• ಹೋಂ
 • »
 • ನ್ಯೂಸ್
 • »
 • Corona
 • »
 • ಮದುವೆ ಸಮಾರಂಭಗಳಿಗೆ ಮಾರ್ಗಸೂಚಿ ಸಿದ್ಧ; ಥರ್ಮಲ್ ಸ್ಕ್ರೀನಿಂಗ್, ಮಾಸ್ಕ್ ಸೇರಿ 17 ನಿಯಮ ಕಡ್ಡಾಯ

ಮದುವೆ ಸಮಾರಂಭಗಳಿಗೆ ಮಾರ್ಗಸೂಚಿ ಸಿದ್ಧ; ಥರ್ಮಲ್ ಸ್ಕ್ರೀನಿಂಗ್, ಮಾಸ್ಕ್ ಸೇರಿ 17 ನಿಯಮ ಕಡ್ಡಾಯ

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯಿಂದ 17 ಹೊಸ ಮಾರ್ಗಸೂಚಿ ನೀಡಿದೆ. ಅದರ ಅನ್ವಯ ಮದುವೆ / ಇತರೆ ಕಾರ್ಯಕ್ರಮಗಳನ್ನು ಜನರು ನಿರ್ವಹಿಸಬೇಕು. ಕೋವಿಡ್-19 ಸಾಂಕ್ರಾಮಿಕ ರೋಗ ತಡೆಯುವ ದೃಷ್ಟಿಯಿಂದ ಇದು ಬಹಳ ಮುಖ್ಯ. ಈ ಕೆಳಗಿನ ಸಲಹೆಯನ್ನು ಪಾಲನೆ ಮಾಡುವ ಮೂಲಕ ಜನರು ಸಹ ಸಹಕಾರ ಕೊಡಬೇಕಿದೆ.

ಮುಂದೆ ಓದಿ ...
 • Share this:

  ಬೆಂಗಳೂರು: ಕೊರೋನಾ ಪದ ಕೇಳಿದರೆ ಸಾಕು ಜನರು ಬೆಚ್ಚಿ ಬಿಳ್ತಾ ಇದ್ದಾರೆ. ಚೀನಾದಲ್ಲಿ ಕೊರೋನಾ ವೈರಸ್ ಶುರುವಾಗಿ ಹತ್ತಿರ 6 ತಿಂಗಳು ಕಳೆದಿದೆ. ನಂತರ ಜಗತ್ತಿನ ಬಹುತೇಕ ರಾಷ್ಟ್ರಗಳು ಕೊರೋನಾ ವೈರಸ್​ನಿಂದ ತೊಂದರೆಗೆ ಒಳಗಾಗಿವೆ. ಭಾರತದಲ್ಲೂ ಕೊರೋನಾ ಆರ್ಭಟ ಜೋರಾಗಿದ್ದು, ಇದರಿಂದ ಪಾರಾಗಲು ಸರ್ಕಾರ ಲಾಕ್​ಡೌನ್​ನಂತಹ ಕ್ರಮಕ್ಕೆ ಮುಂದಾಗಿದೆ.


  ಲಾಕ್​ಡೌನ್​ ಶುರುವಾದ ದಿನದಿಂದ ಜನರು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹಾಗೂ ಗುಂಪು ಗುಂಪಾಗಿ ಸೇರಲು ನಿಷೇಧ ವಿಧಿಸಲಾಗಿದೆ. ಆರಂಭದಲ್ಲಿ ಶುಭ ಸಮಾರಂಭಗಳನ್ನು ರದ್ದು ಮಾಡಲಾಗಿತ್ತು. ಆನಂತರ ಕೇವಲ ಶರತ್ತುಗಳೊಂದಿಗೆ ಸಮಾರಂಭಗಳಿಗೆ ಅವಕಾಶ ನೀಡಲಾಗಿತ್ತು. ಇದೀಗ ಮದುವೆ ಸೇರಿ ಇತರೆ ಸಮಾರಂಭ ನಡೆಸಲು ಸರ್ಕಾರ 17 ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.


  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯಿಂದ 17 ಹೊಸ ಮಾರ್ಗಸೂಚಿ ನೀಡಿದೆ. ಅದರ ಅನ್ವಯ ಮದುವೆ / ಇತರೆ ಕಾರ್ಯಕ್ರಮಗಳನ್ನು ಜನರು ನಿರ್ವಹಿಸಬೇಕು. ಕೋವಿಡ್-19 ಸಾಂಕ್ರಾಮಿಕ ರೋಗ ತಡೆಯುವ ದೃಷ್ಟಿಯಿಂದ ಇದು ಬಹಳ ಮುಖ್ಯ. ಈ ಕೆಳಗಿನ ಸಲಹೆಯನ್ನು ಪಾಲನೆ ಮಾಡುವ ಮೂಲಕ ಜನರು ಸಹ ಸಹಕಾರ ಕೊಡಬೇಕಿದೆ.


  ಇದನ್ನು ಓದಿ: ಕರ್ನಾಟಕದಲ್ಲಿಂದು ದಾಖಲೆಯ 69 ಕೊರೋನಾ ಕೇಸ್ ಪತ್ತೆ; ಸೋಂಕಿತರ ಸಂಖ್ಯೆ 1,056ಕ್ಕೆ ಏರಿಕೆ


  ಸರ್ಕಾರದ ಮಾರ್ಗಸೂಚಿಗಳು ಹೀಗಿವೆ...


  1. ಸಭೆ ಸಮಾರಂಭ ನಡೆಸಲು ಸ್ಥಳೀಯ ಮಟ್ಟದ ಅಧಿಕಾರಿಗಳ ಅನುಮತಿ ಕಡ್ಡಾಯ

  2. ಮದುವೆ ಸಮಾರಂಭಕ್ಕೆ 50 ಜನರಿಗಿಂತ ಹೆಚ್ಚು ಸಂಖ್ಯೆ ‌ಮೀರಬಾರದು

  3. ಉತ್ತಮ ವಾತಾವರಣದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಬೇಕು. ಹವಾನಿಯಂತ್ರಿತ ನಿಷೇಧ

  4. ಸಭೆ, ಸಮಾರಂಭಗಳಿಗೆ ಕಂಟೋನ್ಮೆಂಟ್ ಜೋನ್ ಪ್ರದೇಶದ ವ್ಯಕ್ತಿಗಳಿಗೆ ಪ್ರವೇಶ ನಿಷೇಧ

  5. 60 ವರ್ಷದ ಮೇಲ್ಪಟ್ಟ ಹಾಗೂ 10 ವರ್ಷದ ಒಳಗಿನ ಮಕ್ಕಳು ಸೇರಿದಂತೆ ಬಾಣಂತಿ ಮಹಿಳೆಯರಿಗೆ ಕಾರ್ಯಕ್ರಮಗಳಿಗೆ ನಿಷೇಧ

  6. ಸಭೆ, ಸಮಾರಂಭ ನಡೆಯುವ ಪ್ರದೇಶದ ಬಾಗಿಲಿನಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕು

  7. ಸ್ಥಳದಲ್ಲಿ ಪ್ರತಿಯೊಬ್ಬರಿಗೂ ಥರ್ಮಲ್ ಸ್ಕ್ರೀನಿಂಗ್ ‌ಮಾಡಬೇಕು

  8. ಕಾರ್ಯಕ್ರಮಕ್ಕೆ ಬಂದ ಜನರಿಗೆ ಜ್ವರ, ಕೆಮ್ಮು, ಕಫಾ ಕಂಡು ಬಂದಲ್ಲಿ ಕೂಡಲೇ ಮೆಡಿಕಲ್ ಚೆಕಪ್ ಮಾಡಿಸಬೇಕು

  9. ಪ್ರತಿಯೊಬ್ಬರು ಮಾಸ್ಕ್ ಧರಿಸುವುದು ಕಡ್ಡಾಯ

  10. ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರು 1 ಮೀಟರ್ ನಷ್ಟು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು

  11. ಕೊಠಡಿಗಳಲ್ಲಿ ಹ್ಯಾಂಡ್ ವಾಶ್, ಸೋಪ್, ನೀರು ಹಾಗೂ ವಾಶ್ ರೂಮ್ ವ್ಯವಸ್ಥೆ ಇರಬೇಕು

  12. ಸಮಾರಂಭ ನಡೆಯುವ ಸ್ಥಳದಲ್ಲಿ ಮದ್ಯಪಾನ, ಗುಟ್ಕಾ, ಸಿಗರೆಟ್ ನಿಷೇಧ

  13. ಕಾರ್ಯಕ್ರಮ ನಡೆಯುವ ಸ್ಥಳವನ್ನು ಸುರಕ್ಷಿತವಾಗಿ ಇರುವಂತೆ ನೋಡಿಕೊಳ್ಳಬೇಕು

  14. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವಿಕೆ ನಿಷೇಧ

  15. ಅನುಮತಿ ಪಡೆದಿರುವ ಸ್ಥಳವನ್ನು ನೋಡಲ್ ಅಧಿಕಾರಿ ಪರಿಶೀಲನೆ ನಡೆಸಲಿದ್ದಾರೆ

  16. ಮದುವೆ ಸಮಾರಂಭಕ್ಕೆ ಬರುವ ಜನರ ವೈಯಕ್ತಿಕ ವಿಳಾಸ ಪಡೆಯುವುದು ಕಡ್ಡಾಯ

  17. ಕಾರ್ಯಕ್ರಮಕ್ಕೆ ಹಾಜರಾಗುವ ಪ್ರತಿಯೊಬ್ಬ ಅತಿಥಿಯೂ ಆರೋಗ್ಯ ಸೇತು ಆ್ಯಪ್ ಡೌನ್ ಲೋಡ್ ಮಾಡಿಕೊಂಡಿರಬೇಕು.  • ವರದಿಗಾರ: ಸಂಜಯ್ ಎಂ ಹುಣಸನಹಳ್ಳಿ


  Published by:HR Ramesh
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು