇ ಅಲೆಯಲ್ಲಿ ಭಾರತ ದೇಶ ತತ್ತರಿಸಿದ್ದು, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಎರಡು ಲಕ್ಷ ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಾಗಿದೆ. ಏಪ್ರಿಲ್ 2 ರಿಂದ ಭಾರತವು ಅತಿ ಹೆಚ್ಚು ಕೊರೋನಾ ಸೋಂಕಿಗೆ ತುತ್ತಾದ ದೇಶ ಎಂಬ ದಾಖಲೆಯನ್ನು ಮಾಡಿದೆ.

ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ನಿಭಾಯಿಸುವ ವೈದ್ಯಕೀಯ ವೃತ್ತಿಪರರ ಉತ್ತಮ ಆರೋಗ್ಯ ಮತ್ತು ಮಾನಸಿಕ ಆರೋಗ್ಯ ಸಲಹೆಯ ಅಗತ್ಯತೆಯ ಬಗ್ಗೆ ಅನೇಕರು ಪ್ರತಿಕ್ರಿಯಿಸುವ ಮೂಲಕ ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಬೆಂಬಲವನ್ನು ಪಡೆಯುತ್ತಿದೆ.
Published by: Latha CG
First published: April 16, 2021, 12:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories