ಹೊಸ ಕೈದಿಗಳ ಆಗಮನದಿಂದ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಆತಂಕ; ಮಹಿಳಾ ಜೈಲಿನಲ್ಲೇ ಹೊಸಬರ ಕ್ವಾರಂಟೈನ್

ಕಳೆದ ಒಂದು ತಿಂಗಳಿಂದ 122 ಹೊಸ ಕೈದಿಗಳ ಬಂದಿದ್ದಾರೆ. ಸುರಕ್ಷತೆ ದೃಷ್ಠಿಯಿಂದ ಮುಂಜಾಗ್ರತೆ ವಹಿಸಿ ಕೈದಿಗಳನ್ನ ಪರಪ್ಪನ ಅಗ್ರಹಾರ ಕಾರಾಗೃಹ ಬಿಟ್ಟು ನೂತನ‌ ಮಹಿಳಾ‌ ಕಾರಾಗೃಹಕ್ಕೆ ಶಿಪ್ಟ್ ಮಾಡಲಾಗಿದೆ.

news18-kannada
Updated:May 23, 2020, 12:10 PM IST
ಹೊಸ ಕೈದಿಗಳ ಆಗಮನದಿಂದ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಆತಂಕ; ಮಹಿಳಾ ಜೈಲಿನಲ್ಲೇ ಹೊಸಬರ ಕ್ವಾರಂಟೈನ್
ಪರಪ್ಪನ ಅಗ್ರಹಾರ ಜೈಲು
  • Share this:
ಬೆಂಗಳೂರು(ಮೇ 23): ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಮತ್ತೆ ಹೊಸ ತಲೆನೋವು ಶುರುವಾಗಿದೆ. ಒಂದು ತಿಂಗಳಿಂದ ಜೈಲಿಗೆ ಬರುತ್ತಿರುವ ಕೈದಿಗಳಿಗೆ ಕೋವಿಡ್19 ತಪಾಸಣೆ ಮಾಡುತ್ತಿದ್ದರೂ, ಜೈಲಧಿಕಾರಿಗಳಿಗೆ ಭಯ ಮಾತ್ರ ಹೋಗಿಲ್ಲ. ಬೇರೆಡೆ ನೆಗೆಟಿವ್ ಬಂದ ಹದಿನಾಲ್ಕು ದಿನಗಳಲ್ಲಿ ಪಾಸಿಟಿವ್ ಬರುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಕೈದಿಗಳಿಗೆ ಕ್ವಾರಂಟೈನ್ ಮಾಡಲಾಗಿದೆ.

ಕಳೆದ ಒಂದು ತಿಂಗಳಿಂದ 122 ಹೊಸ ಕೈದಿಗಳ ಬಂದಿದ್ದಾರೆ. ಸುರಕ್ಷತೆ ದೃಷ್ಠಿಯಿಂದ ಮುಂಜಾಗ್ರತೆ ವಹಿಸಿ ಕೈದಿಗಳನ್ನ ಪರಪ್ಪನ ಅಗ್ರಹಾರ ಕಾರಾಗೃಹ ಬಿಟ್ಟು ನೂತನ‌ ಮಹಿಳಾ‌ ಕಾರಾಗೃಹಕ್ಕೆ ಶಿಪ್ಟ್ ಮಾಡಲಾಗಿದೆ. ಐನೂರು ಮಂದಿ ಸಾಮರ್ಥ್ಯವುಳ್ಳ ಮಹಿಳಾ ಕಾರಾಗೃಹವಾಗಿದ್ದು, ಒಂದು ಸೆಲ್​ಗೆ ಇಬ್ಬರು ಕೈದಿಗಳಂತೆ ಕ್ವಾರಂಟೈನ್ ಮಾಡಲಾಗಿದೆ. ಜೊತೆಗೆ ಪ್ರತಿಯೊಬ್ಬರಿಗೂ ಸೆಲ್​ನಲ್ಲಿ ಅಂತರ ಕಾಯ್ದುಕೊಳ್ಳಲು ಸೂಚಿಸಲಾಗಿದೆ. ಪ್ರತಿ ಸೆಲ್​ನಲ್ಲೂ ಸ್ಯಾನಿಟೈಸರ್ ಉಪಯೋಗ ಕಡ್ಡಾಯ ಮಾಡಲಾಗಿದೆ. ಕೈದಿಗಳ ಭದ್ರತೆಗಿರೋ ಸಿಬ್ಬಂದಿಗೆ ಸುರಕ್ಷತೆಯ ಕವಚ ನೀಡಲಾಗಿದೆ.

ಇದನ್ನೂ ಓದಿ: ರೋಗಲಕ್ಷಣ ಇಲ್ಲದ ಸೋಂಕಿತರಿಗೆ ಆಸ್ಪತ್ರೆವಾಸದ ಅವಧಿ ಇಳಿಕೆ? ಹೊರರಾಜ್ಯಗಳಿಂದ ಬಂದವರಿಗೆ ಮನೆಯಲ್ಲೇ ಕ್ವಾರಂಟೈನ್

ಇದೇ ಸಮಯದಲ್ಲಿ ಕೈದಿಗಳೇ ಸೇರಿ ಒಂದು ಲಕ್ಷ ಮಾಸ್ಕ್ ತಯಾರಿಸಿದ್ದು, ಇದಕ್ಕೆ ಅತಿ ಹೆಚ್ಚು ಬೇಡಿಕೆ ಸಿಗುತ್ತಿದೆ. ರಾಜ್ಯದ ಎಲ್ಲಾ ಕಾರಾಗೃಹದಲ್ಲಿ ಪ್ರತಿ ಕೈದಿಗೂ ವಾರಕ್ಕೆ ಎರಡೆರಡು ಮಾಸ್ಕ್ ನೀಡಲಾಗ್ತಿದೆ. ಈ ನಡುವೆ ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ಹಾಗೂ ಅಗ್ನಿಶಾಮಕ ದಳ, ಪೊಲೀಸ್ ಇಲಾಖೆಯಿಂದ ಮಾಸ್ಕ್​ಗಳಿಗೆ ಅತಿ ಹೆಚ್ಚು ಬೇಡಿಕೆ ಬರುತ್ತಿದೆ ಎಂದು ಜೈಲಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಕೈದಿಗಳ ಭೇಟಿಗೆ ಯಾರಿಗೂ ಅವಕಾಶ ಕೊಡದೆ ಮುಂಜಾಗ್ರತೆ ವಹಿಸಲಾಗಿದೆ.

ವರದಿ: ಗಂಗಾಧರ ವಾಗಟ

First published: May 23, 2020, 12:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading