ಯುಪಿಯಲ್ಲಿ ಕನ್ವರ್ ಯಾತ್ರೆ ಇಲ್ಲ : ಸರ್ಕಾರದ ಮೇಲ್ಮನವಿಯ ನಂತರ ರದ್ದುಗೊಳಿಸಲು ಮುಂದಾದ ಒಕ್ಕೂಟಗಳು

ಶಿವನನ್ನು ಆರಾಧಿಸುವ ಸಾವಿರಾರು ಭಕ್ತರು ಪ್ರತಿ ವರ್ಷ ಈ ತೀರ್ಥಯಾತ್ರೆ ಕೈಗೊಳ್ಳುತ್ತಾರೆ. ಕನ್ವರಿಯಸ್ ಎಂದು ಕರೆಯಲ್ಪಡುವ ಈ ಭಕ್ತರು ಸಾಮಾನ್ಯವಾಗಿ ಗಂಗಾ ನದಿಯಿಂದ ನೀರು ಸಂಗ್ರಹಿಸಲು ನೂರಾರು ಕಿಲೋಮೀಟರ್ ನಡೆದು ಬರುತ್ತಾರೆ ಅಲ್ಲದೆ  ಗಂಗಾ ನದಿಯ ನೀರನ್ನು ಸಂಗ್ರಹಿಸಿಕೊಂಡು ಹೋಗಿ ತಮ್ಮ ಊರುಗಳಲ್ಲಿ ಇರುವ ಶಿವನ ದೇವಾಲಯಗಳಿಗೆ ಅರ್ಪಿಸುತ್ತಾರೆ.

ಕಾವಡಿ ಯಾತ್ರಿಕರು

ಕಾವಡಿ ಯಾತ್ರಿಕರು

 • Share this:
  ಈ ವರ್ಷ ಯುಪಿಯಲ್ಲಿ ನಡೆಯಬೇಕಿದ್ದ ಪ್ರಸಿದ್ದ ಕನ್ವರ್​ ಯಾತ್ರೆಯನ್ನು ರದ್ದು ಮಾಡುವುದಾಗಿ ಕನ್ವರ್ ಸಂಘ (ಒಕ್ಕೂಟಗಳು)ಗಳು ಉತ್ತರ ಪ್ರದೇಶ ಸರ್ಕಾರಕ್ಕೆ ತಿಳಿಸಿರುವುದಾಗಿ ಮಾಹಿತಿ ಬಂದಿದೆ ಎಂದು ನ್ಯೂಸ್​ 18ಗೆ ಸುದ್ದಿ ಮೂಲಗಳು ಹೇಳಿವೆ.

  ಕರೋನ ವೈರಸ್ ಸಾಂಕ್ರಾಮಿಕದ ಮಧ್ಯೆ ಕನ್ವರ್ ಯಾತ್ರೆಗೆ ಅವಕಾಶ ನೀಡುವ ನಿರ್ಧಾರವನ್ನು ಮರುಪರಿಶೀಲಿಸುವಂತೆ  ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರವನ್ನು ಸುಪ್ರೀಂ ಕೋರ್ಟ್ ಕೇಳಿದ ನಂತರ, ಯುಪಿ ಸರ್ಕಾರ ಜನಪ್ರಿಯ ತೀರ್ಥಯಾತ್ರೆ ರದ್ದುಗೊಳಿಸುವಂತೆ ಕನ್ವರ್ ಸಂಘಗಳನ್ನು (ಒಕ್ಕೂಟಗಳನ್ನು) ಸಂಪರ್ಕಿಸಿತ್ತು.

  ಸಾಂಕ್ರಾಮಿಕ ರೋಗದಿಂದಾಗಿ ಯಾತ್ರೆಯನ್ನು ನಿಲ್ಲಿಸುವಂತೆ ಮನವೊಲಿಸಲು ಕನ್ವರ್ ಸಂಘಗಳೊಂದಿಗಿನ ಮಾತುಕತೆಯೂ ಪ್ರಸ್ತುತ ಪ್ರಕ್ರಿಯೆಯಲ್ಲಿತ್ತು. 2020 ರಲ್ಲಿ, ಈ ಒಕ್ಕೂಟಗಳೇ ತೀರ್ಥಯಾತ್ರೆಯನ್ನು ರದ್ದುಗೊಳಿಸುವುದಾಗಿ ಘೋಷಿಸಿದ್ದವು.

  ಶಿವನನ್ನು ಆರಾಧಿಸುವ ಸಾವಿರಾರು ಭಕ್ತರು ಪ್ರತಿ ವರ್ಷ ಈ ತೀರ್ಥಯಾತ್ರೆ ಕೈಗೊಳ್ಳುತ್ತಾರೆ. ಕನ್ವರಿಯಸ್ ಎಂದು ಕರೆಯಲ್ಪಡುವ ಈ ಭಕ್ತರು ಸಾಮಾನ್ಯವಾಗಿ ಗಂಗಾ ನದಿಯಿಂದ ನೀರು ಸಂಗ್ರಹಿಸಲು ನೂರಾರು ಕಿಲೋಮೀಟರ್ ನಡೆದು ಬರುತ್ತಾರೆ ಅಲ್ಲದೆ  ಗಂಗಾ ನದಿಯ ನೀರನ್ನು ಸಂಗ್ರಹಿಸಿಕೊಂಡು ಹೋಗಿ ತಮ್ಮ ಊರುಗಳಲ್ಲಿ ಇರುವ ಶಿವನ ದೇವಾಲಯಗಳಿಗೆ ಅರ್ಪಿಸುತ್ತಾರೆ.

  ರಾಜಸ್ಥಾನ ಸರ್ಕಾರವು ಕೊರೋನಾ ಸಾಂಕ್ರಾಮಿಕ ರೋಗದ ಪರಿಣಾಮ ಈ ವರ್ಷದ ಕನ್ವರ್​ ಯಾತ್ರೆಗೆ ಅವಕಾಶ ನೀಡಿರಲಿಲ್ಲ. ಈಗ ಸ್ವತಃ ಒಕ್ಕೂಟಗಳೇ ಯಾತ್ರೆಯನ್ನು ರದ್ದು ಮಾಡಿವೆ.

  ಆರೋಗ್ಯ ಮತ್ತು ಜೀವಿಸುವ ಹಕ್ಕು ಅತ್ಯುನ್ನತವಾದುದು ಎಂದು ಸುಪ್ರೀಂ ಖೊರ್ಟ್​ ಹೇಳಿದ್ದು, ಕನ್ವರ್ ಯಾತ್ರೆಗೆ ಅವಕಾಶ ನೀಡುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಯೋಗಿ ಸರ್ಕಾರವನ್ನು ಕೇಳಿದೆ. “ನಾವೆಲ್ಲರೂ ಭಾರತದ ಪ್ರಜೆಗಳು. ಆರ್ಟಿಕಲ್​ 21 ಹೇಳುವಂತೆ ಬದುಕುವ ಹಕ್ಕು -ಎಲ್ಲರಿಗೂ ಅನ್ವಯಿಸುತ್ತದೆ. ಈ ಯಾತ್ರೆ ಮುಂದುವರೆಸಲು ಯುಪಿ ಸರ್ಕಾರ 100ರಷ್ಟು ಬಿಡುವ ಸಾಧ್ಯತೆ ಇಲ್ಲ ಎಂದು "ನ್ಯಾಯಮೂರ್ತಿ  ನಾರಿಮನ್ ಅವರು ಶುಕ್ರವಾರ ಅಭಿಪ್ರಾಯಪಟ್ಟಿದ್ದರು.

  "ಇದು ನಮ್ಮೆಲ್ಲರ ಬಗ್ಗೆ ಕಾಳಜಿ ವಹಿಸುತ್ತದೆ ಮತ್ತು ಜೀವನದ ಮೂಲಭೂತ ಹಕ್ಕಿನ ಭಾಗವಾಗಿದೆ. ಭಾರತದ ನಾಗರಿಕರ ಆರೋಗ್ಯ ಮತ್ತು ಜೀವಿಸುವ ಹಕ್ಕು ಅತ್ಯುನ್ನತವಾದುದು”, ಎಂದು ನ್ಯಾಯಮೂರ್ತಿಗಳಾದ ನಾರಿಮನ್ ಮತ್ತು ಬಿ.ಆರ್ ಗವಾಯಿ ಹೇಳಿದ್ದರು.

  ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ರಾಜ್ಯ ಸರ್ಕಾರದ ಉನ್ನತ ಅಧಿಕಾರಿಗಳ ಜೊತೆಗೆ ಉನ್ನತ ಮಟ್ಟದ ಸಭೆ ನಡೆಸಿದ ನಂತರ ಯಾತ್ರೆಯನ್ನು ಸ್ಥಗಿತಗೊಳಿಸಿ ಬುಧವಾರ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ. ಕೋವಿಡ್  ದೃಷ್ಟಿಯಿಂದ ಕನ್ವರ್ ಯಾತ್ರೆಯನ್ನು ರದ್ದುಗೊಳಿಸುವಂತೆ ಭಾರತೀಯ ವೈದ್ಯಕೀಯ ಸಂಘ ಮಂಗಳವಾರ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರಿಗೆ ಮನವಿ ಮಾಡಿತ್ತು.

  ಇದನ್ನೂ ಓದಿ: Kanwar Yatra – ಉತ್ತರಾಖಂಡ್​ನಲ್ಲಿ ಕಾವಡಿ ಯಾತ್ರೆ ರದ್ದು; ಉ.ಪ್ರ.ದಲ್ಲಿ ನಿರ್ಬಂಧಗಳೊಂದಿಗೆ ಅನುಮತಿ

  "ಹರಿದ್ವಾರವನ್ನು ಕೊರೋನಾ ಸೋಂಕಿನ ಹಾಟ್​ಸ್ಪಾಟ್​ ಆಗಿ ಪರಿವರ್ತಿಸಲು ನಮಗೆ ಇಷ್ಟವಿಲ್ಲ. ಜನರ ಜೀವನವನ್ನು ಅಪಾಯಕ್ಕೆ ಸಿಲುಕಿಸಲು ನಾವು ಬಯಸುವುದಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಕನ್ವರ್ ಯಾತ್ರೆ ರದ್ದುಗೊಳಿಸಲು ನಿರ್ಧರಿಸಿದ್ದೇವೆ. ನಾವು ಜೀವಗಳನ್ನು ಉಳಿಸಲು ಬಯಸುತ್ತೇವೆ ಹೊರತು ಜೀವಗಳನ್ನು ಕಳೆದುಕೊಳ್ಳಲು ದೇವರು ಬಯಸುವುದಿಲ್ಲ "ಎಂದು ಸಭೆಯ ನಂತರ ಧಾಮಿ ಹೇಳಿದರು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: