news18-kannada Updated:April 27, 2020, 12:45 PM IST
ವೈದ್ಯಕೀಯ ಸಹಾಯಕ ಸಿಬ್ಬಂದಿಗಳು ಮತ್ತು ಪೌರಕಾರ್ಮಿಕರಿಗೆ ಪಿಪಿಇ ಕಿಟ್ ವಿತರಿಸಿದ ಡಿಕೆಶಿ.
ಬೆಂಗಳೂರು (ಏಪ್ರಿಲ್ 27); ಕೊರೋನಾ ವೈರಸ್ ಪೀಡಿತ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರು ಹಾಗೂ ಸಹಾಯಕ ವೈದ್ಯಕೀಯ ಸಿಬ್ಬಂದಿಗಳಿಗೆ ಅವರ ರಕ್ಷಣೆಯ ನಿಟ್ಟಿನಲ್ಲಿ ಪಿಪಿಇ ಕಿಟ್ ಅಗತ್ಯ. ಆದರೆ, ರಾಜ್ಯದಲ್ಲಿ ವೈದ್ಯರನ್ನು ಹೊರತುಪಡಿಸಿ ಬೇರೆ ಯಾರಿಗೂ ಪಿಪಿಇ ಕಿಟ್ ನೀಡಲಾಗುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.
ಇಂದು ರಾಜ್ಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವೈದ್ಯಕೀಯ ಸಿಬ್ಬಂದಿ ಹೊರತಾಗಿ ಉಳಿದವರಿಗೆ ಕಾಂಗ್ರೆಸ್ ವತಿಯಿಂದ ಪಿಪಿಇ ಕಿಟ್ ಅನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿರುವ ಡಿಕೆಶಿ, "ವೈದ್ಯರಿಗೆ ಹೊರತು ಪಡಿಸಿ ಕೆಲವರಿಗೆ ಪಿಪಿಎ ಕಿಟ್ ಸಿಗ್ತಿಲ್ಲ.ಇದರ ಬಗ್ಗೆ ನಮ್ಮಪಕ್ಷದ ಮುಖಂಡರು ಗಮನಿಸಿದ್ದಾರೆ. ಹೀಗಾಗಿ ವೈದ್ಯರನ್ನ ಹೊರತುಪಡಿಸಿ ಉಳಿದವರಿಗೆ ಕಿಟ್ ಹಂಚಿಕೆ ಮಾಡಲಾಗುತ್ತಿದೆ. ಆಶಾ ಕಾರ್ಯಕರ್ತೆಯರು, ದಾದಿಯರು, ಪೌರ ಕಾರ್ಮಿಕರಿಗೆ ಸೂಟ್ ಹಾಗೂ ಅಗತ್ಯವಾಗಿರುವ ಪಿಪಿಎ ಕಿಟ್ ವಿತರಣೆ ಮಾಡಿದ್ದೇವೆ" ಎಂದು ತಿಳಿಸಿದ್ದಾರೆ.
ಇದೇ ಸಂರ್ಭದಲ್ಲಿ ಲಾಕ್ಡೌನ್ಗೆ ನೀಡಲಾಗಿರುವ ವಿನಾಯಿತಿ ಬಗ್ಗೆಯೂ ಮಾತನಾಡಿರುವ ಅವರು, "ಜನ ಲಾಕ್ ಡೌನ್ ವಿನಾಯ್ತಿ ಸಿಕ್ಕಿದೆ ಅಂತ ಯಾಮಾರುವುದು ಬೇಡ. ಸದ್ಯಕ್ಕೆ ಕೊರೋನಾ ಕಂಟ್ರೋಲ್ ಆಗಿರಬಹುದು. ಆದರೆ, ಭವಿಷ್ಯದಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ತಮ್ಮ ಜಾಗರೂಕತೆಯಲ್ಲಿ ಎಲ್ಲರೂ ಇರಬೇಕು" ಎಂದು ಜನರಿಗೆ ಕಿವಿಮಾತು ಹೇಳಿದ್ದಾರೆ.
ಇದನ್ನೂ ಓದಿ : ಸಿಎಂಗಳ ಜೊತೆಗೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್; ಮೇ 03ರ ನಂತರವೂ ಮುಂದುವರೆಯಲಿದೆಯಾ ಲಾಕ್ಡೌನ್?
First published:
April 27, 2020, 12:45 PM IST