ಕೊರೋನಾ ಹೌದು, ಕೊರೋನಾ ಅಲ್ಲ: ಮಕ್ಕಳಲ್ಲಿ ಕಾಣಿಸುತ್ತಿದೆಯಾ ನಿಗೂಢ ಕಾಯಿಲೆ? – ಬೆಚ್ಚಿಬಿದ್ದ ವೈದ್ಯರು

ಮಕ್ಕಳ ಆರೋಗ್ಯ ಇದ್ದಕ್ಕಿದ್ದಂತೆ ಬಿಗಡಾಯಿಸಿಬಿಡುತ್ತದೆ. ಹೊಟ್ಟೆ ನೋವು ಬಾಧಿಸುತ್ತದೆ. ಹೃದಯದ ಭಾಗದಲ್ಲಿ ಊತವಿರುತ್ತದೆ. ಬಹಳ ಬೇಗ ಇಡೀ ದೇಹ ಊದಿಕೊಳ್ಳುತ್ತದೆ ಎಂದು ವೈದ್ಯರು ಹೇಳಿದ್ಧಾರೆ.

ಮಗುವಿಗೆ ಚಿಕಿತ್ಸೆ ನೀಡುತ್ತಿರುವುದು

ಮಗುವಿಗೆ ಚಿಕಿತ್ಸೆ ನೀಡುತ್ತಿರುವುದು

 • News18
 • Last Updated :
 • Share this:
  ಲಂಡನ್(ಏ. 30): ಬ್ರಿಟನ್ ದೇಶದ ಮಕ್ಕಳಲ್ಲಿ ಕೊರೋನಾ ಪಾಸಿಟಿವ್ ಬರುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಇದು ಅಲ್ಲಿಯ ವೈದ್ಯರನ್ನು ಬೆಚ್ಚಿಬೀಳಿಸಿದೆ. ಮಕ್ಕಳಲ್ಲಿ ಕೊರೋನಾ ಸೋಂಕು ಸುಲಭವಾಗಿ ಹರಡಬಲ್ಲುದು. ಮಕ್ಕಳಲ್ಲಿ ಈ ಸೋಂಕು ಹೆಚ್ಚುವುದರಲ್ಲಿ ಅಚ್ಚರಿ ಇಲ್ಲವೇನೋ ಹೌದು. ಆದರೆ, ವೈದ್ಯರ ಆತಂಕಕ್ಕೆ ಕಾರಣ ಅದಲ್ಲ. ಮಕ್ಕಳು ಕೊರೊನಾ ಪಾಸಿಟಿವ್ ಬಂದಿದ್ದರೂ ಬೇರೊಂದು ಸೋಂಕು ಅವರಿಗೆ ತಗುಲಿರಬಹುದು ಎಂಬುದು ವೈದ್ಯರ ಅನುಮಾನ. ಅಂತೆಯೇ, ಇಂಗ್ಲೆಂಡ್​ನ ಪೀಡಿಯಾಟ್ರಿಕ್ ಇಂಟೆನ್ಸಿವ್ ಕೇರ್ ಸೊಸೈಟಿ ಸಂಸ್ಥೆಯು ಎಲ್ಲಾ ವೈದ್ಯರಿಗೂ ಈ ವಿಚಾರದಲ್ಲಿ ಅಲರ್ಟ್ ನೀಡಿದೆ.

  “ಲಂಡನ್ ಸೇರಿದಂತೆ ಬ್ರಿಟನ್​ನೆಲ್ಲೆಡೆ ಎಲ್ಲಾ ವಯೋಮಾನದ ಮಕ್ಕಳ ದೇಹದ ವಿವಿಧ ಭಾಗಗಳಲ್ಲಿ ಊತ (Multi-system inflammatory state) ಕಂಡು ಬರುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ… SARS-CoV-2 ಸಂಬಂಧಿತ ಊತವಿದ್ದಂತಿದೆ. ಈ ಪ್ರಕರಣದಲ್ಲಿ ನಮಗೆ ಇನ್ನೂ ಗೊತ್ತಿಲ್ಲದ ಮತ್ತೊಂದು ವೈರಾಣುವಿನ ಸೋಂಕು ಹರಡುತ್ತಿರಬಹುದು” ಎಂದು ಈ ಸೊಸೈಟಿ ಆತಂಕ ವ್ಯಕ್ತಪಡಿಸಿದೆ.

  ಇದನ್ನೂ ಓದಿ: ‘ನನ್ನ ಯಾರಾದ್ರೂ ಕಿಡ್ನಾಪ್ ಮಾಡಿ ನ್ಯೂಜಿಲೆಂಡ್​ಗೆ ಕರೆದೊಯ್ಯಬಾರದಾ!’ – ಕಿವೀಸ್ ನಾಡಿಗೆ ಬಂತು ಡಿಮ್ಯಾಂಡ್

  ಇಲ್ಲಿಯವರೆಗೆ ಬ್ರಿಟನ್​ನಲ್ಲಿ ಇಂಥ ಸುಮಾರು 30 ಪ್ರಕರಣಗಳು ಬೆಳಕಿಗೆ ಬಂದಿರಬಹುದೆನ್ನಲಾಗಿದೆ. ಅಷ್ಟಕ್ಕೆ ಇಷ್ಟು ಆತಂಕಪಡುವ ಅಗತ್ಯವೇನಿರಲಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಪ್ರಕರಣ ಸಂಖ್ಯೆ ಗಣನೀಯ ವೇಗದಲ್ಲಿ ಏರಿಕೆಯಾಗುತ್ತಿರುವುದು ವೈದ್ಯರಲ್ಲಿ ಆತಂಕ ಹೆಚ್ಚಲು ಕಾರಣವಾಗಿದೆ.

  ಬೆಂಗಳೂರು, ಕೋಲ್ಕತಾ, ಮುಂಬೈನಲ್ಲೂ ಇಂಥ ಪ್ರಕರಣಗಳು ಬೆಳಕಿಗೆ ಬಂದಿವೆಯಂತೆ. ಭಾರತೀಯ ಮೂಲದ ಬ್ರಿಟನ್ ವೈದ್ಯರ ಸಂಘದ (BAPIO) ಅಧ್ಯಕ್ಷ ಡಾ. ರಮೇಶ್ ಮೆಹ್ತಾ ಅವರು ನ್ಯೂಸ್18 ಜೊತೆ ಮಾತನಾಡುತ್ತಾ, ಈ ವಿಚಾರವನ್ನು ಬಹಿರಂಗಪಡಿಸಿದ್ಧಾರೆ.

  ಕುತೂಹಲದ ವಿಷಯವೆಂದರೆ, ಈ ಮಕ್ಕಳು ಕೊರೊನಾ ಪಾಸಿಟಿವ್ ಆದರೂ ಅವರ ರೋಗ ಲಕ್ಷಣಗಳು ಬಹಳ ವಿಭಿನ್ನವಾಗಿವೆ. ವಯಸ್ಕರಲ್ಲಿ ಹರಡುತ್ತಿರುವ ವೈರಾಣುಗಿಂತ ಈ ಮಕ್ಕಳಲ್ಲಿ ಕಾಣಿಸಿರುವ ವೈರಾಣುವೇ ಬೇರೆ ಇದ್ದಂತಿದೆ ಎಂಬುದು ಇವರ ಅಭಿಪ್ರಾಯ.

  ಇದನ್ನೂ ಓದಿ: Lockdown Extension: ಮೇ 3ರ ನಂತರ ಲಾಕ್​ಡೌನ್ ಮುಂದುವರಿಕೆ ಬಹುತೇಕ ಖಚಿತ; ರಾಜ್ಯಗಳಿಗೆ ಬಂದಿದೆ ಕೇಂದ್ರದ ಸುತ್ತೋಲೆ

  “ಮಕ್ಕಳ ಆರೋಗ್ಯ ಇದ್ದಕ್ಕಿದ್ದಂತೆ ಬಿಗಡಾಯಿಸಿಬಿಡುತ್ತದೆ. ಹೊಟ್ಟೆ ನೋವು ಬಾಧಿಸುತ್ತದೆ. ತೀವ್ರ ಸ್ವರೂಪದ ಅಪೆಂಡಿಸೈಟಿಸ್ ರೋಗದ ರೀತಿ ಲಕ್ಷಣ ಇರುತ್ತದೆ…. ಮತ್ತಷ್ಟು ಪರೀಕ್ಷೆ ಮಾಡಿದಾಗ ಇವರ ಹೃದಯದಲ್ಲಿ ಊತ ಕಂಡುಬರುತ್ತದೆ. ನೋಡನೋಡುತ್ತಿದ್ದಂತೆಯೇ ಈ ಊತ ಇಡೀ ದೇಹವನ್ನು ವ್ಯಾಪಿಸುತ್ತದೆ” ಎಂದು ಡಾ. ರಮೇಶ್ ಮೆಹತಾ ವಿವರ ನೀಡಿದ್ದಾರೆ.

  “ಇದು ನಿಗೂಢ ಕಾಯಿಲೆಯಂತೆ ತೋರುತ್ತದೆ. ಈ ಮಕ್ಕಳು ಕೋವಿಡ್ ಪಾಸಿಟಿವ್ ಬಂದರೂ ವಯಸ್ಕರಿಗಿಂತ ವಿಭಿನ್ನವಾದ ರೋಗ ಲಕ್ಷಣಗಳನ್ನು ಮಕ್ಕಳು ತೋರುತ್ತಿದ್ಧಾರೆ. ಇದು ಬಹಳ ಗಂಭೀರ ಹಾಗೂ ಕೋವಿಡ್​ನಷ್ಟೇ ಅಪಾಯಕಾರಿ” ಎಂದು ಇವರು ಹೇಳಿದ್ಧಾರೆ.

  ಈ ಕಾಯಿಲೆ ಯಾವುದು; ಕೊರೋನಾಗೂ ಇದಕ್ಕೂ ಏನಾದರೂ ನಂಟಿದೆಯಾ ಎಂಬುದನ್ನು ಪತ್ತೆ ಹಚ್ಚಲು ಅಧ್ಯಯನಗಳು ನಡೆಯುತ್ತಿವೆ. ಕೆಲ ದಿನಗಳಲ್ಲಿ ವಾಸ್ತವ ಅಂಶ ಬೆಳಕಿಗೆ ಬರುವ ಸಾಧ್ಯತೆ ಇದೆ.

  ವರದಿ: Sanjay Suri, CNN-News18

  First published: