ಒಂದೇ ದಿನದಲ್ಲಿ ಸುಮಾರು 10 ಸಾವಿರ ಮಂದಿಗೆ ಕೊರೋನಾ;‌ ಭಾರತದಲ್ಲಿ ಸೋಂಕಿತರ ಸಂಖ್ಯೆ 2,66,598ಕ್ಕೆ ಏರಿಕೆ

ಸೋಮವಾರ ಒಂದೇ ದಿನ ಕೊರೋನಾದಿಂದ 331 ಜನ ಮೃತಪಟ್ಟಿದ್ದಾರೆ. ಸದ್ಯ ದೇಶದಲ್ಲಿ ಕೊರೋನಾದಿಂದ ಸತ್ತವರ ಸಂಖ್ಯೆ 7,466ಕ್ಕೆ ಏರಿಕೆಯಾಗಿದೆ. ಕೊರೋನಾದಿಂದ ಈವರೆಗೆ 1,29,215 ಜನ ಮಾತ್ರ  ಗುಣಮುಖ ಆಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿಗಳು ತಿಳಿಸಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವದೆಹಲಿ(ಜೂ.09): ಕೊರೋನಾ ಸೋಂಕು ಹರಡುವಿಕೆ ಬಹಳ‌ ಕಡಿಮೆ ಇದ್ದಾಗ ಲಾಕ್​​ಡೌನ್​ ಜಾರಿ ಮಾಡಿ, ಸೋಂಕು ಹರಡುವಿಕೆ ಹೆಚ್ಚಾದಾಗ ನಾಮಕಾವಸ್ಥೆಗೆ ಮಾತ್ರ ಲಾಕ್​ಡೌನ್​​ ಜಾರಿಗೊಳಿಸಲಾಗಿದೆ. ಈ ಪರಿಣಾಮ ಭಾರತದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಶರವೇಗದಲ್ಲಿ ಸಾಗುತ್ತಿದೆ. ಇತ್ತೀಚೆಗಷ್ಟೇ ಭಾರತ ವಿಶ್ವಮಟ್ಟದಲ್ಲಿ ಅತಿಹೆಚ್ಚು ಕೊರೋನಾ ಇರುವ ದೇಶಗಳ ಪಟ್ಟಿಯಲ್ಲಿ ಇಟಲಿ ಹಾಗೂ ಸ್ಪೇನ್​ನ್ನು ಹಿಂದಿಕ್ಕಿ 5ನೇ ಸ್ಥಾನಕ್ಕೇರಿತ್ತು.  ನಿನ್ನೆ ಭಾರತದದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಎರಡೂವರೆ ಲಕ್ಷವನ್ನೂ ದಾಟಿ ಮುಂದೆ ಸಾಗಿತ್ತು.

ಮೇ 30ರಿಂದ ಭಾರತದಲ್ಲಿ ಪ್ರತಿನಿತ್ಯ 8 ಸಾವಿರಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು ಪತ್ತೆಯಾಗಲು ಆರಂಭಿಸಿದವು. ಜೂನ್‌ 3ರಿಂದ ದಿನವೊಂದರಲ್ಲಿ 9 ಸಾವಿರಕ್ಕೂ ಅಧಿಕ ಪ್ರಕರಣಗಳು ಗೋಚರಿಸಲು ಆರಂಭವಾದವು. ಈ ವಾರವೂ ಅದೇ ಟ್ರೆಂಡ್ ಮುಂದುವರೆದಿದೆ.  ಸೋಮವಾರ ಮತ್ತೆ 9,987 ಪ್ರಕರಣಗಳು ಕಂಡುಬಂದಿವೆ. ಇದರಿಂದ ದೇಶದ ಕೊರೋನಾ ವೈರಸ್ ಪೀಡಿತರ ಸಂಖ್ಯೆ 2,66,598ಕ್ಕೆ ಏರಿಕೆಯಾಗಿದೆ.

ಅಂಫಾನ್ ಚಂಡಮಾರುತದ ವೇಳೆ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದ 50 ಜನ NDRF ಸಿಬ್ಬಂದಿಗೆ ಕೊರೋನಾ

ಇದಲ್ಲದೇ ‌ಸೋಮವಾರ ಒಂದೇ ದಿನ ಕೊರೋನಾದಿಂದ 331 ಜನ ಮೃತಪಟ್ಟಿದ್ದಾರೆ. ಸದ್ಯ ದೇಶದಲ್ಲಿ ಕೊರೋನಾದಿಂದ ಸತ್ತವರ ಸಂಖ್ಯೆ 7,466ಕ್ಕೆ ಏರಿಕೆಯಾಗಿದೆ. ಕೊರೋನಾದಿಂದ ಈವರೆಗೆ 1,29,215 ಜನ ಮಾತ್ರ  ಗುಣಮುಖ ಆಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿಗಳು ತಿಳಿಸಿವೆ.

ಕೇಂದ್ರ ಆರೋಗ್ಯ ಇಲಾಖೆ ಮಾಹಿತಿಗಳ ಪ್ರಕಾರ ಮೇ 10ರಿಂದ  ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಪ್ರತಿನಿತ್ಯ ನಾಲ್ಕು ಸಾವಿರಕ್ಕಿಂತ ಹೆಚ್ಚಾಗುತ್ತಲೇ ಇದೆ.‌ ಮೇ 10ರಂದು 4,213 ಜನರಿಗೆ, ಮೇ 11ರಂದು 3,064 ಮಂದಿಗೆ, ಮೇ 12 ರಂದು 3,525 ಜನರಿಗೆ, ಮೇ13ರಂದು 3,722 ಮಂದಿಗೆ ಹಾಗೂ ಮೇ 14ರಂದು 3,967 ಜನರಿಗೆ, ಮೇ 15ರಂದು 3,970 ಮಂದಿಗೆ, ಮೇ 16ರಂದು 4,987 ಜನರಿಗೆ, ಮೇ 17ರಂದು 5,242, ಮೇ 18ರಂದು 4,970, ಮೇ 19ರಂದು 5,611, ಮೇ 20ರಂದು 5,609, ಮೇ 21ರಂದು 6,088, ಮೇ 22ರಂದು 6,654, ಮೇ 23ರಂದು 6,767, ಮೇ 24ರಂದು 6,977, ಮೇ 25ರಂದು 6,535, ಮೇ 26ರಂದು 6,387, ಮೇ 27ರಂದು 6,566, ಮೇ 28ರಂದು 7,466, ಮೇ 29ರಂದು 7,964, ಮೇ 30ರಂದು 8,380, ಮೇ 31ರಂದು 8,392, ಜೂನ್ 1ರಂದು 8,171, ಜೂನ್ 2ರಂದು 8,909, ಜೂನ್ 3ರಂದು 9,304, ಜೂನ್ 4ರಂದು 9,851, ಜೂನ್ 5ರಂದು 9,887, ಜೂನ್ 6ರಂದು 9,971, ಜೂ 7ರಂದು 9,983 ಹಾಗು ಜೂನ್ 8ರಂದು 9987 ಹೊಸ ಪ್ರಕರಣಗಳು ಕಂಡುಬಂದಿವೆ.
First published: