ಕಾಫಿನಾಡಲ್ಲಿ ಲಾಕ್‌ಡೌನ್‌ಗಿಲ್ಲ ಕವಡೆ ಕಾಸಿನ ಕಿಮ್ಮತ್ತು; ದಿನಬಳಕೆ ವಸ್ತುಗಳಿಗಾಗಿ ನೂಕು ನುಗ್ಗಲು!

ಸಾಮಾನ್ಯ ಜನರಿಗೆ ತೊಂದರೆಯಾಗದೆ ಇರಲಿ ಎಂಬ ಕಾರಣಕ್ಕೆ ದಿನಸಿ ಅಂಗಡಿಗಳು ಹಾಗೂ ಮೆಡಿಕಲ್ ಶಾಪ್‌ಗಳು ಮಾತ್ರ ಎಂದಿನಂತೆ ಕಾರ್ಯನಿರ್ವಹಿಸಬಹುದು ಎಂದು ನಿಯಮವನ್ನು ಸಡಿಲಿಸಲಾಗಿದೆ. ಆದರೆ, ಚಿಕ್ಕಮಗಳೂರಿನಲ್ಲಿ ಜನ ದಿನಬಳಕೆ ವಸ್ತುಗಳ ಖರೀದಿಗೆ ಮುಗಿಬೀಳುತ್ತಿದ್ದಾರೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
ಚಿಕ್ಕಮಗಳೂರು (ಮಾರ್ಚ್‌ 28): ಕೊರೋನಾ ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ಇಡೀ ರಾಷ್ಟ್ರಾದ್ಯಂತ ಲಾಕ್‌ಡೌನ್ ಘೋಷಿಸಲಾಗಿದೆ. ಜನ ಮನೆಯಿಂದ ಹೊರ ಬರುವಂತಿಲ್ಲ, ಹಾಗೆ ಬಂದರೂ ಸಹ ಸಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ನಿಯಮವನ್ನು ರೂಪಿಸಲಾಗಿದೆ. ಆದರೆ, ಈ ನಿಯಮಕ್ಕೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕವಡೆ ಕಾಸಿನ ಕಿಮ್ಮತ್ತೂ ಇಲ್ಲದಂತಾಗಿದೆ.

ಸಾಮಾನ್ಯ ಜನರಿಗೆ ತೊಂದರೆಯಾಗದೆ ಇರಲಿ ಎಂಬ ಕಾರಣಕ್ಕೆ ದಿನಸಿ ಅಂಗಡಿಗಳು ಹಾಗೂ ಮೆಡಿಕಲ್ ಶಾಪ್‌ಗಳು ಮಾತ್ರ ಎಂದಿನಂತೆ ಕಾರ್ಯನಿರ್ವಹಿಸಬಹುದು ಎಂದು ನಿಯಮವನ್ನು ಸಡಿಲಿಸಲಾಗಿದೆ. ಆದರೆ, ಚಿಕ್ಕಮಗಳೂರಿನಲ್ಲಿ ಜನ ದಿನಬಳಕೆ ವಸ್ತುಗಳ ಖರೀದಿಗೆ ಮುಗಿಬೀಳುತ್ತಿದ್ದಾರೆ.

ದಿನಬಳಕೆ ವಸ್ತುಗಳನ್ನು ಕೊಳ್ಳುವ ನೆಪದಲ್ಲಿ ಇಲ್ಲಿನ ಜನ ಮಾಸ್ಕ್ ಸಹ ಹಾಕಿಕೊಳ್ಳದೆ ಗುಂಪು ಗುಂಪಾಗಿ ಒಂದೆಡೆ ಸೇರುತ್ತಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ವಾಹನಗಳು ಎಗ್ಗಿಲ್ಲದೆ ಸಂಚರಿಸುತ್ತಿವೆ. ಪೊಲೀಸ್ ಇಲಾಖೆ ಸಿಬ್ಬಂದಿಗಳು ಆಟೋಗಳಲ್ಲಿ ಷೋಷಣೆ ಕೂಗುತ್ತಾ ಜನರಲ್ಲಿ ಅರಿವು ಮೂಡಿಸಲು ನಗರ ಸಂಚಾರ ಮಾಡಿದರೂ ಸಹ ಜನ ಮಾತ್ರ ಯಾರ ಮಾತೂ ಕೇಳುವಂತೆ ಕಾಣಿಸುತ್ತಿಲ್ಲ.

ಜಿಲ್ಲೆಯಲ್ಲಿ ಈವರೆಗೆ ಯಾವುದೇ ಕೊರೋನಾ ಪಾಸಿಟಿವ್ ಪ್ರಕರಣ ಕಾಣಿಸಿಕೊಂಡಿಲ್ಲ. ಹೀಗಾಗಿ ಜನ ಭಯ ಇಲ್ಲದೆ ಓಡಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಒಟ್ಟಾರೆ ಜನ ರ ಈ ನಡವಳಿಕೆ ಕಾಫಿನಾಡಲ್ಲಿ ಸೋಂಕು ಕಾಣಿಸಿಕೊಳ್ಳುವ ಎಲ್ಲಾ ಲಕ್ಷಣಗಳನ್ನೂ ಕಣ್ಣೆದುರು ತೆರೆದಿಟ್ಟಿದೆ. ಹೀಗಾಗಿ ಜಿಲ್ಲಾಡಳಿತ ಈ ಕುರಿತು ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕಾದ ಅಗತ್ಯ ಇದೆ.

ಇದನ್ನೂ ಓದಿ : ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 834ಕ್ಕೆ ಏರಿಕೆ; ನಿನ್ನೆ ಒಂದೇ ದಿನ 144 ಹೊಸ ಕೇಸ್​ ಪತ್ತೆ
First published: