ಕೊರೋನಾ ಎಫೆಕ್ಟ್​: 5ನೇ ತರಗತಿವರೆಗಿನ ಖಾಸಗಿ ಶಾಲಾ ಮಕ್ಕಳಿಗೆ ಈ ಬಾರಿ ಪರೀಕ್ಷೆ ಇಲ್ಲ

ಈ ವರ್ಷ ಮಕ್ಕಳಿಗೆ ಪರೀಕ್ಷೆ ನಡೆಸುವ ಬಗ್ಗೆ ಶಿಕ್ಷಣ ಇಲಾಖೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಈ ಹಿನ್ನೆಲೆ ನಾವೇ ಈ ಕ್ರಮ ಕೈಗೊಂಡಿದ್ದೇವೆ ಎಂದು ಶಶಿಕುಮಾರ್ ತಿಳಿಸಿದ್ದಾರೆ. ಆದರೆ ಸರ್ಕಾರದಿಂದ ಯಾವುದೇ ಅಧಿಕೃತ ಆದೇಶ ಬಂದಿಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಬೆಂಗಳೂರು(ಮಾ.11): ರಾಜ್ಯದಲ್ಲಿ ಕೊರೋನಾ ಭೀತಿ  ಹೆಚ್ಚಾಗಿರುವ ಕಾರಣ ಬೆಂಗಳೂರು ಉತ್ತರ, ದಕ್ಷಿಣ ಮತ್ತು ಗ್ರಾಮಾಂತರ ಜಿಲ್ಲೆಗಳ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ನರ್ಸರಿ, ಎಲ್​ಕೆಜಿ ಮತ್ತು ಯುಕೆಜಿ ಸೇರಿ 5ನೇ ತರಗತಿವರೆಗಿನ ಮಕ್ಕಳಿಗೆ ಮಾರ್ಚ್​ 31ರವರೆಗೆ ರಜೆ ನೀಡಲಾಗಿದೆ. ಈಗ ಬೆಂಗಳೂರಿನ ಕೆಲವು ಖಾಸಗಿ ಶಾಲೆಗಳು ಮಾತ್ರ ಈ ಬಾರಿಯ ವಾರ್ಷಿಕ ಪರೀಕ್ಷೆ ರದ್ದು ಮಾಡಲು ಮುಂದಾಗಿವೆ. 

    ಬೆಂಗಳೂರಿನ ನರ್ಸರಿ, ಎಲ್​ಕೆಜಿ, ಯುಕೆಜಿ ಸೇರಿ 5ನೇ ತರಗತಿವರೆಗಿನ ಮಕ್ಕಳಿಗೆ ಈ ಬಾರಿ ಪರೀಕ್ಷೆ ನಡೆಸುವುದಿಲ್ಲ. ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಖಾಸಗಿ ಶಾಲೆಯಾದ ನ್ಯಾಷನಲ್​ ಪಬ್ಲಿಕ್​ ಸ್ಕೂಲ್​ ಆಡಳಿತ ಮಂಡಳಿ ತಿಳಿಸಿದೆ.

    ಖಾಸಗಿ ಶಾಲೆ ಒಕ್ಕೂಟದ ಅಧ್ಯಕ್ಷ ಶಶಿಕುಮಾರ್ ಈ ಬಗ್ಗೆ ಮಾತನಾಡಿದ್ದು, "ಕೊರೋನಾ ಭೀತಿ ಹಿನ್ನೆಲೆಯಲ್ಲಿ  5ನೇ ತರಗತಿವರೆಗೆ ಈ ವರ್ಷ ಪರೀಕ್ಷೆ ನಡೆಸುವುದಿಲ್ಲ. ಈ ವರ್ಷ ಯಾವ ಮಕ್ಕಳನ್ನು ಅನುತ್ತೀರ್ಣಗೊಳಿಸಬೇಡಿ ಎಂದು ಎಲ್ಲಾ ಖಾಸಗಿ ಶಾಲೆಗಳಿಗೆ ಶಿಫಾರಸು ಮಾಡಲಾಗಿದೆ. ಬಹುತೇಕ ಶಾಲೆಗಳು ಒಪ್ಪಿಗೆ ನೀಡಿವೆ. ಮಕ್ಕಳ ಆರೋಗ
    First published: