Covid Vaccine: ಜನರಲ್ಲಿ ಜಾಗೃತಿ ಮೂಡಿಸಲು News18 Urdu “ಲಸಿಕೆ ಬದುಕಿನ ವಾಸ್ತವ” ಅಭಿಯಾನ

Zindagi Ka Yaqeen Vaccine: ಜನರಲ್ಲಿ ಲಸಿಕೆಯ ಕುರಿತು ಇರುವ ತಪ್ಪು ಕಲ್ಪನೆಗಳನ್ನು ತೊಡೆದು ಹಾಕುವುದು ಮತ್ತು ಮುಖ್ಯತೆಯ ಬಗ್ಗೆ ಅರಿವು ಮೂಡಿಸುವುದು ನ್ಯೂಸ್ 18 ಉರ್ದುವಿನ ಗುರಿಯಾಗಿದೆ. ಕೆಲವು ಗಾಳಿ ಮಾತುಗಳ ಪ್ರಚಾರದಿಂದಾಗಿ ಜನರು ಲಸಿಕೆಗಳಿಂದ ದೂರ ಉಳಿಯುತ್ತಿದ್ದಾರೆ ಎಂಬುವುದು ನೆಟ್‍ವರ್ಕ್‍ನ ಅಭಿಪ್ರಾಯವಾಗಿದೆ. ಎಲ್ಲಾ ವರ್ಗಗಳ ಪ್ರಮುಖ ಜನರು ಈ ಅಭಿಯಾನದೊಂದಿಗೆ ಸಂಬಂಧ ಹೊಂದಿದ್ದಾರೆ. ಜೀವನ ಬಹಳ ಅಮೂಲ್ಯ , ಹಾಗಾಗಿ ಎಲ್ಲಾ ಧರ್ಮಗಳ ಧಾರ್ಮಿಕ ವಿದ್ವಾಂಸರು ಮತ್ತು ಧಾರ್ಮಿಕ ಮುಖಂಡರ ಆಶೀರ್ವಾದವನ್ನು ಈ ಅಭಿಯಾನ ಹೊಂದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

Corona Vaccine: ಕೊರೋನಾ ಸಾಂಕ್ರಾಮಿಕವು ದೇಶದಲ್ಲಿ ಅಟ್ಟಹಾಸಗೈದ ನಂತರ, ನ್ಯೂಸ್ 18 ನೆಟ್‍ವರ್ಕ್ ಕೂಡ ಅದರ ವಿರುದ್ಧ ಯುದ್ಧ ಸಾರಿದೆ. ಎಲ್ಲೆಡೆ ಕೊರೋನಾ ಮಹಾಮಾರಿ ಹಬ್ಬಿರುವ ಈ ಸಂಕಷ್ಟದ ಸಮಯದಲ್ಲಿ ನ್ಯೂಸ್ 18 ಉರ್ದು ತನ್ನ ವೀಕ್ಷಕರನ್ನು ಒಂಟಿಯಾಗಿ ಬಿಟ್ಟಿಲ್ಲ. ಜನರು ಅದನ್ನು ಅರ್ಥ ಮಾಡಿಕೊಳ್ಳುವಂತೆ ಮಾಡುವಲ್ಲಿ ಅದು ಸಹಾಯ ಮಾಡಿದೆ. ಅದಕ್ಕೆ ಸಂಬಂಧಿಸಿದಂತೆ, ವೀಕ್ಷಕರಲ್ಲಿ ಕೊರೋನಾ ಲಸಿಕೆಯ ಕುರಿತು ಜಾಗೃತಿ ಮೂಡಿಸಲು ನ್ಯೂಸ್ 18 ಉರ್ದು (News18 Urdu Campaign) “ಲಸಿಕೆ ಬದುಕಿನ ವಾಸ್ತವ” (Zindagi Ka Yaqeen Vaccine) ಎಂಬ ಅಭಿಯಾನವನ್ನು ಆರಂಭಿಸಿದೆ. ಲಸಿಕೆಯ ಕುರಿತ ಮಾಹಿತಿಯನ್ನು ಅವರಿಗೆ ನೀಡುವುದು ಮತ್ತು ಲಸಿಕೆಯ ಪ್ರಾಮುಖ್ಯತೆ ಅರಿತುಕೊಳ್ಳುವಂತೆ ಮಾಡುವುದು ಈ ಅಭಿಯಾನದ ಉದ್ದೇಶ.


“ಲಸಿಕೆ ಜೀವನದ ವಾಸ್ತವ” ಅಭಿಯಾನವನ್ನು ಕೇಂದ್ರ ಅಲ್ಪ ಸಂಖ್ಯಾತರ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನ್ಯೂಸ್ 18 ಉರ್ದು ಇಟ್ಟಿರುವ ಈ ಮೊದಲ ಹೆಜ್ಜೆಯು ಸದ್ಯದ ಬೇಡಿಕೆಯಾಗಿದೆ ಎಂದು ಹೇಳಿದರು. ಲಸಿಕೆಗಳನ್ನು ದ್ವೇಷಿಸುವುದು ಸೋಂಕಿಗೆ ಆಹ್ವಾನ ನೀಡಿದಂತೆ ಮತ್ತು ಲಸಿಕೆ ಹಾಕಿಸಿಕೊಳ್ಳದಿರುವುದು ಅಪಾಯಕಾರಿ ಎಂದು ಅವರು ಹೇಳಿದರು.


ಈ ಸಂಸರ್ಭದಲ್ಲಿ, ಕೇಂದ್ರ ಅಲ್ಪ ಸಂಖ್ಯಾತರ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಮಾತ್ರವಲ್ಲದೆ, ಮಹಾರಾಷ್ಟ್ರ ಸರಕಾರದ ಅಲ್ಪ ಸಂಖ್ಯಾತರ ವ್ಯವಹಾರಗಳ ಮಂತ್ರಿ ನವಾಬ್ ಮಲಿಕ್ ಮತ್ತು ಸಮಾಜವಾದಿ ಪಕ್ಷದ ಪ್ರಮುಖ ನಾಯಕ ಅಬು ಆಜ್‍ಮಿ ಕೂಡ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಇಬ್ಬರೂ ಮಂತ್ರಿಗಳು ನ್ಯೂಸ್ 18 ಉರ್ದುವಿನ ಉಪಕ್ರಮ ಶ್ಲಾಘಿಸಿದರು. ಅಸಮರ್ಪಕ ಲಸಿಕೆ ಪೂರೈಕೆಗಾಗಿ ಅವರಿಬ್ಬರು ಕೇಂದ್ರ ಸರಕಾರದ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು. ಯಾವಾಗ ಲಸಿಕೆ ಲಭ್ಯವಿರುತ್ತದೋ, ಜನರು ಖಂಡಿತಾ ಹಾಕಿಸಿಕೊಳ್ಳಬೇಕು. ಏಕೆಂದರೆ ಕೊರೋನಾ ವೈರಸನ್ನು ಸೋಲಿಸಲು ಇದೊಂದೇ ದಾರಿ ಎಂದು ಹೇಳಿದರು.


ಇದನ್ನೂ ಓದಿ: Corona 3rd Wave : ಬೆಂಗಳೂರಿನಲ್ಲಿ ಕೋವಿಡ್ ಮೂರನೇ ಅಲೆ ಯಾವಾಗ? ಪಕ್ಕಾ ಟೈಮ್ ಹೇಳಿದೆ ತಜ್ಞರ ಸಮಿತಿ!

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಖ್ಯಾತ ವೈದ್ಯ ಡಾ.ಪದ್ಮಶ್ರಿ ಮೊಹಸಿನ್ ವಲಿ ಮತ್ತು ಡಾ. ಸ್ವಾತಿ ಮಹೇಶ್ವರಿ, ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಜನರಲ್ಲಿ ಮನವಿ ಮಾಡಿಕೊಂಡರು. ಗಾಯಕ ಮೊಹಮ್ಮದ್ ವಕೀಲ್ ಕುಟುಂಬ ಸಮೇತರಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ಅಭಿಯಾನ ಲಕ್ಷಾಂತರ ಜನರ ಜೀವವನ್ನು ಉಳಿಸಲಿದೆ ಮತ್ತು ಅದೇ ಕಾರಣಕ್ಕಾಗಿ ನನ್ನೆಲ್ಲಾ ವೈಯಕ್ತಿಕ ನೋವುಗಳನ್ನು ಮರೆತು ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದೇನೆ ಎಂದು ವಕೀಲ್ ಹೇಳಿದರು. ಜನರಲ್ಲಿ ಜಾಗೃತಿ ಮೂಡಿಸಲು, ಈ ಸಂದರ್ಭದಲ್ಲಿ ಕೊರೋನಾಗೆ ಸಂಬಂಧಿಸಿದ ತನ್ನ ಹಾಡೊಂದನ್ನು ಅವರು ಹಾಡಿದರು. ಇಂದೋರಿನ ಖ್ಯಾತ ಮಾಳ್ವ ಘರಾಣೆಯ ನಾಸಿರ್ ಖಾನ್ ಕೂಡ ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದರು ಮತ್ತು ಲಸಿಕೆಯ ಪ್ರಾಮುಖ್ಯತೆಯನ್ನು ತಿಳಿಸುವ ಉದ್ದೇಶದಿಂದ ಅವರು, ಸತ್ಲುಜ್ ರಾಹತ್‍ನ ದ್ವಿಪದಿಗಳನ್ನು ವಾಚಿಸಿದರು.


ಜನರಲ್ಲಿ ಲಸಿಕೆಯ ಕುರಿತು ಇರುವ ತಪ್ಪು ಕಲ್ಪನೆಗಳನ್ನು ತೊಡೆದು ಹಾಕುವುದು ಮತ್ತು ಮುಖ್ಯತೆಯ ಬಗ್ಗೆ ಅರಿವು ಮೂಡಿಸುವುದು ನ್ಯೂಸ್ 18 ಉರ್ದುವಿನ ಗುರಿಯಾಗಿದೆ. ಕೆಲವು ಗಾಳಿ ಮಾತುಗಳ ಪ್ರಚಾರದಿಂದಾಗಿ ಜನರು ಲಸಿಕೆಗಳಿಂದ ದೂರ ಉಳಿಯುತ್ತಿದ್ದಾರೆ ಎಂಬುವುದು ನೆಟ್‍ವರ್ಕ್‍ನ ಅಭಿಪ್ರಾಯವಾಗಿದೆ. ಎಲ್ಲಾ ವರ್ಗಗಳ ಪ್ರಮುಖ ಜನರು ಈ ಅಭಿಯಾನದೊಂದಿಗೆ ಸಂಬಂಧ ಹೊಂದಿದ್ದಾರೆ. ಜೀವನ ಬಹಳ ಅಮೂಲ್ಯ , ಹಾಗಾಗಿ ಎಲ್ಲಾ ಧರ್ಮಗಳ ಧಾರ್ಮಿಕ ವಿದ್ವಾಂಸರು ಮತ್ತು ಧಾರ್ಮಿಕ ಮುಖಂಡರ ಆಶೀರ್ವಾದವನ್ನು ಈ ಅಭಿಯಾನ ಹೊಂದಿದೆ.


ಇದು ನ್ಯೂಸ್ 18 ಉರ್ದುವಿನ ಒಂದು ತಿಂಗಳ ಅವಧಿಯ ಅಭಿಯಾನವಾಗಿದೆ. ನ್ಯೂಸ್ 18 ಉರ್ದು ವೀಕ್ಷಕರಿಗೆ ಲಸಿಕೆಯ ಪ್ರಾಮುಖ್ಯತೆಯನ್ನು ಸಂಪೂರ್ಣವಾಗಿ ಅರ್ಥ ಮಾಡಿಸಲು ಪ್ರಯತ್ನಿಸುತ್ತದೆ.

Published by:Soumya KN
First published: