World Bank| ಭಾರತದಲ್ಲಿ ಸುಮಾರು 1 ಲಕ್ಷ ಶಿಶುಗಳು ಕೊರೋನಾ ಪ್ರೇರಿತ ಆರ್ಥಿಕ ಕುಸಿತದಿಂದ ಸಾವು; ವಿಶ್ವಬ್ಯಾಂಕ್ ವರದಿ

ಕೊರೋನಾ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯ ಕಡೆಗೆ ಪ್ರಯತ್ನಗಳು ಅತ್ಯುನ್ನತವಾಗಿದ್ದರೂ, ಜಾಗತಿಕ ಸಮುದಾಯವು ಸಾಮಾಜಿಕ ಸುರಕ್ಷತಾ ಜಾಲಗಳನ್ನು ಬಲಪಡಿಸಬೇಕು. ಅಗತ್ಯ ಆರೋಗ್ಯ ಸೇವೆಯ ನಿರಂತರತೆಯನ್ನು ಖಾತರಿಪಡಿಸಬೇಕು ಎಂದು ಸಂಶೋಧಕರು ಹೇಳಿದ್ದಾರೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
    ನವ ದೆಹಲಿ (ಆಗಸ್ಟ್​ 23); ಕೊರೋನಾ ಸಾಂಕ್ರಾಮಿಕ (CoronaVirus) ರೋಗ ಇಡೀ ವಿಶ್ವವನ್ನು ಕಳೆದ ಎರಡು ವರ್ಷಗಳಿಂದ ಕಾಡುತ್ತಿದೆ. ಈ ಮಾರಣಾಂತಿಕ ವೈರಸ್​ ಕಾರಣದಿಂ ದಾಗಿ ಹಲವಾರು ಮುಂದುವರೆದ ದೇಶಗಳ ಆರ್ಥಿಕತೆ ಹಳ್ಳಹಿಡಿದಿದೆ. ಇನ್ನೂ ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ಪರಿಣಾಮ ಅನೇಕ ಉದ್ಯಮಗಳು ಬಾಗಿಲು ಮುಚ್ಚಿಕೊಂಡಿದ್ದು, ಲಕ್ಷಾಂತರ ಜನ ಕೆಲಸ ಕಳೆದುಕೊಂಡಿದ್ದಾರೆ. ಬಡವರ ಬದುಕಂತೂ ಹೇಳತೀರದಷ್ಟು ಶೋಚನೀ ಯವಾಗಿದೆ. ಇಲ್ಲದೆ, ಕೊರೋನಾ ಪ್ರೇರಿತ ಆರ್ಥಿಕ  ಕುಸಿತದಿಂದಾಗಿ (Economic Crisis) ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ, ಕಳೆದೊಂದು ವರ್ಷದಲ್ಲಿ 2.67 ಲಕ್ಷ ಶಿಶುಗಳ ಸಾವಿಗೀಡಾಗಿದ್ದಾರೆ ಎಂದು ವಿಶ್ವ ಬ್ಯಾಂಕ್ (World Bank) ಸಂಶೋಧಕರು ಅಂದಾಜಿಸಿದ್ದಾರೆ. ಅದರಲ್ಲಿ ಮೂರನೇ ಒಂದು ಭಾಗದಷ್ಟು ಅಂದರೆ ಸುಮಾರು 1 ಲಕ್ಷದಷ್ಟು ಮಕ್ಕಳು ಭಾರತದಲ್ಲಿ ಸಾವಿಗೀಡಾಗಿದ್ದಾರೆ ಎಂದು ವಿಶ್ವಬ್ಯಾಂಕ್ ಸಂಶೋಧನಾ ವರದಿ ತಿಳಿಸಿದೆ.

    ವಿಶ್ವಬ್ಯಾಂಕ್ ನೇಮಕ ಮಾಡಿದ್ದ ಸಂಶೋಧಕರು 128 ದೇಶಗಳಲ್ಲಿ 2,67,208 ಅಧಿಕ ಶಿಶು ಸಾವುಗಳಿಗೆ ಕಾರಣವನ್ನು ಸಂಶೋಧನೆ ಮಾಡಿದ್ದಾರೆ. ಇದು 2020 ರಲ್ಲಿ ನಿರೀಕ್ಷಿತ ಒಟ್ಟು ಶಿಶು ಸಾವಿನ ಸಂಖ್ಯೆಯಲ್ಲಿ ಶೇ.6.8 ರಷ್ಟು ಹೆಚ್ಚಳವಾಗಿದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ. "ಕೊರೋನಾ ಸಾಂಕ್ರಾಮಿಕ ವೈರಸ್​ ಕಾರಣಕ್ಕೆ ಬಡ ಮತ್ತು ಮಧ್ಯಮ ಕುಟುಂಬಗಳ ಆದಾಯದ ಮೇಲೆ ಉಂಟಾದ ನಕಾರಾತ್ಮಕ ಪರಿಣಾಮದಿಂದಾಗಿ ಇಷ್ಟು ಪ್ರಮಾಣದ ಶಿಶುಗಳ ಸಾವು ಸಂಭವಿಸಿದೆ" ಎಂದು ವಿಶ್ವ ಬ್ಯಾಂಕ್ ಒತ್ತಿ ಹೇಳಿದೆ.

    ಭಾರತದಲ್ಲಿ ಕೊರೋನಾ ಪತ್ತೆಯಾಗುವುದಕ್ಕಿಂಲೂ ಮೊದಲೇ ದೇಶದ ಆರ್ಥಿಕತೆಯೂ ಇಳಿಕೆಯ ಹಾದಿಯಲ್ಲೇ ಇದ್ದವು. ಇದರ ಜೊತೆಗೆ ಯಾವುದೆ ಮುನ್ಸೂಚನೆ ಇಲ್ಲದೆ ಬಿಜೆಪಿಯ ಮೋದಿ ನೇತೃತ್ವದ ಸರ್ಕಾರವು ಕಳೆದ ವರ್ಷ ದೇಶದಾದ್ಯಂತ ಏಕಾಏಕಿ ಲಾಕ್‌ಡೌನ್‌ ಘೋಷಿಸಿತ್ತು. ಇದು ದೇಶದ ಆರ್ಥಿಕತೆಗೆ ಭಾರಿ ಹೊಡೆತ ನೀಡಿದವು.

    ಇದನ್ನೂ ಓದಿ: Indian Army| ಇದೇ ಮೊದಲ ಬಾರಿಗೆ ಐವರು ಮಹಿಳಾ ಅಧಿಕಾರಿಗಳಿಗೆ ಕರ್ನಲ್ ಶ್ರೇಣಿ ನೀಡಿದ ಭಾರತೀಯ ಸೇನೆ!

    ಕೊರೋನಾ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯ ಕಡೆಗೆ ಪ್ರಯತ್ನಗಳು ಅತ್ಯುನ್ನತವಾ ಗಿದ್ದರೂ, ಜಾಗತಿಕ ಸಮುದಾಯವು ಸಾಮಾಜಿಕ ಸುರಕ್ಷತಾ ಜಾಲಗಳನ್ನು ಬಲಪಡಿಸಬೇಕು. ಅಗತ್ಯ ಆರೋಗ್ಯ ಸೇವೆಯ ನಿರಂತರತೆಯನ್ನು ಖಾತರಿಪಡಿಸಬೇಕು" ಎಂದು ಸಂಶೋಧಕರು ಹೇಳಿದ್ದಾರೆ.

    ಕೊರೋನಾ ಸಾಂಕ್ರಾಮಿಕದ ಪ್ರಾರಂಭದ ಮೊದಲ ಆರು ತಿಂಗಳಲ್ಲಿ ಪ್ರಪಂಚವು 2.5 ಲಕ್ಷದಿಂದ 11.5 ಲಕ್ಷ ಚಿಕ್ಕ ಮಕ್ಕಳ ಸಾವುಗಳಾಗುತ್ತದೆ ಎಂದು ಊಹಿಸಲಾಗಿತ್ತು. ಬ್ರಿಟಿಷ್ ಮೆಡಿಕಲ್ ಜರ್ನಲ್‌ನಲ್ಲಿ ಪ್ರಕಟವಾದ ಇತ್ತೀಚಿನ ವಿಶ್ಲೇಷಣೆಯು ಅಧಿಕ ಶಿಶು ಮರಣದ ಮೂರನೇ ಒಂದು ಭಾಗಕ್ಕಿಂತ ಹೆಚ್ಚು (99, 642) ಭಾರತದಲ್ಲಿ ಆಗಿದೆ ಎಂದು ಅಂದಾಜಿಸಿದೆ.

    ಇದನ್ನೂ ಓದಿ: Income Tax Return| ತೆರಿಗೆ ಪಾವತಿದಾರರಿಗೆ ಸಿಹಿ ಸುದ್ದಿ; ಪೋರ್ಟಲ್ ತಾಂತ್ರಿಕ ದೋಷದಿಂದಾಗಿ ಗಡುವು ವಿಸ್ತರಣೆ ಸಾಧ್ಯತೆ!

    ಭಾರತವು ಹೆಚ್ಚಿನ ಸಂಖ್ಯೆಯ ವಾರ್ಷಿಕ ಜನನಗಳನ್ನು ಹೊಂದಿದೆ (2,42,38,000) ಹಾಗೂ ನಿರ್ದಿಷ್ಟವಾಗಿ ದೊಡ್ಡ ಯೋಜಿತ ಆರ್ಥಿಕ ಕೊರತೆ (ಶೇ.17.3)ಯನ್ನೂ ಎದುರಿಸಿದೆ ಎಂದು ಸಂಶೋಧನೆ ತಿಳಿಸಿದೆ. "ಈ ಕಾರಣದಿಂದಾಗಿ, ದಕ್ಷಿಣ ಏಷ್ಯಾವು ಅತಿ ಹೆಚ್ಚು ಶಿಶು ಮರಣವನ್ನು ನಿರೀಕ್ಷಿಸಿದ ಪ್ರದೇಶವಾಗಿದೆ. ಆದರೂ ಎಂಟು ದೇಶಗಳು ಮಾತ್ರ ಈ ವಿಶ್ಲೇಷಣೆಯಲ್ಲಿ ಒಳಗೊಂಡಿವೆ" ಎಂದು ಸಂಶೋಧನಾ ಲೇಖನವು ತಿಳಿಸಿದೆ.

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸು ವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊ ಬ್ಬರು ಕೈ ಜೋಡಿಸ ಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿ ನಿಂದ ಪಾಲಿಸಿ ಸೋಂಕಿ ನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳ ಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
    Published by:MAshok Kumar
    First published: