HOME » NEWS » Coronavirus-latest-news » NARENDRA MODI WILL NOT TRAVEL TO THE UK TO ATTEND THE G 7 SUMMIT SESR

G-7 summit : ಕೋವಿಡ್​ ಬಿಕ್ಕಟ್ಟು; ಜಿ7 ಶೃಂಗಸಭೆ ಪ್ರವಾಸ ರದ್ದುಗೊಳಿಸಿದ ಪ್ರಧಾನಿ ಮೋದಿ

ಬೋರಿಸ್​ ಜಾನ್ಸನ್​ ಅವರ ಆಹ್ವಾನವನ್ನು ಸ್ವೀಕರಿಸಲಾಗಿದೆ. ಆದರೆ, ಸೋಂಕಿನ ಬಿಕ್ಕಟ್ಟಿನ ಹಿನ್ನಲೆ ಪ್ರಧಾನಿಗಳು ಶೃಂಗಸಭೆಯಲ್ಲಿ ಭಾಗಿಯಾಗುವುದಿಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ

news18-kannada
Updated:May 11, 2021, 10:15 PM IST
G-7 summit : ಕೋವಿಡ್​ ಬಿಕ್ಕಟ್ಟು; ಜಿ7 ಶೃಂಗಸಭೆ ಪ್ರವಾಸ ರದ್ದುಗೊಳಿಸಿದ ಪ್ರಧಾನಿ ಮೋದಿ
ನರೇಂದ್ರ ಮೋದಿ
  • Share this:
ದೇಶದಲ್ಲಿ ಕೋವಿಡ್​ ಸೋಂಕಿನ ಬಿಕ್ಕಟ್ಟು ಎದುರಾಗಿರುವ ಹಿನ್ನಲೆ ಜಿ-7 ಶೃಂಗ ಸಭೆಯಲ್ಲಿ ಭಾಗಿಯಾಗದಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ. ಜೂನ್​ನಲ್ಲಿ ಪ್ರಧಾನಿ ಮೋದು ಶೃಂಗಭೆಯಲ್ಲಿ ಭಾಗಿಯಾಗಲು ಯುಕೆಗೆ ಪ್ರಯಾಣ ಬೆಳೆಸಲು ನಿರ್ಧರಿಸಿದ್ದರು. ಬ್ರಿಟನ್​ ಪ್ರಧಾನಿ ಬೋರಿಸ್​ ಜಾನ್ಸನ್​ ಅವರ ಆಹ್ವಾನದ ಮೇಲೆ ಜೂನ್​ 11 ರಿಂದ 13ರವರೆಗೆ ನಡೆಯಲಿರುವ ಗ್ರೂಪ್​ ಆಫ್​ ಸೆವೆನ್​ ಶೃಂಗಸಭೆಗೆ ಅವರು ಹೋಗಲು ನಿರ್ಧರಿಸಿದ್ದರು. ಆದರೆ, ಈಗ ಎರಡನೇ ಅಲೆಯಿಂದಾಗಿ ದೇಶ ತತ್ತರಿಸುವ ಹಿನ್ನಲೆ ಈ ಪ್ರಯಾಣವನ್ನು ರದ್ದು ಮಾಡಲಾಗಿದೆ ಎಂದು ಪ್ರಧಾನಿ ಕಚೇರಿ ದೃಢಪಡಿಸಿದೆ, ದೇಶದಲ್ಲಿ ಸೋಂಕಿತರ ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ರಾಜ್ಯಗಳಲ್ಲಿ ಪ್ರಕರಣಗಳು ಕೂಡ ಏರಿಕೆ ಕಾಣುತ್ತಲೆ ಇದ್ದು, ವೈದ್ಯಕೀಯ ತುರ್ತು ಪರಿಸ್ಥಿತಿ ಎದುರಾಗಿದೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ವಿದೇಶಾಂಗ ಸಚಿವಾಲಯ ವಕ್ತಾರರು, ಬೋರಿಸ್​ ಜಾನ್ಸನ್​ ಅವರ ಆಹ್ವಾನವನ್ನು ಸ್ವೀಕರಿಸಲಾಗಿದೆ. ಆದರೆ, ಸೋಂಕಿನ ಬಿಕ್ಕಟ್ಟಿನ ಹಿನ್ನಲೆ ಪ್ರಧಾನಿಗಳು ಶೃಂಗಸಭೆಯಲ್ಲಿ ಭಾಗಿಯಾಗುವುದಿಲ್ಲ. ಪ್ರಸ್ತುತ ಪರಿಸ್ಥಿತಿಯನ್ನು ಅವಲೋಕಿಸಿರುವ ಪ್ರಧಾನಿ ಮೋದಿ ಅವರು ಖುದ್ದು ಈ ಶೃಂಗಸಭೆಯಲ್ಲಿ ಭಾಗಿಯಾಗಲು ಉತ್ಸಾಹ ತೋರಿಲ್ಲ ಎಂದಿದ್ದಾರೆ.

ಇದನ್ನು ಓದಿ: ಕೊರೋನಾ ವಾರಿಯರ್ಸ್ ಆದ ಬೆಂಗಳೂರಿನ ಮಹಿಳಾ ಬೈಕರ್ಸ್; ಸೋಂಕಿತರಿಗೆ ಉಚಿತ ಆಂಬುಲೆನ್ಸ್ ಸೇವೆ...

ಬ್ರಿಟನ್​​, ಕೆನಡಾ, ಫ್ರಾನ್ಸ್​, ಜರ್ಮನಿ, ಇಟಲಿ, ಅಮೆರಿಕ ಮತ್ತು ಜಪಾನ್​ ದೇಶಗಳನ್ನೊಳಗೊಂಡ ಜಿ 7 ಶೃಂಗಸಭೆಗೆ ಆಸ್ಟ್ರೇಲಿಯಾ, ದಕ್ಷಿಣ ಕೊರಿಯಾ, ದಕ್ಷಿಣ ಆಫ್ರಿಕಾ, ಹಾಗೂ ಭಾರತಕ್ಕೆ ಶೃಂಗಸಭೆಯಲ್ಲಿ ಭಾಗಿಯಾಗುವಂತೆ ಆಹ್ವಾನ ನೀಡಲಾಗಿದೆ ಎಂದು ಇದೇ ವೇಳೆ ವಕ್ತಾರರು ತಿಳಿಸಿದರು.

ಈ ಬಾರಿ ಜಿ 7 ಶೃಂಗಸಭೆಯಲ್ಲಿ ಜಗತ್ತನ್ನೇ ಕಾಡುತ್ತಿರುವ ಕೋವಿಡ್​ ಸೋಂಕಿನ ಪರಿಣಾಮ ಮತ್ತು ಅದರಿಂದ ಜಗತ್ತಿನ ಆರ್ಥಿಕತೆ ಮೇಲಾಗುವ ಪರಿಣಾಮ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ, ಇದೇ ಹಿನ್ನಲೆ ಸೋಂಕಿಗೆ ತುತ್ತಾಗಿರುವ ಹಲವು ರಾಷ್ಟ್ರಗಳ ನಾಯಕರನ್ನು ಆಹ್ವಾನಿಸಲಾಗಿದ್ದು ಈ ಕುರಿತು ಸವಾಲುಗಳನ್ನು ಮಾತುಕತೆ ನಡೆಸುವ ಸಾಧ್ಯತೆ ಇದೆ.
ಸೋಂಕಿನ ಹಿನ್ನಲೆ ಪ್ರಧಾನಿ ಮೋದಿ ಅವರು ರದ್ದು ಪಡಿಸಿರುವ ಎರಡನೇ ವಿದೇಶ ಪ್ರವಾಸ ಇದಾಗಿದೆ. ಏಪ್ರಿಲ್​ 20 ರಂದು ಕೂಡ ಅವರು ಭಾರತ - ಯುರೋಪಿಯನ್​ ಯೂನಿಯನ್​ ಶೃಂಗಸಭೆ ರದ್ದುಗೊಳಿಸಿದ್ದರು.
Published by: Seema R
First published: May 11, 2021, 10:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories