HOME » NEWS » Coronavirus-latest-news » NO CORONA VIRUS CASE REPORTED IN KARNATAKA SAYS MINISTER SHRIRAMULU HK

ರಾಜ್ಯದಲ್ಲಿ ಕೊರೊನಾ ವೈರಸ್ ಪತ್ತೆಯಾಗಿಲ್ಲ ; ಸಚಿವ ಬಿ ಶ್ರೀರಾಮುಲು ಸ್ಪಷ್ಟನೆ

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರತ್ಯೇಕ ವಾರ್ಡ್ ತೆರೆಯಲಾಗಿದೆ‌. ಹತ್ತು ಹಾಸಿಗೆವುಳ್ಳ ವಾರ್ಡ್‌ಗಳನ್ನ ಕೊರೊನಾಗೆ ಮೀಸಲು ಇಡಲಾಗಿದೆ. ಈವರೆಗೂ ರಾಜ್ಯದಲ್ಲಿ ಒಂದು ಕೊರೊನಾ ಪ್ರಕರಣ ದಾಖಲಾಗಿಲ್ಲ.

news18-kannada
Updated:February 3, 2020, 7:37 PM IST
ರಾಜ್ಯದಲ್ಲಿ ಕೊರೊನಾ ವೈರಸ್ ಪತ್ತೆಯಾಗಿಲ್ಲ ; ಸಚಿವ ಬಿ ಶ್ರೀರಾಮುಲು ಸ್ಪಷ್ಟನೆ
ಆರೋಗ್ಯ ಸಚಿವ ಶ್ರೀರಾಮುಲು
  • Share this:
ಮೈಸೂರು(ಫೆ.03) : ರಾಜ್ಯದಲ್ಲಿ ಕೊರೊನಾ ವೈರಸ್ ಪತ್ತೆಯಾಗಿಲ್ಲ. ಈ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ವಿದೇಶದಿಂದ ಬಂದಿದ್ದ 44 ಮಂದಿ ಪ್ರವಾಸಿಗರ ರಕ್ತ ಪರೀಕ್ಷೆ ಮಾಡಲಾಗಿದೆ. ಅದರಲ್ಲಿ 29 ಮಂದಿಯ ರಕ್ತದಲ್ಲಿ ಕೋರೋನ ವೈರಸ್ ನೆಗೆಟಿವ್ ಎಂಬ ವರದಿ ಬಂದಿದೆ. ಉಳಿದವರ ರಕ್ತ ಪರೀಕ್ಷೆ ನಡೆಯುತ್ತಿದೆ ಎಂದರು. ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.

ಸಚಿವ ಶ್ರೀರಾಮುಲು ತಮ್ಮ ಮಗಳ ವಿವಾಹಕ್ಕೆ ಆಮಂತ್ರಿಸಲು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ಗೆ ಭೇಟಿ ಮಾಡಿ ಆಮಂತ್ರಣ ಪತ್ರಿಕೆ ನೀಡಿದ ನಂತರ ಮಾತನಾಡಿದ ಅವರು, ಕೊರೊನಾ ವೈರಸ್​​ ಗೆ ಚಿಕಿತ್ಸೆ ಕೊಡುವುದು ಆಯುರ್ವೇದಕ್ಕೆ ದೊಡ್ಡ ಸಂಗತಿಯೇ ಅಲ್ಲ. ಆಯುರ್ವೇದ ಚಿಕಿತ್ಸೆಗೆ ಕೊರೊನಾ ವೈರಸ್​​ಗೆ ರಾಮಬಾಣ. ಈ ಸಂಬಂಧ ಇಲಾಖೆಯ ಹಿರಿಯ ಅಧಿಕಾರಿಗಳ ಹಾಗೂ ಬುದ್ದಿಜೀವಿಗಳ ಜೊತೆ ಚರ್ಚೆ ನಡೆಸುವೆ ಎಂದು ಹೇಳಿದರು.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರತ್ಯೇಕ ವಾರ್ಡ್ ತೆರೆಯಲಾಗಿದೆ‌. ಹತ್ತು ಹಾಸಿಗೆವುಳ್ಳ ವಾರ್ಡ್‌ಗಳನ್ನ ಕೊರೊನಾಗೆ ಮೀಸಲು ಇಡಲಾಗಿದೆ. ಈವರೆಗೂ ರಾಜ್ಯದಲ್ಲಿ ಒಂದು ಕೊರೊನಾ ಪ್ರಕರಣ ದಾಖಲಾಗಿಲ್ಲ. ಕಂಡು ಬಂದಲ್ಲಿ ಔಷಧಿಯನ್ನ ಹೊರ ದೇಶದಿಂದ ತರಿಸಲು ಸಿದ್ಧರಿದ್ದೇವೆ‌ ಎಂದು ತಿಳಿಸಿದರು.

Coronavirus: ಹುಬ್ಬಳ್ಳಿಯಲ್ಲಿ ಕೊರೊನಾ ವೈರಸ್‌ ಭೀತಿ- ಅವಳಿ ನಗರದ ಜನರಲ್ಲಿ ಹೆಚ್ಚಿದ ಆತಂಕ

ಕೊರೊನಾ ವೈರಸ್ ಗೆ ತುತ್ತಾದ ರೋಗಿಗಳ ಚಿಕಿತ್ಸಾ ವೆಚ್ಚ ಬರಿಸಲು ಸರ್ಕಾರ ಸಿದ್ಧವಿದೆ‌. ಈ ರೋಗಕ್ಕೆ ಆಯುರ್ವೇದದಲ್ಲಿ ಔಷಧವಿದೆ. ವಿಮಾನ ನಿಲ್ದಾಣಗಳಿಗೆ
ಚೀನಾದಿಂದ ಬರುವ ಪ್ರವಾಸಿಗರಿಗೆ ಔಷಧಿ ಸಿಂಪಡಿಸಿ ಬರಮಾಡಿಕೊಳ್ಳಲು ಸಿದ್ದತೆ ಮಾಡಿಕೊಂಡಿದ್ದೇವೆ ಎಂದರು.

ನಾನು ಒಂದು ರಾಷ್ಟ್ರೀಯ ಪಕ್ಷದ ಕಾರ್ಯಕರ್ತಡಿಸಿಎಂ ಸ್ಥಾನ ಕೇಳಿ ಪಕ್ಷಕ್ಕೆ ಹಾಗೂ ಸಿಎಂಗೆ ಮುಜುಗರ ತರೋಲ್ಲ. ಸಚಿವ ಸಂಪುಟ ವಿಸ್ತರಣೆ ಆಗಲಿದೆ. ಯಾರ್ಯಾರು ಸಚಿವರಾಗುತ್ತಾರೆ ಅಂತ ಎಲ್ಲರಿಗೂ ಈಗಾಗಲೇ ಗೊತ್ತಾಗಿದೆ. ಡಿಸಿಎಂ ಸ್ಥಾನದ ಬಗ್ಗೆ ಈಗ ಚರ್ಚೆ ಮಾಡೋಲ್ಲ. ಆ ಸ್ಥಾನ ಕೇಳಿ ಪಕ್ಷಕ್ಕೆ ಹಾಗೂ ಮುಖಂಡರಿಗೆ ಮುಜುಗರ ತರೋಲ್ಲ. ನಾನು ಒಂದು ರಾಷ್ಟ್ರೀಯ ಪಕ್ಷದ ಕಾರ್ಯಕರ್ತ. ಪಕ್ಷ ಯಾವ ನಿರ್ಧಾರ ತೆಗೆದುಕೊಳ್ಳಲಿದೆಯೋ ಅದಕ್ಕೆ  ನಾನು ಬದ್ದನಾಗಿ ಇರಲಿದ್ದೇನೆ ಎಂದು ಹೇಳಿದರು.
First published: February 3, 2020, 7:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories