HOME » NEWS » Coronavirus-latest-news » NO CORONAVIRUS DEATHS REPORTED FROM 15 STATES UTS IN THE LAST 24 HOURS CENTRE MAK

CoronaVirus: ಕಳೆದ 24 ಗಂಟೆಗಳಲ್ಲಿ 15 ರಾಜ್ಯಗಳಿಂದ ಯಾವುದೇ ಕೊರೋನಾ ವೈರಸ್​ ಸಾವು ವರದಿಯಾಗಿಲ್ಲ: ಕೇಂದ್ರ ಸರ್ಕಾರ

ಏಳು ರಾಜ್ಯಗಳು ಮತ್ತು ಅಂಡಮಾನ್, ನಿಕೋಬಾರ್ ದ್ವೀಪಗಳು, ಅರುಣಾಚಲ ಪ್ರದೇಶ, ತ್ರಿಪುರ, ದಾದ್ರಾ ಮತ್ತು ನಗರ ಹವೇಲಿ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ಲಕ್ಷದ್ವೀಪಗಳಲ್ಲಿ ಕಳೆದ ಮೂರು ವಾರಗಳಲ್ಲಿ ಹೊಸ COVID-19 ಸಾವುಗಳು ಸಂಭವಿಸಿಲ್ಲ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ.

news18-kannada
Updated:February 9, 2021, 7:27 PM IST
CoronaVirus: ಕಳೆದ 24 ಗಂಟೆಗಳಲ್ಲಿ 15 ರಾಜ್ಯಗಳಿಂದ ಯಾವುದೇ ಕೊರೋನಾ ವೈರಸ್​ ಸಾವು ವರದಿಯಾಗಿಲ್ಲ: ಕೇಂದ್ರ ಸರ್ಕಾರ
ಸಾಂದರ್ಭಿಕ ಚಿತ್ರ.
  • Share this:
ನವ ದೆಹಲಿ (ಫೆಬ್ರವರಿ 09); ಕಳೆದ ಮೂರು ವಾರಗಳಲ್ಲಿ ದೇಶದ 7 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಯಾವುದೇ ಕೊರೋನಾ ಸಾವು ಸಂಭವಿಸಿಲ್ಲ. ಅಲ್ಲದೆ, ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದ ಒಟ್ಟು 15 ರಾಜ್ಯಗಳಲ್ಲಿ ಕೊರೋನಾ ವೈರಸ್​ ಸಾವು ವರದಿಯಾಗಿಲ್ಲ ಎಂದು ಕೇಂದ್ರ ಸರ್ಕಾರ ಇಂದು ಮಾಹಿತಿ ನೀಡಿದೆ. ದೇಶದಲ್ಲಿ ಕೊರೋನಾ ಸಾಂಕ್ರಾಮಿಕ ರೋಗ ಹರಡುವ ವೇಗ ಕ್ಷೀಣಿಸುತ್ತಿದ್ದು, ದಿನದಿಂದ ದಿನಕ್ಕೆ ವೈರಸ್​ ಭಾದಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಸಾವಿನ ಸಂಖ್ಯೆಯಲ್ಲೂ ಇಳಿಮುಖವಾಗುತ್ತಿದೆ. ಆದಾಗ್ಯೂ ಕಳೆದ ರಾಷ್ಟ್ರೀಯ ಸಿರೊ ಸರ್ವೆ ಸಂಶೋಧನೆಗಳು ದೇಶದ ಶೇ.70 ರಷ್ಟು ಜನ ಸಂಖ್ಯೆಯು ಕೊರೋನಾ ವೈರಸ್​ಗೆ ತುತ್ತಾಗಿದೆ ಎಂದು ವರದಿ ನೀಡಿರುವುದು ಕಳವಳಕ್ಕೆ ಕಾರಣವಾಗಿದೆ.

ಏಳು ರಾಜ್ಯಗಳು ಮತ್ತು ಅಂಡಮಾನ್, ನಿಕೋಬಾರ್ ದ್ವೀಪಗಳು, ಅರುಣಾಚಲ ಪ್ರದೇಶ, ತ್ರಿಪುರ, ದಾದ್ರಾ ಮತ್ತು ನಗರ ಹವೇಲಿ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ಲಕ್ಷದ್ವೀಪಗಳಲ್ಲಿ ಕಳೆದ ಮೂರು ವಾರಗಳಲ್ಲಿ ಹೊಸ COVID-19 ಸಾವುಗಳು ಸಂಭವಿಸಿಲ್ಲ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, "24 ದಿನಗಳಲ್ಲಿ 6 ಮಿಲಿಯನ್ COVID-19 ವ್ಯಾಕ್ಸಿನೇಷನ್ ಡೋಸ್ ನೀಡಲಾಗಿದೆ. ಕೆಲವು ರಾಜ್ಯಗಳಲ್ಲಿ ವ್ಯಾಕ್ಸಿನೇಷನ್ ಕೆಲಸ ಉತ್ತಮವಾಗಿ ಸಾಗಿವೆ. ಆದರೆ, ಇನ್ನೂ ಕೆಲವು ರಾಜ್ಯಗಳಲ್ಲಿ ಸುಧಾರಿಸುವ ಅವಶ್ಯಕತೆಯಿದೆ ಎಂದು ಭೂಷಣ್ ತಿಳಿಸಿದ್ದಾರೆ.

ಇದನ್ನೂ ಓದಿ: Kangana Ranaut: ನಟಿ ಕಂಗನಾ ಟ್ವಿಟರ್ ಖಾತೆ ಅಮಾನತಿಗೆ ಕೋರಿ ಅರ್ಜಿ: ಮಾರ್ಚ್ 9ಕ್ಕೆ ಬಾಂಬೆ ಹೈಕೋರ್ಟ್​ ವಿಚಾರಣೆ

ಭಾರತದಲ್ಲಿ ಒಂದು ಕೋಟಿಗೂ ಅಧಿಕ ಸಕ್ರೀಯ ಕೊರೋನಾ ವೈರಸ್​ ಬಾಧಿತರು ಚಿಕಿತ್ಸೆ ಪಡೆಯುತ್ತಿದ್ದು, ಸುಮಾರು 1.51 ಲಕ್ಷ ಜನ ಕೊರೋನಾದಿಂದಾಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
Published by: MAshok Kumar
First published: February 9, 2021, 7:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories