ಲಾಕ್​ಡೌನ್​ ಮುಗಿದ ನಂತರ ಭಾರತೀಯರು ಏನು ಮಾಡುತ್ತಾರೆ?; ನೆಟ್​ವರ್ಕ್ 18 ಸಮೀಕ್ಷೆ

ಲಾಕ್‌ಡೌನ್ ಮುಗಿದ ಬಳಿಕವೂ ಮನೆಯಿಂದಲೇ ಕೆಲಸ ಮಾಡುವುದಾಗಿ ಎಲ್ಲರೂ ಹೇಳುತ್ತಾರೆ. ಅದರಲ್ಲೂ ಕನ್ನಡಿಗರು ಮತ್ತು ಒಡಿಯಾಸ್ ಹೆಚ್ಚು ಜನರು ಸಿದ್ಧರಿದ್ದಾರೆ.

news18-kannada
Updated:May 29, 2020, 5:49 PM IST
ಲಾಕ್​ಡೌನ್​ ಮುಗಿದ ನಂತರ ಭಾರತೀಯರು ಏನು ಮಾಡುತ್ತಾರೆ?; ನೆಟ್​ವರ್ಕ್ 18 ಸಮೀಕ್ಷೆ
ಕೊರೋನಾ ವೈರಸ್ ಪ್ರಾತಿನಿಧಿಕ ಚಿತ್ರ
  • Share this:
ಲಾಕ್​ಡೌನ್​ ಮುಗಿದ ಬಳಿಕ ಜನರು ದೈನಂದಿನ ಚಟವಟಿಕೆ, ಸಂಚಾರ ಮತ್ತು ವ್ಯವಹಾರ, ಜೀವನ ಶೈಲಿ ಹೇಗಿರಲಿದೆ ಎಂಬ ವಿಚಾರವಾಗಿ ನ್ಯೂಸ್ 18, ಮನಿ ಕಂಟ್ರೋಲ್, ಫಸ್ಟ್​ಪೋಸ್ಟ್​ ಮತ್ತು ಸಿಎನ್​ಬಿಸಿ-ಟಿವಿ18 ಸಂಸ್ಥೆ 13 ಭಾಷೆಗಳಲ್ಲಿ ಆನ್​ಲೈನ್​ ಸಮೀಕ್ಷೆ ನಡೆಸಿದೆ.  ಮೇ 21ರಿಂದ ಮೇ 28ರವರೆಗೆ ನಡೆಸಲಾದ ಈ ಆನ್​ಲೈನ್​ ಸಮೀಕ್ಷೆಯಲ್ಲಿ ಒಟ್ಟು 50 ಸಾವಿರ ಮಂದಿ ಪ್ರತಿಕ್ರಿಯಿಸಿದ್ದಾರೆ. 

ಸಮೀಕ್ಷೆಯ ಪ್ರಮುಖಾಂಶಗಳು

ಸಾಕಷ್ಟು ಮಂದಿ ಈ ವರ್ಷ ವಿಮಾನ ಮತ್ತು ರೈಲು ಬಳಸದಿರಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ಅದರಲ್ಲಿ ಮರಾಠಿ (ಶೇ.79) ಹೆಚ್ಚು ಇದ್ದರೆ ಮಲೆಯಾಳಂ (ಶೇ.36) ಕಡಿಮೆ ಇದೆ.

ಸಾಕಷ್ಟು ಮಂದಿ ಈ ವರ್ಷ ಸಿನಿಮಾ ನೋಡಲು ಹೋಗಲು ಇಷ್ಟವಿಲ್ಲ ಎಂದು ತಿಳಿಸಿದ್ದಾರೆ. ಹೆಚ್ಚಿನವರು ಗುಜರಾತಿ, ಅಸ್ಸಾಮೀಸ್ ಮತ್ತು ಒಡಿಯಾ ಜೊತೆಗೆ ಹೆಚ್ಚಿನ ಸಂಖ್ಯೆಯ ತೆಲುಗು ಜನರು ಮತ್ತೆ ಎಂದೂ ಚಿತ್ರಮಂದಿರಕ್ಕೆ ಹೋಗದಿರಲು ನಿರ್ಧರಿಸಿದ್ದಾರೆ.

ಎಲ್ಲ ಗುಜರಾತಿಗಳನ್ನು ಹೊರತುಪಡಿಸಿ, ಉಳಿದವರು ಮನೆಯಲ್ಲಿಯೇ ಅಡುಗೆ ಸಿದ್ಧಪಡಿಸಿಕೊಂಡು ಊಟ ಮಾಡಲು ಬಯಸಿದ್ದಾರೆ. ಶೇ.49 ಗುಜರಾತಿಗಳು ಹೊರಗಿನಿಂದ ಅಥವಾ ಹೋಟೆಲ್​ಗಳಿಂದ ಊಟ ಪಾರ್ಸೆಲ್ ತರಿಸಿಕೊಳ್ಳುವುದಾಗಿ ಹೇಳಿದ್ದಾರೆ.

ಪಂಜಾಬಿಗಳನ್ನು ಹೊರತುಪಡಿಸಿ ಉಳಿದೆಲ್ಲರೂ ಯಾರೊಬ್ಬರೂ ಹಸ್ತಲಾಘವ ಮಾಡದಿರಲು ನಿರ್ಧರಿಸಿದ್ದಾರೆ.

ವೈದ್ಯರು, ಶುಶ್ರೂಷಕರು ಮತ್ತು ಆರೋಗ್ಯ ಕಾರ್ಯಕರ್ತರು ಕೋವಿಡ್-19 ವಾರಿಯರ್ಸ್​ ಆಗಿದ್ದಾರೆ. ನೈರ್ಮಲ್ಯ ಕಾರ್ಮಿಕರು ಎರಡನೇ ಸ್ಥಾನದಲ್ಲಿದ್ದರೆ, ಪೊಲೀಸರು ನಂತರದ ಸ್ಥಾನದಲ್ಲಿದ್ದಾರೆ.ಗುಜರಾತಿಗಳು, ತಮಿಳಿಗರು ಹಾಗೂ ಮಲೆಯಾಳಿಗಳನ್ನು ಹೊರತುಪಡಿಸಿ ಪ್ರತಿಯೊಬ್ಬರು ತಮ್ಮ ಹಾಲಿಡೇ ಪ್ಲಾನ್​ಗಳನ್ನು ಮುಂದೂಡಿಕೆ ಮಾಡಿದ್ದಾರೆ.

ತಮಿಳರನ್ನು ಹೊರತುಪಡಿಸಿ ಪಾರ್ಟಿ ಮಾಡುವುದು ಯಾರ ಕಾರ್ಯಸೂಚಿಯಲ್ಲಿ ಇಲ್ಲ.

ಲಾಕ್‌ಡೌನ್ ಮುಗಿದ ಬಳಿಕವೂ ಮನೆಯಿಂದಲೇ ಕೆಲಸ ಮಾಡುವುದಾಗಿ ಎಲ್ಲರೂ ಹೇಳುತ್ತಾರೆ. ಅದರಲ್ಲೂ ಕನ್ನಡಿಗರು ಮತ್ತು ಒಡಿಯಾಸ್ ಹೆಚ್ಚು ಜನರು ಸಿದ್ಧರಿದ್ದಾರೆ.

ಇದನ್ನು ಓದಿ: ಲಾಕ್‌ಡೌನ್‌ ಎಫೆಕ್ಟ್; ಮಾರ್ಚ್‌ ತ್ರೈಮಾಸಿಕದಲ್ಲಿ ಪಾತಾಳಕ್ಕೆ ಕುಸಿದ ಭಾರತದ ಆರ್ಥಿಕ ದರ

ಬಂಗಾಳಿಗಳನ್ನು ಹೊರತುಪಡಿಸಿ ಲಾಕ್​‌ಡೌನ್ ತೆಗೆದುಹಾಕಿದ ನಂತರ ಎಲ್ಲರೂ ಖಾಸಗಿ ವಾಹನಗಳನ್ನು ಬಳಸಲು ಇಚ್ಛಿಸಿದ್ದಾರೆ. ತಮಿಳರು, ಉರ್ದು ಮಾತನಾಡುವವರು ಹಾಗೂ ಬಂಗಾಳಿಗಳು ಸಾರ್ವಜನಿಕ ಸಾರಿಗೆ ಬಳಸುತ್ತಾರೆ.
First published: May 29, 2020, 5:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading