Coronavirus in Karnataka - ಅರ್ಧದಿನದಲ್ಲೇ 105 ಪ್ರಕರಣ; ರಾಜ್ಯದಲ್ಲಿ ಸಂಖ್ಯೆ 1,710ಕ್ಕೇರಿಕೆ

ನಿನ್ನೆ ಸಂಜೆಯಿಂದ 17 ಮಂದಿ ಡಿಸ್​ಚಾರ್ಜ್ ಆಗಿದ್ದಾರೆ. ಯಾವುದೇ ಹೊಸ ಸಾವು ಸಂಭವಿಸಿಲ್ಲ. ಸದ್ಯಕ್ಕೆ ಆಕ್ಟಿವ್ ಕೇಸ್​ಗಳ ಸಂಖ್ಯೆ 1080 ಇದೆ. ಸಾವಿನ ಸಂಖ್ಯೆ 41ರಲ್ಲಿ ಮುಂದುವರಿದಿದೆ.

ಕೊರೋನಾ ಪ್ರಾತಿನಿಧಿಕ ಚಿತ್ರ

ಕೊರೋನಾ ಪ್ರಾತಿನಿಧಿಕ ಚಿತ್ರ

 • Share this:
  ಬೆಂಗಳೂರು(ಮೇ 22): ಹೊರ ರಾಜ್ಯಗಳಿಂದ ಬಂದವರಲ್ಲಿ ಕೊರೋನಾ ಸೋಂಕು ಪತ್ತೆಯಾಗುವುದು ಮುಂದುವರಿದಿದೆ. ನಿನ್ನೆ ಸಂಜೆಯಿಂದ ರಾಜ್ಯಾದ್ಯಂತ 105 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ಇವರಲ್ಲಿ 91 ಮಂದಿ ಹೊರ ರಾಜ್ಯಗಳಿಂದ ಬಂದವರೇ ಆಗಿದ್ದಾರೆ. ಅದರಲ್ಲೂ ಮಹಾರಾಷ್ಟ್ರ ರಾಜ್ಯದಿಂದ ಬಂದವರೇ 89 ಮಂದಿ ಇದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಕೊರೋನಾ ಸೋಂಕು ದಾಖಲಾಗಿರುವ ಪ್ರಕರಣಗಳ ಸಂಖ್ಯೆ 1,710ಕ್ಕೆ ಏರಿದೆ.

  ನಿನ್ನೆ ಸಂಜೆಯಿಂದ 17 ಮಂದಿ ಡಿಸ್​ಚಾರ್ಜ್ ಆಗಿದ್ದಾರೆ. ಯಾವುದೇ ಹೊಸ ಸಾವು ಸಂಭವಿಸಿಲ್ಲ. ಸದ್ಯಕ್ಕೆ ಆಕ್ಟಿವ್ ಕೇಸ್​ಗಳ ಸಂಖ್ಯೆ 1080 ಇದೆ. ಸಾವಿನ ಸಂಖ್ಯೆ 41ರಲ್ಲಿ ಮುಂದುವರಿದಿದೆ.

  ಇದನ್ನೂ ಓದಿ: ಬೆಂಗಳೂರಿನಿಂದ ಇಂದು ಉತ್ತರ ರಾಜ್ಯಗಳಿಗೆ 7 ವಿಶೇಷ ಶ್ರಮಿಕ್​​​​ ರೈಲು: 10500 ಸಾವಿರ ವಲಸಿಗರು ತಾಯ್ನಾಡಿಗೆ ವಾಪಸ್​​​

  ಕಳೆದ 12 ಗಂಟೆ ಅವಧಿಯಲ್ಲಿ (ನಿನ್ನೆ ಸಂಜೆ 5ಗಂಟೆಯಿಂದ) ಚಿಕ್ಕಬಳ್ಳಾಪುರವೊಂದರಲ್ಲೇ 45 ಪ್ರಕರಣಗಳು ದಾಖಲಾಗಿವೆ. ಹಾಸನದಲ್ಲಿ 14 ಹೊಸ ಕೇಸ್​ಗಳು ದೃಢಪಟ್ಟಿವೆ. ಇವೆಲ್ಲವೂ ಮಹಾರಾಷ್ಟ್ರದಿಂದ ವಾಪಸ್ ಆದವರಿಂದಲೇ. ತುಮಕೂರಿನಲ್ಲಿ 8 ಪ್ರಕರಣಗಳು ಬೆಳಕಿಗೆ ಬಂದಿವೆ.

  ಹೊಸ 105 ಪ್ರಕರಣಗಳ ವಿವರ:

  ಚಿಕ್ಕಬಳ್ಳಾಪುರ 45
  ಹಾಸನ 14
  ತುಮಕೂರು 8
  ಬೀದರ್ 6
  ಚಿಕ್ಕಮಗಳೂರು 5
  ಬೆಂಗಳೂರು ನಗರ 5
  ಬೆಂಗಳೂರು ಗ್ರಾಮಾಂತರ 4
  ಮಂಡ್ಯ 3
  ದಾವಣಗೆರೆ 3
  ಹಾವೇರಿ 3
  ಧಾರವಾಡ 2
  ವಿಜಯಪುರ 2
  ಬಾಗಲಕೋಟೆ 1
  ಚಿತ್ರದುರ್ಗ 1
  ಬೆಳಗಾವಿ 1
  ಉತ್ತರ ಕನ್ನಡ 1
  ದಕ್ಷಿಣ ಕನ್ನಡ 1  Javascript  First published: