ಕೋವಿಡ್ 19 ಹರಡುವಿಕೆಯನ್ನು ತಪ್ಪಿಸಲು ಇರುವ ಏಕೈಕ ಮಾರ್ಗ ಆ ಸರಪಳಿಯನ್ನು ತುಂಡರಿಸುವುದು. ಇದೇ ಕಾರಣಕ್ಕೆ ಕರ್ಫ್ಯೂ, ಲಾಕ್ ಡೌನ್ ಅಂತಹ ಕಠಿಣ ಕ್ರಮಕ್ಕೆ ಪ್ರಪಂಚದ ನಾನಾ ದೇಶಗಳು ಮುಂದಾದವು. ಕಳೆದ ಒಂದೂವರೆ ವರ್ಷದಿಂದ ಪ್ರಪಂಚ ಬಹುತೇಕ ರಾಷ್ಟ್ರಗಳು ಇಂತಹ ಲಾಕ್ ಡೌನ್ ನಿಯಮ ಜಾರಿ ತರುವ ಮೂಲಕ ಸೋಂಕು ನಿಯಂತ್ರಣಕ್ಕೆ ಮುಂದಾದವು. ಈಗ ಸೋಂಕಿನ ರೂಪಾಂತಾರ ತಳಿಗಳು ಆತಂಕ ಮೂಡಿಸಿದ್ದು, ಈಗಲೂ ಅಂತಹದ್ದೇ ನಿಯಮಕ್ಕೆ ಅನೇಕ ರಾಷ್ಟ್ರಗಳು ಮುಂದಾಗಿವೆ. ಅದರಲ್ಲೂ ನ್ಯೂಜಿಲೆಂಡ್ನಲ್ಲಿ ಒಂದೇ ಒಂದು ಡೆಲ್ಟಾ ರೂಪಾಂತರ ಪ್ರಕರಣ ಪತ್ತೆಯಾಗಿದ್ದು, ಸಾಕಷ್ಟು ಆತಂಕ ಮೂಡಿಸಿದೆ. ಈ ಹಿನ್ನಲೆ ಇಡೀ ದೇಶಾದ್ಯಂತ ಲಾಕ್ಡೌನ್ ಘೋಷಣೆ ಮಾಡಿ ಪ್ರಧಾನ ಮಂತ್ರಿ ಜಸಿಂಡಾ ಅರ್ಡೆರ್ನ್ ಆದೇಶ ನೀಡಿದ್ದಾರೆ.
ಈ ಕುರಿತು ಇಂದು ಅಂದರೆ ಮಂಗಳವಾರ ಸುದ್ದಿಗೋಷ್ಠಿ ನಡೆಸಿರುವ ಅವರು, ಅಧಿಕಾರಿಗಳು ಹೇಳುವಂತೆ ಇದು ಸೋಂಕಿನ ಡೆಲ್ಟಾ ರೂಪಾಂತರವಾಗಿದೆ. ಆಕ್ಲೆಂಡ್ನ 58 ವರ್ಷದ ವ್ಯಕ್ತಿಯಲ್ಲಿ ಈ ಸೋಂಕು ಪತ್ತೆಯಾಗಿದೆ. ಲಸಿಕೆ ಪಡೆಯದ ಈತ ದೇಶದ ಉದ್ದ ಅಗಲಕ್ಕೂ ಪ್ರಯಾಣಿಸಿದ್ದಾನೆ ಎಂದು ಆರೋಗ್ಯ ನಿರ್ದೇಶಕ ಆಶ್ಲೇ ಬ್ಲೂಮ್ಫೀಲ್ಡ್ ತಿಳಿಸಿದ್ದಾರೆ.
ಈ ಹಿನ್ನಲೆ ಮುಂದಿನ ಮೂರು ದಿನಗಳ ಕಾಲ ನ್ಯೂಜಿಲೆಂಡ್ನಲ್ಲಿ ಕಟ್ಟು ನಿಟ್ಟಿನ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ನ್ಯೂಜಿಲೆಂಡ್ ಸ್ಥಳೀಯ ಕಾಲಮಾನದಂತೆ ರಾತ್ರಿ 11. 59ರಿಂದ ಲಾಕ್ಡೌನ್ ಜಾರಿಯಾಗಲಿದೆ. ಈ ನಾಲ್ಕನೇ ಹಂತದ ಲಾಕ್ಡೌನ್ ವೇಳೆ ದೇಶದ ಪ್ರತಿಯೊಬ್ಬರು ಮನೆಯಲ್ಲೇ ಇರಬೇಕು. ಅಗತ್ಯ ವಸ್ತುಗಳ ಸೇವೆ ಮತ್ತು ಮೆಡಿಕಲ್, ಸೂಪರ್ ಮಾರ್ಕೆಟ್ ಹೊರತು ಪಡಿಸಿ ಎಲ್ಲಾ ವ್ಯಾಪಾರ, ಉದ್ಯಮಗಳನ್ನು ಮುಚ್ಚಬೇಕು ಎಂದು ತಿಳಿಸಲಾಗಿದೆ.
ಇದನ್ನು ಓದಿ: ಅಪ್ರಾಪ್ತ ಬಾಲಕಿ ಮನವಿ ಪುರಸ್ಕರಿಸಿದ ಕೇರಳ ಹೈ ಕೋರ್ಟ್; ತಂದೆಯೊಂದಿಗೆ ಅಯ್ಯಪ್ಪನ ದರ್ಶನಕ್ಕೆ ಅನುಮತಿ
ಡೆಲ್ಟಾ ರೂಪಾಂತರ ಹೊಂದಿರುವ ವಿಶ್ವದ ಕೊನೆಯ ದೇಶಗಳಲ್ಲಿ ನಾವು ಒಂದಾಗಿದ್ದೇವೆ. ಡೆಲ್ಟಾ ಯಾವುದೇ ರೀತಿಯಲ್ಲೂ ಪರಿಸ್ಥಿತಿ ಬದಲಾವಣೆ ಮಾಡಬಹುದು . ಈ ಹಿನ್ನಲೆ ನಾವು ಮತ್ತಷ್ಟು ಕಠಿಣ ಕ್ರಮಕ್ಕೆ ಮುಂದಾಗಿ, ಸೋಂಕು ತಡೆಯಬೇಕಿದೆ. ಇದನ್ನು ತಡೆಯಲು ವಿಫಲವಾದರೆ ಈಗಾಗಲೇ ಏನಾಗಿದೆ ಎಂಬುದನ್ನು ನಾವು ನೋಡಿದ್ದೇವೆ. ಈ ಹಿನ್ನಲೆ ಈ ಕ್ರಮ ಅವಶ್ಯವಾಗಿದೆ ಎಂದಿದ್ದಾರೆ.
ನ್ಯೂಜಿಲೆಂಡ್ನಲ್ಲಿ ಲಸಿಕೆ ಪ್ರಕ್ರಿಯೆ ಕೂಡ ನಿಧಾನವಾಗಿ ನಡೆಯುತ್ತಿದ್ದು, ದೇಶದ ಶೇ 20 ರಷ್ಟು ಜನರು ಮಾತ್ರ ಸಂಪೂರ್ಣವಾಗಿ ಲಸಿಕೆ ಪಡೆದಿದ್ದಾರೆ. ಕಳೆದ ತಿಂಗಳ ಆರಂಭದಲ್ಲಿ ಕಡಿಮೆ ಸೋಂಕು ಪ್ರಕರಣ ಹೊಂದಿರುವ ದೇಶದಲ್ಲಿನ ಸಂಪೂರ್ಣ ಲಸಿಕೆ ಪಡೆದವರಿಗೆ ನ್ಯೂಜಿಲೆಂಡ್ ಪ್ರವೇಶಕ್ಕೆ ಅನುಮತಿ ನೀಡಲಾಗಿತ್ತು.
ಕಳೆದ ವರ್ಷ ಕೂಡ ಅನೇಕ ಸರಣಿ ಲಾಕ್ಡೌನ್ ಘೋಷಣೆ ಮಾಡುವ ಮೂಲಕ ನ್ಯೂಜಿಲೆಂಡ್ ಸೋಂಕಿನ ವಿರುದ್ಧ ಹೋರಾಡಿತ್ತು. ಕಳೆದ ವರ್ಷ ಸೋಂಕು ತಡೆಯುವಲ್ಲಿ ನ್ಯೂಜಿಲೆಂಡ್ ತೆಗೆದುಕೊಂಡ ಕ್ರಮಕ್ಕೆ ಜಗತ್ತಿನಾದ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು. ಗಡಿ ಪ್ರದೇಶಗಳನ್ನು ಸಂಪೂರ್ಣ ಬಂದ್ ಮಾಡಿ ಪ್ರಯಾಣಿಕರನ್ನು ಕ್ವಾರಂಟೈನ್ಗೆ ಒಳಪಡಿಸುವ ಮೂಲಕ ಸೋಂಕು ತಡೆಗೆ ಬಿಗಿ ಕ್ರಮ ನಡೆಸಲಾಗಿತ್ತು.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ