HOME » NEWS » Coronavirus-latest-news » NATIONAL EMERGENCY SUPREME COURT ASKS CENTRE FOR OXYGEN VACCINE PLAN MAK

ರಾಷ್ಟ್ರೀಯ ತುರ್ತುಸ್ಥಿತಿ; ಆಮ್ಲಜನಕ-ಲಸಿಕೆಗೆ ಸಂಬಂಧಿಸಿ ರಾಷ್ಟ್ರೀಯ ನೀತಿ ಜಾರಿಗೆ ತನ್ನಿ; ಕೇಂದ್ರಕ್ಕೆ ಸುಪ್ರೀಂ ಸೂಚನೆ

ಮಂಗಳವಾರದಂದು ಸುಪ್ರೀಂಕೋರ್ಟ್, ಉತ್ತರ ಪ್ರದೇಶದ ಐದು ಪ್ರಮುಖ ನಗರಗಳಲ್ಲಿ ಸಂಪೂರ್ಣ ಲಾಕ್‌ಡೌನ್ / ಕರ್ಫ್ಯೂ ವಿಧಿಸಿದ್ದ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ತಡೆಹಿಡಿದಿತ್ತು.

news18-kannada
Updated:April 22, 2021, 4:48 PM IST
ರಾಷ್ಟ್ರೀಯ ತುರ್ತುಸ್ಥಿತಿ; ಆಮ್ಲಜನಕ-ಲಸಿಕೆಗೆ ಸಂಬಂಧಿಸಿ ರಾಷ್ಟ್ರೀಯ ನೀತಿ ಜಾರಿಗೆ ತನ್ನಿ; ಕೇಂದ್ರಕ್ಕೆ ಸುಪ್ರೀಂ ಸೂಚನೆ
ಸುಪ್ರೀಂಕೋರ್ಟ್​.
  • Share this:
ನವ ದೆಹಲಿ (ಏಪ್ರಿಲ್ 22); ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ‌ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಆತಂಕವನ್ನು ಸೃಷ್ಟಿಸುತ್ತಿದೆ. ಕೊರೋನಾ ಸೋಂಕು ಹರಡುವಿಕೆ ಶರವೇಗವನ್ನು ಪಡೆದುಕೊಂಡಿದೆ.‌ ಹಲವು ನಿರ್ಬಂಧಗಳ ನಡುವೆಯೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೊರೋನಾ ಸೋಂಕಿತರು ಪತ್ತೆ ಆಗುತ್ತಿದ್ದಾರೆ‌.‌ ಏಪ್ರಿಲ್ 4ರಿಂದ ದಿನ ಒಂದರಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು, ಏಪ್ರಿಲ್ 14ರಿಂದ ದಿನ ಒಂದರಲ್ಲಿ ಎರಡು ಲಕ್ಷಕ್ಕೂ ‌ಹೆಚ್ಚು‌ ಜನರು ಹಾಗೂ ಏಪ್ರಿಲ್ 17 ರಿಂದ ದಿನ‌ ಒಂದರಲ್ಲಿ ಎರಡೂವರೆ ಲಕ್ಷಕ್ಕೂ ಹೆಚ್ಚು ಜನರು ಕೊರೋನಾ ಸೋಂಕು ಪೀಡಿತರಾಗುತ್ತಿದ್ದಾರೆ. ಈಗ ಮೂರು ಲಕ್ಷ ಕೊರೊನಾ ಪ್ರಕರಣಗಳು ಗೋಚರಿಸಲು ಆರಂಭವಾಗಿವೆ. ಇದಲ್ಲದೆ ಮಹಾಮಾರಿ ಕೊರೋನಾ ಇನ್ನಷ್ಟು ಕ್ರೂರ ರೂಪದಲ್ಲಿ ಕಾಣಿಸಿಕೊಳ್ಳಲಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಈ ನಡುವೆ ಕೇಂದ್ರಕ್ಕೆ ಸೂಚನೆ ನೀಡಿರುವ ಸುಪ್ರೀಂ ಕೋರ್ಟ್​, "ದೇಶದಲ್ಲಿ ಚಾಲ್ತಿಯಲ್ಲಿರುವ ಕೊರೋನಾ ಸಾಂಕ್ರಾಮಿಕ ಪರಿಸ್ಥಿತಿಯ ಬಗ್ಗೆ ಅರಿವು ಮೂಡಿಸಿ, ಆಮ್ಲಜನಕ, ಚಿಕಿತ್ಸೆಗೆ ಬೇಕಾದ ಅಗತ್ಯ ಔಷಧಗಳು ಮತ್ತು ವ್ಯಾಕ್ಸಿನೇಷನ್ ವಿಧಾನಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ರಾಷ್ಟ್ರೀಯ ನೀತಿಯನ್ನು ಜಾರಿಗೆ ತನ್ನಿ" ಎಂದು ಸೂಚನೆ ನೀಡಿದೆ.

ಕೊರೋನಾ ಲಾಕ್‌ಡೌನ್‌ ಘೋಷಿಸಲು ಹೈಕೋರ್ಟ್‌ಗಳ ನ್ಯಾಯಾಂಗ ಅಧಿಕಾರವನ್ನು ಪರಿಶೀಲಿಸುವುದಾಗಿ ವಿಚಾರಣೆಯ ವೇಳೆ ನ್ಯಾಯಾಲಯ ಹೇಳಿದೆ. ಇದಕ್ಕೂ ಮುನ್ನ ಮಂಗಳವಾರದಂದು ಸುಪ್ರೀಂಕೋರ್ಟ್, ಉತ್ತರ ಪ್ರದೇಶದ ಐದು ಪ್ರಮುಖ ನಗರಗಳಲ್ಲಿ ಸಂಪೂರ್ಣ ಲಾಕ್‌ಡೌನ್ / ಕರ್ಫ್ಯೂ ವಿಧಿಸಿದ್ದ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ತಡೆಹಿಡಿದಿತ್ತು.

ನ್ಯಾಯಮೂರ್ತಿಗಳಾದ ಎಲ್.ಎನ್. ರಾವ್ ಮತ್ತು ಎಸ್.ಆರ್. ಭಟ್ ಅವರನ್ನೂ ಒಳಗೊಂಡ, ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ನೇತೃತ್ವದ ನ್ಯಾಯಪೀಠವು ಕೇಂದ್ರಕ್ಕೆ ನೋಟಿಸ್ ಜಾರಿಗೊಳಿಸಿದ್ದು, ಶುಕ್ರವಾರ ಈ ವಿಷಯವನ್ನು ಆಲಿಸುವುದಾಗಿ ತಿಳಿಸಿದೆ.

ದೇಶಾದ್ಯಂತ ಆರು ಹೈಕೋರ್ಟ್‌ಗಳು ಆಸ್ಪತ್ರೆಗಳಲ್ಲಿನ ಆಮ್ಲಜನಕ, ಹಾಸಿಗೆಗಳು ಮತ್ತು ಆಂಟಿ-ವೈರಲ್ ಔಷಧ ರೆಮ್‌ಡೆಸಿವಿರ್ ಬಿಕ್ಕಟ್ಟನ್ನು ಒಳಗೊಂಡ ಸಂಬಂಧಿತ ಅರ್ಜಿಗಳನ್ನು ಆಲಿಸುತ್ತಿರುವ ಸಮಯದಲ್ಲಿ ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ಕೈಗೆತ್ತಿಕೊಂಡಿದೆ.

ಕೊರೋನಾ ನಿರ್ವಹಣೆಯ ಸ್ವಯಂ ಪ್ರೇರಿತ ಪ್ರಕರಣದಲ್ಲಿ ಸಹಾಯ ಮಾಡಲು ಇದು ಹಿರಿಯ ವಕೀಲ ಹರೀಶ್ ಸಾಲ್ವೆ ಅವರನ್ನು ಅಮಿಕಸ್ ಕ್ಯೂರಿಯಾಗಿ ಸುಪ್ರೀಂಕೋರ್ಟ್‌ ನೇಮಿಸಿದೆ. ಒಂದೇ ದಿನದಲ್ಲಿ ಅತೀ ಹೆಚ್ಚು ಸೋಂಕು ಪತ್ತೆಯಾಗಿ ಭಾರತ ಜಾಗತಿಕ ದಾಖಲೆಯನ್ನು ನಿರ್ಮಿಸಿದ ದಿನ ನ್ಯಾಯಾಲಯವು ಈ ವಿಚಾರಣೆಗಳನ್ನು ಮಾಡುತ್ತಿದೆ.

ದೇಶದಲ್ಲಿ ಒಂದೇ ದಿನಕ್ಕೆ 3 ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗಿದ್ದು, ವಿಶ್ವದಲ್ಲೇ ದಿನ ಒಂದರಲ್ಲಿ ಅತ್ಯಧಿಕ ಕೊರೋನಾ ಪ್ರಕರಣ ದಾಖಲಿಸಿದ ದೇಶ ಎಂಬ ಕುಖ್ಯಾತಿಗೆ ಭಾರತ ಒಳಗಾಗಿದೆ.

ಇದಲ್ಲದೆ, ಭಾರತದಲ್ಲಿ ಕಾಣಿಸಿಕೊಂಡ ಕೊರೋನಾ ವೈರಸ್ ಡಬಲ್ ಮ್ಯುಟೇಷನ್ ಆದಾಗಲೇ ತಲ್ಲಣ ಸೃಷ್ಟಿಯಾಗಿತ್ತು. ಆದರೀಗ ದೇಶದಲ್ಲಿ ಕೊರೋನಾ ವೈರಸ್ ತ್ರಿಬಲ್ ಮ್ಯುಟೇಷನ್ ಆಗಿದೆ.‌ ಮತ್ತೊಂದು ಹೊಸ ಸ್ವರೂಪ ಪತ್ತೆಯಾಗಿದೆ. ತ್ರಿಬಲ್ ಮ್ಯೂಟೇಷನ್ ಆಗಿರುವ ವೈರಸ್‌ಗಳು ಬಹಳ ಬಲಿಷ್ಠವಾಗಿದ್ದು ಅದರ ಪರಿಣಾಮ ಭೀಕರವಾಗಿರಲಿದೆ. ತ್ರಿಬಲ್ ಮ್ಯೂಟೇಟೆಡ್ ಕೊರೋನಾ ವೈರಸ್ ಭಾರತದಲ್ಲಿ ಮಾತ್ರವಲ್ಲ, ಬೇರೆ ಬೇರೆ ದೇಶಗಳಲ್ಲೂ ಕಂಡು ಬಂದಿದೆ. ಆ ದೇಶಗಳಲ್ಲಿ ಸೋಂಕು ಹೆಚ್ಚಾಗಲು ಇದೇ ವೈರಸ್ ಕಾರಣ ಎಂದು ಹೇಳಲಾಗುತ್ತಿದೆ.ಇದನ್ನೂ ಓದಿ: ಮಹಾರಾಷ್ಟ್ರದ ನಾಸಿಕ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಟ್ಯಾಂಕರ್ ಸೋರಿಕೆ; ಮೃತರ ಸಂಖ್ಯೆ 22ಕ್ಕೆ ಏರಿಕೆ

ಅಂತಾರಾಷ್ಟ್ರೀಯ ತಜ್ಞರಿಂದ ಈ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಭಾರತದಲ್ಲಿ ಮಹಾರಾಷ್ಟ್ರ, ದೆಹಲಿ ಮತ್ತು ಪಶ್ಚಿಮ ಬಂಗಾಳದಲ್ಲಿ ತ್ರಿಬಲ್ ಮುಟ್ಯೇಷನ್ ವೈರಸ್ ಪತ್ತೆಯಾಗಿದೆ. ಶರವೇಗದಲ್ಲಿ ಹರಡುವ ಸಾಮರ್ಥ್ಯವುಳ್ಳ ಈ ತ್ರಿಬಲ್ ಮ್ಯೂಟೆಟ್ ವೈರಸ್ ದೇಶದಲ್ಲಿ ಈಗ ಶುರುವಾಗಿದ್ದು ಈ 3 ರಾಜ್ಯಗಳಿಂದ ಬೇರೆ ರಾಜ್ಯಗಳಿಗೂ ಹರಡುವ ಆತಂಕ ಸೃಷ್ಟಿಸಿದೆ.
Youtube Video

ದೇಶದಲ್ಲಿ ಮೊತ್ತ ಮೊದಲ ಬಾರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು 2020ರ ಜನವರಿ 30ರಂದು ಕೇರಳದಲ್ಲಿ. ಅದಾದ ಬಳಿಕ ಅದು ಲಕ್ಷದ ಗಡಿ ಬಳಿ ಬರಲು ಹೆಚ್ಚು ಕಡಿಮೆ ಎಂಟು ತಿಂಗಳು ಹಿಡಿದವು. ಆಗಲೂ ದಿನ ಒಂದರಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಒಂದು ಲಕ್ಷ ದಾಟಿರಲಿಲ್ಲ. 2020ರ ಸೆಪ್ಟೆಂಬರ್ 17ರಂದು 98,795 ಕೇಸ್ ಕಂಡುಬಂದಿದ್ದೇ ಈವರೆಗಿನ ದಾಖಲೆ ಆಗಿತ್ತು.
Published by: MAshok Kumar
First published: April 22, 2021, 4:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories