ವಿಶ್ವದ ಪ್ರಮುಖ ಲೋಕೋಪಕಾರಿಗಳಲ್ಲಿ ನೀತಾ ಅಂಬಾನಿ; ಅಮೆರಿಕದ ನಿಯತಕಾಲಿಕೆಯಿಂದ ಗೌರವ

ಟಿಮ್ ಕುಕ್, ಓಪ್ರಾ ವಿಂಫ್ರೆ, ಲೌರೀನ್ ಪೊವೆಲ್ ಜಾಬ್ಸ್, ಮೈಕೇಲ್ ಬ್ಲೂಂಬರ್ಗ್, ಲಿಯೋನಾರ್ಡೋ ಡೀ ಕಾಪ್ರಿಯೋ ಮೊದಲಾದವರು ಈ ಲೋಕೋಪಕಾರಿಗಳ ಪಟ್ಟಿಯಲ್ಲಿದ್ದಾರೆ. ನೀತಾ ಅಂಬಾನಿ ಅವರು ಈ ಪಟ್ಟಿಯಲ್ಲಿರುವ ಏಕೈಕ ಭಾರತೀಯರೆನಿಸಿದ್ದಾರೆ.

ನೀತಾ ಅಂಬಾನಿ

ನೀತಾ ಅಂಬಾನಿ

 • News18
 • Last Updated :
 • Share this:
  ಮುಂಬೈ(ಜೂನ್ 21): ಕೋವಿಡ್-19 ಬಿಕ್ಕಟ್ಟಿನ ಸಂದರ್ಭದಲ್ಲಿ ಬಹಳಷ್ಟು ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿರುವ ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ಮತ್ತು ನೀತಾ ಅಂಬಾನಿ ಅವರ ಸೇವೆಯನ್ನು ಗುರುತಿಸಿ ಅಮೆರಿಕದ ನಿಯತಕಾಲಿಕೆಯೊಂದು ಗೌರವಿಸಿದೆ. “ಟೌನ್ ಅಂಡ್ ಕಂಟ್ರಿ” ಎಂಬ ಅಮೆರಿಕ ಫ್ಯಾಷನ್ ಮ್ಯಾಗಜಿನ್ 2020ರ ವಿಶ್ವದ ಅತ್ಯಂತ ಪ್ರಮುಖ ಲೋಕೋಪಕಾರಿ(Philanthropist)ಗಳ ಪಟ್ಟಿ ಮಾಡಿದೆ. ಈ ಮಹನೀಯರ ಸಾಲಿನಲ್ಲಿ ನೀತಾ ಅಂಬಾನಿ ಅವರನ್ನ ನಿಲ್ಲಿಸಿದೆ.

  ಟಿಮ್ ಕುಕ್, ಓಪ್ರಾ ವಿಂಫ್ರೆ, ಲೌರೀನ್ ಪೊವೆಲ್ ಜಾಬ್ಸ್, ದಿ ಲಾಡರ್ ಫ್ಯಾಮಿಲಿ, ಡೋನಾಟೆಲಾ ವೆರ್ಸಾಸ್, ಮೈಕೇಲ್ ಬ್ಲೂಂಬರ್ಗ್, ಲಿಯೋನಾರ್ಡೋ ಡೀ ಕಾಪ್ರಿಯೋ ಮೊದಲಾದ ವ್ಯಕ್ತಿಗಳು ಮತ್ತು ಸಂಸ್ಥೆಗಳು ಈ ಲೋಕೋಪಕಾರಿಗಳ ಪಟ್ಟಿಯಲ್ಲಿದ್ದಾರೆ. ನೀತಾ ಅಂಬಾನಿ ಅವರು ಈ ಪಟ್ಟಿಯಲ್ಲಿರುವ ಏಕೈಕ ಭಾರತೀಯರೆನಿಸಿದ್ದಾರೆ.

  “ರಿಲಾಯನ್ಸ್ ಇಂಡಸ್ಟ್ರೀಸ್​ನ ಸಮಾಜಸೇವೆ ಅಂಗವಾದ ರಿಲಾಯನ್ಸ್ ಫೌಂಡೇಶನ್ ಭಾರತದಲ್ಲಿ ಮೊದಲ ಕೋವಿಡ್-19 ಆಸ್ಪತ್ರೆ ನಿರ್ಮಿಸಿತು. ಬಡವರಿಗೆ ಮತ್ತು ಕಾರ್ಮಿಕರಿಗೆ ಕೋಟ್ಯಂತರ ಸಂಖ್ಯೆಯಲ್ಲಿ ಆಹಾರ ಮತ್ತು ಮಾಸ್ಕ್​ಗಳನ್ನ ವಿತರಿಸಿದೆ. ತುರ್ತು ನಿಧಿಗೆ 72 ಮಿಲಿಯನ್ ಡಾಲರ್ (ಸುಮಾರು 550 ಕೋಟಿ ರೂಪಾಯಿ) ಹಣವನ್ನ ದೇಣಿಗೆಯಾಗಿ ನೀಡಿದೆ” ಎಂದು ಈ ಪತ್ರಿಕೆ ಹೇಳಿದೆ.

  ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಛೇರ್ಮನ್ ಮುಕೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ಅವರು ರಿಲಾಯನ್ಸ್ ಫೌಂಡೇಶನ್​ನ ಮುಖ್ಯಸ್ಥೆಯಾಗಿದ್ಧಾರೆ. ಅಮೆರಿಕದ ಟೌನ್ ಅಂಡ್ ಕಂಟ್ರಿ ಮ್ಯಾಗಜಿನ್​ನಿಂದ ತಮ್ಮ ಕಾರ್ಯಗಳಿಗೆ ಮನ್ನಣೆ ಸಿಕ್ಕಿದ್ದಕ್ಕೆ ನೀತಾ ಅಂಬಾನಿ ಈ ವೇಳೆ ಸಂತಸ ವ್ಯಕ್ತಪಡಿಸಿದ್ದಾರೆ.

  ಇದನ್ನೂ ಓದಿ: ಕೋವಿಡ್-19 ಒಂದಕ್ಕೇ ಎಲ್ಲವೂ ಅಲ್ಲ, ಬೇರೆ ರೋಗಿಗಳಿಗೂ ಚಿಕಿತ್ಸೆ ಅಗತ್ಯ: WHO ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್

  “ಬಿಕ್ಕಟ್ಟು ಉದ್ಭವಿಸಿದಾಗ ನಾವು ತ್ವರಿತವಾಗಿ ಕಾರ್ಯಾಚರಣೆಗೆ ಇಳಿಯುವುದು ಅಗತ್ಯವಿರುತ್ತದೆ. ಪರಿಹಾರ, ಸಂಪನ್ಮೂಲ, ಸೇವಾಪರತೆ ಇತ್ಯಾದಿ ಬೇಕಾಗುತ್ತದೆ. ವರ್ಷಗಳಿಂದಲೂ ರಿಲಾಯನ್ಸ್ ಇಂಡಸ್ಟ್ರೀಸ್ ಮತ್ತು ರಿಲಾಯನ್ಸ್ ಫೌಂಡೇಶನ್​ನಲ್ಲಿ ನಾವು ಬಿಕ್ಕಟ್ಟಿಗೆ ಕ್ರಿಪ್ರ ಸ್ಪಂದಿಸಿ ಕೆಲಸ ಮಾಡುವ ವ್ಯವಸ್ಥೆ ರೂಪಿಸಿದ್ದೇವೆ. ನಮ್ಮ ಕಾರ್ಯಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಸಿಕ್ಕಿರುವುದು ಖುಷಿಯ ವಿಚಾರ. ಅಗತ್ಯ ಬಿದ್ದಾಗೆಲ್ಲಾ ನಮ್ಮ ಸರ್ಕಾರ ಮತ್ತು ಸಮುದಾಯದೊಂದಿಗೆ ಕೈಜೋಡಿಸಲು ನಾವು ಬದ್ಧವಾಗಿರುತ್ತೇವೆ” ಎಂದು ನೀತಾ ಅಂಬಾನಿ ಹೇಳಿದ್ಧಾರೆ.  ನೀತಾ ಅಂಬಾನಿ ಛೇರ್ಮನ್ ಆಗಿರುವ ರಿಲಾಯನ್ಸ್ ಫೌಂಡೇಶನ್ ಸಂಸ್ಥೆ ಈ ಹಿಂದೆ ಹಲವಾರು ಬಿಕ್ಕಟ್ಟು ಸಂದರ್ಭಗಳಲ್ಲಿ ಸ್ವಯಂಸ್ಫೂರ್ತಿಯಿಂದ ಕೆಲಸ ಮಾಡಿದ ಉದಾಹರಣೆಗಳುಂಟು. ಈಗ ಉದ್ಭವಿಸಿರುವ ಕೋವಿಡ್-19 ಬಿಕ್ಕಟ್ಟಿನಲ್ಲೂ ಫೌಂಡೇಶನ್ ಬಹಳ ಬೇಗ ಸ್ಪಂದಿಸಿದೆ. ಮಾರ್ಚ್ ತಿಂಗಳಲ್ಲಿ ಎರಡೇ ವಾರದಲ್ಲಿ ಮುಂಬೈನಲ್ಲಿ 100 ಬೆಡ್​ಗಳುಳ್ಳ ಕೋವಿಡ್ ಆಸ್ಪತ್ರೆಯನ್ನ ನಿರ್ಮಿಸಿತು. ಏಪ್ರಿಲ್ ತಿಂಗಳಲ್ಲಿ ಅದನ್ನ 220 ಬೆಡ್​ಗಳಿಗೆ ವಿಸ್ತರಿಸಲಾಯಿತು. ಲಾಕ್​ಡೌನ್​ನಿಂದ ಸಂಕಷ್ಟಕ್ಕೊಳಗಾದ ಬಡವರಿಗೆ 5 ಕೋಟಿ ಆಹಾರ ಕಿಟ್​ಗಳನ್ನ ವಿತರಿಸಿದೆ. ಕೋಟ್ಯಂತರ ಮಾಸ್ಕ್​ಗಳನ್ನ ಹಂಚಿದೆ. ಪಿಪಿಇ ಕಿಟ್​ಗಳನ್ನೂ ತಯಾರಿಸಿ ಹಂಚುತ್ತಿದೆ. ದೇಶಾದ್ಯಂತ ಮನುಷ್ಯರಂತೆ ಸಾಕು ಪ್ರಾಣಿಗಳು, ಬೀದಿ ನಾಯಿಗಳು ಹಾಗೂ ಇತರ ಪ್ರಾಣಗಳಿಗೂ ಆರೋಗ್ಯ ಸೇವೆಗೆ ಸಹಾಯ ಮಾಡಲಾಗಿದೆ.
  First published: