Chhath Puja: ಛತ್​ ಪೂಜೆಯಲ್ಲಿ ಆಮ್​ ಆದ್ಮಿ ಪಕ್ಷ ರಾಜಕೀಯ ಮಾಡುವುದು ಒಳ್ಳೆಯದಲ್ಲ: ಕೇಂದ್ರ ಆರೋಗ್ಯ ಸಚಿವಾಲಯ

ದೆಹಲಿಯ ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಒಂದಾಗಿರುವ ದೆಹಲಿಯ ಪೂರ್ವ ಭಾಗವು ಈಗ ಈ ವಿವಾದದ ಕೇಂದ್ರ ಬಿಂದು, ಏಕೆಂದರೆ ಇಲ್ಲಿ ಬಿಹಾರ ಮತ್ತು ಉತ್ತರ ಪ್ರದೇಶದ ಬಹಳಷ್ಟು ಜನರು ವಾಸವಾಗಿದ್ದಾರೆ. ಈ ರಾಜ್ಯಗಳ ಜನರಿಗೆ ಛತ್ ಪೂಜೆ ಎನ್ನುವುದು ಅತ್ಯಂತ ಪವಿತ್ರದ ಪೂಜೆ, ಇದನ್ನು ಈ ರಾಜ್ಯದ ಜನಗಳು ದೊಡ್ಡ ರೀತಿಯಲ್ಲಿ ಆಚರಿಸುತ್ತಾರೆ.

ಸಾಂಧರ್ಬಿಕ ಚಿತ್ರ

ಸಾಂಧರ್ಬಿಕ ಚಿತ್ರ

 • Share this:
  ರಾಷ್ಟ್ರ ರಾಜಧಾನಿಯಲ್ಲಿ ಛತ್ ಪೂಜೆಯ ಆಚರಣೆಯ ವಿಷಯವು ರಾಜಕೀಯ ಸ್ವರೂಪ ಪಡೆದುಕೊಂಡಿದೆ.  ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರಿಗೆ ಪತ್ರ ಬರೆದು ದೆಹಲಿಯಲ್ಲಿ ಛತ್ ಪೂಜೆ ಆಚರಣೆಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ.

  ಇದಕ್ಕೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವಾಲಯದ ಹೇಳಿಕೆಯ ಮೂಲಗಳು ಸಿಎನ್‌ಎನ್ ನ್ಯೂಸ್ 18 ಗೆ ಲಭಿಸಿದ್ದು ಕೋವಿಡ್‌ನಂತಹ ಗಂಭೀರ ವಿಚಾರದಲ್ಲಿ ರಾಜಕೀಯಕ್ಕೆ ಸ್ಥಾನ ನೀಡಬಾರದು ಎಂದು ಹೇಳಿದೆ. ಮತ್ತೆ ರಾಷ್ಟ್ರ ರಾಜಧಾನಿಯಲ್ಲಿ ಆಮ್​ ಆದ್ಮಿ ಪಕ್ಷ ಹಾಗೂ ಬಿಜೆಪಿಯ ಕೆಸರೆರಚಾಟಕ್ಕೆ ಈ ಪೂಜೆ ಮತ್ತೆ ವೇದಿಕೆ ಮಾಡಿಕೊಡುತ್ತಿದೆ ಎಂದು ಹೇಳಲಾಗುತ್ತಿದೆ.


  ಕೋವಿಡ್ ಮಾರ್ಗಸೂಚಿಗಳು ಇನ್ನೂ ಕೆಲವು ರೂಪದಲ್ಲಿ ಒಂದಷ್ಟು ನಿಯಮಗಳು ಜಾರಿಯಲ್ಲಿವೆ ಎಂದು ಹೇಳಲಾಗಿದೆ ಅಥವಾ ಈ ವಿಷಯವಾಗಿ ರಾಜ್ಯಗಳು ಮತ್ತು ರಾಜ್ಯಗಳಲ್ಲಿ ಕಾಲಕಾಲಕ್ಕೆ ಮರು- ವಿಶ್ಲೇಷಣೆ ಮತ್ತು ಮಾರ್ಗಸೂಚಿಗಳನ್ನು ಮರು-ಬಿಡುಗಡೆ ಮಾಡುತ್ತಿದೆ. ಮಾರ್ಗಸೂಚಿಗಳನ್ನು ನೀಡುವುದು ಒಂದು ರಾಜ್ಯಕ್ಕೆ ಸಂಬಂಧಿಸಿದ ವಿಷಯವಾಗಿದ್ದು, ರಾಜ್ಯಗಳು ತಮಗೆ ಬೇಕಾದುದನ್ನು ಮಾಡಬಹುದು ಎಂದು ಹೇಳಲಾಗಿದೆ.

  ದೆಹಲಿಯ ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಒಂದಾಗಿರುವ ದೆಹಲಿಯ ಪೂರ್ವ ಭಾಗವು ಈಗ ಈ ವಿವಾದದ ಕೇಂದ್ರ ಬಿಂದು, ಏಕೆಂದರೆ ಇಲ್ಲಿ ಬಿಹಾರ ಮತ್ತು ಉತ್ತರ ಪ್ರದೇಶದ ಬಹಳಷ್ಟು ಜನರು ವಾಸವಾಗಿದ್ದಾರೆ. ಈ ರಾಜ್ಯಗಳ ಜನರಿಗೆ ಛತ್ ಪೂಜೆ ಎನ್ನುವುದು ಅತ್ಯಂತ ಪವಿತ್ರದ ಪೂಜೆ, ಇದನ್ನು ಈ ರಾಜ್ಯದ ಜನಗಳು ದೊಡ್ಡ ರೀತಿಯಲ್ಲಿ ಆಚರಿಸುತ್ತಾರೆ.


  ಕೋವಿಡ್‌ಗೆ ಮುಂಚಿತವಾಗಿ, ದೆಹಲಿಯು ರಾಜಧಾನಿಯಾದ್ಯಂತ 1,100 ಕ್ಕೂ ಹೆಚ್ಚು ತಾತ್ಕಾಲಿಕ ಛತ್ ಪೂಜಾ ಘಾಟ್‌ಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಲಾಗಿತ್ತು. ಕೋವಿಡ್ ನಿರ್ಬಂಧಗಳು ಈಗ ಜಾರಿಯಲ್ಲಿರುವುದರಿಂದ, ಸುಮಾರು 600 ಘಾಟ್‌ಗಳಿಗೆ ಅನುಮತಿ ನೀಡಬಹುದು ಎಂದು ಯೋಜಿಸಲಾಗಿದೆ.


  ಈ ಪೂಜೆಯನ್ನು ಹೆಚ್ಚಿನಸಲ ನವೆಂಬರ್ ತಿಂಗಳಲ್ಲಿ ಆಚರಿಸಲಾಗುತ್ತದೆ. ಉತ್ತರ ಭಾರತದ ಅನೇಕ ಭಾಗದಲ್ಲಿ ಈ ಪೂಜೆಯನ್ನು ಅತ್ಯಂತ ವಿಜೃಂಭಣೆಯಿಂದ ಮಾಡಲಾಗುತ್ತದೆ. ಸೂರ್ಯದೇವನಿಗೆ ಪೂಜೆ ಸಲ್ಲಿಸುವುದರ ಮೂಲಕ ಇದನ್ನು ಆಚರಿಸಲಾಗುತ್ತದೆ.  ಜಗತ್ತಿಗೆ ಬೆಳಕನ್ನು ನೀಡುವ ಸೂರ್ಯ ದೇವನಿಗೆ ಧನ್ಯವಾದಗಳನ್ನು ಸಲ್ಲಿಸುವ ಪೂಜೆ ಇದಾಗಿದೆ. ಕಠಿಣ ವ್ರತಗಳ ಮೂಲಕ 4 ದಿನಗಳ ಇದನ್ನು ಆಚರಿಸಲಾಗುತ್ತದೆ.

  Also read: Lakhimpur Kheri violence: ಸರ್ಕಾರದ ಮೌನದ ಬಗ್ಗೆ ಅಮೆರಿಕದಲ್ಲಿ ಉತ್ತರಿಸಿದ Nirmala Sitharaman

  ಬಿಹಾರ ಮತ್ತು ಮಿಥಿಲಾದಲ್ಲಿ ಈ ಹಬ್ಬವನ್ನು ಶ್ರದ್ದಾ ಭಕ್ತಿಗಳಿಂದ ಆಚರಿಸಲಾಗುತ್ತದೆ. ಇದನ್ನು ಉತ್ತರ ಭಾರತೀಯರು ಅತ್ಯಂತ ಭಾವನಾತ್ಮಕವಾಗಿ ನೋಡಲಾಗುತ್ತದೆ. ಪ್ರಸ್ತುತ ಕೊರೋನಾ ಇರುವ ಕಾರಣ ಈ ಪೂಜೆ ಮಾಡಲು ನಿರ್ಭಂಧ ಹೇರಲಾಗಿದ್ದು, ಇದು ಈಗ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.
  Published by:HR Ramesh
  First published: