‘ನಾಳೆಯಿಂದ ಇಂದಿರಾ ಕ್ಯಾಂಟೀನ್​​​​ನಲ್ಲಿ ಉಚಿತ ಊಟ ಇಲ್ಲ‘ - ಸಿಎಂ ಬಿ.ಎಸ್​​ ಯಡಿಯೂರಪ್ಪ

ಜತೆಗೆ ಇಂದಿರಾ ಕ್ಯಾಂಟೀನ್​​ನಲ್ಲಿ ನೀಡುತ್ತಿರುವ ಆಹಾರದ ಪ್ರಮಾಣ ಬಹಳ ಕಡಿಮೆ ಆಗಿದೆ. ಹೊಟ್ಟೆ ತುಂಬುವಷ್ಟು ಆಹಾರ ನೀಡಬೇಕು. ಜನ ಕೇಳಿದತರೆ ಎರಡು, ಮೂರು ಪೊಟ್ಟಣ ಕೊಡಿ. ಅವರೇನು ವ್ಯರ್ಥ ಮಾಡುವುದಿಲ್ಲ. ಬಡವರ ಹಸಿವು ನಿವಾರಿಸುವುದು ಸರ್ಕಾರದ ಉದ್ದೇಶ ಎಂದು ಸಿಎಂ ಅಧಿಕಾರಿಗಳಿಗೆ ಸೂಚನೆ ನೀಡಿದ್ಧಾರೆ ಎನ್ನಲಾಗುತ್ತಿದೆ.

ಸಿಎಂ ಬಿ.ಎಸ್.ಯಡಿಯೂರಪ್ಪ.

ಸಿಎಂ ಬಿ.ಎಸ್.ಯಡಿಯೂರಪ್ಪ.

 • Share this:
  ಬೆಂಗಳೂರು(ಏ.04): ಕೊರೋನಾ ವಿರುದ್ಧದ ಹೋರಾಟಕ್ಕಾಗಿ ಇಡೀ ರಾಜ್ಯ ಲಾಕ್​​ಡೌನ್​​ ಮಾಡಿದ ಕಾರಣ ಬೀದಿ ಬದಿ ನಿರ್ಗತಿಕರು, ಭಿಕ್ಷುಕರು ಊಟವಿಲ್ಲದೇ ಪರದಾಡುತ್ತಿದ್ದರು. ಅಂತವರಿಗೆ ಇಂದಿರಾ ಕ್ಯಾಂಟೀನ್​​ನಲ್ಲಿ ಉಚಿತ ಊಟ ನೀಡುವುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಘೋಷಿಸಿದ್ದರು. ಅದರಂತೆಯೇ ಕಳೆದೊಂದು ವಾರದಿಂದೀಚೆಗೆ ಇಂದಿರಾ ಕ್ಯಾಂಟೀನ್​​ನಲ್ಲಿ ಬಡವರಿಗೆ ಉಚಿತ ಊಟ ನೀಡಲಾಗುತ್ತಿತ್ತು. ಆದರೀಗ, ಇದು ಮಿಸ್ಯೂಸ್​​ ಆಗುತ್ತಿದೆ ಎಂದು ಸರ್ಕಾರ ಈ ಸೇವೆ ರದ್ದುಗೊಳಿಸಿದೆ. ಹಾಗಾಗಿ ಜನ ಎಂದಿನಂತೆಯೇ ನಾಳೆಯಿಂದ ಇಂದಿರಾ ಕ್ಯಾಂಟೀನ್​​ನಲ್ಲಿ ಹಣ ಊಟ ತಿನ್ನಬೇಕಿದೆ.

  ನಾಳೆ ಭಾನುವಾರದಿಂದ ಜನ ಇಂದಿರಾ ಕ್ಯಾಂಟೀನ್​​ನಲ್ಲಿ ಹಣ ನೀಡಿ ಆಹಾರ ಸೇವಿಸಬೇಕು. 5 ರೂ. ಗೆ ತಿಂಡಿ ಹಾಗೂ 10 ರೂ. ಗೆ ಮಧ್ಯಾಹ್ನ ಹಾಗೂ ರಾತ್ರಿ ಊಟ ದೊರೆಯಲಿದೆ. ಬೆಂಗಳೂರಿನಲ್ಲಿರುವ ನಿರ್ಗತಿಕರು ಮತ್ತು ಬಡವರಿಗೆ ಉಚಿತ ಆಹಾರದ ಪೊಟ್ಟಣಗಳನ್ನು ಅನುಮತಿ ನಾಲ್ಕು ಎನ್‍ಜಿಒಗಳಿಗೆ ಅನುಮತಿ ನೀಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್ ಅನಿಲ್ ಕುಮಾರ್ ತಿಳಿಸಿದರು.

  ಈ ಸಂಬಂಧ ಪ್ರತಿಕ್ರಿಯಿಸಿರುವ ಸಿಎಂ ಬಿ.ಎಸ್​​ ಯಡಿಯೂರಪ್ಪ, ಇಂದಿರಾ ಕ್ಯಾಂಟೀನ್‌ನಲ್ಲಿ ನೀಡುತ್ತಿರುವ ಆಹಾರದ ಮೂರು ಪೊಟ್ಟಣವನ್ನು ಯಾರೋ ನಮ್ಮ ಮನೆಗೆ ಕಳುಹಿಸಿದ್ದರು. ಮೂರು ಪೊಟ್ಟಣದ ಆಹಾರ ತಿಂದರೂ ನನ್ನಂತಹವರಿಗೆ ಹೊಟ್ಟೆ ತುಂಬುವುದಿಲ್ಲ. ಇನ್ನು ದುಡಿಯುವ ವರ್ಗದವರಿಗೆ ಹೊಟ್ಟೆ ತುಂಬುವುದೇ? ಎಂದು ಇಂದಿರಾ ಕ್ಯಾಂಟೀನ್‌ನಲ್ಲಿ ನೀಡುತ್ತಿರುವ ಆಹಾರ ಪ್ರಮಾಣ ಅಸಮಾಧಾನ ವ್ಯಕ್ತಪಡಿಸಿದರು. ಜತೆಗೆ ಇಂದಿರಾ ಕ್ಯಾಂಟೀನ್​​ ಉಚಿತ ಊಟ ದುರ್ಬಳಕೆ ಆಗುತ್ತಿದೆ. ಹಾಗಾಗಿ ನಾಳೆಯಿಂದ ನಿಲ್ಲಿಸಲಾಗುವದು ಎಂದು ಹೇಳಿದರು.

  ಇದನ್ನೂ ಓದಿ: ‘ದೇಶಾದ್ಯಂತ ಒಮ್ಮೆಲೇ ಲೈಟ್ ಆಫ್ ಮಾಡಿದರೆ ಪವರ್ ಗ್ರಿಡ್ ಹಾಳಾದೀತು; ಫ್ಯಾನ್ ಆನ್​ನಲ್ಲೇ ಇರಲಿ’

  ಜತೆಗೆ ಇಂದಿರಾ ಕ್ಯಾಂಟೀನ್​​ನಲ್ಲಿ ನೀಡುತ್ತಿರುವ ಆಹಾರದ ಪ್ರಮಾಣ ಬಹಳ ಕಡಿಮೆ ಆಗಿದೆ. ಹೊಟ್ಟೆ ತುಂಬುವಷ್ಟು ಆಹಾರ ನೀಡಬೇಕು. ಜನ ಕೇಳಿದತರೆ ಎರಡು, ಮೂರು ಪೊಟ್ಟಣ ಕೊಡಿ. ಅವರೇನು ವ್ಯರ್ಥ ಮಾಡುವುದಿಲ್ಲ. ಬಡವರ ಹಸಿವು ನಿವಾರಿಸುವುದು ಸರ್ಕಾರದ ಉದ್ದೇಶ ಎಂದು ಸಿಎಂ ಅಧಿಕಾರಿಗಳಿಗೆ ಸೂಚನೆ ನೀಡಿದ್ಧಾರೆ ಎನ್ನಲಾಗುತ್ತಿದೆ.
  First published: