ಲಾಕ್​​ಡೌನ್​ ವೇಳೆ ಸೆಕ್ಸ್​​ಗಾಗಿ ಆಚೆ ಹೋಗಬೇಕೆಂದು ಪೊಲೀಸರ ಬಳಿ ಅನುಮತಿ ಕೇಳಿದ ಭೂಪ! ಮುಂದೇನಾಯ್ತು?

ನಾನು ಸೆಕ್ಸ್​​ಗಾಗಿ ಮನೆಯಿಂದ ಆಚೆ ಬರಬೇಕು. ದಯವಿಟ್ಟು ಅನುಮತಿ ಕೊಡಿ ಎಂದು ಪತ್ರದಲ್ಲಿ ಬರೆಯಲಾಗಿತ್ತು. ಹಗಲಿರುಳು ಎನ್ನದೆ ಕೋವಿಡ್​ ಡ್ಯೂಟಿಯಲ್ಲಿರುವ ಪೊಲೀಸರಿಗೆ ಈ ಪತ್ರ ನೋಡುತ್ತಿದ್ದಂತೆ ಸಿಟ್ಟು ನೆತ್ತಿಗೇರಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕನ್ನೂರು: ಕೊರೋನಾ ಆರ್ಭಟಕ್ಕೆ ಕಡಿವಾಣ ಹಾಕಲು ದೇಶದ ಬಹುತೇಕ ರಾಜ್ಯಗಳಲ್ಲಿ ಲಾಕ್​ಡೌನ್​ ಜಾರಿಗೆ ತರಲಾಗಿದೆ. ಅತ್ಯಂತ ತುರ್ತು ಕೆಲಸಗಳಿಗೆ ಮಾತ್ರ ರಸ್ತೆಗಿಳಿಯಲು ಅನುಮತಿ ನೀಡಲಾಗಿದೆ. ಕೇರಳ ರಾಜ್ಯದಲ್ಲೂ ಲಾಕ್​ಡೌನ್​ ಹೇರಲಾಗಿದ್ದು, ಅಗತ್ಯ ಕೆಲಸಗಳಿಗೆ ಮಾತ್ರ ಮನೆಯಿಂದ ಹೊರ ಬರಲು ಅನುಮತಿ ನೀಡಲಾಗಿದೆ. ಲಾಕ್​​ಡೌನ್​ ವೇಳೆ ರಸ್ತೆಗಿಳಿಯಲು ಇ-ಪಾಸ್​ ನೀಡಲಾಗುತ್ತಿದೆ. ಇ-ಪಾಸ್​ ಪಡೆಯಲು ಸ್ಥಳೀಯ ಪೊಲೀಸರಿಗೆ ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕು. ಪೊಲೀಸರು ತುರ್ತು ಕಾರಣವನ್ನು ಪರಿಶೀಲಿಸಿ ಇ-ಪಾಸ್​ ನೀಡುತ್ತಿದ್ದಾರೆ. ಹೀಗೆ ಕಾರಣಗಳನ್ನು ಪರಿಶೀಲಿಸುತ್ತಿದ್ದ ಕನ್ನೂರು ಪೊಲೀಸರಿಗೆ ಕೋಪ ತರಿಸುವ ಅರ್ಜಿಯೊಂದು ಬಂದಿದೆ.

ನಾನು ಸೆಕ್ಸ್​​ಗಾಗಿ ಮನೆಯಿಂದ ಆಚೆ ಬರಬೇಕು. ದಯವಿಟ್ಟು ಅನುಮತಿ ಕೊಡಿ ಎಂದು ಪತ್ರದಲ್ಲಿ ಬರೆಯಲಾಗಿತ್ತು. ಹಗಲಿರುಳು ಎನ್ನದೆ ಕೋವಿಡ್​ ಡ್ಯೂಟಿಯಲ್ಲಿರುವ ಪೊಲೀಸರಿಗೆ ಈ ಪತ್ರ ನೋಡುತ್ತಿದ್ದಂತೆ ಸಿಟ್ಟು ನೆತ್ತಿಗೇರಿದೆ. ಅರೆ.. ನಾವಿಲ್ಲಿ ಜನರನ್ನು ಸುರಕ್ಷಿತವಾಗಿಡಲು ಲಾಕ್​ಡೌನ್​ ಹೇರಿದ್ದರೆ ಈ ಭೂಪ ಇಂತಹ ಕಾರಣ ಕೊಡೋದಾ? ಇದೊಂದು ತುರ್ತು ಅಗತ್ಯ ಕಾರಣವೇ ಎಂದು ಪೊಲೀಸರು ಕುಪಿತಗೊಂಡಿದ್ದರು. ಅನುಮತಿ ಪತ್ರದ ಮೂಲಕ ಕಿಡಿಗೇಡಿತನ ಮಾಡುತ್ತಿದ್ದರೆ, ಇವನಿಗೆ ತಕ್ಕ ಶಾಸ್ತಿ ಮಾಡಬೇಕು ಅಂತ ಕನ್ನೂರು ಪೊಲೀಸರು ನಿರ್ಧರಿಸಿದರು.

ಮೇಲ್​​ ಐಡಿ ಮೂಲಕ ಅನುಮತಿ ಕೋರಿದ್ದ ವ್ಯಕ್ತಿಯ ವಿಳಾಸವನ್ನು ಪತ್ತೆ ಹಚ್ಚಿದ್ದಾರೆ. ಸೆಕ್ಸ್​​ಗಾಗಿ ಹೊರ ಬರಬೇಕು ಅಂದವನನ್ನು ಠಾಣೆಗೆ ಕರೆ ತಂದಿದ್ದಾರೆ. ಈಗ ಹೇಳು ಯಾಕಾಗಿ ನೀನು ಮನೆಯಿಂದ ಹೊರ ಬರಬೇಕು. ಯಾಗಾಗಿ ನಿಂಗೆ ಇ-ಪಾಸ್​ ಬೇಕು ಎಂದು ಲಾಠಿ ಕೈಯಲ್ಲಿ ಹಿಡಿದು ಕೇಳಿದ್ದಾರೆ. ಪೆಚ್ಚಾದ ಭೂಪ ಅಗತ್ಯ ಕಾರಣಕ್ಕಾಗಿ ಹೊರಹೋಗಬೇಕಿತ್ತು ಎಂದಿದ್ದಾನೆ. ಹಾಗಾದರೆ ಮನವಿ ಪತ್ರದಲ್ಲಿ ಹೇಳಿರುವಂತೆ ಸೆಕ್ಸ್​ ಅಗತ್ಯ ಕಾರಣವೇ ಎಂದು ಜೋರು ಮಾಡಿದ್ದಾರೆ. ಆಗ ತಬ್ಬಿಬ್ಬಾದ ವ್ಯಕ್ತಿ ತಾನು ಹಾಗೆಲ್ಲಾ ಬರೆದಿಲ್ಲ ಎಂದು ಬೇಡಿಕೊಂಡಿದ್ದಾರೆ.

ಮನವಿ ಪತ್ರವನ್ನು ಆತನ ಮುಂದೆ ಹಿಡಿದಾಗ ಅಯ್ಯೋ ಸಾರಿ ಸರ್​ ಅದು SIX o’clock ಅಂತ ಬರೆಯುವ ಬದಲು SEX ಎಂದಾಗಿದೆ. ಸ್ಪೆಲ್ಲಿಂಗ್​ ಮಿಸ್ಟೇಕ್​ನಿಂದ ಸಿಕ್ಸ್​ ಓ ಕ್ಲಾಕ್​ಗೆ ಹೊರ ಹೋಗಬೇಕು ಎಂಬುವುದು ಸೆಕ್ಸ್​​ಗೆ ಹೊರಹೋಬೇಕು ಎಂದಾಗಿದೆ. ದಯವಿಟ್ಟು ಕ್ಷಮಿಸಿ ಎಂದು ಪೊಲೀಸರ ಬಳಿ ಕೇಳಿಕೊಂಡಿದ್ದಾನೆ. ಟೈಪಿಂಗ್​ನಲ್ಲಿ ಆದ ತಪ್ಪನ್ನು ಪರಿಗಣಿಸಿದ ಪೊಲೀಸರು ಕ್ಷಮಾಪಣೆ ಪತ್ರ ಪಡೆದುಕೊಂಡು ವ್ಯಕ್ತಿಯನ್ನು ಬಿಟ್ಟು ಕಳುಹಿಸಿದ್ದಾರೆ. ಸದ್ಯ ಕನ್ನೂರು ಪೊಲೀಸರೊಂದಿಗೆ ನಡೆದ ಈ ಘಟನೆ ಸಖತ್​ ಸದ್ದು ಮಾಡುತ್ತಿದೆ.

ಕಳೆದ ವಾರವೂ ಇ-ಪಾಸ್​ಗಾಗಿ ಇಂತಹದ್ದೇ ವಿಲಕ್ಷಣ ಪತ್ರವೊಂದು ಬಂದಿತ್ತು. ಮುಖದ ಮೇಲೆ ಪಿಂಪಲ್​ ಆಗಿದೆ. ಅದಕ್ಕೆ ಟ್ರೀಟ್​ಮೆಂಟ್​ ತೆಗೆದುಕೊಳ್ಳಬೇಕಿದೆ. ಹೀಗಾಗಿ ಅನುಮತಿ ಕೊಡಿ ಎಂದು ಯುವತಿಯೊಬ್ಬಳು ಅರ್ಜಿ ಸಲ್ಲಿಸಿದ್ದಳು. ಪಿಂಪಲ್​ ಸಮಸ್ಯೆ ತುರ್ತು ಕಾರಣವಲ್ಲ ಎಂದು ಅನುಮತಿಯನ್ನು ನಿರಾಕರಿಸಲಾಗಿತ್ತು. ಇನ್ನು ಮುಂಬೈನಲ್ಲಿ ಲಾಕ್​ಡೌನ್​ನಿಂದ ಗರ್ಲ್​​ಫ್ರೆಂಡ್​ ಬರ್ತ್​ಡೇಗೆ ಕೇಕ್​ ಕಟ್​ ಮಾಡಿಸಲು ಆಗುತ್ತಿಲ್ಲ ಎಂದು ಯುವಕನೊಬ್ಬ ಟ್ವಿಟ್ಟರ್​ನಲ್ಲಿ ಬೇಸರ ವ್ಯಕ್ತಪಡಿಸಿದ್ದ. ಇದಕ್ಕೆ ಪ್ರತಿಕ್ರಿಯಿಸಿದ್ದ ಮುಂಬೈ ಪೊಲೀಸರು ಈಗ ಸುರಕ್ಷಿತವಾಗಿ ಮನೆಯಲ್ಲಿಯಿರಿ. ಮುಂದಿನ ವರ್ಷ ಆಚರಿಸಿಕೊಳ್ಳಬಹುದು ಎಂದು ಸಮಾಧಾನ ಮಾಡಿದ್ದು ಎಲ್ಲರ ಗಮನ ಸೆಳೆದಿತ್ತು.
Published by:Kavya V
First published: