HOME » NEWS » Coronavirus-latest-news » NARENDRA MODI VIDEO CONFERENCE WITH STATE BJP UNITS AND CHIEF MINISTERS SNVS

ಪ್ರಧಾನಿ ಮೋದಿ ಜೊತೆ ಸಿಎಂ ಯಡಿಯೂರಪ್ಪ ಮತ್ತಿತರರ ವಿಡಿಯೋ ಸಂವಾದ; ಕೊರೋನಾ ಸ್ಥಿತಿ ಅವಲೋಕನ

ರಾಜ್ಯದಲ್ಲಿ ವಲಸಿಗ ಕಾರ್ಮಿಕರು, ವಿದ್ಯಾರ್ಥಿಗಳಿಗೆ ನೆರವು ನೀಡಲು ಬಿಎಸ್​ವೈ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತ ಪಡಿಸಿದರು.

news18-kannada
Updated:July 4, 2020, 10:46 PM IST
ಪ್ರಧಾನಿ ಮೋದಿ ಜೊತೆ ಸಿಎಂ ಯಡಿಯೂರಪ್ಪ ಮತ್ತಿತರರ ವಿಡಿಯೋ ಸಂವಾದ; ಕೊರೋನಾ ಸ್ಥಿತಿ ಅವಲೋಕನ
ರಾಜ್ಯ ಬಿಜೆಪಿ ಘಟಕಗಳ ಜೊತೆ ಪ್ರಧಾನಿ ಮೋದಿ ವಿಡಿಯೋ ಸಂವಾದ
  • Share this:
ಬೆಂಗಳೂರು(ಜುಲೈ 04): ಆರು ರಾಜ್ಯಗಳ ಬಿಜೆಪಿ ಘಟಕಗಳ ಜತೆ ಇಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಅವಲೋಕನಾ ಸಭೆ ನಡೆಸಿದರು. ಸಂಜೆ 4 ಗಂಟೆಗೆ ವಿಡಿಯೋ ಸಂವಾದ ಶುರುವಾಗಿ ಸುಮಾರು ಎರಡೂವರೆ ನಡೆಯಿತ್ತು. ಕರ್ನಾಟಕ ಅಷ್ಟೇ ಅಲ್ಲ, ಮಹಾರಾಷ್ಟ್ರ, ರಾಜಸ್ಥಾನ, ದೆಹಲಿ, ಬಿಹಾರ ಮತ್ತು ಉತ್ತರಪ್ರದೇಶ ರಾಜ್ಯಗಳ ಬಿಜೆಪಿ ಘಟಕಗಳ ಜೊತೆ ಪ್ರತ್ಯೇಕವಾಗಿ ಪ್ರಧಾನಿ ಮೋದಿ ಮತ್ತು ಜೆಪಿ ನಡ್ಡಾ ಚರ್ಚೆ ನಡೆಸಿದರು.

ಕರ್ನಾಟಕದಿಂದ ಸಿಎಂ ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್, ಡಿಸಿಎಂಗಳು, ಸಚಿವರು ಈ ಸಭೆಯಲ್ಲಿ ಭಾಗವಹಿಸಿದ್ದರು. ಕೊರೋನಾ ಹಿನ್ನೆಲೆಯಲ್ಲಿ ಆರಂಭಿಸಿದ 'ಸೇವೆಯೇ ಸಂಘಟನೆ' ಬಗ್ಗೆ ವಿಡಿಯೋ ಸಂವಾದದಲ್ಲಿ ಕೊರೋನಾ ನಿರ್ವಹಣೆ, ಜಾಗೃತಿ, ಸರ್ಕಾರಗಳಿಗೆ ಬೆಂಬಲ, ಕೈಗೊಂಡ ಅಭಿಯಾನದ ವಿವರಗಳ ಬಗ್ಗೆ ಚರ್ಚೆ ನಡೆಯಿತು. ಸೇವೆಯೇ ಸಂಘಟನೆ ಅಭಿಯಾನ ಕುರಿತು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ವಿವರ ನೀಡಿದರು.

ಬೂತ್​ನಿಂದ ಹಿಡಿದು ಮಂಡಲ, ಜಿಲ್ಲಾ ಮಟ್ಟದವರೆಗೆ ಅಭಿಯಾನ ಮಾಡಲಾಗಿದೆ. ಇದರ ಜೊತೆಗೆ ಬೆಂಗಳೂರು ನಗರದ ಸ್ಲಂಗಳಲ್ಲಿ ಅಭಿಯಾನ ಮಾಡಲಾಗಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಆಹಾರ ಕಿಟ್ ವಿತರಣೆ ಮಾಡಿದ್ದೇವೆ. ರಾಜ್ಯದ ಬಡವರಿಗೆ 1.50 ಲಕ್ಷ ರೇಷನ್ ಕಿಟ್ ವಿತರಣೆ ಮಾಡಿ 49,000 ಆಹಾರ ಪಾಕೆಟ್ ವಿತರಿಸಿದ್ದೇವೆ ಸಹ ವಿತರಣೆ ಮಾಡಲಾಗಿತ್ತು. ಬೇರೆ ರಾಜ್ಯಗಳ ವಲಸಿಗ ಕಾರ್ಮಿಕರಿಗೂ ರೇಷನ್ ಕಿಟ್, ಆಹಾರ ಕಿಟ್ ವಿತರಣೆ ಮಾಡಿದ್ದೇವೆ. ಇದಕ್ಕೆ ಅನ್ಯ ರಾಜ್ಯಗಳು ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ರವಿ ಮಾಹಿತಿ ನೀಡಿದರು.

ಇದನ್ನೂ ಓದಿ: ಹಾಸನದಲ್ಲಿ ಇಂದು ನಾಲ್ವರು ಕಂಡಕ್ಟರ್ ಸೇರಿ 25 ಮಂದಿಗೆ ಸೋಂಕು ದೃಢ

ಮನೆ ಮನೆಗೆ ಅಗತ್ಯ ಔಷಧ ಗಳನ್ನು ತಲುಪಿಸಿದ್ದೇವೆ. 1.40 ಲಕ್ಷ ರೋಗಿಗಳಿಗೆ ಮೆಡಿಸಿನ್ ಔಷಧಿ ಹಂಚಿದ್ದೇವೆ. 1.49 ಲಕ್ಷ ಮಾಸ್ಕ್ ತಯಾರಿಸಿ ಹಂಚಿಕೆ ಮಾಡಿದ್ದೇವೆ. 1.54 ಕೋಟಿ ಆಹಾರ ಪ್ಯಾಕೇಟ್ ವಿತರಿಸಿದ್ದೇವೆ. ಮುಖ್ಯವಾಗಿ ಕೈ ಗೊಂಡ ಕ್ರಮಗಳ ಬಗ್ಗೆ ವಿವರಗಳನ್ನು ರವಿಕುಮಾರ್ ವಿಡಿಯೋ ಸಂವಾದದಲ್ಲಿ ತಿಳಿಸಿದರು.

ಆರೋಗ್ಯ ಕಾರ್ಯಕರ್ತರಿಗೆ ಸನ್ಮಾನ‌ ಮಾಡಿ ಉತ್ಸಾಹ ತುಂಬಿದ್ದೇವೆ. ನಂತರ ಕೇಂದ್ರ ಸರ್ಕಾರ ಲಾಕ್‌ಡೌನ್ ಕ್ರಮಗಳ ಬಗ್ಗೆ‌ ಮಾಜಿ ಪಿಎಂ ದೇವೇಗೌಡರು, ಸ್ವಾಮೀಜಿಗಳು ಸೇರಿದಂತೆ ಹಲವರು  ಶ್ಲಾಘನೆ ವ್ಯಕ್ತಪಡಿಸಿದ್ದಾರೆ ಎಂದು ರವಿ ತಿಳಿಸಿದರು.

ವಿಡಿಯೋ ಸಂವಾದದಲ್ಲಿ ರವಿಕುಮಾರ್ ವರದಿ ಮಂಡನೆ ನಂತರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ರಾಜ್ಯದಲ್ಲಿ ವಲಸಿಗ‌ ಕಾರ್ಮಿಕರು, ವಿದ್ಯಾರ್ಥಿಗಳಿಗೆ ನೆರವು ನೀಡಲು ಬಿಎಸ್​ವೈ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
Published by: Vijayasarthy SN
First published: July 4, 2020, 10:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories