ದೆಹಲಿ (ಮೇ 12); ಕೋವಾಕ್ಸಿನ್ ಲಸಿಕೆ ತಯಾರಕ ಭಾರತ್ ಬಯೋಟೆಕ್ ಕೇಂದ್ರ ಸರ್ಕಾರದ ಸೂಚನೆಯ ಮೇರೆಗೆ ದೆಹಲಿಗೆ ಡೋಸೇಜ್ ನೀಡಲು ನಿರಾಕರಿಸಿದೆ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಇಂದು ಆರೋಪಿ ಸಿದ್ದಾರೆ. ಕೋವಿಡ್ ಲಸಿಕೆಗಳ ಸರಬರಾಜನ್ನು ಕೇಂದ್ರ ನಿಯಂತ್ರಿಸುತ್ತಿದೆ ಮತ್ತು "ಲಸಿಕೆ ದುರುಪಯೋಗ" ನಡೆಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತ್ ಬಯೋಟೆಕ್ ಕಂಪೆನಿ "ಕೆಲವು ರಾಜ್ಯ ಗಳು ನಮ್ಮ ಉದ್ದೇಶಗಳ ಬಗ್ಗೆ ದೂರು ನೀಡುತ್ತಿರುವುದು ನಿರಾಶಾದಾಯಕ ವಾಗಿದೆ. ಸರ್ಕಾರದ ನಿರ್ದೇಶನಗಳು ಮತ್ತು ಸೀಮಿತ ಲಭ್ಯತೆಯ ಪರಿಣಾಮ ಲಸಿಕೆಗಳನ್ನು ಎಲ್ಲರಿಗೂ ಸಾಕಾಗುವಷ್ಟು ಪೂರೈಸಲು ಸಾಧ್ಯವಾಗುತ್ತಿಲ್ಲ" ಎಂದು ಭಾರತ್ ಬಯೋಟೆಕ್ ಹೇಳಿದೆ ಎಂದು ಆನ್‌ಲೈನ್ ಪತ್ರಿಕಾಗೋಷ್ಠಿಯಲ್ಲಿ ಸಿಸೋಡಿಯಾ ಹೇಳಿದ್ದಾರೆ.
"ಕೊವಾಕ್ಸಿನ್ ತಯಾರಕರು, ಸಂಬಂಧಪಟ್ಟ ಸರ್ಕಾರಿ ಅಧಿಕಾರಿಯ ಸೂಚನೆಯ ಮೇರೆಗೆ ದೆಹಲಿ ಸರ್ಕಾರಕ್ಕೆ ಲಸಿಕೆಗಳನ್ನು ನೀಡಲು ಸಾಧ್ಯವಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಇದರರ್ಥ ಲಸಿಕೆ ಸರಬರಾಜನ್ನು ಕೇಂದ್ರ ಸರ್ಕಾರ ನಿಯಂತ್ರಿಸುತ್ತಿದೆ" ಎಂದು ಮನೀಶ್ ಸಿಸೋಡಿಯಾ ಅಭಿಪ್ರಾಯಪಟ್ಟಿದ್ದಾರೆ.
ದೆಹಲಿಯ 18 ರಿಂದ 44 ರವರೆಗಿನವರಿಗೆ ಲಸಿಕೆ ಹಾಕಲು 1.34 ಕೋಟಿ ಲಸಿಕೆ ನೀಡಲು ದೆಹಲಿ ಸರ್ಕಾರ ಕೋವಾಕ್ಸಿನ್ ಮತ್ತು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್ ಅನ್ನು ಕೇಳಿದೆ. ಆದರೆ, ದೆಹಲಿ ಸರಕಾರ ಎಷ್ಟು ಪ್ರಮಾಣದ ಡೊಸೇಜ್ ಪಡೆಯಬೇಕು ಎಂಬುದನ್ನು ಕೇಂದ್ರ ಸರ್ಕಾರ ನಿರ್ಧರಿಸುತ್ತಿದೆ ಎಂದು ಕಿಡಿಕಾರಿರುವ ಮನೀಶ್ ಸಿಸೋಡಿಯಾ ಮೇ 7 ರಂದು ದೆಹಲಿ ಸರ್ಕಾರದ ಮನವಿಗೆ ಸ್ಪಂದಿಸಿ ಭಾರತ್ ಬಯೋಟೆಕ್ ಅಧ್ಯಕ್ಷ ಕೃಷ್ಣ ಎಲಾ ಬರೆದ ಪತ್ರವನ್ನೂ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
Vaccine mismanagement by Centre Gov-
Covaxin refuses to supply vaccine citing directives of Gov. & limited availability.
Once again I would say exporting 6.6cr doses was biggest mistake. We are forced to shutdown 100 covaxin-vaccination sites in 17 schools due to no supply pic.twitter.com/uFZSG0y4HM
— Manish Sisodia (@msisodia) May 12, 2021
ದಿನದಿಂದ ದಿನಕ್ಕೆ ಕೊರೋನಾ ಸೋಂಕು ಅಧಿಕವಾಗುತ್ತಲೇ ಇದೆ. ಲಾಕ್ಡೌನ್ ನಡುವೆಯೂ ಸೋಂಕು ನಿಯಂತ್ರಣಕ್ಕೆ ಸಿಗುತ್ತಿಲ್ಲ, ದಿನವೊಂದಕ್ಕೆ 4.5 ಲಕ್ಷಕ್ಕೂ ಅಧಿಕ ಜನ ಸೋಂಕಿಗೆ ತುತ್ತಾಗುತ್ತಿದ್ದಾರೆ. ಸಾವಿನ ಸಂಖ್ಯೆಯೂ ಏರುತ್ತಲೇ ಇದೆ. ಕೊರೋನಾ ಸೋಂಕನ್ನು ನಿಯಂತ್ರಿ ಸುವುದು ಸರ್ಕಾರಕ್ಕೆ ಸವಾಲಿನ ಕೆಲಸವಾಗಿದೆ. ಕೊರೋನಾ ಪ್ರಕರಣಗಳ ಏರಿಕೆ, ಸಾವುಗಳು, ಆರೋಗ್ಯ ಸೌಕರ್ಯಗಳ ಅಲಭ್ಯತೆ ನಡುವೆ ದೇಶವೇ ಜರ್ಜರಿತವಾಗಿದೆ. ಇದರ ನಡುವೆ ಬ್ಲಾಕ್ ಫಂಗಸ್ ಸೋಂಕು ಜನರಲ್ಲಿ ಮತ್ತಷ್ಟು ಆತಂಕ ಉಂಟುಮಾಡುತ್ತಿದೆ. ಮಹಾರಾಷ್ಟ್ರದಲ್ಲೇ 2000 ಮಂದಿ ಸೋಂಕಿತರು ಇದ್ದಾರೆ ಎಂದು ಸರ್ಕಾರ ತಿಳಿಸಿದೆ.
ಮಹಾರಾಷ್ಟ್ರದಲ್ಲಿ ಬ್ಲಾಕ್ ಫಂಗಸ್ ಸೋಂಕಿನಿಂದ ಹೆಚ್ಚಿನ ಸಾವುಗಳು ಸಂಭವಿಸಿವೆ ಎಂದು ವರದಿಯಾಗಿದ್ದು, ರಾಜ್ಯದಲ್ಲಿ 2,000 ಪ್ರಕರಣಗಳು ಇರಬಹುದು. ಕೊರೋನಾ ಪ್ರಕರಣಗಳ ಏರಿಕೆ ಜೊತೆಗೆ ಬ್ಲಾಕ್ ಫಂಗಸ್ ಸೋಂಕಿತರು ಏರಿಕೆಯಾಗಬಹುದು ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪೆ ಹೇಳಿದ್ದಾರೆ.
ವೈದ್ಯಕೀಯ ಕಾಲೇಜುಗಳೊಂದಿಗಿರುವ ಆಸ್ಪತ್ರೆಗಳನ್ನು ಬ್ಲಾಕ್ ಫಂಗಸ್ ಸೋಂಕು ಚಿಕಿತ್ಸಾ ಕೇಂದ್ರಗಳಾಗಿ ಬಳಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ ಎಂದು ಸಚಿವ ರಾಜೇಶ್ ಟೋಪೆ ತಿಳಿಸಿದ್ದಾರೆ. ಬುಧವಾರ (ಮೇ 12) ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಬ್ಲಾಕ್ ಫಂಗಸ್‌ನಿಂದಾಗಿ ಇಬ್ಬರು ಸಾವನ್ನಪ್ಪಿದ್ದಾರೆ. ಜೊತೆಗೆ ಥಾಣೆಯಲ್ಲಿ ಇತರ ಆರು ರೋಗಿಗಳು ಈ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಎರಡು ದಿನಗಳ ಹಿಂದೆ ಒಡಿಶಾ ರಾಜ್ಯದಲ್ಲಿ ಮೊದಲ ಬ್ಲಾಕ್ ಫಂಗಸ್ ಪ್ರಕರಣವನ್ನು ವರದಿಯಾಗಿದೆ. ಒಡಿಶಾದ ಜಜ್ಪುರ್ ಜಿಲ್ಲೆಯ 71 ವರ್ಷದ ಕೊರೊನಾ ರೋಗಿಯಲ್ಲಿ ಸೋಂಕು ಕಂಡು ಬಂದಿದ್ದು, ಅವರು ಅನಿಯಂತ್ರಿತ ಮಧುಮೇಹವನ್ನು ಸಹ ಹೊಂದಿದ್ದಾರೆ. ಇತ್ತ ದೆಹಲಿ, ಗುಜರಾತ್ ಮತ್ತು ಇತರ ಕೆಲವು ರಾಜ್ಯಗಳಲ್ಲಿ ಈ ಸೋಂಕಿನ ಈಗಾಗಲೇ ಆತಂಕ ಉಂಟುಮಾಡುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ