Nirmala Sitharaman Speech: ಸಣ್ಣ, ಅತಿಸಣ್ಣ, ಮಧ್ಯಮ ಕೈಗಾರಿಕೆಗಳಿಗೆ 3 ಲಕ್ಷ ಕೋಟಿ ರೂ.ಹಂಚಿಕೆ​, ತೆರಿಗೆದಾರರಿಗೆ ಬಂಪರ್ ಗಿಫ್ಟ್

Nirmala Sitharaman on Economic Package: ಆರ್ಥಿಕತೆ, ನಿರ್ಮಾಣ, ವ್ಯವಸ್ಥೆ, ಜನಸಂಖ್ಯೆ ಹಾಗೂ ಬೇಡಿಕೆ ಇವು ಆತ್ಮ ನಿರ್ಭಾರ್ ಭಾರತದ ಐದು ಆಧಾರ ಸ್ತಂಭಗಳು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್.

  • Share this:
    ನವದೆಹಲಿ: ಕೊರೋನಾ ವೈರಸ್​ನಿಂದಾಗಿ ಎದುರಾಗಿರುವ ಆರ್ಥಿಕ ಬಿಕ್ಕಟ್ಟು ನಿವಾರಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದರು. ಇಂದು ಈ 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್​ ಯಾವ ಯಾವ ಕ್ಷೇತ್ರಗಳಿಗೆ ಎಷ್ಟೆಷ್ಟು ಮತ್ತು ಹೇಗೆ ಹಂಚಿಕೆ ಮಾಡಲಾಗಿದೆ ಎಂಬ ವಿವರವನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಿಳಿಸಿದರು.

    ಸಂಜೆ ಸರಿಯಾಗಿ ನಾಲ್ಕು ಗಂಟೆಗೆ ಸುದ್ದಿಗೋಷ್ಠಿ ಆರಂಭಿಸಿದ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಹಣಕಾಸು ಪ್ಯಾಕೇಜ್ ಮೂಲಭೂತವಾಗಿ ಬೆಳವಣಿಗೆಯನ್ನು ಉತ್ತೇಜಿಸುವ ಮತ್ತು ಅತ್ಯಂತ ಸ್ವಾವಲಂಬಿ ಭಾರತವನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು.

    ಪ್ರಧಾನಿ ಮೋದಿ ಅವರು ಸಮಗ್ರ ದೃಷ್ಟಿಕೋನದೊಂದಿಗೆ ಮತ್ತು ಸಮಾಜದ ಹಲವಾರು ವರ್ಗಗಳೊಂದಿಗೆ ವ್ಯಾಪಕ ಸಮಾಲೋಚನೆಯ ನಂತರ ಇದನ್ನು ರೂಪಿಸಲಾಯಿತು ಎಂದು ಸೀತಾರಾಮನ್ ಹೇಳಿದರು.

    ಆರ್ಥಿಕತೆ, ನಿರ್ಮಾಣ, ವ್ಯವಸ್ಥೆ, ಜನಸಂಖ್ಯೆ ಹಾಗೂ ಬೇಡಿಕೆ ಇವು ಆತ್ಮ ನಿರ್ಭಾರ್ ಭಾರತದ ಐದು ಆಧಾರ ಸ್ತಂಭಗಳು ಎಂದು ವಿತ್ತ ಸಚಿವರು ಹೇಳಿದರು. ಹಾಗೆಯೇ ಆತ್ಮ ನಿರ್ಭಾರ್ (ಸ್ವಾವಲಂಬಿ) ಭಾರತ ಅಂದರೆ ಭಾರತವು ಪ್ರತ್ಯೇಕವಾಗಿ ಇರುವ ದೇಶ ಎಂದು ಅರ್ಥವಲ್ಲ ಎಂದು ಹೇಳಿದರು.

    ಸಣ್ಣ, ಅತಿಸಣ್ಣ, ಮಧ್ಯಮ ಕೈಗಾರಿಕೆಗಳಿಗೆ 3 ಲಕ್ಷ ಕೋಟಿ ರೂಪಾಯಿ ಜಾಮೀನು ರಹಿತ ಸಾಲ ನೀಡಲು ಮೀಸಲಿರಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

    ಸಾಲ ಮರುಪಾವತಿಗೆ 4 ವರ್ಷಗಳವರೆಗೆ ಕಾಲಾವಕಾಶ ನೀಡಲಾಗಿದೆ. ಸಾಲ ನೀಡಿದ ಮೊದಲ 12 ತಿಂಗಳವರೆಗೆ ಸಾಲ ಮರುಪಾವತಿಸುವ ಅಗತ್ಯವಿಲ್ಲ. ಬ್ಯಾಂಕಗಳು ನೀಡುವ ಸಾಲಕ್ಕೆ ಕೇಂದ್ರ ಸರ್ಕಾರವೇ ಗ್ಯಾರಂಟಿ ನೀಡಲಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.

    ಸಣ್ಣ ಕೈಗಾರಿಕೆಗಳು ಉದ್ಯೋಗಿಗಳಿಗೆ ಸಂಬಳ ನೀಡಲು ಹಣ ಇಲ್ಲದಿದ್ದರೆ ಕೇಂದ್ರ ಸರ್ಕಾರ ನೆರವು ನೀಡುತ್ತದೆ. ಮೂರು ತಿಂಗಳವರೆಗೆ ಎಟಿಎಂಗಳಲ್ಲಿ ಹಣ ಪಡೆಯಲು ಯಾವುದೇ ಶುಲ್ಕ ಇಲ್ಲ. ಅಕ್ಟೋಬರ್ 31ರವರೆಗೆ ಕೈಗಾರಿಕೆಗು ಸಾಲ ಪಡೆಯಬಹುದು. ಸಂಕಷ್ಟದಲ್ಲಿ ಇರುವ ಸಣ್ಣ ಕೈಗಾರಿಕೆಗಳಿಗೆ 20 ಸಾವಿರ ಕೋಟಿ ರೂಪಾಯಿ ಸಹಾಯಕ ಸಾಲ ನೀಡಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

    ಉಚಿತ ಅಕ್ಕಿ

    ಮುಂದಿನ ಮೂರು ತಿಂಗಳುಗಳು ಭಾರತದಲ್ಲಿರುವ 80 ಕೋಟಿ ಜನರಿಗೆ ಐದು ಕೆಜಿ ಅಕ್ಕಿ ಅಥವಾ ಗೋಧಿ ಉಚಿತವಾ ನೀಡಲಾಗುವುದು ಎಂದು ನಿರ್ಮಲಾ ಸೀತಾರಾಮನ್​ ತಿಳಿಸಿದ್ದಾರೆ. ಈ ಯೋಜನೆಯಿಂದ ತುತ್ತು ಕೂಳಿಗೂ ಸಂಕಷ್ಟ ಪಡುತ್ತಿದ್ದ ಬಡವರು ನಿಟ್ಟುಸಿರು ಬಿಡುವಂತಾಗಿದೆ. ಮುಂದಿನ ಮೂರು ತಿಂಗಳ ಕಾಲ 8 ಕೋಟಿ ಬಡ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿದೆ. ಅಲ್ಲದೆ, ಎಲ್ಲ ಕುಟುಂಬದವರಿಗೆ ಮೂರು ತಿಂಗಳ ಕಾಲ ಒಂದು ಕೆಜಿ ಧವಸ-ಧಾನ್ಯ ಉಚಿತವಾಗಿ ನೀಡುವುದಾಗಿ ಸರ್ಕಾರ ತಿಳಿಸಿದೆ.


    ಆದಾಯ ತೆರಿಗೆದಾರರಿಗೆ ಬಂಪರ್

    ಆದಾಯ ತೆರಿಗೆದಾರರಿಗೆ ಕೇಂದ್ರ ಸರ್ಕಾರ ಬಂಪರ್ ಗಿಫ್ಟ್ ನೀಡಿದೆ. 18 ಸಾವಿರ ಕೋಟಿ ರೂಪಾಯಿ ಆದಾಯ ತೆರಿಗೆಯನ್ನು ಆದಾಯ ತೆರಿಗೆ ಇಲಾಖೆ ವಾಪಸ್ ನೀಡಿದೆ. ಇದರಿಂದ 14 ಕೋಟಿ ಆದಾಯ ತೆರಿಗೆದಾರರಿಗೆ ಅನುಕೂಲವಾದಂತಾಗಿದೆ. ಹಾಗೂ ಆದಾಯ ತೆರಿಗೆ ಮರುಪಾವತಿ ದಿನಾಂಕವನ್ನು ಡಿಸೆಂಬರ್​ವರೆಗೆ ಮುಂದೂಡಿಕೆ ಮಾಡಲಾಗಿದೆ.

    ವ್ಯಾಪಾರಿಗಳು, ಕಾರ್ಮಿಕರಿಗೆ ಇಪಿಎಫ್ ಮೂಕ 2500 ಕೋಟಿ ರೂಪಾಯಿ ನೆರವು ನೀಡಲಿದೆ. ಸಣ್ಣ ಸಾಲ ನೀಡುವ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಗೃಹ ಸಾಲ ನೀಡುವ ಸಂಸ್ಥೆಗಳು ಹಾಗೂ ಸಣ್ಣ ಸಾಲ ನೀಡುವ ಸಂಸ್ಥೆಗಳು ಕೇಂದ್ರ ಸರ್ಕಾರ ನೆರವು ನೀಡಲಿದೆ. ಈ ವಲಯಕ್ಕೆ 30 ಸಾವಿರ ಕೋಟಿ ರೂ. ನೀಡಲಿದೆ. ಈ ವಲಯ ನೀಡುವ ಸಾಲಕ್ಕೆ ಕೇಂದ್ರ ಸರ್ಕಾರವೇ ಗ್ಯಾರಂಟಿ ನೀಡಲಿದೆ ಎಂದು ನಿರ್ಮಲಾ ಸೀತಾರಾಮನ್ ಭರವಸೆ ನೀಡಿದ್ದಾರೆ.

    15 ಸಾವಿರಕ್ಕೂ ಕಡಿಮೆ ಸಂಬಳ ಪಡೆಯುವ ಉದ್ಯೋಗಿಗಳಿಗೆ ತಕ್ಷಣ ಪಿಎಫ್​ ಹಣ ಪಾವತಿ ಮಾಡಲಾಗುವುದು. ಅಲ್ಲದೆ, ಪ್ರತಿ ತಿಂಗಳು 15,000ಕ್ಕೂ ಅಧಿಕ ಸಂಬಳ ಪಡೆಯುವ ನೌಕರರಿಗೆ ಕೂಡ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದ್ದು, ಉದ್ಯೋಗದಾತರ ಪಿಎಫ್​ ಪಾಲು ಶೇ. 12ರಿಂದ ಶೇ. 10ಕ್ಕೆ ಇಳಿಕೆ ಮಾಡಲಾಗಿದೆ. 6,750 ಕೋಟಿ ರೂ. ಹಣವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ. ಮತ್ತೆ 3 ತಿಂಗಳ ಕಾಲ ಅಂದರೆ ಜೂನ್, ಜುಲೈ, ಆಗಸ್ಟ್​ ತಿಂಗಳವರೆಗೆ ಸರ್ಕಾರವೇ ಪಿಎಫ್​ ಹಣವನ್ನು ಪಾವತಿ ಮಾಡಲಿದೆ. ಕಂಪನಿ ಮತ್ತು ನೌಕರರ ಪಾಲಿನ ಪಿಎಫ್​ ಹಣವನ್ನು ಸರ್ಕಾರವೇ ಭರಿಸಲಿದೆ. 2,500 ಕೋಟಿ ಲಿಕ್ವಿಡಿಟಿ ಪ್ರೋತ್ಸಾಹದೊಂದಿಗೆ 72.22 ಉದ್ಯೋಗಿಗಳು ಈ ಇಪಿಎಫ್​ ಅನುಕೂಲ ಪಡೆಯಲಿದ್ದಾರೆ  ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

     

    First published: