• Home
 • »
 • News
 • »
 • coronavirus-latest-news
 • »
 • Variants Delta: ಬೆಂಗಳೂರಿನಲ್ಲಿ ಹೊಸ ಡೆಲ್ಟಾ ವೈರಸ್ ವಂಶವಾಹಿಯ ತಳಿಗಳು ಪತ್ತೆ; 3ನೇ ಅಲೆಗೆ ಕಾರಣವಾಗಲಿದೆಯಾ ಕಪ್ಪಾ ತಳಿ

Variants Delta: ಬೆಂಗಳೂರಿನಲ್ಲಿ ಹೊಸ ಡೆಲ್ಟಾ ವೈರಸ್ ವಂಶವಾಹಿಯ ತಳಿಗಳು ಪತ್ತೆ; 3ನೇ ಅಲೆಗೆ ಕಾರಣವಾಗಲಿದೆಯಾ ಕಪ್ಪಾ ತಳಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೆಂಗಳೂರಿನಲ್ಲಿ ಡೆಲ್ಟಾ ವೈರಸ್ ನ ವಂಶವಾಹಿಯ ತಳಿಗಳು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಆರೋಗ್ಯ ಇಲಾಖೆ ಕೂಡಲೇ ಅಗತ್ಯ ತುರ್ತು ಕ್ರಮಗಳನ್ನು ಕೈಗೊಂಡು ಸಾಧ್ಯವಾದಷ್ಟು ಹೊಸ ತಳಿಗಳನ್ನು ನಿಯಂತ್ರಿಸಬೇಕಿದೆ. ಹಾಗೂ ಜನರು ಸಹ ಹೊಸ ಹೊಸ ಸಾಂಕ್ರಾಮಿಕ ತಳಿಗಳ ಬಗ್ಗೆ ಎಚ್ಚರ ವಹಿಸಬೇಕಿದೆ.

ಮುಂದೆ ಓದಿ ...
 • Share this:

  ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ (Corona Virus) ದಿನದಿಂದ ದಿನಕ್ಕೆ ನಿಯಂತ್ರಣಕ್ಕೆ ಬರುತ್ತಿದೆ ಎಂದು ನಿಟ್ಟುಸಿರುವ ಬಿಡುವ ನಡುವೆಯೇ ಮತ್ತೊಂದು ಆಘಾತಕಾರಿ ಸುದ್ದಿ ಎದುರಾಗಿದೆ. ತಜ್ಞರು ಮೂರನೇ ಅಲೆ ಅಕ್ಟೋಬರ್​ನಲ್ಲಿ ಬರಬಹುದು ಎಂದು ನೀಡಿರುವ ಎಚ್ಚರಿಕೆಯ ಗಡುವು ಸಮೀಪವಾಗುತ್ತಿದ್ದಂತೆ ಹೊಸ ಡೆಲ್ಟಾ ವೈರಸ್ ವಂಶವಾಯಿ ತಳಿಗಳು (Variants Delta) ಬೆಂಗಳೂರಿನಲ್ಲಿ ಪತ್ತೆಯಾಗಿದೆ. ಈ ಹೊಸ ತಳಿ ಮೂರನೇ ಅಲೆ ಕೊರೋನಾ ವೈರಸ್ ಉಲ್ಬಣಕ್ಕೆ ಕಾರಣವಾಗಲಿದೆಯಾ ಎಂಬ ಅನುಮಾನ ಕಾಡಲು ಶುರುವಾಗಿದೆ. ಬೆಂಗಳೂರಿನಲ್ಲಿ ಇಬ್ಬರಲ್ಲಿ ಕಪ್ಪಾ (Kappa Variant) ಎಂಬ ಹೊಸ ತಳಿ ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.


  ರಾಜಧಾನಿ ಬೆಂಗಳೂರಿನಲ್ಲಿ (Capital Bengaluru) ಡೆಲ್ಟಾ ವೈರಸ್ ನ ವಂಶವಾಹಿಯ ತಳಿಗಳು ಪತ್ತೆಯಾಗಿವೆ. ಜಿನೋಮಿಕ್ ಸೀಕ್ವೆನ್ಸಿಂಗ್ ವೇಳೆ ಹೊಸ ತಳಿಗಳು ಪತ್ತೆಯಾಗಿವೆ. ಬೆಂಗಳೂರಿನ ಇಬ್ಬರಲ್ಲಿ ಹೊಸ ಡೆಲ್ಟಾದ ವಂಶವಾಹಿ ಕಪ್ಪಾ (Kappa Variant) ತಳಿ ಕಂಡು ಬಂದಿದೆ. ಒಟ್ಟು AY.3, AY.4, AY.6 ಎಂಬ ಮೂರು ಹೊಸ ಡೆಲ್ಟಾ ವಂಶೀಯ ತಳಿಗಳು ಪತ್ತೆ ಆಗಿವೆ. ಸುಮಾರು 400 ಸ್ಯಾಂಪಲ್‌ಗಳನ್ನು ಜಿನೋಮಿಕ್ ಸೀಕ್ವೆನ್ಸಿಂಗ್ ಮಾಡಿದ ವೇಳೆ ಮೂರು ಹೊಸ ತಳಿಗಳು ಪತ್ತೆಯಾಗಿವೆ. ಈ ಹೊಸ ತಳಿಗಳು ಕೊರೋನಾ ಮೂರನೇ ಅಲೆಗೆ ಕಾರಣವಾಗಬಹುದಾ ಎಂಬ ಭಯ ಕಾಡಲು ಆರಂಭವಾಗಿದೆ. AY.6 ರೂಪಾಂತರಿ 38 ಮಂದಿಯಲ್ಲಿ ಕಾಣಿಸಿಕೊಂಡಿದೆ. ತಜ್ಞ ವೈದ್ಯರ ಎಚ್ಚರಿಕೆಯ ಮಧ್ಯೆಯೇ ಡೆಲ್ಟಾ ವಂಶವಾಹಿ ಹೊಸ ತಳಿ ಪತ್ತೆಯಾಗಿರುವುದು ಟೆನ್ಶನ್ ಹೆಚ್ಚಿಸಿದೆ.


  ಯಾವ್ಯಾವ ತಳಿಗಳು ಎಷ್ಟು ಮಂದಿಯಲ್ಲಿ ಪತ್ತೆ?


  • B.1.617.1 ಕಪ್ಪಾ - ಇಬ್ಬರಲ್ಲಿ ಪತ್ತೆ

  • AY.3 - 3 ಜನರಲ್ಲಿ ಪತ್ತೆ

  • AY.4 - 4 ಜನರಲ್ಲಿ ಪತ್ತೆ

  • AY.6 - 38 ಜನರಲ್ಲಿ ಪತ್ತೆ

  • ಇತರ ತಳಿಗಳು - 16 ಜನರಲ್ಲಿ ಪತ್ತೆ‌‌


  ಮಾರಕ ಸಾಂಕ್ರಾಮಿಕ ಕೊರೋನಾ ವೈರಸ್ ಈಗಾಗಲೇ ದೇಶದಲ್ಲಿ ಸಾಕಷ್ಟು ಅನಾಹುತ ಉಂಟು ಮಾಡಿದೆ. ಕಳೆದ ಒಂದೂವರೆ ವರ್ಷದಿಂದ ಈ ವೈರಸ್​ನಿಂದಾಗಿ ಸಾವಿರಾರು ಜನರು ಮೃತಪಟ್ಟಿದ್ದರೆ, ಲಕ್ಷಾಂತರ ಜನರು ಉದ್ಯೋಗ, ವ್ಯಾಪಾರ ವಹಿವಾಟು ಕಳೆದುಕೊಂಡು ಆರ್ಥಿಕ ಸಂದಿಗ್ಧತೆಗೆ ಸಿಲುಕಿದ್ದಾರೆ. ಈಗಾಗಲೇ ಎರಡು ಅಲೆಗಳು ಜನರನ್ನು ಹೈರಾಣು ಮಾಡಿವೆ. ದೇಶದ ಆರ್ಥಿಕ ಸ್ಥಿತಿಯನ್ನು ಅಲ್ಲೋಲಕಲ್ಲೋಲ ಮಾಡಿದೆ. ಇದೀಗ ಮತ್ತೆ ಮೂರನೇ ಅಲೆ ತನ್ನ ಸ್ವರೂಪವನ್ನು ತೋರಿದರೆ ಅದರಿಂದ ದೇಶ ಮತ್ತು ಜನರು ಎಚ್ಚೆತ್ತುಕೊಳ್ಳುವುದು ಭಾರೀ ಕಷ್ಟವಾಗಲಿದೆ. ಕೇರಳದಲ್ಲಿ ನಿಫಾ ವೈರಸ್​ಗೆ ಬಾಲಕನೊಬ್ಬ ಬಲಿಯಾಗಿದ್ದು, ಮತ್ತು ಹಲವು ಸಂಪರ್ಕಿತರಲ್ಲಿ ನಿಫಾ ರೋಗ ಲಕ್ಷಣಗಳು ಕಂಡು ಬಂದಿರುವುದು ಮತ್ತು ಇದೀಗ ಬೆಂಗಳೂರಿನಲ್ಲಿ ಡೆಲ್ಟಾ ವೈರಸ್ ನ ವಂಶವಾಹಿಯ ತಳಿಗಳು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಆರೋಗ್ಯ ಇಲಾಖೆ ಕೂಡಲೇ ಅಗತ್ಯ ತುರ್ತು ಕ್ರಮಗಳನ್ನು ಕೈಗೊಂಡು ಸಾಧ್ಯವಾದಷ್ಟು ಹೊಸ ತಳಿಗಳನ್ನು ನಿಯಂತ್ರಿಸಬೇಕಿದೆ. ಹಾಗೂ ಜನರು ಸಹ ಹೊಸ ಹೊಸ ಸಾಂಕ್ರಾಮಿಕ ತಳಿಗಳ ಬಗ್ಗೆ ಎಚ್ಚರ ವಹಿಸಬೇಕಿದೆ. ಸರ್ಕಾರ ತೆಗೆದುಕೊಳ್ಳುವ ಕ್ರಮಗಳನ್ನು ಎಲ್ಲರೂ ತಪ್ಪದೆ ಪಾಲಿಸಬೇಕಿದೆ.


  ಇದನ್ನು ಓದಿ: Explained: ಕಲಬುರಗಿ ಪಾಲಿಕೆಯಲ್ಲಿ ಜೆಡಿಎಸ್ ಯಾರ ಜತೆ ಮೈತ್ರಿ ಮಾಡಿಕೊಳ್ಳಲಿದೆ; ಕಾಂಗ್ರೆಸ್ ಲೆಕ್ಕಾಚಾರವೇನು?


  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.

  Published by:HR Ramesh
  First published: