ಬೆಂಗಳೂರು (ಜುಲೈ.05); ದೇಶದಲ್ಲಿ ಮತ್ತು ರಾಜ್ಯದಲ್ಲಿ ಕೊರೋನಾ ವೈರಸ್ ದಾಳಿಯಿಟ್ಟ ದಿನದಿಂದ ಪೊಲೀಸರು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಅವರನ್ನು ಕೊರೋನಾ ವಾರಿಯರ್ಸ್ ಎಂದು ಗುರುತಿಸಲಾಗಿದೆ. ಅಲ್ಲದೆ, ರಾಜ್ಯದಲ್ಲಿ ಅನೇಕ ಪೊಲೀಸರು ಈ ಸೋಂಕಿಗೆ ಒಳಗಾಗಿದ್ದಾರೆ. ಕೆಲವರು ಪ್ರಾಣವನ್ನೂ ತ್ಯಜಿಸಿದ್ದಾರೆ. ಆದರೆ, ಕೆಲಸ ಮಾಡುತ್ತಾ ಪೊಲೀಸರಿಗೆ ಸೋಂಕು ತಗುಲಿದ್ದರೂ ಸಹ ಸರ್ಕಾರ ಅವರಿಗೆ ಉಚಿತ ಪರೀಕ್ಷೆ ನೀಡುವುದಿಲ್ಲವಂತೆ. ಬದಲಿಗೆ 1500 ರೂ. ಪಾವತಿಸಲೇಬೇಕಂತೆ.
ರಾಜ್ಯದಲ್ಲಿ ಪೊಲೀಸರಿಗೆ ಹೆಚ್ಚೆಚ್ಚು ಕೊರೋನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಕೊವೀಡ್ ಟೆಸ್ಟ್‌ಗೆ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಅಕ್ಕ-ಪಕ್ಕದ ಕೆಲ ಠಾಣಾ ಸಿಬ್ಬಂದಿಗೆ ಈ ಜ್ಞಾಪನಾ ಪತ್ರದ ಮೂಲಕ ಪರೀಕ್ಷೆ ನಡೆಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ : ರಾಯಚೂರು: ಓರ್ವ ಸೋಂಕಿತಳಿಂದ 30 ಜನರಿಗೆ ಸೋಂಕು, ಜಿಲ್ಲಾಡಳಿತಕ್ಕೆ ಹೊಸ ತಲೆನೋವು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ