HOME » NEWS » Coronavirus-latest-news » NARENDRA MODI TAKES SECOND DOSE OF COVID VACCINE AT AIIMS IN DELHI SNVS

Narendra Modi Vaccination - ಎರಡನೇ ಡೋಸ್ ಲಸಿಕೆ ಹಾಕಿಸಿಕೊಂಡ ಪ್ರಧಾನಿ ಮೋದಿ

ನವದೆಹಲಿಯ AIIMS ಆಸ್ಪತ್ರೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಕೋವ್ಯಾಕ್ಸಿನ್​ನ ಎರಡನೇ ಡೋಸ್ ಪಡೆದರು. 38 ದಿನಗಳ ಹಿಂದೆ, ಮಾರ್ಚ್ 1ರಂದು ಅವರು ಮೊದಲ ಡೋಸ್​ನ ಚುಚ್ಚುಮದ್ದು ಹಾಕಿಸಿಕೊಂಡಿದ್ದರು.

news18
Updated:April 8, 2021, 10:06 AM IST
Narendra Modi Vaccination - ಎರಡನೇ ಡೋಸ್ ಲಸಿಕೆ ಹಾಕಿಸಿಕೊಂಡ ಪ್ರಧಾನಿ ಮೋದಿ
ಎರಡನೇ ಡೋಸ್ ಕೋವಿಡ್ ಲಸಿಕೆ ಪಡೆದ ಪ್ರಧಾನಿ ಮೋದಿ
  • News18
  • Last Updated: April 8, 2021, 10:06 AM IST
  • Share this:
ನವದೆಹಲಿ(ಏ. 08): ಮಾರ್ಚ್ 1ರಂದು ಭಾರತ್ ಬಯೋಟೆಕ್​ನ ಕೋವ್ಯಾಕ್ಸಿನ್ ಲಸಿಕೆಯ ಮೊದಲ ಡೋಸ್ ಹಾಕಿಸಿಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಇಂದು ಎರಡನೇ ಡೋಸ್ ಪಡೆದಿದ್ದಾರೆ. ಇಂದು ರಾಜಧಾನಿಯ ಏಮ್ಸ್ ಆಸ್ಪತ್ರೆಗೆ ತೆರಳಿ ಅವರು ಚುಚ್ಚುಮದ್ದು ಹಾಕಿಸಿಕೊಂಡಿದ್ದಾರೆ. ಈ ವಿಚಾರವನ್ನು ಅವರೇ ಟ್ವೀಟ್ ಮಾಡಿ ತಿಳಿಸಿದ್ದು, ಜನರೂ ಕೂಡ ಶೀಘ್ರವಾಗಿ ಲಸಿಕೆ ಪಡೆಯಬೇಕೆಂದು ಕರೆ ನೀಡಿದ್ದಾರೆ.

“AIIMS ಆಸ್ಪತ್ರೆಯಲ್ಲಿ ಇಂದು ಕೋವಿಡ್-19 ವ್ಯಾಕ್ಸಿನ್ ಪಡೆದೆ. ವೈರಸ್ ಅನ್ನು ಸೋಲಿಸಲು ಇರುವ ಕೆಲ ಮಾರ್ಗಗಳಲ್ಲಿ ಲಸಿಕೆಯೂ ಒಂದು. ನೀವು ಈಗ ಲಸಿಕೆ ಪಡೆಯಲು ಅರ್ಹರಾಗಿದ್ದರೆ ಶೀಘ್ರದಲ್ಲೇ ಹೋಗಿ ಹಾಕಿಸಿಕೊಳ್ಳಿ. CoWin.gov.in ವೆಬ್ ಸೈಟ್​ನಲ್ಲಿ ನೊಂದಾಯಿಸಿ” ಎಂದು ತಾವು ಲಸಿಕೆ ಪಡೆಯುತ್ತಿರುವ ಫೋಟೋ ಸಮೇತವಾಗಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಭಾರತ್ ಬಯೋಟೆಕ್​ನಿಂದ ಅಭಿವೃದ್ಧಿಪಡಿಸಲಾಗಿರುವ ಕೋವ್ಯಾಕ್ಸಿನ್ ಲಸಿಕೆಯನ್ನ ಪಡೆದಿದ್ದಾರೆ. ಇಂದು ಏಮ್ಸ್ ಆಸ್ಪತ್ರೆಯಲ್ಲಿ ಪ್ರಧಾನಿಗೆ ಡೋಸ್ ಹಾಕಿದವರು ಪುದುಚೇರಿಯ ಪಿ ನಿವೇದಾ ಮತ್ತು ಪಂಜಾಬ್​ನ ನಿಶಾ ಶರ್ಮಾ. ಕುತೂಹಲವೆಂದರೆ, ಮಾರ್ಚ್ 1ರಂದು ನರೇಂದ್ರ ಮೋದಿ ಪಡೆದಿದ್ದ ಮೊದಲ ಡೋಸ್ ಲಸಿಕೆಯನ್ನು ಚುಚ್ಚಿದ್ದು ಇದೇ ಪುದುಚೇರಿಯ ಪಿ ನಿವೇದಾ ಅವರೆಯೇ. ಪ್ರಧಾನಿಗೆ ಎರಡಮೇ ಬಾರಿ ಲಸಿಕೆ ಹಾಕುವ ಅವಕಾಶ ಸಿಕ್ಕಿದ್ದಕ್ಕೆ ಆಕೆ ಆಗ ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಉತ್ತಮ ಆರೋಗ್ಯ ಸೌಲಭ್ಯ ಕೂಡ ಮೂಲಭೂತ ಹಕ್ಕು: ಆರೋಗ್ಯ ಸಚಿವ ಡಾ. ಕೆ ಸುಧಾಕರ್

“ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೋವ್ಯಾಕ್ಸಿನ್​ನ ಮೊದಲ ಡೋಸ್ ಅನ್ನು ನೀಡಿದವಳು ನಾನು. ಇವತ್ತು ಅವರನ್ನು ಇವತ್ತು ಭೇಟಿ ಮಾಡಿ ಎರಡನೇ ಬಾರಿ ಲಸಿಕೆ ಹಾಕುವ ಅವಕಾಶ ಸಿಕ್ಕಿತು. ಅವರು ನಮ್ಮೊಂದಿಗೆ ಮಾತನಾಡಿ ಫೋಟೋಗಳನ್ನ ಕ್ಲಿಕ್ ಮಾಡಿದರು” ಎಂದು ನಿವೇದಾ ಹೇಳಿದ್ದಾರೆ. ನಿವೇದಾ ಜೊತೆ ಸೇರಿ ಪ್ರಧಾನಿಗೆ ಎರಡನೇ ಡೋಸ್ ಲಸಿಕೆ ಹಾಕಿದ ಪಂಜಾಬ್​ನ ನಿಶಾ ಶರ್ಮಾ ಕೂಡ ಇದನ್ನ ಅವಿಸ್ಮರಣೀಯ ಘಳಿಗೆ ಎಂದು ಬಣ್ಣಿಸಿದ್ದಾರೆ.

ನಿನ್ನೆ ಒಂದೇ ದಿನ ದೇಶಾದ್ಯಂತ 13 ಲಕ್ಷಕ್ಕಿಂತಲೂ ಹೆಚ್ಚು ಡೋಸ್​ಗಳನ್ನ ಹಾಕಲಾಗಿದೆ. ಇವರ ಪೈಕಿ 12 ಲಕ್ಷ ಮಂದಿ ಮೊದಲ ಡೋಸ್ ಹಾಕಿಸಿಕೊಂಡವರಿದ್ದಾರೆ. 1.1 ಲಕ್ಷ ಮಂದಿ ಎರಡನೇ ಡೋಸ್ ಪಡೆದಿದ್ದಾರೆ. ದೇಶದಲ್ಲಿ ಕಳೆದ 82 ದಿನಗಳಿಂದ ಇದೂವರೆಗೆ 9 ಕೋಟಿಯಷ್ಟು ಕೋವಿಡ್ ಲಸಿಕೆಯ ಡೋಸ್​ಗಳನ್ನ ಜನರಿಗೆ ನೀಡಲಾಗಿದೆ.
Published by: Vijayasarthy SN
First published: April 8, 2021, 10:03 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories