PM Modi Speech - ಲಾಕ್​ಡೌನ್ ನಿಯಮಕ್ಕಿಂತ ದೇಶದ ಪ್ರಧಾನಿಯೂ ದೊಡ್ಡವರಲ್ಲ; ನಿಯಮ ಪಾಲಿಸದಿದ್ದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ: ಮೋದಿ

ಕೇಂದ್ರ ಸರ್ಕಾರ ಘೋಷಿಸಿದ ಲಾಕ್​ಡೌನ್ ಹಿಂಪಡೆಯುವಿಕೆಯ ಮೊದಲ ಹಂತ ಇವತ್ತಿಗೆ ಮುಗಿಯುತ್ತದೆ. ನಾಳೆಯಿಂದ ಏನು ಕ್ರಮ ಅನುಸರಿಸಬೇಕೆಂದು ಪ್ರಧಾನಿ ಮೋದಿ ಇವತ್ತು ದೇಶವನ್ನುದ್ದೇಶಿಸಿ ಮಾತನಾಡುತ್ತಾ ತಿಳಿಸಿದ್ದಾರೆ.

news18-kannada
Updated:June 30, 2020, 4:34 PM IST
PM Modi Speech - ಲಾಕ್​ಡೌನ್ ನಿಯಮಕ್ಕಿಂತ ದೇಶದ ಪ್ರಧಾನಿಯೂ ದೊಡ್ಡವರಲ್ಲ; ನಿಯಮ ಪಾಲಿಸದಿದ್ದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ: ಮೋದಿ
ನರೇಂದ್ರ ಮೋದಿ
  • Share this:
ನವದೆಹಲಿ(ಜೂನ್ 30): ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯನ್ನು ನವೆಂಬರ್​ವರೆಗೂ ವಿಸ್ತರಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇವತ್ತಿನ ಭಾಷಣದಲ್ಲಿ ಇದನ್ನು ಘೋಷಿಸಿದ್ಧಾರೆ. ಬಡವರು ಬಹಳ ಸಂಕಷ್ಟದಲ್ಲಿರುವುದರಿಂದ ಗರೀಬ್ ಕಲ್ಯಾಣ್ ಯೋಜನೆಯನ್ನು ಜುಲೈ, ಆಗಸ್ಟ್, ಸೆಪ್ಟೆಂಬರ್ ಮತ್ತು ನವೆಂಬರ್ ತಿಂಗಳಲ್ಲೂ ಮುಂದುವರಿಸಲಾಗುವುದು ಎಂದು ಪ್ರಧಾನಿ ಮೋದಿ ತಿಳಿಸಿದ್ಧಾರೆ.

ಕೊರೋನಾ ವೈರಸ್ ಸೋಂಕು ತೀವ್ರ ಮಟ್ಟದಲ್ಲಿ ಹರಡುತ್ತಿರುವಂತೆಯೇ ಕೇಂದ್ರ ಸರ್ಕಾರ ಆರ್ಥಿಕ ಪರಿಸ್ಥಿತಿಯನ್ನೂ ನಿಭಾಯಿಸುವ ಸಂದಿಗ್ಧತೆಯಲ್ಲಿ ಸಿಲುಕಿದೆ. ಕೇಂದ್ರ ಸರ್ಕಾರ ಘೋಷಿಸಿದ ಲಾಕ್​ಡೌನ್ ಹಿಂಪಡೆಯುವಿಕೆಯ ಮೊದಲ ಹಂತ ಇವತ್ತಿಗೆ ಮುಗಿಯುತ್ತದೆ. ನಾಳೆಯಿಂದ ಏನು ಕ್ರಮ ಅನುಸರಿಸಬೇಕೆಂದು ಪ್ರಧಾನಿ ಮೋದಿ ಇವತ್ತು ದೇಶವನ್ನುದ್ದೇಶಿಸಿ ಮಾತನಾಡುತ್ತಾ ತಿಳಿಸಿದ್ದಾರೆ.

ಕೊರೋನಾ ವೈರಸ್ ಸೋಂಕನ್ನು ಜನರು ಹಗುರವಾಗಿ ತೆಗೆದುಕೊಳ್ಳಬಾರದು. ಅನ್​ಲಾಕ್ ಘೋಷಣೆ ಆದ ಬಳಿಕ ಜನರು ವೈಯಕ್ತಿಕವಾಗಿ ಬಹಳ ನಿರ್ಲಕ್ಷ್ಯ ವಹಿಸುತ್ತಿರುವುದನ್ನು ಗಮನಿಸಿದ್ದೇನೆ. ಇಂಥ ಧೋರಣೆ ತರವಲ್ಲ. ಜನರು ಕೊರೋನಾ ವೈರಸ್ ಅನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕು ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಇದನ್ನೂ ಓದಿ: PM Modi Speech; ರೈತರ ಖಾತೆಗೆ ಹಣ, ನವೆಂಬರ್‌ ವರೆಗೆ ಆಹಾರ ಧಾನ್ಯ ಉಚಿತ ವಿತರಣೆ; ನರೇಂದ್ರ ಮೋದಿ

ಲಾಕ್​ಡೌನ್ ನಿಯಮಗಳನ್ನು ಎಲ್ಲರೂ ತಪ್ಪದೇ ಪಾಲಿಸಬೇಕು. ಲಾಕ್ ಡೌನ್ ನಿಯಮಗಳಿಂದ ಪ್ರಧಾನಿ ಮೋದಿಯೂ ಹೊರತಲ್ಲ. ಯಾರೇ ಆದರೂ ಲಾಕ್​ಡೌನ್ ನಿಯಮ ಪಾಲಿಸದಿದ್ದರೆ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಪ್ರಧಾನಿಗಳು ಎಚ್ಚರಿಕೆ ನೀಡಿದ್ಧಾರೆ.

ಇದೇ ವೇಳೆ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ನವೆಂಬರ್​ವರೆಗೂ ವಿಸ್ತರಿಸುವ ನಿರ್ಧಾರ ಪ್ರಕಟಿಸಿದ ಅವರು ಇದರಿಂದ 90 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಹಣದ ವ್ಯಯವಾಗುತ್ತದೆ. ಕಳೆದ ಮೂರು ತಿಂಗಳಲ್ಲಿ ವ್ಯಯಿಸಿರುವುದನ್ನು ಸೇರಿಸಿದರೆ ಒಂದೂವರೆ ಲಕ್ಷ ಕೋಟಿ ರೂಪಾಯಿ ಆಗುತ್ತದೆ ಎಂದು ಅವರು ಹೇಳಿಕೊಂಡಿದ್ಧಾರೆ.

ಒಂದು ದೇಶ ಒಂದು ರೇಷನ್ ಕಾರ್ಡ್ ಯೋಜನೆಯನ್ನ ಜಾರಿಗೆ ತರಲು ಯೋಜಿಸಿದ್ದೇವೆ. ಕೆಲಸಗಳಿಗೆ ಊರು ಬಿಟ್ಟು ಹೋಗುವ ಬಡ ಕುಟುಂಬಗಳಿಗೆ ಇದು ಬಹಳ ಸಹಾಯವಾಗುತ್ತದೆ ಎಂದು ಮೋದಿ ತಿಳಿಸಿದ್ದಾರೆ.
First published: June 30, 2020, 4:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading