Omicron ಹೊಸ ರೂಪಾಂತರ BA.2 ಅಂದುಕೊಂಡದ್ದಕ್ಕಿಂತ ವೇಗವಾಗಿ ಹರಡುತ್ತಿದೆ, ವಿಜ್ಞಾನಿಗಳ ಎಚ್ಚರಿಕೆ!

ಸದ್ಯದ ಮದಟ್ಟಿಗೆ ಹೇಳುವುದಾದಲ್ಲಿ ಉಪವಿಧದ BA.2 ಸೋಂಕುಗಳು ಇದುವರೆಗೆ ಉಪವಿಭಾಗ BA.1 ಸೋಂಕುಗಳಿಗಿಂತ ಹೆಚ್ಚು ತೀವ್ರವಾಗಿಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಡೆನ್ಮಾರ್ಕ್, ಯುಕೆ, ಭಾರತ, ಸ್ವೀಡನ್ ಸೇರಿದಂತೆ ಇತರ ಹಲವಾರು ದೇಶಗಳು (Countries) ಓಮೈಕ್ರಾನ್ (Omicron) ಕೊರೊನಾವೈರಸ್‌ನ ಉಪ-ರೂಪಾಂತರವನ್ನು ಏಕಾಏಕಿ ಅನುಭವಿಸುತ್ತಿವೆ. ಈ ಜೀನೋಮ್ ರೂಪಾಂತರಗಳ ನಿಖರವಾದ ಪರಿಣಾಮವು ಇನ್ನೂ ಸ್ಪಷ್ಟವಾಗಿಲ್ಲ. ಓಮೈಕ್ರಾನ್ ನ ಮೊದಲ ರೂಪಾಂತರವಾದ , BA.1, ಹಿಂದಿನ ಕೊರೊನಾವೈರಸ್ ರೂಪಾಂತರಗಳಿಗಿಂತ (Coronavirus Mutations) ಹೆಚ್ಚು ಸಾಂಕ್ರಾಮಿಕವಾಗಿದೆ ಎಂದು ಈಗಾಗಲೇ ತಿಳಿದಿದೆ. ಅಂತಹುದರಲ್ಲಿ ಈಗ , ಎರಡನೇ ಉಪವಿಭಾಗ, BA.2, ಹೊಸದಾಗಿ ಹೊರಹೊಮ್ಮಿದೆ. ಯುಕೆನಲ್ಲಿ ಜನವರಿಯ ಮೊದಲ 10 ದಿನಗಳಲ್ಲಿ, ಕನಿಷ್ಠ 400 ಜನರು ಈ ಸೋಂಕಿಗೆ (Infection) ಒಳಗಾಗಿದ್ದು ಪ್ರಪಂಚದಾದ್ಯಂತ 40 ಕ್ಕೂ ಹೆಚ್ಚು ದೇಶಗಳಲ್ಲಿ ಈ ಸೋಂಕು ಪತ್ತೆಯಾಗಿದೆ.

ಅತಿ ಹೆಚ್ಚಿನ ಪ್ರಕರಣಗಳು ಡೆನ್ಮಾರ್ಕ್ ನಲ್ಲಿ ಪತ್ತೆಯಾಗಿವೆ:

ಆಕ್ಸ್‌ಫರ್ಡ್, ಎಡಿನ್‌ಬರ್ಗ್ ಮತ್ತು ಕೇಂಬ್ರಿಡ್ಜ್‌ನ ವಿಜ್ಞಾನಿಗಳು ನಿಯಮಿತವಾಗಿ ನವೀಕರಿಸಿದ ಕೊರೋನವೈರಸ್‌ಗಳ ಪಂಗೊ ಡೈರೆಕ್ಟರಿಯು, ಇದುವರೆಗೆ ಒಟ್ಟು ಪ್ರಕರಣಗಳ 79% ಪ್ರಕರಣಗಳನ್ನು ಡೆನ್ಮಾರ್ಕ್ ಹೊಂದಿದ್ದು ಅದನ್ನು ಹೆಚ್ಚು ಬಾಧಿತ ದೇಶವೆಂದು ತೋರಿಸುತ್ತದೆ. ನಂತರ ಸರದಿಯಲ್ಲಿ ಗ್ರೇಟ್ ಬ್ರಿಟನ್ (6%), ಭಾರತ (5%), ಸ್ವೀಡನ್ (2%) ಮತ್ತು ಸಿಂಗಾಪುರ್ (2%) ನಂತಹ ದೇಶಗಳಿವೆ . ಅದೇನೇ ಇದ್ದರೂ, ಈ ಉಪತಳಿಯನ್ನು ಪತ್ತೆ ಮಾಡುವುದು ಪ್ರತಿ ಆರೋಗ್ಯ ವ್ಯವಸ್ಥೆಯ ಪಿಸಿಆರ್ ಪರೀಕ್ಷೆಗಳನ್ನು ನಿರ್ವಹಿಸುವ ಸಾಮರ್ಥ್ಯದ ಮೇಲೆ ಅವಲಂಬಿತವಾಗಿದೆ.

ಓಮೈಕ್ರಾನ್ BA.2ನಿಂದ ಉಂಟಾಗುವ ಅಪಾಯವು ಇನ್ನೂ ಬೆಳಕಿಗೆ ಬಂದಿಲ್ಲ:

ಈ ಉಪ-ರೂಪಾಂತರವು ಮೂಲ ಓಮೈಕ್ರಾನ್ ರೂಪಾಂತರಕ್ಕಿಂತ ಹೆಚ್ಚು ಸಾಂಕ್ರಾಮಿಕವಾಗಿರುವ ಸಾಧ್ಯತೆಯಿದೆ. ಯುಕೆ ಹೆಲ್ತ್ ಸೆಕ್ಯುರಿಟಿ ಏಜೆನ್ಸಿ (UKHSA) ಯಿಂದ "ಕಣ್ಗಾವಲು ಅಡಿಯಲ್ಲಿ ರೂಪಾಂತರ" ಎಂದು BA.2 ವರ್ಗೀಕರಿಸಲ್ಪಟ್ಟಿದೆ . ವೈರಸ್‌ಗಳ ಸ್ವಭಾವವೇ ವಿಕಸನಗೊಳ್ಳುವುದು ಮತ್ತು ರೂಪಾಂತರಗೊಳ್ಳುವುದು,, ಆದ್ದರಿಂದ ಸಾಂಕ್ರಾಮಿಕ ರೋಗವು ಮುಂದುವರಿದಂತೆ ಹೊಸ ರೂಪಾಂತರಗಳು ಹೊರಹೊಮ್ಮುವುದನ್ನು ನಾವು ನಿರೀಕ್ಷಿಸಬೇಕಾಗುತ್ತದೆ.

ಇದನ್ನೂ ಓದಿ: Zinc ಇರೋ ಈ ಆಹಾರಗಳನ್ನು ತಿಂದ್ರೆ ಕೊರೊನಾ ನಿಮ್ಮ ಹತ್ತಿರಕ್ಕೂ ಬರಲ್ವಂತೆ, ಸೋಂಕಿತರಿಗೆ ವೈದ್ಯರು ಹೇಳೋದು ಇದನ್ನೇ!

ನಿರಂತರವಾಗಿ ನಡೆಯುತ್ತಿರುವ ಜೀನೋಮಿಕ್ ಕಣ್ಗಾವಲು ಮೂಲಕ ಅವುಗಳ ಮಹತ್ವವನ್ನು ಪತ್ತೆಹಚ್ಚಲು ಮತ್ತು ನಿರ್ಣಯಿಸಲು ನಮಗೆ ಸಾಧ್ಯವಾಗುತ್ತದೆ." ಎಂದು ಯುಕೆಎಚ್‌ಎಸ್‌ಎಯ ಇನ್ಸಿಡೆಂಟ್ ಡೈರೆಕ್ಟರ್ ಮೀರಾ ಚಂದ್ ತಿಳಿಸಿದರು. ಉಪ-ರೂಪಾಂತರ BA.2 ಗಾಗಿ ಈ ವಿಶ್ಲೇಷಣೆಯು ಇನ್ನೂ ಮುಂದುವರಿಯುತ್ತಿದೆ . BA.2 ಓಮೈಕ್ರಾನ್ BA.1 ಗಿಂತ ಹೆಚ್ಚು ತೀವ್ರವಾದ ಕಾಯಿಲೆಗಳನ್ನು ಉಂಟುಮಾಡುತ್ತದೆಯೇ? ಎಂದು ನಿರ್ಧರಿಸಲು ಇಲ್ಲಿಯವರೆಗೆ ನಮ್ಮಲ್ಲಿ ಸಾಕಷ್ಟು ಪುರಾವೆಗಳಿಲ್ಲ ಎಂದು ಚಂದ್ ಹೇಳಿಕೆ ನೀಡಿದರು .

ಹೊಸ ರೂಪಾಂತರಗಳ ಹೊರಹೊಮ್ಮುವಿಕೆಯೊಂದಿಗೆ,ವ್ಯಾಕ್ಸಿನೇಷನ್ ಅತ್ಯಗತ್ಯವಾಗಿರುತ್ತದೆ:

ಹೊಸ ತಳಿಯ ಹೊರಹೊಮ್ಮುವಿಕೆಯು ವ್ಯಾಕ್ಸಿನೇಷನ್‌ನ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯುತ್ತದೆ . "ನಿಮ್ಮ ಮತ್ತು ನಿಮ್ಮ ಪ್ರೀತಿಪಾತ್ರರ ಹೆಚ್ಚಿನ ರಕ್ಷಣೆಗಾಗಿ ಸಾಧ್ಯವಾದಷ್ಟು ಬೇಗ ಬೂಸ್ಟರ್ ತೆಗೆದುಕೊಳ್ಳಲು ಮರೆಯದಿರಿ." ಎಂದು ಯು.ಕೆ . ಆರೋಗ್ಯ ಕಾರ್ಯದರ್ಶಿ ಸಾಜಿದ್ ಜಾವಿದ್ ಹೇಳಿದರು.

ಫ್ರೆಂಚ್ ಸುದ್ದಿ ಸಂಸ್ಥೆ AFP ಗೆ ನೀಡಿದ ಹೇಳಿಕೆಯಲ್ಲಿ, ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಆಂಟೊಯಿನ್ ಫ್ಲಾಹಾಲ್ಟ್ "ಏಷ್ಯಾದಲ್ಲಿ ವ್ಯಾಪಕವಾಗಿ ಹರಡಿರುವ ಈ ಉಪ-ರೂಪಾಂತರವು ಡೆನ್ಮಾರ್ಕ್‌ನಲ್ಲಿ ಹಿಡಿತ ಸಾಧಿಸಿದ ವೇಗವು ನಮಗೆ ಆಶ್ಚರ್ಯವನ್ನುಂಟುಮಾಡಿದೆ." ಎಂದು ವಿವರಿಸಿದರು.

ಇದನ್ನೂ ಓದಿ: Corona Vaccine: 12-14 ವರ್ಷದೊಳಗಿನ ಮಕ್ಕಳಿಗೂ ಕೊರೋನಾ ಲಸಿಕೆ, ಯಾವಾಗಿಂದ ಹಂಚಿಕೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಸದ್ಯದ ಮದಟ್ಟಿಗೆ ಹೇಳುವುದಾದಲ್ಲಿ ಉಪವಿಧದ BA.2 ಸೋಂಕುಗಳು ಇದುವರೆಗೆ ಉಪವಿಭಾಗ BA.1 ಸೋಂಕುಗಳಿಗಿಂತ ಹೆಚ್ಚು ತೀವ್ರವಾಗಿಲ್ಲ. ಸೈಪ್ರಸ್‌ನ ಸಂಶೋಧಕರೊಬ್ಬರು ಹೊಸ ವೈರಸ್ ರೂಪಾಂತರವನ್ನು ವರದಿ ಮಾಡಿದ್ದು ಅದು ಎರಡೂ ವೈರಸ್‌ಗಳ ಮರುಸಂಯೋಜನೆಯಾಗಿರಬಹುದು ಎಂದು ಊಹಿಸಲಾಗಿದೆ. ಅದೇನೇ ಇದ್ದರೂ, ಡೆಲ್ಟಾಕ್ರಾನ್-ವೇರಿಯಂಟ್ ಅಸ್ತಿತ್ವದಲ್ಲಿವೆ ಎಂದು ವ್ಯಾಪಕವಾಗಿ ಅಂಗೀಕರಿಸಲಾಗಿಲ್ಲ. ಪ್ರಯೋಗಾಲಯದ ಕಳಪೆ ಗುಣಮಟ್ಟದ ಮಾದರಿಗಳಿಂದಲೂ ಫಲಿತಾಂಶವು ಪ್ರಭಾವಿತವಾಗಿರಬಹುದು ಎಂದು ತಜ್ಞರು ಅನುಮಾನ ವ್ಯಕ್ತ ಪಡಿಸಿದ್ದಾರೆ .
Published by:vanithasanjevani vanithasanjevani
First published: