• Home
 • »
 • News
 • »
 • coronavirus-latest-news
 • »
 • Abhijit Banerjee| ಸಾಂಕ್ರಾಮಿಕ ಸವಾಲುಗಳನ್ನು ಎದುರಿಸಲು ಕಲ್ಯಾಣ ವ್ಯವಸ್ಥೆಯ ಮರುವಿನ್ಯಾಸ ಅಗತ್ಯ: ಅಭಿಜಿತ್ ಬ್ಯಾನರ್ಜಿ

Abhijit Banerjee| ಸಾಂಕ್ರಾಮಿಕ ಸವಾಲುಗಳನ್ನು ಎದುರಿಸಲು ಕಲ್ಯಾಣ ವ್ಯವಸ್ಥೆಯ ಮರುವಿನ್ಯಾಸ ಅಗತ್ಯ: ಅಭಿಜಿತ್ ಬ್ಯಾನರ್ಜಿ

ಅಭಿಜಿತ್ ಬ್ಯಾನರ್ಜಿ.

ಅಭಿಜಿತ್ ಬ್ಯಾನರ್ಜಿ.

ದೇಶದ ಕಲ್ಯಾಣ ವ್ಯವಸ್ಥೆಯನ್ನು (ಸಾಮಾಜಿಕ ಕಲ್ಯಾಣ ಕಾರ್ಯಕ್ರಮ) ಸಾಂಕ್ರಾಮಿಕ ರೋಗ ಎದುರಿಸಲು ವಿನ್ಯಾಸಗೊಳಿಸಲಾಗಿಲ್ಲ ಎಂದು ಅಭಿಜಿತ್ ಬ್ಯಾನರ್ಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 • Share this:

  ಜೋಧ್​ಪುರ; ಕೊರೋನಾ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ದೇಶದ ಆರ್ಥಿಕತೆ ಕುಸಿದಿದೆ. ಕೊರೋನಾದಿಂದಾಗಿ ಭಾರತದಲ್ಲಿ ಬಡವರ ಸಂಖ್ಯೆಯೂ ಅಧಿಕವಾಗಿದೆ, ಆರೋಗ್ಯ ವ್ಯವಸ್ಥೆ ಕುಸಿದಿದೆ ಎಂದು ಅಂತಾರಾಷ್ಟ್ರೀಯ ಸಮೀಕ್ಷೆಗಳು ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಹೀಗಾಗಿ ಭಾರತದ ಆರ್ಥಿಕತೆಯನ್ನು ಶೀಘ್ರದಲ್ಲೇ ಸುಧಾರಿಸುವ ಅಗತ್ಯವಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರಕ್ಕೆ ಕಿವಿಮಾತು ಹೇಳಿರುವ ನೋಬಲ್ ಪ್ರಶಸ್ತಿ ವಿಜೇತ ಅಭಿಜಿತ್ ಬ್ಯಾನರ್ಜಿ, "ಕೋವಿಡ್ ಸಾಂಕ್ರಾಮಿಕ ರೋಗವು ನಮಗೆ ಹಲವು ಪಾಠಗಳನ್ನು ಕಲಿಸಿದೆ. ದೇಶದ ಆರೋಗ್ಯ ಪರಿಸ್ಥಿತಿ ಮತ್ತು ಕೋವಿಡ್‍ ಅಲ್ಲದ ಸಂದರ್ಭದಲ್ಲೂ ಸಾಮಾನ್ಯ ಸನ್ನದ್ಧತೆಗೆ ಸಂಬಂಧಿಸಿದಂತೆ ಅನೇಕ ಪಾಠಗಳನ್ನು ಕಲಿಯಲು ದಾರಿ ಮಾಡಿಕೊಟ್ಟಿದೆ. ಈಗ ಕಲ್ಯಾಣ ಕಾರ್ಯಕ್ರಮಗಳನ್ನು (welfare system) ಮರು ವಿನ್ಯಾಸಗೊಳಿಸುವ ಅಗತ್ಯ ಇದೆ" ಎಂದು ತಿಳಿಸಿದ್ದಾರೆ.


  ಜೋಧ್‍ಪುರ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಇಂಪ್ಲಿಮೆಂಟೇಶನ್ ರಿಸರ್ಚ್ ಆಯೋಜಿಸಿದ ವೆಬಿನಾರ್ ಅನ್ನು ಉದ್ದೇಶಿಸಿ ಮಾತನಾಡಿದ ಬ್ಯಾನರ್ಜಿ, ದೇಶದ ಆರೋಗ್ಯ ಪರಿಸ್ಥಿತಿ, ಕಲ್ಯಾಣ ಕಾರ್ಯಕ್ರಮ ಮತ್ತು ಆರೋಗ್ಯ ವ್ಯವಸ್ಥೆಗಳ ಆರ್ಥಿಕ ಅಂಶಗಳ ಬಗ್ಗೆ ಬೆಳಕು ಚೆಲ್ಲಿದರು.


  ಆರೋಗ್ಯ ಪರಿಸ್ಥಿತಿಯ ಆರ್ಥಿಕ ಅಂಶದ ಕುರಿತು ಮಾತನಾಡುತ್ತಾ, "ಭಾರತವು ಜೀವನಶೈಲಿ (ಲೈಫ್‍ಸ್ಟೈಲ್‍) ಕಾಯಿಲೆಗಳಿಂದ ಬಳಲುತ್ತಿರುವ ದೊಡ್ಡ ಜನಸಂಖ್ಯೆಯನ್ನು ಹೊಂದಿದೆ. ಪರಿಣಾಮ ಸಾಂಕ್ರಾಮಿಕ ರೋಗದ ಎರಡನೆಯ ಮತ್ತು ಮೊದಲ ಅಲೆಯಲ್ಲಿ ಅನೇಕ ಯುವಕರು ಸಾವನ್ನಪ್ಪಿದರು. ಆದರೆ ಅವರ ಆಗಿನ ಪರಿಸ್ಥಿತಿಗಳನ್ನು ಪತ್ತೆ ಮಾಡಿಲ್ಲ. ಯುವಕರಲ್ಲಿ ಇಂಥಹದ್ದು ಹೇಗೆ ಸಂಭವಿಸಿತು ಎಂದು ಪ್ರಶ್ನಿಸಿದ ಅವರು, ಸಾಂಕ್ರಾಮಿಕವಲ್ಲದ ಕಾಯಿಲೆಗಳ (ಎನ್‌ಸಿಡಿ) ಬಗ್ಗೆ ಜಾಗೃತಿ ಮೂಡಿಸುವುದು ಒಂದು ಪ್ರಮುಖ ಸವಾಲಾಗಿದೆ" ಎಂದು ತಿಳಿಸಿದ್ದಾರೆ.


  "ದೇಶದ ಕಲ್ಯಾಣ ವ್ಯವಸ್ಥೆಯನ್ನು (ಸಾಮಾಜಿಕ ಕಲ್ಯಾಣ ಕಾರ್ಯಕ್ರಮ) ಸಾಂಕ್ರಾಮಿಕ ರೋಗ ಎದುರಿಸಲು ವಿನ್ಯಾಸಗೊಳಿಸಲಾಗಿಲ್ಲ ಮತ್ತು ಭವಿಷ್ಯದಲ್ಲಿ ಇಂತಹ ಸಂದರ್ಭಗಳನ್ನು ಎದುರಿಸಲು ಕಲ್ಯಾಣ ಯೋಜನೆಗಳನ್ನು ಮರುವಿನ್ಯಾಸಗೊಳಿಸುವ ಅಗತ್ಯವಿದೆ" ಎಂದು ಒತ್ತಿ ಹೇಳಿದರು.


  ದೇಶದ ಆರೋಗ್ಯ ವ್ಯವಸ್ಥೆಯ ವಿವಿಧ ಆಯಾಮಗಳ ಕುರಿತು ಮಾತನಾಡಿದ ಬ್ಯಾನರ್ಜಿ, ಯಾವುದೇ ವೈದ್ಯಕೀಯ ಅರ್ಹತೆ ಇಲ್ಲದ ನಕಲಿ ವೈದ್ಯರ ಚಿಕಿತ್ಸೆ ಮತ್ತು ಸ್ಟಿರಾಯ್ಡ್ ಗಳ ವಿವೇಚನೆಯಿಲ್ಲದ ಬಳಕೆ ಬಗ್ಗೆ ಆತಂಕ ವ್ಯಕ್ತಪಡಿಸಿದರು.


  ಇದನ್ನೂ ಓದಿ: Drone Attack in Jammu| ಜಮ್ಮು ವಾಯುನೆಲೆ ಡ್ರೋನ್ ದಾಳಿ ಹಿಂದಿದೆಯೇ ಜೈಶ್​-ಎ-ಮೊಹಮ್ಮದ್ ಉಗ್ರರ ಕೈವಾಡ?; ಎನ್​ಐಎ ತನಿಖೆ


  ಒಂದು ಅಧ್ಯಯನವನ್ನು ಉಲ್ಲೇಖಿಸಿ, ಪಶ್ಚಿಮ ಬಂಗಾಳದಲ್ಲಿ, ಕಡಿಮೆ ತೂಕದ ಮಹಿಳೆಯರು ಮದುವೆ ಹೊತ್ತಿಗೆ ತೂಕ ಹೆಚ್ಚು ಮಾಡಿಕೊಳ್ಳಲು ಆಗಾಗ್ಗೆ ಸ್ಟಿರಾಯ್ಡ್‌ಗಳನ್ನು ತೆಗೆದುಕೊಳ್ಳುತ್ತಾರೆ ಮತ್ತು ಈ ಸ್ಟಿರಾಯ್ಡ್ ಸ್ಥಳೀಯ ದಿನಸಿಗಳಲ್ಲಿ ಸುಲಭವಾಗಿ ಲಭ್ಯವಿದೆ ಎಂದು ಆತಂಕ ವ್ಯಕ್ತಪಡಿಸಿದರು.


  ಗ್ರಾಮೀಣ ಪ್ರದೇಶಗಳಲ್ಲಿ ನಕಲಿ ವೈದ್ಯರ (ಕ್ವಾಕ್) ಪರಿಪಾಠ ಸಂಪೂರ್ಣವಾಗಿ ಮುಕ್ತ ವಿದ್ಯಮಾನವೆಂದು ಹೇಳುವ ಬ್ಯಾನರ್ಜಿ, ಈ ಸಮಸ್ಯೆಯನ್ನು ಪರಿಹರಿಸಲು ಯಾವುದೇ ಕಠಿಣ ಕಾನೂನು ಜಾರಿಗೊಳಿಸಲಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ನಮ್ಮ ಆರೋಗ್ಯ ವ್ಯವಸ್ಥೆಯನ್ನು ಆರೋಗ್ಯ ವ್ಯವಸ್ಥೆಯಿಂದ ಹೊರಗುಳಿದವರು ನಿರ್ವಹಿಸುತ್ತಿದ್ದಾರೆ ಎಂದು ಅವರು ಹೇಳಿದರು.


  ಇದನ್ನೂ ಓದಿ: Terrorists Attack: ಮನೆಗೆ ನುಗ್ಗಿ ಕಾಶ್ಮೀರದ ಪೊಲೀಸ್ ಅಧಿಕಾರಿಯನ್ನು ಕೊಂದ ಉಗ್ರರು; ಅಡ್ಡ ಬಂದ ಹೆಂಡತಿ, ಮಗಳ ಮೇಲೂ ಫೈರಿಂಗ್


  ಸಾಮಾನ್ಯ ಕಾಯಿಲೆಗಳಿಗೆ ಔಷಧಿಗಳನ್ನು ಅತಿಯಾಗಿ ಶಿಫಾರಸು ಮಾಡುವ ವಿಷಯವನ್ನೂ ಬ್ಯಾನರ್ಜಿ ಎತ್ತಿ ತೋರಿಸಿದರು. ವೈದ್ಯಕೀಯ ಕಡೆಗಿನ ಗ್ರಾಹಕ ಸಂಸ್ಕೃತಿಯನ್ನು ದೂರಿದ ಅವರು, ರೋಗನಿರೋಧಕತೆ ತರುವ ವಿಧಾನದ ಬದಲು, ರೋಗ ತಡೆಗಟ್ಟುವ ಅಭಿವೃದ್ಧಿಯ ಅಗತ್ಯವನ್ನು ಒತ್ತಿ ಹೇಳಿದರು.


  ನಾವು ಔಷಧಿಗಳ ಬೇಡಿಕೆಗೆ ಒಡ್ಡಿಕೊಳ್ಳುತ್ತೇವೆ. ನಾವು ವೈದ್ಯರ ಬಳಿಗೆ ಹೋಗಿ ‘ನಮಗೆ ಏನನ್ನಾದರೂ ನೀಡಿ’ ಎಂದು ಕೇಳುತ್ತೇವೆ, ಅವರು ಔಷಧಿಗಳನ್ನು ಶಿಫಾರಸು ಮಾಡಲು ಇಷ್ಟವಿಲ್ಲದಿದ್ದಾಗಲೂ ಕೂಡ ನಾವು, ’ಏನನ್ನಾದರೂ ನೀಡಿ ಎನ್ನುತ್ತೇವೆ’ . ಕಾಯಿಲೆ ತಡೆಗಟ್ಟುವಿಕೆಗಾಗಿ ಒಂದು ಸರಳ ವ್ಯವಸ್ಥೆಯನ್ನು ನಿರ್ಮಿಸುವ ಅವಶ್ಯಕತೆ ಇದೆ ಮತ್ತು ಅದರ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಎಂದು ಬ್ಯಾನರ್ಜಿ ಹೇಳಿದರು.

  Published by:MAshok Kumar
  First published: