news18-kannada Updated:March 20, 2020, 2:39 PM IST
ಸಿಎಂ ನವೀನ್ ಪಟ್ನಾಯಕ್.
ಭುಬನೇಶ್ವರ: ದೇಶದ ತುಂಬಾ ಸಾಂಕ್ರಾಮಿಕವಾಗಿ ಹಬ್ಬುತ್ತಿರುವ ಕೊರೋನಾ ವೈರಸ್ ಕಾರಣದಿಂದ ರಾಜ್ಯದಲ್ಲಿ ನಡೆಯಬೇಕಿದ್ದ ಸೆನ್ಸಸ್ ಕಾರ್ಯಾಚರಣೆ ಮತ್ತು ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಮುಂದೂಡುವಂತೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಶುಕ್ರವಾರ ಪ್ರಧಾನಿಗೆ ಮನವಿ ಮಾಡಿಕೊಂಡಿದ್ದಾರೆ.
ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ನವೀನ್ ಪಟ್ನಾಯಕ್, ಕೊರೋನಾ ವೈರಸ್ನಿಂದಾಗಿ ಸೆನ್ಸಸ್ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ ನವೀಕರಣ ಕಾರ್ಯ ನಡೆಸಲು ಕಷ್ಟವಾಗುತ್ತಿದೆ ಎಂದು ಹೇಳಿದ್ದಾರೆ.2021ರ ಸೆನ್ಸಸ್ ಆರಂಭಿಸುವಂತೆ ಮತ್ತು 2020ರ ಏಪ್ರಿಲ್ 1ರಿಂದ ಸೆಪ್ಟೆಂಬರ್ 30ರವರೆಗೆ ದೇಶಾದ್ಯಂತ ಎನ್ಪಿಆರ್ ನವೀಕರಿಸುವಂತೆ ಕೇಂದ್ರ ಗೃಹ ಸಚಿವಾಲಯ ಅಧಿಸೂಚನೆ ಹೊರಡಿಸಿದೆ ಎಂದು ಸಿಎಂ ನವೀನ್ ಪಟ್ನಾಯಕ್ ತಿಳಿಸಿದ್ದಾರೆ.
ಇದನ್ನು ಓದಿ: Covid-19; ಜೈಪುರದಲ್ಲಿ ಇಟಲಿ ಪ್ರಜೆ ಸಾವು, ಕೊರೋನಾ ಸೋಂಕಿಗೆ ದೇಶದಲ್ಲಿ 5ನೇ ಬಲಿ!
First published:
March 20, 2020, 2:39 PM IST