PM Modi Speech | ಎಚ್ಚರಿಕೆಯಿಂದ ಇರಬೇಕಾದ ಸಮಯದಲ್ಲಿ ಅತೀ ಹೆಚ್ಚು ಉದಾಸೀನತೆ ತೋರಿದಿರಿ; ಪ್ರಧಾನಿ ಮೋದಿ ಅಸಮಾಧಾನ

ಈಗ ನಾವು ಅನ್​ಲಾಕ್​ 2 ಹಂತ ಪ್ರವೇಶಿಸಿದ್ದೇವೆ. ಮತ್ತು ಕೆಮ್ಮು, ಜ್ವರ ಮತ್ತು ಶೀತವೂ ಆರಂಭವಾಗಲಿದೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಜನರು ತಮ್ಮ ಆರೋಗ್ಯದ ಬಗ್ಗೆ ತಾವೇ ಹೆಚ್ಚು ಮುತುವರ್ಜಿ ವಹಿಸಬೇಕು ಎಂದು ನಾನು ಕೇಳಿಕೊಳ್ಳುತ್ತೇನೆ ಎಂದು ಪ್ರಧಾನಿ ಮೋದಿ ಮನವಿ ಮಾಡಿಕೊಂಡರು.

news18-kannada
Updated:June 30, 2020, 4:42 PM IST
PM Modi Speech | ಎಚ್ಚರಿಕೆಯಿಂದ ಇರಬೇಕಾದ ಸಮಯದಲ್ಲಿ ಅತೀ ಹೆಚ್ಚು ಉದಾಸೀನತೆ ತೋರಿದಿರಿ; ಪ್ರಧಾನಿ ಮೋದಿ ಅಸಮಾಧಾನ
ನರೇಂದ್ರ ಮೋದಿ
  • Share this:
ನವದೆಹಲಿ; ದೇಶದಲ್ಲಿ ಮಾರಕ ಕೊರೋನಾ ವೈರಸ್ ಅಟ್ಟಹಾರ ಆರಂಭವಾದ ದಿನದಿಂದ ಈವರೆಗೆ ಪ್ರಧಾನಿ ಮೋದಿ ಅವರು ಆರನೇ ಬಾರಿ ದೇಶದ ಜನರನ್ನು ಉದ್ದೇಶಿಸಿ ಇಂದು ಮಾತನಾಡಿದ್ದಾರೆ. ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ  ಕೊರೋನಾ ಪ್ರಕರಣಗಳ ಸಂಖ್ಯೆ, ಲಾಕ್​ಡೌನ್​ನಿಂದಾಗಿ ಕುಸಿದಿರುವ ಆರ್ಥಿಕತೆ, ಉದ್ಯೋಗ ಕಡಿತ ಹಾಗೂ ಲಡಾಖ್​ನ ಗಾಲ್ವಾನ್​ ಕಣಿವೆ ಪ್ರದೇಶದಲ್ಲಿ ಭಾರತ-ಚೀನಾ ಸಂಘರ್ಷದ ಸಮಯದಲ್ಲಿ ಪ್ರಧಾನಿ ಮೋದಿ ಅವರು ಭಾಷಣ ಮಾಡಿದ್ದಾರೆ.

ಜಾಗತಿಕವಾಗಿ ಇತರೆ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತ ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಹೆಚ್ಚು ಸ್ಥಿರವಾಗಿದೆ. ಸರಿಯಾದ ಸಮಯಕ್ಕೆ ತೆಗೆದುಕೊಂಡ ಕ್ರಮಗಳು ಇಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಪ್ರಧಾನಿ ಹೇಳಿದರು.

ಆದರೆ, ಜೂನ್​ 1ರಿಂದ ಅನ್​ಲಾಕ್​ 1ರಲ್ಲಿ ಹಂತಹಂತವಾಗಿ ಲಾಕ್​ಡೌನ್​ ಸಡಿಲಿಕೆ ಮಾಡಿಕೊಂಡು ಬರಲಾಯಿತು. ಆದರೆ, ಈ ವೇಳೆ ಜನರು ಹೆಚ್ಚು ನಿರ್ಲಕ್ಷತನ ತೋರಿದರು. ಸಾಮಾಜಿಕ ಅಂತರ ಮರೆತರು. ಇದಕ್ಕೂ ಮುನ್ನ ನಾವು ಜನರಿಗೆ ಮಾಸ್ಕ್​ ಧರಿಸುವಂತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುಂತೆ ಹಾಗೂ ದಿನದಲ್ಲಿ ಹಲವು ಬಾರಿ 20 ಸೆಕೆಂಡ್ ಕೈ ತೊಳೆದುಕೊಳ್ಳುವಂತೆ ಮುನ್ನೆಚ್ಚರಿಕೆ ನೀಡಿದ್ದೆವು. ಆದರೆ, ಜನರು ಇವುಗಳನ್ನು ಸರಿಯಾಗಿ ಪಾಲನೆ ಮಾಡಲೇ ಇಲ್ಲ ಎಂದು ಪ್ರಧಾನಿ  ಮೋದಿ ಅವರು ಅಸಮಾಧಾನ ಹೊರಹಾಕಿದರು.

ಇದನ್ನು ಓದಿ:PM Modi Speech - ನವೆಂಬರ್​ವರೆಗೂ ಪ್ರಧಾನಿ ಗರೀಬ್ ಕಲ್ಯಾಣ್ ಯೋಜನೆ: ಪ್ರಧಾನಿ ಮೋದಿ ಘೋಷಣೆ

ಈಗ ನಾವು ಅನ್​ಲಾಕ್​ 2 ಹಂತ ಪ್ರವೇಶಿಸಿದ್ದೇವೆ. ಮತ್ತು ಕೆಮ್ಮು, ಜ್ವರ ಮತ್ತು ಶೀತವೂ ಆರಂಭವಾಗಲಿದೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಜನರು ತಮ್ಮ ಆರೋಗ್ಯದ ಬಗ್ಗೆ ತಾವೇ ಹೆಚ್ಚು ಮುತುವರ್ಜಿ ವಹಿಸಬೇಕು ಎಂದು ನಾನು ಕೇಳಿಕೊಳ್ಳುತ್ತೇನೆ ಎಂದು ಪ್ರಧಾನಿ ಮೋದಿ ಮನವಿ ಮಾಡಿಕೊಂಡರು.
First published: June 30, 2020, 4:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading