HOME » NEWS » Coronavirus-latest-news » NO LOCKDOWN IN RAMANAGAR AS THE PEOPLE OF THE DISTRICT NOT FOLLOWING THE GOVERNMENT INSTRUCTIONS COVID19 MAK

ರಾಮನಗರದಲ್ಲಿ ಲಾಕ್‌ಡೌನ್‌ಗೆ ಬೆಲೆಯೇ ಇಲ್ಲ; ಇಲ್ಲಿ ಜನ ಆಡಿದ್ದೇ ಆಟ ಹೇಳೋರಿಲ್ಲ ಕೇಳೋರಿಲ್ಲ!

ರಾಮನಗರ-ಚನ್ನಪಟ್ಟಣದಲ್ಲಿ ಈವರೆಗೆ ಯಾವುದೇ ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿಲ್ಲ. ಹೀಗಾಗಿ ಇಲ್ಲಿನ ಜನ ಯಾವುದೇ ಆತಂಕ ಲಾಕ್ ಡೌನ್ ಗೆ ಜನ ಕ್ಯಾರೇ ಅನ್ನದೇ ಓಡಾಡುತ್ತಿದ್ದಾರೆ. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲೂ ಜನ ಎಂದಿನಂತೆ ಸಂಚರಿಸುತ್ತಿದ್ದಾರೆ.

MAshok Kumar | news18-kannada
Updated:April 8, 2020, 5:21 PM IST
ರಾಮನಗರದಲ್ಲಿ ಲಾಕ್‌ಡೌನ್‌ಗೆ ಬೆಲೆಯೇ ಇಲ್ಲ; ಇಲ್ಲಿ ಜನ ಆಡಿದ್ದೇ ಆಟ ಹೇಳೋರಿಲ್ಲ ಕೇಳೋರಿಲ್ಲ!
ಲಾಕ್‌ಡೌನ್ ನಡುವೆಯೂ ಗಿಜಿಗುಡುತ್ತಿರುವ ರಾಮನಗರ.
  • Share this:
ರಾಮನಗರ (ಏಪ್ರಿಲ್ 08); ಮಾರಣಾಂತಿಕ ಕೊರೋನಾ ದಾಳಿಗೆ ಇಡೀ ದೇಶ ಬೆಚ್ಚಿಬಿದ್ದಿದೆ. ಪರಿಣಾಮ ದೇಶದಾದ್ಯಂತ ಸತತ 21 ದಿನಗಳ ಲಾಕ್‌ಡೌನ್‌ ಘೋಷಿಸಲಾಗಿದೆ. ಆದರೂ, ರಾಮನಗರದಲ್ಲಿ ಮಾತ್ರ ಲಾಕ್‌ಡೌನ್‌ಗೆ ಕವಡೆ ಕಾಸಿನ ಕಿಮ್ಮತ್ತಿಲ್ಲದಂತಾಗಿದೆ. ಜನ ಲಾಕ್‌ಡೌನ್ ಉಲ್ಲಂಘಿಸಿ ಓಡಾಡುತ್ತಿದ್ದರೂ ಇಲ್ಲಿ ಯಾರೂ ಹೇಳೋರಿಲ್ಲ, ಕೇಳೋರಿಲ್ಲ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ.

ರಾಮನಗರ-ಚನ್ನಪಟ್ಟಣದಲ್ಲಿ ಈವರೆಗೆ ಯಾವುದೇ ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿಲ್ಲ. ಹೀಗಾಗಿ ಇಲ್ಲಿನ ಜನ ಯಾವುದೇ ಆತಂಕ ಲಾಕ್ ಡೌನ್ ಗೆ ಜನ ಕ್ಯಾರೇ ಅನ್ನದೇ ಓಡಾಡುತ್ತಿದ್ದಾರೆ. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲೂ ಜನ ಎಂದಿನಂತೆ ಸಂಚರಿಸುತ್ತಿದ್ದಾರೆ. ಇವರಿಗೆ ಪೊಲೀಸರ ಭಯವೂ ಇಲ್ಲ, ಲಾಕ್ ಡೌನ್ ಬಗ್ಗೆ ಚಿಂತೆಯೂ ಇಲ್ಲದಂತಾಗಿದೆ.

ಇನ್ನೂ ನಗರದ ಎಲ್ಲಾ ಮಾರುಕಟ್ಟೆಗಳು ತೆರೆದಿವೇ, ರೇಷ್ಮೆ ಮಾರುಕಟ್ಟೆ ಜನನಿಬಿಡ ಪ್ರದೇಶವಾಗಿದೆ. ಬ್ಯಾಂಕ್‌ಗಳ ಎದುರು ಜನ ಮುಗಿಬಿದ್ದಿದ್ದು ಎಲ್ಲೂ ಸಹ ಸಾಮಾಜಿಕ ಅಂತರವನ್ನು ಪಾಲಿಸಲಾಗುತ್ತಿಲ್ಲ. ಈವರೆಗೆ ಜಿಲ್ಲೆಯಲ್ಲಿ ಒಂದೇಒಂದು ಕೊರೋನಾ ಪಾಸಿಟಿವ್ ಕೇಸ್ ದಾಖಲಾಗಿಲ್ಲ. ಇದೇ ಕಾರಣಕ್ಕೆ ಜಿಲ್ಲೆಯ ಜನರಲ್ಲಿ ಕೊರೋನಾ ಬಗ್ಗೆ ಅಸಡ್ಡೆ ಬೆಳೆದಿದೆ. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಈ ಕುರಿತು ಸೂಕ್ತ ಕ್ರಮವಹಿಸದಿದ್ದರೆ ಮುಂದೆ ಅಪಾಯ ಕಟ್ಟಿಟ್ಟಬುತ್ತಿ ಎನ್ನಲಾಗಿದೆ.

(ವರದಿ - ಎ.ಟಿ.ವೆಂಕಟೇಶ್ - ರಾಮನಗರ)

ಇದನ್ನೂ ಓದಿ : ಮಾಧ್ಯಮಗಳ ಮೂಲಕ ಸಮಾಜದಲ್ಲಿ ಕೋಮು ದ್ವೇಷ ಬಿತ್ತುವ ಎಲ್ಲರ ಮೇಲೂ ಕೇಸು ದಾಖಲಿಸಿ: ಬಿಎಸ್‌ವೈಗೆ ಹೆಚ್‌ಡಿಕೆ ಒತ್ತಾಯ
Youtube Video
First published: April 8, 2020, 5:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories