HOME » NEWS » Coronavirus-latest-news » NO ILLEGAL IN THE PURCHASE OF COVID EQUIPMENT MINISTER SUDHAKARA HK

ಕೋವಿಡ್ ಉಪಕರಣ ಖರೀದಿಯಲ್ಲಿ ಅಕ್ರಮ ನಡೆದಿಲ್ಲ ; ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್

ಸಿದ್ದರಾಮಯ್ಯನವರ ಆರೋಪವನ್ನು ನನಗೆ ವೈಯಕ್ತಿಕವಾಗಿ ನೋವಾಗಿದೆ. ಈ ಆರೋಪ ದುರದೃಷ್ಟಕರ. ಪ್ರತಿ ಪೈಸೆಗೂ ಲೆಕ್ಕ ಕೊಡುತ್ತೇವೆ

news18-kannada
Updated:July 3, 2020, 6:35 PM IST
ಕೋವಿಡ್ ಉಪಕರಣ ಖರೀದಿಯಲ್ಲಿ ಅಕ್ರಮ ನಡೆದಿಲ್ಲ ; ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್
ಸಚಿವ ಡಾ. ಸುಧಾಕರ್
  • Share this:
ಬೆಂಗಳೂರು(ಜುಲೈ.03): ಕೋವಿಡ್ ಚಿಕಿತ್ಸೆ ನೀಡುವ ಉಪಕರಣಗಳ ಖರೀದಿಯಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದು ಹೇಳುವ ಮೂಲಕ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪವನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ತಳ್ಳಿ ಹಾಕಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಯಾವ ತನಿಖೆ ಬೇಕಾದರು ನಡೆಸಲಿ. ಸಿಬಿಐ ತನಿಖೆ ಬೇಕಾದರು ನಡೆಸಲಿ. ಕೋವಿಡ್ 19 ವಿಚಾರವಾಗಿ ಭ್ರಷ್ಟಾಚಾರ ನಡೆಸಿದ್ರೆ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇರುವುದಕ್ಕೆ ಯೋಗ್ಯರಲ್ಲ. ಸಿದ್ದರಾಮಯ್ಯ ಅವರು ಹೇಳುವ ಮೊದಲು ನಾನೇ ಹೇಳುತ್ತೇನೆ. ನಾವು ಪ್ರತಿಯೊಂದ ಉಪಕರಣಗಳ ಖರೀದಿಯ ಲೆಕ್ಕ ಕೊಡುತ್ತೇವೆ. ಲೆಕ್ಕ ಕೊಡದೇ ನಾವು ಏಲ್ಲೂ ಓಡಿಹೋಗಲ್ಲ. ಒಂದು ಎರಡು ತಿಂಗಳು ವಿಪಕ್ಷಗಳು ಸಹಕಾರ ನೀಡಲು ಆಗಲ್ಲವಾ ಎಂದು ಪ್ರಶ್ನಿಸಿದರು.

ಇಂಥಹ ಸಂದರ್ಭದಲ್ಲಿ ರಾಜಕಾರಣ ಮಾಡಬೇಕಾ? ಸಿದ್ದರಾಮಯ್ಯರಂಥವರಿಂದ ನಾನು ಈ ಆರೋಪ ನಿರೀಕ್ಷಿಸಿರಲಿಲ್ಲ. ಕೋವಿಡ್ 19 ಮೆಡಿಕಲ್ ಉಪಕರಣಗಳನ್ನು ಸರ್ಕಾರದ ಹಿರಿಯ ಅಧಿಕಾರಿಗಳು ಬೆಲೆ ನಿರ್ಧರಿಸಿ ಖರೀದಿ ಮಾಡಿದ್ದಾರೆ. ಕೊರೋನಾ ರೋಗ ಬಂದ ಸಂದರ್ಭದಲ್ಲಿ ಉಪಕರಣಗಳ ಕೊರತೆ ಇತ್ತು. ಆ ಸಂದರ್ಭದಲ್ಲಿ ಉಪಕರಣಗಳು ಸಿಕ್ಕರೇ ಸಾಕಾಗಿತ್ತು. ಕೇಂದ್ರ ಸರ್ಕಾರಕ್ಕೆ ಉಪಕರಣಗಳು ಸಿಗುತ್ತಿರಲಿಲ್ಲ. ಹೀಗೆ ಕೆಲವು ಉಪಕರಣಗಳನ್ನು ದುಬಾರಿ ಬೆಲೆಗೆ ಖರೀದಿ ಮಾಡಿರಬಹುದು ಎಂದರು.

ಸಿದ್ದರಾಮಯ್ಯನವರ ಆರೋಪವನ್ನು ನನಗೆ ವೈಯಕ್ತಿಕವಾಗಿ ನೋವಾಗಿದೆ. ಈ ಆರೋಪ ದುರದೃಷ್ಟಕರ. ಪ್ರತಿ ಪೈಸೆಗೂ ಲೆಕ್ಕ ಕೊಡ್ತಿವಿ. ನಾವು ,ಯಡಿಯೂರಪ್ಪ ನವರು ಎಲ್ಲಾದರೂ ಓಡಿ ಹೋಡುತ್ತೇವಾ. ಇಂತಹ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಮಾಡಿದ್ರೆ, ಪ್ರಜಾತಂತ್ರ ವ್ಯವಸ್ಥೆಯಲ್ಲಿರುವುದಕ್ಕೆ ಅನರ್ಹರು. ದರ ನಿಗದಿ ಮಾಡಿರುವುದು, ತಂದಿರುವುದು ಉನ್ನತ ಮಟ್ಟದ ಅಧಿಕಾರಿಗಳು ಎಂದು ತಿಳಿಸಿದರು.

ಬೆಂಗಳೂರಲ್ಲಿ 8,500 ಬೂತ್ ಗಳಿವೆ. ಪ್ರತಿ ಬೂತ್ ಗೂ ಟಾಸ್ಕ್ ಫೋರ್ಸ್ ಕಮಿಟಿ ಮಾಡಲು ಚಿಂತನೆ ನಡೆಸಿದ್ದೇವೆ. ಹಳ್ಳಿಯಿಂದ ನಗರದ ಬೂತ್ ಮಟ್ಟದವರೆಗೂ ಟಾಸ್ಕ್ ಫೋರ್ಸ್ ಕಮಿಟಿ ಮಾಡುತ್ತೇವೆ. ಪ್ರತಿ ಮನೆಗೆ ಹೋಗಿ ಮನೆಯಲ್ಲಿ ಐಸೋಲೆಶನ್ ಮಾಡುವುದಾದ್ರೆ ಹೇಗೆ ? ಅಂತಹ ಲಕ್ಷಣಗಳಿವೆಯಾ ಎನ್ನುವುದರ ಬಗ್ಗೆ ಕಮಿಟಿ ಮರುಶೀಲನೆ ಮಾಡಿ ಸಲಹೆ ಸೂಚನೆ ನೀಡಲಿದೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ : ಧಾರವಾಡ ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣದಲ್ಲಿದೆ, ಅನಗತ್ಯ ಭಯ ಬೇಡ ; ಜಿಲ್ಲಾಧಿಕಾರಿ ನಿತೇಶ್ ಪಾಟೀಲ್

ಸಚಿವರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಸಚಿವರಾದ ಅಶೋಕ್, ಬೊಮ್ಮಾಯಿ, ಶ್ರೀರಾಮುಲು ನಾನು ಎಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ನಮ್ಮ ಕ್ಯಾಪ್ಟನ್ ಯಡಿಯೂರಪ್ಪ ಅವರು. ಅವರ ಮಾರ್ಗದರ್ಶನದಂತೆ ನಾವು ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಶ್ರೀರಾಮುಲು, ಆರ್​ ಅಶೋಕ್, ಬೊಮ್ಮಾಯಿ ನಾವು ಯಾರೂ ಬಾಕ್ಸಿಂಗ್ ಆಡಿಲ್ಲ. ಸಿಎಂ ಕೊಟ್ಟ ಜವಾಬ್ದಾರಿಯನ್ನ ನಿರ್ವಹಿಸುತ್ತಿದ್ದೇವೆ. ಸಾಮೂಹಿಕವಾಗಿ ಜವಾಬ್ದಾರಿ‌ ನಿರ್ವಹಿಸುತ್ತಿದ್ದೇವೆ. ಯಾವುದೇ ಗೊಂದಲ‌ ಇಲ್ಲ ಎಂದರು.
Published by: G Hareeshkumar
First published: July 3, 2020, 6:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories