ಕೊರೋನಾ ವಿರುದ್ಧ ಹೋರಾಟಕ್ಕೆ ದೇಶ ಲಾಕ್​ಡೌನ್; ನಿರ್ಮಲಾ ಸೀತಾರಾಮನ್ ಪರಿಹಾರ ಘೋಷಣೆಯ ಪ್ರಮುಖಾಂಶಗಳು

ಇಂದು ಪತ್ರಿಕಾಗೋಷ್ಠಿ ನಡೆಸಿರುವ ಹಣಕಾಸು ಸಚಿವೆ ಲಾಕ್‌ಡೌನ್ ನಡುವೆ ಮುಂದಿನ ಮೂರು ತಿಂಗಳ ರಾಷ್ಟ್ರದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು 1.7 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದ್ದಾರೆ.

news18-kannada
Updated:March 26, 2020, 4:44 PM IST
ಕೊರೋನಾ ವಿರುದ್ಧ ಹೋರಾಟಕ್ಕೆ ದೇಶ ಲಾಕ್​ಡೌನ್; ನಿರ್ಮಲಾ ಸೀತಾರಾಮನ್ ಪರಿಹಾರ ಘೋಷಣೆಯ ಪ್ರಮುಖಾಂಶಗಳು
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್.
  • Share this:
ನವ ದೆಹಲಿ (ಮಾರ್ಚ್‌ 26); ದೇಶದಲ್ಲಿ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿರುವ ಮಾರಣಾಂತಿಕ ಕೊರೋನಾ ವೈರಸ್‌ ಅನ್ನು ನಿಯಂತ್ರಿಸುವ ಮತ್ತು ದೇಶವನ್ನೇ ಲಾಕ್‌ಡೌನ್‌ ಮಾಡಲಾಗಿರುವ ಕ್ರಮದಿಂದಾಗಿ ನಷ್ಟ ಅನುಭವಿಸಲಿರುವ ಮಧ್ಯಮ ಮತ್ತು ಕೆಲ ವರ್ಗದ ಜನರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇಂದು 1.7 ಲಕ್ಷ ಕೋಟಿ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿದೆ.

ಇಂದು ಪತ್ರಿಕಾಗೋಷ್ಠಿ ನಡೆಸಿರುವ ಹಣಕಾಸು ಸಚಿವೆ ಲಾಕ್‌ಡೌನ್ ನಡುವೆ ಮುಂದಿನ ಮೂರು ತಿಂಗಳ ರಾಷ್ಟ್ರದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು 1.7 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದ್ದಾರೆ. ಅಲ್ಲದೆ, ಈ ಪ್ಯಾಕೇಜ್‌ನಲ್ಲಿ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವ ಹತ್ತಾರು ನೂತನ ಯೋಜನೆಗಳನ್ನು ಘೋಷಿಸಲಾಗಿದೆ.

ನಿರ್ಮಲಾ ಸೀತಾರಾಮನ್ ಘೋಷಣೆಯ ಪ್ರಮುಖಾಂಶಗಳು


  • ಮುಂದಿನ ಮೂರು ತಿಂಗಳು ಬಿಪಿಎಲ್‌ ಕಾರ್ಡುದಾರರಿಗೆ 5 ಕೆಜಿ ಉಚಿತ ಅಕ್ಕಿ ಮತ್ತು ಗೋದಿ ಹಂಚಿಕೆ

  • ಉಜ್ವಲ ಯೋಜನೆಯ ಅಡಿಯಲ್ಲಿ 8.3 ಕೋಟಿ ಬಿಪಿಎಲ್‌ ಕುಟುಂಬಗಳಿಗೆ ಮುಂದಿನ ಮೂರು ತಿಂಗಳಿಗೆ ಉಚಿತವಾಗಿ ಅಡಿಗೆ ಅನಿಲ ಹಂಚಿಕೆ

  • ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ಸುಮಾರು 8.9 ಕೋಟಿ ರೈತರ ಖಾತೆಗಳಿಗೆ ನೇರವಾಗಿ ಮುಂದಿನ ಮೂರು ತಿಂಗಳಿಗೆ ತಲಾ 2,000 ಹಣ ಜಮಾವಣೆ. ಮೊದಲ ಕಂತಿನ ಹಣವನ್ನು ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ಹಾಕುವುದು.
  • ಜನ್‌ಧನ್ ಖಾತೆ ಹೊಂದಿರುವ ಎಲ್ಲಾ ಮಹಿಳೆಯರ ಖಾತೆಗಳಿಗೂ ನೇರವಾಗಿ 500 ರೂ ಹಾಕಲಾಗುವುದು. ಮಹಿಳಾ ಸ್ವಸಹಾಯ ಸಂಘಗಳಿಗೆ 10 ಲಕ್ಷದವರೆಗೆ ಶ್ಯೂರಿಟಿ ಇಲ್ಲದೆ ಸಾಲ ನೀಡುವುದು.

  • ದಿನಗೂಲಿ ನೌಕರರ ಕೂಲಿಯನ್ನು 180 ರಿಂದ 200 ರೂಪಾಯಿಗೆ ಏರಿಸಲಾಗಿದೆ.

  • ಎಲ್ಲಾ ರಾಜ್ಯಗಳ ಖಾತೆಯಲ್ಲಿರುವ ಕಟ್ಟಡ ಕಾರ್ಮಿಕರ ಯೋಗಕ್ಷೇಮ ನಿಧಿಯಲ್ಲಿರುವ ಸುಮಾರು 31,000 ಕೋಟಿ ಹಣವನ್ನು ಆಯಾ ರಾಜ್ಯಗಳು ಕಾರ್ಮಿಕರಿಗೆ ಸಹಾಯ ಧನ ನೀಡಲು ಬಳಸಿಕೊಳ್ಳಲು ಸೂಚನೆ.

  • ಸಂಘಟಿತ ಕಾರ್ಮಿಕರಿಗೆ ಸರ್ಕಾರ ದೀನ ದಯಾಳ ಉಪಾಧ್ಯಾಯ ಯೋಜನೆಯ ಅಡಿಯಲ್ಲಿ ತಲಾ 20 ಲಕ್ಷ ರೂ. ಸಾಲ ನೀಡುವುದು. ಇದರಿಂದ ಸುಮಾರು 2 ಕೋಟಿ ಕುಟುಂಬಗಳಿಗೆ ಲಾಭ.

  • ಕಾರ್ಮಿಕರ ಪಿಎಫ್ (ಭವಿಷ್ಯ ನಿಧಿ) ಹಣವನ್ನು ಹಿಂಪಡೆಯಲು ನಿಯಮವನ್ನು ಸರಳಗೊಳಿಸಲಾಗಿದೆ. 15,000 ಕ್ಕಿಂತ ಕಡಿಮೆ ವೇತನ ಹೊಂದಿರುವವರಿಗೆ ಕೇಂದ್ರ ಸರ್ಕಾರವೇ ಶೇ.24 ರಷ್ಟು ಪಿಎಫ್ ಹಣ ಭರಿಸಲಿದೆ. ಶೇ.75ರಷ್ಟು ಪಿಎಫ್ ಹಣವನ್ನು ಪಡೆಯಲು ಅವಕಾಶ ನೀಡಲಾಗಿದ್ದು, ಕಂಪೆನಿ ಮತ್ತು ಉದ್ಯೋಗಿ ಎರಡೂ ಪಾಲನ್ನೂ ಸರ್ಕಾರವೇ ನೀಡಲಿದೆ.

  • ವೃದ್ದಾಪ್ಯ, ವಿಧವಾ ಮತ್ತು ಅಂಗವಿಕಲರಿಗೆ 2000 ಹೆಚ್ಚುವರಿ ಪಿಂಚಣಿ ನಿಗದಿ ಮಾಡಲಾಗಿದ್ದು ಈ ಹಣ ನೇರವಾಗಿ ಅವರ ಖಾತೆಗೆ ವರ್ಗಾವಣೆಯಾಗುವಂತೆ ಆಯಾ ಇಲಾಖೆಗಳಿಗೆ ಸೂಚನೆ.

  • ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿ ಖಾತೆಯಲ್ಲಿರುವ ಹಣವನ್ನು ಕೊರೋನಾ ವಿರುದ್ಧದ ಹೋರಾಟಕ್ಕೆ, ಚಿಕಿತ್ಸೆ ಮತ್ತು ಪರೀಕ್ಷಾ ಲ್ಯಾಬ್ ನಿರ್ಮಾಣಕ್ಕೆ ಬಳಸಿಕೊಳ್ಳುವಂತೆ ಸೂಚನೆ.


ಇದನ್ನು ಓದಿ: ಕೊರೋನಾ ವೈರಸ್​ಗೆ ಭಾರತದಲ್ಲಿ ಮತ್ತೆ ಮೂವರು ಬಲಿ; 16ಕ್ಕೆ ಏರಿದ ಮೃತರ ಸಂಖ್ಯೆ
First published:March 26, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading