ಭಾರತದಲ್ಲಿ ಕಳೆದ 48 ಗಂಟೆಯಲ್ಲಿ ದಾಖಲಾಯ್ತು 5,000 ಹೊಸ ಪ್ರಕರಣ ಮತ್ತು 83 ಸಾವು; ಲಾಕ್‌ಡೌನ್‌ 3.0 ವಿಸ್ತರಣೆ

ಶನಿವಾರ ಸಂಜೆಯಿಂದ ಒಟ್ಟು 83 ಸಾವುಗಳು ಸಂಭವಿಸಿವೆ. ಈ ಪೈಕಿ ಮಹಾರಾಷ್ಟ್ರದಲ್ಲಿ 36, ಗುಜರಾತ್‌ನಲ್ಲಿ 26, ಮಧ್ಯಪ್ರದೇಶದಲ್ಲಿ 11, ರಾಜಸ್ಥಾನ ಮತ್ತು ದೆಹಲಿಯಿಂದ ತಲಾ ಮೂರು, ತೆಲಂಗಾಣ, ತಮಿಳುನಾಡು ಮತ್ತು ಬಿಹಾರದಿಂದ ತಲಾ ಒಂದು ಸಾವು ದಾಖಲಾಗಿವೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
ನವ ದೆಹಲಿ (ಮೇ 04); ದೇಶದಲ್ಲಿ ಕಳೆದ ಎರಡು ದಿನಗಳಿಂದ ಕೊರೋನಾ ಸೋಂಕು ವೇಗವಾಗಿ ಹರಡುತ್ತಿದ್ದು, ಸೋಂಕಿತರ ಸಂಖ್ಯೆ ಭಾನುವಾರ ಸಂಜೆ ವೇಳೆಗೆ 40,000 ಗಡಿ ದಾಟಿದೆ. ಭಾನುವಾರ ಒಂದೇ ದಿನ ದೇಶದಾದ್ಯಂತ ಸುಮಾರು 4,898 ಹೊಸ ಕೊರೋನಾ ಪ್ರಕರಣಗಳು ಕಂಡುಬಂದಿವೆ. ಈ ನಡುವೆ ಇಂದಿನಿಂದ ಮೂರನೇ ಹಂತದ ಲಾಕ್‌ಡೌನ್ ಆರಂಭವಾಗಿದ್ದು ಕೇಂದ್ರ ಸರ್ಕಾರ ಹಲವಾರು ನಿರ್ಬಂಧಗಳನ್ನು ಸಡಿಲಗೊಳಿಸಿದೆ.

ಕೊರೋನಾ ದಿಂದಾಗಿ ಕಳೆದ 24 ಗಂಟೆಯಲ್ಲಿ 83 ರೋಗಿಗಳು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 1,306 ಕ್ಕೆ ಏರಿದೆ. ದೇಶದಲ್ಲಿ ಪ್ರಸ್ತುತ 28,070 ಸಕ್ರಿಯ ಕೋವಿಡ್ -19 ರೋಗಿಗಳಿದ್ದಾರೆ. 10,886 ರೋಗಿಗಳು ಚಿಕಿತ್ಸೆಯಿಂದ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಸಚಿವಾಲಯ ತಿಳಿಸಿದೆ. ಪರಿಣಾಮ ಮುಂಜಾಗ್ರತಾ ಕ್ರಮವಾಗಿ ಲಾಕ್‌ಡೌನ್ ಅನ್ನು ವಿಸ್ತರಣೆ ಮಾಡಲು ಕೇಂದ್ರ ನಿರ್ಧರಿಸಿದೆ.

ಮೇ.04 ರಿಂದ ಮೂರನೇ ಹಂತದ ಲಾಕ್‌ಡೌನ್ ಇನ್ನೂ ಎರಡು ವಾರಗಳ ಕಾಲ ಮುಂದುವರೆಯಲಿದೆ ಎಂದು ಕೇಂದ್ರ ಸರ್ಕಾರದ ಗೃಹ ಸಚಿವಾಲಯ ಕಳೆದ ಶುಕ್ರವಾರವೇ ಅಧಿಸೂಚನೆಯನ್ನು ಹೊರಡಿಸಿತ್ತು. ಆದರೆ, ಈ ವೇಳೆ ಹಸಿರು ವಲಯದಲ್ಲಿ ಕೆಲಸ ಸಡಿಲಿಕೆಗಳನ್ನು ನೀಡಲಾಗಿದೆ.

ಶನಿವಾರ ಸಂಜೆಯಿಂದ ಒಟ್ಟು 83 ಸಾವುಗಳು ಸಂಭವಿಸಿವೆ. ಈ ಪೈಕಿ ಮಹಾರಾಷ್ಟ್ರದಲ್ಲಿ 36, ಗುಜರಾತ್‌ನಲ್ಲಿ 26, ಮಧ್ಯಪ್ರದೇಶದಲ್ಲಿ 11, ರಾಜಸ್ಥಾನ ಮತ್ತು ದೆಹಲಿಯಿಂದ ತಲಾ ಮೂರು, ತೆಲಂಗಾಣ, ತಮಿಳುನಾಡು ಮತ್ತು ಬಿಹಾರದಿಂದ ತಲಾ ಒಂದು ಸಾವು ದಾಖಲಾಗಿವೆ.

ದೇಶದಲ್ಲಿ ಕೊರೋನಾ ಸೋಂಕು ಹರಡುವಿಕೆ ಸ್ಥಿರವಾಗಿದೆ ಎಂದು ಕೇಂದ್ರ ಸರ್ಕಾರ ಈಗಾಗಲೇ ಘೋಷಿಸಿದೆ. ಆದರೆ, ಇಂತಹ ಸಂದರ್ಭದಲ್ಲಿ ಕೆಲಸ ಪ್ರದೇಶಗಳಲ್ಲಿ ಮಾತ್ರ ಲಾಕ್‌ಡೌನ್ ಅನ್ನು ಸಡಿಲಗೊಳಿಸುವ ಮೂಲಕ ಸೋಂಕು ಮತ್ತೆ ಹೆಚ್ಚಾಗಿ ಹರಡುವ ಭೀತಿಯೂ ಕಾಡಿದೆ. ಹೀಗಾಗಿ ಈ ಪರಿಸ್ಥಿತಿಯನ್ನು ಸರ್ಕಾರ ಯಾವ ರೀತಿಯಲ್ಲಿ ನಿಭಾಯಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ : Lockdown Extension: ಇಂದಿನಿಂದ ದೇಶಾದ್ಯಂತ ಮೇ 17ರವರೆಗೆ ಲಾಕ್​ಡೌನ್
First published: