• ಹೋಂ
  • »
  • ನ್ಯೂಸ್
  • »
  • Corona
  • »
  • ಡೆಲ್ಟಾ ಭೀತಿ: ಕೇರಳದಿಂದ ರಾಜ್ಯಕ್ಕೆ ಆಗಮಿಸುವವರಿಗೆ RT-PCR ನೆಗಟಿವ್​ ವರದಿ ಕಡ್ಡಾಯ

ಡೆಲ್ಟಾ ಭೀತಿ: ಕೇರಳದಿಂದ ರಾಜ್ಯಕ್ಕೆ ಆಗಮಿಸುವವರಿಗೆ RT-PCR ನೆಗಟಿವ್​ ವರದಿ ಕಡ್ಡಾಯ

file photo

file photo

ಕೇರಳದಿಂದ ರಾಜ್ಯಕ್ಕೆ ಆಗಮಿಸುವವರು ಆರ್​ಟಿಪಿಸಿಆರ್​ ನೆಗಟಿವ್​ ವರದಿ ಅಥವಾ ಕೋವಿಡ್​ ವಾಕ್ಸಿನೇಷನ್​ ಪ್ರಮಾಣ ಪತ್ರ ತೋರಿಸುವುದು ಕಡ್ಡಾಯವಾಗಿದೆ

  • Share this:

ಬೆಂಗಳೂರು (ಜು. 1): ಕೇರಳ ರಾಜ್ಯದಲ್ಲಿ ಡೆಲ್ಟಾ ಸೋಂಕಿನ ಭೀತಿ ಎದುರಾಗಿರುವ ಹಿನ್ನಲೆ ಇನ್ಮುಂದೆ ಕೇರಳದಿಂದ ರಾಜ್ಯಕ್ಕೆ ಆಗಮಿಸುವವರಿಗೆ ಆರ್​ಟಿಪಿಸಿಆರ್​ ಟೆಸ್ಟ್​ ಕಡ್ಡಾಯ ಮಾಡಿ ರಾಜ್ಯ ಸರ್ಕಾರ ಆದೇಶ ಮಾಡಿದೆ. ನೆರೆಯ ರಾಜ್ಯದಿಂದ ಆಗಮಿಸುವವರು ಆರ್​ಟಿಪಿಸಿಆರ್​ ನೆಗಟಿವ್​ ವರದಿ ಅಥವಾ ಕೋವಿಡ್​ ವಾಕ್ಸಿನೇಷನ್​ ಪ್ರಮಾಣ ಪತ್ರವನ್ನು ತೋರಿಸಿಯೇ ಕರ್ನಾಟಕಕ್ಕೆ ಬರಬೇಕು ಎಂದು ಸೂಚನೆ ನೀಡಲಾಗಿದೆ. ಇಷ್ಟು ದಿನ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಆಮಿಸುವವರಿಗೆ ಈ ನಿರ್ಬಂಧ ವಿಧಿಸಲಾಗಿತ್ತು. ಈಗ ಕೇರಳದಲ್ಲೂ ಡೆಲ್ಟಾ ಸೋಂಕಿನ ಭೀತಿ ಮೂಡಿರುವ ಹಿನ್ನಲೆ ಈ ಕ್ರಮ ಅನಿವಾರ್ಯವಾಗಿದೆ ಎಂದು ಸರ್ಕಾರ ತಿಳಿಸಿದೆ. ಟಾಕ್ಸಿ, ಸಾರಿಗೆ, ಸ್ವಂತ ವಾಹನ ಅಥವಾ ರೈಲು ಮತ್ತು ವಿಮಾನದ ಮೂಲಕ ಬರುವವರು 72 ಗಂಟೆ ಮುಂಚಿತವಾಗಿ ಪರೀಕ್ಷೆಗೆ ಒಳಪಟ್ಟು ನೆಗಟಿವ್​ ವರದಿ ತರಬೇಕಿರುವುದು ಕಡ್ಡಾಯವಾಗಿದೆ


ಕೇರಳ ಮತ್ತು ರಾಜ್ಯಕ್ಕೆ ದಿನನಿತ್ಯ ಭೇಟಿ ನೀಡುವ ಅಗತ್ಯ ಸೇವೆಯಲ್ಲಿರುವವರು 15 ದಿನದ ಒಳಗಿನ ಕೊರೋನಾ ನೆಗೆಟಿವ್ ರಿಪೋರ್ಟ್ ನೀಡಿದರೆ ಸಾಕು. ಎರಡು ಡೋಸ್ ಲಸಿಕೆ ಪಡೆದಿದ್ದರೇ ಟೆಸ್ಟ್ ಬೇಕಿಲ್ಲ. ಕೆಲವು ತುರ್ತು ಸಂದರ್ಭದಲ್ಲಿ ಟೆಸ್ಟ್ ಕಡ್ಡಾಯವಲ್ಲ. ಎರಡು ವರ್ಷದ ಒಳಗಿನ ಮಕ್ಕಳಿಗೆ ಟೆಸ್ಟ್ ಕಡ್ಡಾಯವಲ್ಲ


ಕೇರಳ ಮತ್ತು ಕರ್ನಾಟಕದ ವಿಮಾನ ಸಂಚಾರ ನಡೆಸುವವರು ಕೂಡ 72 ಗಂಟೆ ಮುಂಚಿತವಾಗಿ ಆರ್​ಟಿಪಿಸಿಆರ್​ ಪರೀಕ್ಷೆಗೆ ಒಳಪಟ್ಟಿರಬೇಕು. ಅವರ ವರದಿ ನೆಗಟಿವ್​​ ಇದ್ದರೆ ಮಾತ್ರ ವಿಮಾನ ಸಂಸ್ಥೆಗಳು ಬೋರ್ಡಿಂಗ್​ ಪಾಸ್​ ನೀಡಬೇಕು ಎಂದು ಸರ್ಕಾರ ಆದೇಶಿಸಿದೆ. ರೈಲಿನಲ್ಲಿ ಪ್ರವೇಶಿಸುವ ಕೇರಳ ಪ್ರವಾಸಿಗರ ಮಾಹಿತಿಯನ್ನು ರೈಲ್ವೆ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ. ಬಸ್​ನಲ್ಲಿ ಕಂಡಕ್ಟರ್​ಗಳು ಈ ಕುರಿತು ಕೂಲಂಕುಷ ಪರಿಶೀಲನೆ ನಡೆಸಬೇಕು.


ಇಷ್ಟೇ ಅಲ್ಲದೇ, ದಕ್ಷಿಣ ಕನ್ನಡ, ಕೊಡಗು, ಮೈಸೂರು ಮತ್ತು ಚಾಮರಾಜನಗರ ಗಡಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು ಈ ಬಗ್ಗೆ ಕಟ್ಟೆಚ್ಚರವಹಿಸಬೇಕು. ರಾಜ್ಯಕ್ಕೆ ಪ್ರವೇಶಿಸುವ ಕೇರಳದ ಎಲ್ಲರು ತಪಾಸಣೆಗೆ ಒಳಪಡಿಸುವ ಅಗತ್ಯ ಇದೆ. ಅಲ್ಲದೇ, ಚೆಕ್​ಪೋಸ್ಟ್​ ನಿರ್ಮಿಸಬೇಕು ಎಂದು ಸೂಚನೆ ನೀಡಲಾಗಿದೆ.


ಇದನ್ನು ಓದಿ: ಪೋರ್ನ್​ ವಿಡಿಯೋ ನೋಡುಗರ ಮೇಲೆ ಹದ್ದಿನ ಕಣ್ಣಿಟ್ಟ ಸೈಬರ್ ಪೊಲೀಸರು; ಅತಿ ಹೆಚ್ಚು ವೀಕ್ಷಿಸಿದರೆ ಬಂಧನ


ಶಿಕ್ಷಣ, ವ್ಯವಹಾರ ಮತ್ತು ಇತರ ಉದ್ದೇಶಗಳಿಗಾಗಿ ಕರ್ನಾಟಕಕ್ಕೆ ಭೇಟಿ ನೀಡುವ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು 15 ದಿನಗಳಿಗೊಮ್ಮೆ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ನೆಗೆಟಿವ್ ರಿಪೋರ್ಟ್ ನೀಡಿದರೆ ಸಾಕು. ಎರಡು ಡೋಸ್ ಲಸಿಕೆ ಪಡೆದಿದ್ದರೇ ಟೆಸ್ಟ್ ಬೇಕಿಲ್ಲ. ಕೆಲವು ತುರ್ತು ಸಂದರ್ಭದಲ್ಲಿ ಟೆಸ್ಟ್ ಕಡ್ಡಾಯವಲ್ಲ. ಎರಡು ವರ್ಷದ ಒಳಗಿನ ಮಕ್ಕಳಿಗೆ ಟೆಸ್ಟ್ ಕಡ್ಡಾಯವಲ್ಲ.


ಯಾವುದೇ ವ್ಯಕ್ತಿಯು ನಿಯಮಗಳನ್ನು ಉಲ್ಲಂಘಿಸಿರುವುದು ಕಂಡುಬಂದಲ್ಲಿ, ಕರ್ನಾಟಕ ಸಾಂಕ್ರಾಮಿಕ ರೋಗ ಕಾಯ್ದೆ 2020, ವಿಪತ್ತು ನಿರ್ವಹಣಾ ಕಾಯ್ದೆ 2005 ಮತ್ತು ಐಪಿಸಿಯ ಇತರ ಸಂಬಂಧಿತ ವಿಭಾಗಗಳ ಪ್ರಕಾರ ಅಗತ್ಯ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ.


ಕೇರಳವು ಇಂದು 12,868 ಇಂದು ಕೋವಿಡ್​-19 ಪ್ರಕರಣಗಳನ್ನು ದಾಖಲಾಗಿದೆ. ಮಹಾರಾಷ್ಟ್ರದಲ್ಲಿ 9,771 ಪ್ರಕರಣ ದಾಖಲಾಗಿದೆ. ಕರ್ನಾಟಕದಲ್ಲಿ ಇಂದು ಕೋವಿಡ್​-19 ಹೊಸ 3,203 ಪ್ರಕರಣಗಳು ದಾಖಲಾಗಿವೆ. ಪ್ರಸ್ತುತ ರಾಜ್ಯದಲ್ಲಿ 65,312 ಸಕ್ರಿಯ ಪ್ರಕರಣಗಳಿವೆ


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು

top videos
    First published: