Covid-19 Vaccine Updates: ಈ ವರ್ಷ ಸಿಗುವುದಿಲ್ಲ ಕೊರೋನಾಗೆ ಲಸಿಕೆ: ಸಂಸದೀಯ ಸಮಿತಿ ಸಭೆಗೆ ಅಧಿಕಾರಿಗಳ ಮಾಹಿತಿ

ಭಾರತದಲ್ಲಿ ಆಗಸ್ಟ್ 15ರೊಳಗೆ ಕೊರೋನಾಗೆ ಕೋವ್ಯಾಕ್ಸಿನ್ ಲಸಿಕೆ ಲಭ್ಯ ಆಗೇಬಿಟ್ಟಿತು ಎಂದು ಬಿಂಬಿತವಾಗಿತ್ತು. ಆದರೀಗ ಕೇಂದ್ರ ಸಂಸದೀಯ ಸಮಿತಿ ಸಭೆಯಲ್ಲಿ ಅಧಿಕಾರಿಗಳು 2021ಕ್ಕೂ ಮೊದಲು ಲಸಿಕೆ ಲಭ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.

news18-kannada
Updated:July 11, 2020, 9:29 AM IST
Covid-19 Vaccine Updates: ಈ ವರ್ಷ ಸಿಗುವುದಿಲ್ಲ ಕೊರೋನಾಗೆ ಲಸಿಕೆ: ಸಂಸದೀಯ ಸಮಿತಿ ಸಭೆಗೆ ಅಧಿಕಾರಿಗಳ ಮಾಹಿತಿ
ಕೊರೋನಾ ಔಷಧಿ
  • Share this:
ನವದೆಹಲಿ(ಜು.11): ಮೊನ್ನೆ ಮೊನ್ನೆಯಷ್ಟೇ ಮಾರಕ ರೋಗವಾಗಿ ಪರಿಣಮಿಸಿರುವ ಕೊರೋನಾಗೆ ಆಗಸ್ಟ್ 15ರೊಳಗೆ ಕೋವ್ಯಾಕ್ಸಿನ್ ಲಭ್ಯವಾಗಲಿದೆ ಎಂಬ ಶುಭಸುದ್ದಿ ಸಿಕ್ಕಿತ್ತು. ಆದರೀಗ ಕೇಂದ್ರ ಸರ್ಕಾರದ ಅಧಿಕಾರಿಗಳ ಪ್ರಕಾರ 2021ಕ್ಕೂ ಮೊದಲು ಯಾವುದೇ ರೀತಿಯ ಲಸಿಕೆ ಲಭ್ಯವಾಗುವುದಿಲ್ಲ ಎನ್ನಲಾಗಿದೆ. ಕೇಂದ್ರ ಸರ್ಕಾರದ ವಿಜ್ಞಾನ, ತಂತ್ರಜ್ಞಾನ, ಪರಿಸರ ಮತ್ತು ಹವಾಮಾನ ಬದಲಾವಣೆ ಇಲಾಖೆಯ ಸಂಸದೀಯ ಸಮಿತಿ ಸಭೆಗೆ‌ ಅಧಿಕಾರಿಗಳು ಇಂಥ ನಿರಾಶಾದಾಯಕ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ನೇತೃತ್ವದಲ್ಲಿ ಜುಲೈ 10ರಂದು ನಡೆದ ಸಂಸದೀಯ ಸಮಿತಿ ಸಭೆಗೆ ಕೇಂದ್ರ ಸರ್ಕಾರದ ಅಧಿಕಾರಿಗಳು 2021ಕ್ಕೂ ಮೊದಲು ಕೊರೋನಾಗೆ ಯಾವುದೇ ರೀತಿಯ ಲಸಿಕೆ ಲಭ್ಯವಾಗುವುದಿಲ್ಲ. ಅದಕ್ಕೆ ಹೆಚ್ಚಿನ ಸಮಯ ಬೇಕಾಗುತ್ತದೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್ ಸಹಯೋಗದಲ್ಲಿ‌ ಭಾರತ್ ಬಯೋಟೆಕ್ ಇಂಟರ್​​ನ್ಯಾಷನಲ್ ಲಿಮಿಟೆಡ್ ಈಗಾಗಲೇ ಕೋವ್ಯಾಕ್ಸಿನ್ ಸಂಶೋಧನಾ ಕಾರ್ಯದಲ್ಲಿ ತೊಡಗಿದೆ. ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್ ಗೆ ಡ್ರಗ್ ಕಂಟ್ರೋಲರ್ ಜೆನರಲ್ ಆಫ್ ಇಂಡಿಯಾ  1 ಮತ್ತು 2ನೇ ಹಂತದ ಕ್ಲಿನಿಕಲ್ ಮತ್ತು ಮಾನವ ಪ್ರಯೋಗ ನಡೆಸಲು ಅನುಮತಿ ನೀಡಿದೆ.

ಈ ನಡುವೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್ ಡೈರೆಕ್ಟರ್ ಜನರಲ್ ಡಾ. ಬಲರಾಮ್ ಭಾರ್ಗವ ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್​ಗೆ‌ ಪತ್ರ ಬರೆದು‌ ಆಗಸ್ಟ್ 15ರೊಳಗೆ ಸಂಶೋಧನೆ ಪೂರ್ಣಗೊಳಿಸುವಂತೆ ಸೂಚಿಸಿದ್ದರು.



ಇದನ್ನೂ ಓದಿ: Coronavirus Updates: ವಿಶ್ವಾದ್ಯಂತ 1 ಕೋಟಿ 25 ಲಕ್ಷ ಮಂದಿಗೆ ಕೊರೋನಾ​​; ಸಾವಿನ ಸಂಖ್ಯೆ 5.59 ಲಕ್ಷಕ್ಕೆ ಏರಿಕೆ



ಇದನ್ನೂ ಓದಿ: Coronavirus Updates: ವಿಶ್ವಾದ್ಯಂತ 1 ಕೋಟಿ 25 ಲಕ್ಷ ಮಂದಿಗೆ ಕೊರೋನಾ​​; ಸಾವಿನ ಸಂಖ್ಯೆ 5.59 ಲಕ್ಷಕ್ಕೆ ಏರಿಕೆಆದರೆ, ಈ ವಿಷಯ ಭಾರತದಲ್ಲಿ ಆಗಸ್ಟ್ 15ರೊಳಗೆ ಕೊರೋನಾಗೆ ಕೋವ್ಯಾಕ್ಸಿನ್ ಲಸಿಕೆ ಲಭ್ಯ ಆಗೇಬಿಟ್ಟಿತು ಎಂದು ಬಿಂಬಿತವಾಗಿತ್ತು. ಆದರೀಗ ಕೇಂದ್ರ ಸಂಸದೀಯ ಸಮಿತಿ ಸಭೆಯಲ್ಲಿ ಅಧಿಕಾರಿಗಳು 2021ಕ್ಕೂ ಮೊದಲು ಲಸಿಕೆ ಲಭ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.
Published by: Ganesh Nachikethu
First published: July 11, 2020, 9:25 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading