• Home
  • »
  • News
  • »
  • coronavirus-latest-news
  • »
  • ತಮಿಳುನಾಡಿನಲ್ಲಿ ಮೇ 3 ರವರೆಗೆ ಲಾಕ್​ಡೌನ್ ಸಡಿಲಿಕೆ ಇಲ್ಲ: ಸಿಎಂ ಪಳನಿಸ್ವಾಮಿ ಸ್ಪಷ್ಟನೆ

ತಮಿಳುನಾಡಿನಲ್ಲಿ ಮೇ 3 ರವರೆಗೆ ಲಾಕ್​ಡೌನ್ ಸಡಿಲಿಕೆ ಇಲ್ಲ: ಸಿಎಂ ಪಳನಿಸ್ವಾಮಿ ಸ್ಪಷ್ಟನೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಒಂದು ವಾರದವರೆಗೆ ಪಾಸಿಟಿವ್​​ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿದ್ದರೂ ನಿನ್ನೆ ಭಾನುವಾರ ಒಂದೇ ದಿನ 105 ಹೊಸ ಪ್ರಕರಣಗಳು ದಾಖಲಾಗಿವೆ.

  • Share this:

    ಚೆನೈ(ಏ.20): ಕೊರೋನಾ ವೈರಸ್ ಸಾಂಕ್ರಾಮಿಕ ರೋಗ ಹರಡದಂತೆ ನಿಗ್ರಹಿಸಲು ಮೇ 3 ರವರೆಗೆ ಲಾಕ್ ಡೌನ್ ಕ್ರಮವನ್ನು ಕಟ್ಟುನಿಟ್ಟಾಗಿ ಮುಂದುವರಿಸುವುದಾಗಿ ತಮಿಳುನಾಡು ಸರ್ಕಾರ ಹೇಳಿದೆ.


    ಈ ವಿಚಾರವಾಗಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರು,ನಾವು ತಜ್ಞರ ಸಮಿತಿಯ ಶಿಫಾರಸುಗಳನ್ನು ಪರಿಶೀಲಿಸಿದ್ದೇವೆ. ಸೋಂಕು ಕಡಿಮೆಯಾದರೆ ಅದಕ್ಕೆ ತಕ್ಕಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ವೈರಸ್ ಹರಡುವುದನ್ನು ನಿಗ್ರಹಿಸಲು ಇನ್ನಷ್ಟು ದಿಟ್ಟ ಕ್ರಮ ತೆಗೆದುಕೊಳ್ಳುವ ಅವಶ್ಯಕತೆಯಿದೆ ಎಂದು ತಿಳಿಸಿದ್ದಾರೆ.


    ಕೋವಿಡ್ 19 ನಿಂದ ದೇಶದಲ್ಲಿ ಅತಿ ಹೆಚ್ಚು ಬಾಧಿತವಾಗಿರುವ ರಾಜ್ಯಗಳ ಸಾಲಿನಲ್ಲಿ ತಮಿಳುನಾಡು ಇದೆ. ಇಲ್ಲಿಯ ಎಲ್ಲಾ ಜಿಲ್ಲೆಗಳಲ್ಲೂ ವ್ಯಾಪಕವಾಗಿ ಕ್ವಾರಂಟೈನ್ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.


    ತಮಿಳುನಾಡಿನಲ್ಲಿ ಒಟ್ಟು 1,477 ಪಾಸಿಟಿವ್​ ಪ್ರಕರಣಗಳಿದ್ದು, 16 ಜನರು ಸಾವನ್ನಪ್ಪಿದ್ದಾರೆ. ತಮಿಳುನಾಡಿನ ಅನೇಕ ಪ್ರಕರಣಗಳು ತಬ್ಲಿಘಿ ಜಮಾತ್​ಗೆ ನಂಟು ಹೊಂದಿವೆ. ಮಾರ್ಚ್‌ನಲ್ಲಿ ನವದೆಹಲಿಯಲ್ಲಿ ನಡೆದ ತಬ್ಲಿಘಿ ಜಮಾತ್ ಕಾರ್ಯಕ್ರಮಕ್ಕೆ ಹೋಗಿಬಂದವರಿಂದಲೇ ತಮಿಳುನಾಡಿನಲ್ಲಿ ಸೋಂಕು ಹೆಚ್ಚು ಹರಡಿರುವುದು ತಿಳಿದು ಬಂದಿದೆ.


    ಒಂದು ವಾರದವರೆಗೆ ಪಾಸಿಟಿವ್​​ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿದ್ದರೂ ನಿನ್ನೆ ಭಾನುವಾರ ಒಂದೇ ದಿನ 105 ಹೊಸ ಪ್ರಕರಣಗಳು ದಾಖಲಾಗಿವೆ. ಅವರಲ್ಲಿ 50 ರೋಗಿಗಳು ಚೆನೈ ನವರೇ ಆಗಿದ್ದಾರೆ.


    ಇದನ್ನೂ ಓದಿ : Vijay Mallya: ಭಾರತಕ್ಕೆ ಹಸ್ತಾಂತರ ವಿರೋಧಿಸಿ ವಿಜಯ್ ಮಲ್ಯ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಬ್ರಿಟನ್ ಕೋರ್ಟ್


    ಲಾಕ್ ಡೌನ್ ನಿರ್ಬಂಧಗಳನ್ನು ಸಡಿಲಿಸಿದರೆ ಸರ್ಕಾರದ ಪ್ರಯತ್ನಗಳು ನೀರಲ್ಲಿ ಹೋಮ ಮಾಡಿದಂತಾಗಬಹುದು. ಯಾವುದೇ ಕಾರಣಕ್ಕೆ ರಿಲ್ಯಾಕ್ಸೇಶನ್ ಮಾಡಬಾರದು ಎಂದು ಸೋಮವಾರ ನಡೆದ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು ಎಂದು ಮೂಲಗಳು ತಿಳಿಸಿವೆ.


    (ವರದಿ: ಪೂರ್ಣಿಮಾ ಮುರಳಿ)

    Published by:G Hareeshkumar
    First published: