ಲಾಕ್‌ಡೌನ್ ಸಂದರ್ಭದಲ್ಲಿ ಇವೆಲ್ಲಾ ಬೇಕಿತ್ತಾ?; ಟ್ವಿಟರ್‌ನಲ್ಲಿ ವ್ಯಾಪಕ ಟೀಕೆಗೆ ಗುರಿಯಾಯ್ತು ಸಚಿವ ಸುಧಾಕರ್‌ ನಡೆ

ಭಾನುವಾರ ಮಕ್ಕಳ ಜೊತೆ ಈಜುಕೊಳದಲ್ಲಿ ಆಟವಾಡುತ್ತಿದ್ದ ಪೋಟೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದ ಸಚಿವ ಸುಧಾಕರ್‌, ತುಂಬಾ ದಿನಗಳ ನಂತರ ನಾನು ನನ್ನ ಮಕ್ಕಳ ಜೊತೆ ಈಜುಕೊಳದಲ್ಲಿದ್ದೇನೆ. ಇಲ್ಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗುತ್ತಿದೆ ಎಂದು ಬರೆದುಕೊಂಡಿದ್ದರು.

ಟ್ವಿಟರ್‌ನಲ್ಲಿ ಸಚಿವ ಸುಧಾಕರ್‌ ಹಂಚಿಕೊಂಡಿರುವ ಪೊಟೋ ಮತ್ತು ಪ್ರತಿಕ್ರಿಯೆ.

ಟ್ವಿಟರ್‌ನಲ್ಲಿ ಸಚಿವ ಸುಧಾಕರ್‌ ಹಂಚಿಕೊಂಡಿರುವ ಪೊಟೋ ಮತ್ತು ಪ್ರತಿಕ್ರಿಯೆ.

  • Share this:
    ಬೆಂಗಳೂರು (ಏಪ್ರಿಲ್ 13); ವಿಶ್ವದಾದ್ಯಂತ ಸಾಲು ಸಾಲು ಹೆಣ ಉರುಳಿಸಿರುವ ಮಾರಣಾಂತಿಕ ಕೊರೋನಾ ವೈರಸ್‌ ಕರ್ನಾಟಕದಲ್ಲೂ ಸಾಕಷ್ಟು ಜೀವ ಹಾನಿ ಉಂಟು ಮಾಡುತ್ತಿದೆ. ಲಾಕ್‌ಡೌನ್ ನಡುವೆಯೂ ಸೋಂಕಿತರ ಸಂಖ್ಯೆ ದಿನೇ ದಿನೇ ಏರುತ್ತಲೇ ಇದೆ. ಇದು ಸಮಾನ್ಯವಾಗಿ ಸರ್ಕಾರಕ್ಕೆ ತಲೆ ನೋವಾಗಿ ಪರಿಣಮಿಸಿದ್ದು ವೈದ್ಯರು ಮತ್ತು ಪೊಲೀಸರು ವಿಶ್ರಾಂತಿ ಇಲ್ಲದೆ ಕೆಲಸ ಮಾಡುತ್ತಿದ್ದಾರೆ. ಈ ನಡುವೆ ಸಚಿವ ಡಾ|ಕೆ. ಸುಧಾಕರ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಪೋಟೋ ಇದೀಗ ವ್ಯಾಪಕ ಟೀಕೆಗೆ ಗುರಿಯಾಗಿದೆ.

    ಭಾನುವಾರ ಮಕ್ಕಳ ಜೊತೆ ಈಜುಕೊಳದಲ್ಲಿ ಆಟವಾಡುತ್ತಿದ್ದ ಪೋಟೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದ ಸಚಿವ ಸುಧಾಕರ್‌, "ತುಂಬಾ ದಿನಗಳ ನಂತರ ನಾನು ನನ್ನ ಮಕ್ಕಳ ಜೊತೆ ಈಜುಕೊಳದಲ್ಲಿದ್ದೇನೆ. ಇಲ್ಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗುತ್ತಿದೆ" ಎಂದು ಬರೆದುಕೊಂಡಿದ್ದರು.

    ಟ್ವಿಟರ್‌ನಲ್ಲಿ ಸಚಿವ ಸುಧಾಕರ್‌ ಹಂಚಿಕೊಂಡಿರುವ ಪೊಟೋ ಮತ್ತು ಪ್ರತಿಕ್ರಿಯೆ.


    ಆದರೆ, ಸಚಿವರ ಈ ಟ್ವೀಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಲವರು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಕುರಿತು ಹಲವರು ಟ್ವಿಟ್ ಮಾಡಿದ್ದು, "ಲಾಕ್ ಡೌನ್ ಸಮಯದಲ್ಲಿ ವೈದ್ಯರು ,ಪೊಲೀಸರು ಕಷ್ಟ ಪಡುತ್ತಿದ್ದಾರೆ. ನೀವು ಈ ಸಮಯದಲ್ಲಿ ಎಂಜಾಯ್ ಮಾಡುತ್ತಿದ್ದೀರ?. ವೈದ್ಯಕೀಯ ಮಂತ್ರಿಯಾಗಿ ನಿಮಗೆ ಜವಾಬ್ದಾರಿ ಇಲ್ಲವೇ? ಹೀಗೆ ಮನೆಮಂದಿಯೊಂದಿಗೆ ನೀವು ವಿಶ್ರಾಂತಿ ಮೂಡ್‌ನಲ್ಲಿ ಇದ್ದರೂ ಆ ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಅಗತ್ಯ ಏನಿತ್ತು?" ಎಂದು ಕಿಡಿಕಾರಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಸಚಿವ ಡಾ|ಕೆ. ಸುಧಾಕರ್‌ ತಮ್ಮ ಟ್ವಿಟರ್‌ ಅಕೌಂಟ್‌ನಿಂದ ಆ ಪೋಟೋವನ್ನು ಡಿಲೀಟ್‌ ಮಾಡಿದ್ದಾರೆ.

    ಇದನ್ನೂ ಓದಿ : ಕೊರೋನಾದಿಂದ ಚೇತರಿಸಿಕೊಂಡ ರೋಗಿಗಳಲ್ಲಿ ಮತ್ತೆ ಸೋಂಕು; ವರದಿ ಪರಿಶೀಲಿಸುತ್ತಿರುವ ವಿಶ್ವ ಆರೋಗ್ಯ ಸಂಸ್ಥೆ
    First published: